ಜೀ ಕುಟುಂಬ ಅವಾರ್ಡ್​ನಲ್ಲಿ ಬೆಸ್ಟ್​ ಸೊಸೆಯಂದಿರು ಪ್ರಶಸ್ತಿ​ ಗೆದ್ದ ಸತ್ಯಾ ಸೀರಿಯಲ್​ ಸತ್ಯಾ ಮತ್ತು ಹಿಟ್ಲರ್​ ಕಲ್ಯಾಣದ ಲೀಲಾ ಹೇಳಿದ್ದೇನು? 

ನವೆಂಬರ್​ 10 ಮತ್ತು 11ರಂದು ನಡೆದಿದ್ದ ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮದಲ್ಲಿ ಹಲವಾರು ಜೀ ಕನ್ನಡ ವಾಹಿನಿಯರ ಸೀರಿಯಲ್​ ತಾರೆಯರು ಹಾಗೂ ಸೀರಿಯಲ್​ ಹಿಂದೆ ದುಡಿದಂಥವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಲ್ಲಿ ನೆಚ್ಚಿನ ಸೊಸೆ ಅವಾರ್ಡ್​ ಅನ್ನು ಹಿಟ್ಲರ್​ ಕಲ್ಯಾಣದ ಲೀಲಾ ಹಾಗೂ ಸತ್ಯಾ ಸೀರಿಯಲ್​ ಸತ್ಯ ಅವರಿಗೆ ನೀಡಲಾಯಿತು. ಲೀಲಾ ಅವರ ಅಸಲಿ ಹೆಸರು ಮಲೈಕಾ ಟಿ ವಸುಪಾಲ್ ಹಾಗೂ ಸತ್ಯಾ ಅವರ ಹೆಸರು ಗೌತಮಿ ಜಾಧವ್​. ಪ್ರಶಸ್ತಿ ಸ್ವೀಕರಿಸಿದ ಮಲೈಕಾ , ಮದುವೆಯಾದ ಮೇಲೆ ಅತ್ತೆಯ ಜೊತೆ ಸೊಸೆ ಒಡನಾಟ ಹೇಗಿದೆ ಎನ್ನುವ ಆಧಾರದ ಮೇಲೆ ಈ ಪ್ರಶಸ್ತಿ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಿದೆ ಎಂದರು. ಹಿಟ್ಲರ್​ ಕಲ್ಯಾಣ ಟೀಂಗೆ ಧನ್ಯವಾದ ಸಲ್ಲಿಸಿದರು. ಅದೇ ಇನ್ನೊಂದೆಡೆ ಗೌತಮಿ ಜಾಧವ್​, ಬೆಸ್ಟ್​ ಸೊಸೆ ಆಗುವುದಕ್ಕೆ ಸಿಕ್ಕಾಪಟ್ಟೆ ಸರ್ಕಸ್​ ಮಾಡಿದ್ದೇನೆ. ಅದನ್ನು ನೀವೂ ನೋಡಿರಬಹುದು. ಅದಕ್ಕಾಗಿ ಅವಾರ್ಡ್​ ಸಿಕ್ಕಿದೆ. ಸಿಕ್ಕಾಪಟ್ಟೆ ಖುಷಿಯಾಗ್ತಿದೆ ಎಂದರು.


ಅಂದಹಾಗೆ, ಸತ್ಯಾ ಪಾತ್ರ ಮಾಡಿರೋದು ಗೌತಮಿ ಜಾಧವ್. ಈಕೆಗೆ ಕಿರುತೆರೆ ಸಿನಿಮಾ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಈಗ 'ಸತ್ಯಾ' ಸೀರಿಯಲ್ ನ ಟಾಮ್ ಬಾಯ್ ಪಾತ್ರಕ್ಕೆ ಜೀವದುಂಬಿ ನಟಿಸುತ್ತಿದ್ದಾರೆ. ಪಕ್ಕಾ ಟಾಮ್ ಬಾಯ್ ಪಾತ್ರವಿದು. ಬಾಯ್ ಕಟ್ ಹೇರ್, ಟೀ ಶರ್ಟ್ ಮೇಲೊಂದು ಅಂಗಿ ತೊಟ್ಟು ಬುಲೆಟ್ ಏರಿ ಪಕ್ಕಾ ರೌಡಿ ಸ್ಟೈಲ್ ನಲ್ಲಿ ಎಂಟ್ರಿ ಕೊಡೋ ಸತ್ಯ ಇಡೀ ಕನ್ನಡ ಸೀರಿಯಲ್ಗೇ ಡಿಫರೆಂಟ್ ಲುಕ್​ನಲ್ಲಿ ಇರುವವಳು. ಆತ್ಮ ವಂಚನೆ ಮಾಡಿಕೊಳ್ಳದೇ ನೇರವಾಗಿ ಅನಿಸಿದ್ದನ್ನು ಮಾಡೋಳು.

ಜನಪ್ರಿಯ ನಾಯಕ ನಟ ಪ್ರಶಸ್ತಿ ಪಡೆದ ಗೌತಮ್​, ಕಂಠಿ: ವೇದಿಕೆ ಮೇಲೆ ಭಾವುಕರಾಗಿ ಹೇಳಿದ್ದೇನು?

View post on Instagram

ಇಷ್ಟೆಲ್ಲ ರಗಡ್ ಆಗಿರೋ ಸತ್ಯಾ ರಿಯಲ್ ನಲ್ಲೂ ಹೀಗೇನಾ ಅಂದ್ರೆ, 'ನಾನು ಕಂಪ್ಲೀಟ್ ಉಲ್ಟಾ' ಅಂತಾರೆ ಗೌತಮಿ. ರಿಯಲ್ ನಲ್ಲಿ ಇವರು ಸಖತ್ ಗರ್ಲಿಶ್ ಆಗಿರೋರು. ಸತ್ಯ ಪಾತ್ರಕ್ಕೆ ವಿರುದ್ಧವಾಗಿ ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ. ಯಾರನ್ನೂ ಬೈದು ಅಭ್ಯಾಸ ಇಲ್ಲ. ಜೋರಾಗಿ ಮಾತಾಡಿಯೂ ಗೊತ್ತಿಲ್ಲದ ಹುಡುಗಿ. ಶುರು ಶುರುವಿನಲ್ಲಿ ಈ ಪಾತ್ರ ನಿಭಾಯಿಸಲು ಗೌತಮಿ ಒಂಚೂರು ಕಷ್ಟಪಡಬೇಕಾಯ್ತು. ಆದರೆ ನಟನೆ ಅಂದ್ರೆ ನೀರು ಕುಡಿದಷ್ಟೇ ಸಲೀಸಾದ ಈಕೆ ಕ್ರಮೇಣ ಸತ್ಯ ಪಾತ್ರಕ್ಕೆ ಹೊಂದಿಕೊಳ್ಳುತ್ತಾ ಹೋದರು. ಗೌತಮಿ ಮನೆಯಲ್ಲಿ ಚೆಂದದ ನಾಯಿಯೊಂದಿದೆ. ಅದರ ಬರ್ತ್ ಡೇ ಸೆಲೆಬ್ರೇಶನ್ ಮಾಡೋದ್ರಿಂದ ಹಿಡಿದು ಅದರ ಜೊತೆಗೆ ಆಡೋದು, ಓಡೋದು, ಸ್ನಾನ ಮಾಡಿಸೋದು ಇವೆಲ್ಲ ಈಕೆಗೆ ಬಹಳ ಇಷ್ಟ. ಸದ್ಯ, ಸತ್ಯ ಸೀರಿಯಲ್​ನಲ್ಲಿ ಈಕೆಯ ನಟನೆಗೆ ಅಭಿಮಾನಿಗಳು ಮೆಚ್ಚುಗೆ ಸೂಸುತ್ತಿದ್ದಾರೆ. 

 ಇನ್ನು, ಹಿಟ್ಲರ್​ ಕಲ್ಯಾಣದ ಲೀಲಾ ಕುರಿತು ಹೇಳುವುದಾದರೆ, ಸೀರಿಯಲ್​ನಲ್ಲಿ ಎಡವಟ್ಟು ಲೀಲಾ ಎಂದೇ ಫೇಮಸ್ಸು. ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್​ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್​ ವಿಷಯ. ಯಾವುದೋ ಒಂದು ಸಂದರ್ಭದಲ್ಲಿ ವಯಸ್ಸಿನಲ್ಲಿ ತೀರಾ ದೊಡ್ಡವನಾಗಿರುವ ಎಜೆಗೆ ಮದುವೆಯಾಗಿ ತನಗಿಂತಲೂ ದೊಡ್ಡವರಾಗಿರುವ ಸೊಸೆಯಂದಿರಿಗೆ ಅತ್ತೆಯಾಗಿರುವ ಪಾತ್ರ ಲೀಲಂದು. ಈ ಮೊದಲು ಗಂಡನ ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಲೀಲಾ ಈಗ ಎಲ್ಲರಿಗೂ ಹತ್ತಿರ. ಆಕೆಯನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಸ್ಥಿತಿ. ಮುಗ್ಧ ಹಾಗೂ ಸ್ವಲ್ಪ ಅತಿ ಎನಿಸುವಷ್ಟು ಒಳ್ಳೆಯತನದ ಪಾತ್ರಧಾರಿಯಾಗಿರುವ ಲೀಲಾಳ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಆಗಿರುವ ಮಲೈಕಾ, ಪಟ ಪಟಾ ಅಂತ ಮಾತಾಡುತ್ತಾ, ನೇರವಾಗಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾರೆ. 

ಬಾಲಿವುಡ್‌ ಮಲೈಕಾಗೂ, ಹಿಟ್ಲರ್‌ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!

View post on Instagram