ಅಮೃತಧಾರೆ ಧಾರಾವಾಹಿಯು ಮಧ್ಯವಯಸ್ಸಿನ ಪ್ರೇಮಕಥೆಯಾಗಿದ್ದು, ಅತ್ತೆಯ ಕುತಂತ್ರಗಳಿಗೆ ಸೊಸೆ ಪ್ರತಿತಂತ್ರ ಹೂಡುತ್ತಾಳೆ. ಶಕುಂತಲಾ, ಭೂಮಿಕಾಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಳೆ. ಭಾಗ್ಯಮ್ಮನಿಗೆ ನೆನಪು ಮರಳಿ ಬಂದಿದ್ದು, ಶಕುಂತಲಾಳ ಪಾಪಗಳು ಬಯಲಾಗುವ ಸಾಧ್ಯತೆ ಇದೆ. ಕಥೆಯನ್ನು ಎಳೆಯದೇ ಮುಗಿಸಬೇಕೆಂದು ಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಮಲ್ಲಿ ಭೂಪತಿಯ ಮಗಳು ಎಂಬ ಟ್ವಿಸ್ಟ್ ಸಹ ಇದೆ.
ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಿರುವ, ಸದಾ ಟಿಆರ್ಪಿಯಲ್ಲಿ ಉನ್ನತ ಸ್ಥಾನವನ್ನೇ ಕಾಯ್ದುಕೊಂಡು ಬಂದಿರುವ ಸೀರಿಯಲ್ಗಳಲ್ಲಿ ಒಂದು ಅಮೃತಧಾರೆ. ಇದಕ್ಕೆ ಕಾರಣವೂ ಇದೆ. ಹಿಂದಿನಿಂದಲೂ ಇಲ್ಲಿಯವರೆಗೆ ಬಂದಿರುವ ಬೇರೆ ಬೇರೆ ಭಾಷೆಗಳ ಸಹಸ್ರಾರು ಸೀರಿಯಲ್ಗಳ ಪೈಕಿ ಹೆಚ್ಚಿನವರು ಮಹಿಳಾ ಕೇಂದ್ರೀಕೃತವೇ ಆಗಿದ್ದರೂ ಅದರಲ್ಲಿ ಅಳುಮುಂಜಿ ಸೊಸೆ, ವಿಲನ್ ಅತ್ತೆಯನ್ನೇ ತೋರಿಸಿ ಬರಲಾಗಿದೆ. ಆದರೆ ಅಮೃತಧಾರೆ ವಿಭಿನ್ನವಾಗಿ ಎಲ್ಲರ ಮನಸ್ಸನ್ನು ಗೆಲ್ಲಲು ಕಾರಣ, ಇದರಲ್ಲಿ ಇರುವ ಡಿಫರೆಂಟ್ ಥೀಮ್. ಮಧ್ಯವಯಸ್ಸಿನವರ ನವೀರಾದ ಪ್ರೇಮದ ಕಥೆ ಇದಾಗಿದ್ದರೂ, ಇಲ್ಲಿ ವಿಲನ್ ಅತ್ತೆಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಲೇ ಇರುವ ಸೊಸೆ. ಗಂಡ-ಹೆಂಡತಿಯನ್ನು ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್ ಮಾಡಿದ್ರೂ ಅದಕ್ಕೆ ತಕ್ಕ ಉತ್ತರ ಕೊಡುತ್ತಲೇ ಬಂದವಳು ಸೊಸೆ ಭೂಮಿಕಾ.
ನಡುವೆ, ಭೂಮಿಕಾ ತನ್ನ ಅತ್ತೆ ಶಕುಂತಲಾ ವಿಲನ್ ಎಂದು ತಿಳಿದಿದ್ದರೂ ಆಕೆಯ ಮಾತನ್ನು ಕೇಳಿ ಗಂಡನಿಗೆ ಮತ್ತೊಂದು ಮದ್ವೆ ಮಾಡಿಸಲು ಹೊರಟಳು, ಕೆಲವು ಸಂದರ್ಭಗಳಲ್ಲಿ ಪೆದ್ದಿಯಂತೆ ನಟಿಸಿದಳು. ಭೂಮಿಕಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವನ್ನು ಸಾಯಿಸಲು ಶಕುಂತಲಾ ಶತಪ್ರಯತ್ನ ಪಡುತ್ತಿದ್ದಾಳೆ. ಆದರೆ ಇದು ಭೂಮಿಕಾಗೆ ಮಾತ್ರ ಗೊತ್ತಾಗದೇ ಇರುವುದು ವಿಚಿತ್ರ ಎನ್ನಿಸುತ್ತಿದೆ. ಇದೀಗ ಕರೆಂಟ್ ಶಾಕ್ ಕೊಟ್ಟು ಭೂಮಿಕಾಳನ್ನು ಸಾಯಿಸಲು ಶಕುಂತಲಾ ಮತ್ತು ಅಣ್ಣ ಪ್ಲ್ಯಾನ್ ಮಾಡಿದ್ದಳು. ಭೂಮಿಕಾ ಮೆಟ್ಟಿಲಿನಿಂದ ಕೆಳಕ್ಕೆ ಇಳಿಯುತ್ತಿದ್ದಂತೆಯೇ ಕರೆಂಟ್ ಶಾಕ್ ಹೊಡೆದು ಸಾಯಿಸಬೇಕು ಎನ್ನುವ ಪ್ಲ್ಯಾನ್. ಆದರೆ, ಇದು ಗೌತಮ್ ಅಮ್ಮ ಭಾಗ್ಯನಿಗೆ ತಿಳಿದುಬಿಡುತ್ತದೆ. ಆದ್ದರಿಂದ ಸೊಸೆ ಭೂಮಿಕಾಳ ಪ್ರಾಣ ಕಾಪಾಡಲು ಮುಂದಾಗುತ್ತಾಳೆ. ಆದರೆ ಆಕೆಗೆ ಮಾತು ಬರುವುದಿಲ್ಲ. ಅವಳು ಏನು ಹೇಳುತ್ತಿದ್ದಾಳೆ ಎಂದು ಭೂಮಿಕಾಗೆ ತಿಳಿಯುವುದಿಲ್ಲ. ಸೊಸೆಯ ಪ್ರಾಣಕ್ಕೆ ಅಪಾಯ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ತಾಯಿ ತಾನೇ ಓಡಿ ಹೋಗಿ ಕರೆಂಟ್ ಮೇಲೆ ಕಾಲಿಡುತ್ತಾಳೆ. ಅವಳನ್ನು ಮುಟ್ಟಲು ಹೋದ ಭೂಮಿಕಾಗೂ ಕರೆಂಟ್ ತಾಗುತ್ತದೆ.
ಅತ್ತೆಯ ಕರೆಂಟ್ ಶಾಕ್ಗೆ ವಿಲವಿಲ ಒದ್ದಾಡಿದ ಭೂಮಿಕಾ: ನಮ್ಮನ್ನೂ ಕೊಂದುಬಿಡಿ- ಫ್ಯಾನ್ಸ್ ಗರಂ
ಇವೆಲ್ಲವುಗಳ ಮಧ್ಯೆಯೇ, ಗೌತಮ್ ಅಮ್ಮ ಭಾಗ್ಯನಿಗೆ ನೆನಪಿನ ಶಕ್ತಿ ವಾಪಸ್ ಬಂದಿದೆ. ಮನೆಯಲ್ಲಿ ಪಟಾಕಿ ಹಚ್ಚಿದಾಗ ಆಕೆಗೆ ಹಿಂದಿನ ನೆನಪಾಗಿದೆ. ತಾನೆಲ್ಲಿ ಇದ್ದೇನೆ, ನನಗೇನು ಆಯ್ತು ಎಂದು ನೋಡಿದಾಗ, ಅತ್ತೆಯ ಫೋಟೋ ಕಾಣಿಸುತ್ತದೆ. ಆಗ ಆಕೆಗೆ ತಾನು ತನ್ನ ಮನೆಯಲ್ಲಿಯೇ ಇದ್ದೇನೆ ಎನ್ನುವುದು ತಿಳಿಯುತ್ತದೆ. ಅದೇ ಇನ್ನೊಂದೆಡೆ, ಮಲ್ಲಿಯನ್ನು ಭೂಪತಿ ಮಗಳು ಎಂದು ಟ್ವಿಸ್ಟ್ ಕೊಡಲಾಗಿದೆ. ಇದನ್ನು ಅರಿಯದ ಮಲ್ಲಿ, ಭೂಮಿಕಾ ಮತ್ತು ಗೌತಮ್ಗೆ ತೊಂದರೆ ಕೊಡುವ ಭೂಪತಿಗೆ ಆವಾಜ್ ಹಾಕಿ ಬಂದಿದ್ದಳು. ಆದರೆ ಭೂಪತಿ ಒಮ್ಮೆ ತಮಗೆ ಬೇಕಾದ ವ್ಯಕ್ತಿಯಾಗಿದ್ದ ಎಂದು ಹೇಳುವ ಮೂಲಕ ಗೌತಮ್ ಮಲ್ಲಿಗೆ ಕ್ಷಮೆ ಕೋರುವಂತೆ ಹೇಳಿದ್ದಾನೆ. ಅಲ್ಲಿಗೆ ಅಪ್ಪ-ಮಗಳು ಒಂದಾಗುವ ಲಕ್ಷಣ ಕಾಣಿಸುತ್ತಿದೆ. ಜೈದೇವನಿಗೆ ಕುಮ್ಮಕ್ಕು ನೀಡ್ತಿರೋ ಭೂಪತಿ ಆತ ತನ್ನ ಅಳಿಯ ಎಂದು ತಿಳಿಯುವ ಕ್ಷಣವೂ ಹತ್ತಿರ ಬಂದಿದೆ.
ಇತ್ತ ಭಾಗ್ಯಮ್ಮನಿಗೆ ನೆನಪು ಮರುಕಳಿಸಿರುವ ಹಿನ್ನೆಲೆಯಲ್ಲಿ ಶಕುಂತಲಾ ಕಥೆ ಮುಗಿದಂತೆಯೇ. ಭಾಗ್ಯ ಎಲ್ಲವನ್ನೂ ಹೇಳಿಬಿಟ್ಟರೆ ಗೌತಮ್ ಶಕುಂತಲಾಳಿಗೆ ಏನು ಮಾಡುತ್ತಾನೆ ಬೇರೆ ಹೇಳುವುದು ಬೇಡ. ಇದೇ ಕಾರಣಕ್ಕೆ ಎಲ್ಲವೂ ಮುಕ್ತಾಯ ಹಂತದಲ್ಲಿದೆ. ಸೀರಿಯಲ್ ಅನ್ನು ಇನ್ನಷ್ಟು ಎಳೆಯದೇ, ಒಂದು ತಾರ್ಕಿಕ ಅಂತ್ಯಕ್ಕೆ ತಂದು ಮುಗಿಸಬೇಕು ಎನ್ನುವುದು ಸೀರಿಯಲ್ ಪ್ರೇಮಿಗಳ ಮಾತು. ಹೀಗೆ ಆದರೆ ಅಮೃತಧಾರೆ ಸೀರಿಯಲ್ ಕೂಡ ಶೀಘ್ರ ಮುಗಿಯುವ ಲಕ್ಷಣಗಳಿವೆ. ಟ್ವಿಸ್ಟ್ ರೂಪದಲ್ಲಿ ಇನ್ನೊಂದಿಷ್ಟು ಕಥೆಗಳನ್ನು ತುರುಕಿದರೆ ಸೀರಿಯಲ್ ಬೋರ್ ಆಗುವುದಂತೂ ಗ್ಯಾರೆಂಟಿ.
'ಅಮೃತಧಾರೆ' ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು! ಆಗರ್ಭ ಶ್ರೀಮಂತೆ ಪ್ರತಿದಿನ ಸ್ನಾನನೇ ಮಾಡಲ್ವಾ?
