ಗಟ್ಟಿಮೇಳದ ಅಮೂಲ್ಯ ಮತ್ತು ಅನು ಸಿರಿಮನೆ ಜೊತೆ ಜೊತೆಯಲಿ ಗಣೇಶನ ಹಬ್ಬ ಆಚರಿಸಲಿದ್ದಾರೆ. ಈಗಾಗಲೇ ಎರಡೂ ಧಾರವಾಹಿಗಳ ಪಾತ್ರಗಳೂ ಪರಸ್ಪರ ಪರಿಚಯವಾಗಿದೆ.

ಜೊತೆ ಜೊತೆಯಲಿ ಧಾರವಾಹಿಯ ಅನು ಸಿರಿಮನೆ ಅಮ್ಮ ಬ್ಯಾಗ್ ಕಳ್ಕೊಂಡಿದ್ದು, ಅದನ್ನ ಗಟ್ಟಿಮೇಳದ ಬ್ರೇವ್ ರೌಡಿ ಬೇಬಿ ಅಮೂಲ್ಯ ತಂದು ಕೊಟ್ಟಿದ್ದು ಎಲ್ಲವೂ ಎರಡೂ ಧಾರವಾಹಿ ಪಾತ್ರಗಳು ಪರಸ್ಪರ ಪರಿಚಿತರಾಗಿದ್ದಾರೆ.

ಕೊರೋನಾ ಜೊತೆ ಜೊತೆಯಲಿ ಶೂಟಿಂಗ್, ಮಾರಿ ನಡುವೆ ಮನೆಗೆ ಮಗಳು ಜಾನಕಿ!

ಅನು ಸಿರಿಮನೆ ಅಮೂಲ್ಯ ಮನೆಗೂ ಬಂದಿದ್ದಾಯ್ತು. ಇನ್ನು ಗಣೇಶ ಚತುರ್ಥಿ ದಿನ ಮಂಜುನಾಥ್ ಹಾಗೂ ಸಿರಿಮನೆ ಕುಟುಂಬದವ್ರು ಗ್ರ್ಯಾಂಡ್ ಹಬ್ಬ ಮಾಡೋರಿದ್ದಾರೆ. ಪುಷ್ಪ ಗಣೇಶ ಹಬ್ಬಕ್ಕೆ ವಿಶೇಷ ಪಾರ್ಟಿ ನಡೆಸಲಿದ್ದಾರೆ.

ಅಮೂಲ್ಯ, ಅದಿತಿ, ಪರಿ ಪುಷ್ಪ ಮನೆಗೆ ಪಾರ್ಟಿಗೂ ಬರ್ತಾರೆ. ಎಲ್ಲರೂ ಜೊತೆಯಾಗಿ ಗಣೇಶನಿಗೆ ಆರತಿ ಬೆಳಗಿ ಪೂಜೆ ಮಾಡಲಿದ್ದಾರೆ. ಗಟ್ಟಿಮೇಳ-ಜೊತೆಜೊತೆಯಲಿ ಮಹಾಸಂಗಮ ನೋಡೋಕೆ ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಆಗಸ್ಟ್ 20ರಂದು ಗಣೇಶನ ಹಬ್ಬದ ಮಹಾಸಂಗಮ ಪ್ರಸಾರವಾಗಲಿದೆ.