Asianet Suvarna News Asianet Suvarna News

ನಟ ದರ್ಶನ್ ಬಗ್ಗೆ 'ಗರಡಿ' ಹೀರೋ ಸೂರ್ಯ ಹೀಗೆ ಹೇಳಿದ್ರಾ; ಭಾರೀ ವೈರಲ್ ಆಯ್ತು ನ್ಯೂಸ್!

ಗರಡಿ ಚಿತ್ರತಂಡವು ರಾಜ್ಯದ ಹಲವು ಕಡೆ ಪ್ರಮೋಶನ್ ಕೆಲಸದಲ್ಲಿ ಹಲವು ದಿನಗಳಿಂದ ಬ್ಯುಸಿ ಆಗಿತ್ತು. ರಾಣೆಬೆನ್ನೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಇಡೀ ಟೀಮ್ ಸುತ್ತಾಡಿದೆ. ತಮ್ಮ ಚಿತ್ರದ ಬಗ್ಗೆ ನಾಯಕನಟ ಯಶಸ್ ಸೂರ್ಯ ಹಲವು ಕಡೆ ಮಾತನಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕರಾದ ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಇಡೀ ತಂಡಕ್ಕೆ ಕೃತಜ್ಞತೆ ಹೇಳಿದ್ದಾರೆ. 

Garadi hero surya says that actor darshan is his godfather srb
Author
First Published Nov 9, 2023, 12:52 PM IST

ನಟ ಸೂರ್ಯ ನಾಯಕತ್ವ, ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರವು ನಾಳೆ (10 ನವೆಂಬರ್ 2023) ಕರ್ನಾಕದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರವು ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು, ಚಿತ್ರವು ಸಖತ್ ಸದ್ದು ಮಾಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಈ ಚಿತ್ರದಲ್ಲಿ ನಟ ದರ್ಶನ್ ನಾಯಕ ಸೂರ್ಯರ ಅಣ್ಣನ ಪಾತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಇದ್ದಾರೆಂಬ ಕಾರಣಕ್ಕೆ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ ಎನ್ನಬಹುದು. 

ಗರಡಿ ಚಿತ್ರತಂಡವು ರಾಜ್ಯದ ಹಲವು ಕಡೆ ಪ್ರಮೋಶನ್ ಕೆಲಸದಲ್ಲಿ ಹಲವು ದಿನಗಳಿಂದ ಬ್ಯುಸಿ ಆಗಿತ್ತು. ರಾಣೆಬೆನ್ನೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಇಡೀ ಟೀಮ್ ಸುತ್ತಾಡಿದೆ. ತಮ್ಮ ಚಿತ್ರದ ಬಗ್ಗೆ ನಾಯಕನಟ ಯಶಸ್ ಸೂರ್ಯ ಹಲವು ಕಡೆ ಮಾತನಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕರಾದ ಬಿಸಿ ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಇಡೀ ತಂಡಕ್ಕೆ ಕೃತಜ್ಞತೆ ಹೇಳಿದ್ದಾರೆ. ಆದರೆ, ಈ ಚಿತ್ರಕ್ಕೆ ತಾವು ಹೀರೋ ಆಗಿ ಆಯ್ಕೆಯಾಗಲು ನಟ ದರ್ಶನ್ ಕಾರಣ ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ಬಗ್ಗೆ ಸೂರ್ಯ ಹಲವು ಕಡೆ ಹೇಳಿಕೊಂಡು ನಟ ದರ್ಶನ್ ಅವರಿಗೆ ಧನ್ಯವಾದ ಹೇಳಿದ್ದಾರೆ. 

ನಟ ಸೂರ್ಯ ಮಾತನಾಡುತ್ತ 'ನನ್ನನ್ನು ಗರಡಿ ಚಿತ್ರದ ಹೀರೋ ಮಾಡಿಕೊಳ್ಳಲು ಬಿಸಿ ಪಾಟೀಲ್ ಸರ್‌ಗೆ ಹೇಳಿದ್ದೇ ದರ್ಶನ್ ಸರ್. ಅವರು ಹೇಳದಿದ್ದರೆ ನನಗೆ ಗರಡಿ ಚಿತ್ರದಲ್ಲಿ ನಾಯಕನಾಗಿ ನಟಿಸಲು ಚಾನ್ಸ್ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ನಾನು ಯಾವತ್ತಿಗೂ ದರ್ಶನ್ ಸರ್‌ ಅವರಿಗೆ ಆಭಾರಿ ಆಗಿರುತ್ತೇನೆ. ಜತೆಗೆ, ನನಗೆ ದರ್ಶನ್ ಸರ್ ಯಾವತ್ತಿಗೂ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್ ಸರ್ ಎಲ್ಲರನ್ನೂ ಪ್ರೀತಿಸುತ್ತಾರೆ, ಗೌರವ ಕೊಡುತ್ತಾರೆ. ನನ್ನನ್ನೂ ಹಾಗೇ ಪ್ರೀತಿಸುತ್ತಾರೆ, ಸೂಚ್ಯವಾಗಿ ಬುದ್ಧಿ ಹೇಳುತ್ತಾರೆ. 

ಅವರು ಯಾವತ್ತೂ ಏನನ್ನೂ ಉಪದೇಶ ಮಾಡಿಲ್ಲ. ಆದರೆ ಸೂಕ್ಷ್ಮವಾಗಿ ಅವರ ಮಾತು ಕೃತಿಗಳ ಮೂಲಕ ನಾನು ಹೇಗಿರಬೇಕೆಂದು ತಿಳಸುವ ಮೂಲಕ ನನಗೆ ಸಹಾಯ ಮಾಡುತ್ತಿದ್ದಾರೆ. ನನ್ನ ಪಾಲಿಗೆ ನಟ ದರ್ಶನ್ ದೇವರು ಇದ್ದ ಹಾಗೆ. ಹಲವು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಸರ್ ಸಹಾಯವನ್ನು ನಾನು ಯಾವತ್ತಿಗೂ ಮರೆಯಲಾರೆ. ಗರಡಿ ಚಿತ್ರದಲ್ಲಿ ದರ್ಶನ್ ಸರ್ ನನ್ನ ಅಣ್ಣನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಕೂಡ ಅವರು ನನ್ನ ಸಹಾಯಕ್ಕೆ ನಿಂತಿದ್ದಾರೆ' ಎಂದಿದ್ದಾರೆ ನಟ ಸೂರ್ಯ. 

ರಮ್ಯಾ ನಿರ್ಮಾಣದ ಸಿನಿಮಾ ಹಾಡು ಬಿಡುಗಡೆ; ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ ನಟಿ!

ಪ್ರೆಸ್‌ ಮೀಟ್‌ಗಳಲ್ಲಿ ಭಾವನಾತ್ಕವಾಗಿ ಮಾತನಾಡಿರುವ ನಟ ಸೂರ್ಯ 'ನಾನು ಚಿತ್ರರಂಗಕ್ಕೆ ಬಂದು ಬರೋಬ್ಬರಿ 15 ವರ್ಷಗಳಾಯ್ತು. ಇಲ್ಲಿಯವರೆಗೆ ಒಂದು ಹಿಟ್ ಚಿತ್ರವನ್ನು ನೀಡಲು ನನಗೆ ಸಾಧ್ಯವಾಗಿಲ್ಲ. ಒಟ್ಟೂ 23 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. 10 ಚಿತ್ರಗಳನ್ನು ಹೀರೋ ಆಗಿಯೇ ಮಾಡಿದ್ದೇನೆ. ಒಟ್ಟೂ 23 ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ನನ್ನನ್ನು ಹೆಸರು ಹಿಡಿದು ಗುರುತಿಸುವ ಮಟ್ಟಿಗೆ ನಾನು ಬೆಳೆದಿಲ್ಲ. ನನಗೆ ಈ ಬಗ್ಗೆ ಬೇಸರವಿದೆ. ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ನನ್ನ ಗುರುತು ತುಂಬಾ ಜನರಿಗೆ ಇಲ್ಲ. 

ತುಕಾಲಿ ಸಂತೋಷ್‌ ಜತೆ ಡೇಟಿಂಗ್ ಬಯಸಿದ ಕಾರ್ತಿಕ್ ಮಹೇಶ್, ಪಪ್ಪಿ ತೆಗೆದುಕೊಳ್ಳಲು ಭಾರೀ ಪೈಪೋಟಿ!

ಗರಡಿ ಚಿತ್ರದ ಮೂಲಕವಾದರೂ ನನಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರ ಬೆಂಬಲ ಸಿಗಲಿ. ನನ್ನ ಪರಿಶ್ರಮ ಸಫಲವಾಗಲಿ. ಯೋಗರಾಜ್ ಭಟ್ಟರ ಚಿತ್ರದಲ್ಲಿ ನಟಿಸಬೇಕೆಂದು ಕಳೆದ 10 ವರ್ಷಗಳ ಹಿಂದೆಯೇ ಅವಕಾಶ ಕೇಳಿಕೊಂಡು ಹೋಗಿದ್ದೆ. ಆದರೆ, ಭಟ್ಟರು ಆಗ ಬ್ಯುಸಿ ಇದ್ದ ಕಾರಣಕ್ಕೆ ನನ್ನ ಕನಸು ಈಗ ಈಡೇರಿದೆ. ಹಾಗೇ, ಕನ್ನಡ ಪ್ರೇಕ್ಷಕರು ನನ್ನಪರಿಶ್ರಮ ಗುರುತಿಸಿ ಕಲಾವಿದನಾಗುವ ನನ್ನ ಕನಸನ್ನು ಗರಡಿ ಚಿತ್ರದ ಮೂಲಕ ನೆರವೇರಿಸಲಿದ್ದಾರೆ ಎಂದು ನಂಬಿದ್ದೇನೆ' ಎಂದಿದ್ದಾರೆ ನಟ ಸೂರ್ಯ.

Follow Us:
Download App:
  • android
  • ios