Asianet Suvarna News Asianet Suvarna News

ಕಲರ್ಸ್ ಕನ್ನಡದ ಎರಡು ಸೀರಿಯಲ್ಸ್‌ಗೆ ಮುಕ್ತಿ, ಥ್ಯಾಂಕ್ ಗಾಡ್ ಎಂದ್ರು ನೆಟ್ಟಿಗರು!

ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಪ್ರಸಾರ ಆಗ್ತಿರೋ ಗಂಡ ಹೆಂಡ್ತಿ ಮತ್ತು ಗೃಹ ಪ್ರವೇಶ ಧಾರಾವಾಹಿಗಳು ಮುಗಿಯಲಿವೆಯೆ? 
 

Ganda Hendti and Griha Pravesh serials  air on Colors Kannada channel tobe close suc
Author
First Published Nov 4, 2023, 4:46 PM IST

ಇಂದು ಧಾರಾವಾಹಿಗಳು ಮಹಿಳಾ ಪ್ರಧಾನವೇ ಆಗಿರುವುದು ಸಹಜ. ಇದಕ್ಕೆ ಕಾರಣ, ಧಾರಾವಾಹಿ ವೀಕ್ಷಿಸುವವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಆದ್ದರಿಂದ ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರವೂ ಮಹಿಳೆ ಜೊತೆಗೆ ವಿಲನ್‌ ಕೂಡ ಮಹಿಳೆಯೇ. ಆದರೆ ಹೆಚ್ಚಿನ ಧಾರಾವಾಹಿಗಳು ಎರಡು ಸಂಬಂಧ, ಅಕ್ರಮ ಸಂಬಂಧ, ಪತಿ-ಪತ್ನಿಯ ನಡುವೆ ಹೊಂದಾಣಿಕೆ ಇಲ್ಲದೇ ಇರುವುದು, ಪತಿ-ಪತ್ನಿ ಸಂಸಾರ ನಡೆಸದೇ ಇರುವುದು, ಅತ್ತೆ- ಸೊಸೆ ಜಗಳ, ಒಂದೇ ಮನೆಯಲ್ಲಿ ಅತಿ ಒಳ್ಳೆಯವಳು ಎನ್ನುವ ನಾಯಕಿ, ಅಗತ್ಯಕ್ಕಿಂತ ಹೆಚ್ಚು ಕೆಟ್ಟದಾಗಿರುವ ವಿಲನ್‌ ಇವುಗಳದ್ದೇ ಕಾರುಬಾರು ಹೆಚ್ಚು. ಇದರ ಹೊರತಾಗಿಯೂ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಡುತ್ತವೆ.

ಆದರೆ ಕೆಲವು ಧಾರಾವಾಹಿಗಳನ್ನು ಸಹಿಸಿಕೊಳ್ಳುವುದು ತೀರಾ ಕಷ್ಟ ಎನ್ನುವ ಮಟ್ಟಿಗೆ ಬಂದುಬಿಡುತ್ತವೆ. ಹಿಂದೆಲ್ಲಾ ಇಂಥ ಧಾರಾವಾಹಿಗಳನ್ನು ಜನರು ಬಂದ್‌ ಮಾಡಿ ಕುಳಿತುಕೊಳ್ಳುತ್ತಿದ್ದರೆ, ಇದೀಗ ಸೋಷಿಯಲ್‌ ಮೀಡಿಯಾ ಸಕತ್‌ ಸದ್ದು ಮಾಡುತ್ತಿರುವ ಈ ದಿನಗಳಲ್ಲಿ ಜನರು ಸೀರಿಯಲ್‌ ಕುರಿತು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ವೇದಿಕೆಯ ಮೂಲಕ ಹಂಚಿಕೊಳ್ಳುವುದು ಮಾಮೂಲು. ಕೆಲವು ಧಾರಾವಾಹಿಗಳನ್ನು ಪ್ರೇಕ್ಷಕರು ಹೊಗಳಿದರೆ, ಇನ್ನು ಕೆಲವುಗಳನ್ನು ತೆಗಳುತ್ತಾರೆ. ಈ ತೆಗಳಿಕೆಯ ಸ್ಥಾನದಲ್ಲಿ ಈಗ ಭಾರಿ ಸದ್ದು ಮಾಡುತ್ತಿರುವುದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಗಂಡ-ಹೆಂಡ್ತಿ ಮತ್ತು ಗೃಹ ಪ್ರವೇಶ. ವೀಕ್ಷಕರಿಂದ ಈ ಧಾರಾವಾಹಿಗಳು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿವೆ.

ಅಮ್ಮ ಎಂದ್ರೆ ಹೀಗಿರ್ಬೇಕು ನೋಡಿ... ಒಲವಿನ ನಿಲ್ದಾಣದ ಪ್ರಾಚಿ ತಾಯಿಗೆ ಭೇಷ್​ ಭೇಷ್​ ಅಂತಿದ್ದಾರೆ ನೆಟ್ಟಿಗರು

ಧಾರಾವಾಹಿಗಳಲ್ಲಿ ಅಗತ್ಯವಾಗಿ ಬೇಕಾಗುವುದು ನಟನೆಯ ಜೊತೆಗೆ ಭಾಷೆ ಕೂಡ. ಆದರೆ ಕೆಲವು ಧಾರಾವಾಹಿಗಳಲ್ಲಿನ ನಟ-ನಟಿಯರ ಭಾಷೆಗಳನ್ನು ಕೇಳುವುದು ಕೆಲವು ಪ್ರೇಕ್ಷಕರಿಗೆ ಅಸಹನೀಯ ಎನ್ನಿಸುವುದು ಉಂಟು. ಅದರಲ್ಲಿಯೂ ಹ ಮತ್ತು ಅ ಕಾರಗಳನ್ನು ಅಪಭ್ರಂಶ ಮಾಡುವ ಕಾರಣ, ಇದು ಪ್ರೇಕ್ಷಕರಿಗೆ ಕಿರಿಕಿರಿ ಎನ್ನಿಸುತ್ತಿದೆ. ಇನ್ನು ಕೆಲವು ಧಾರಾವಾಹಿಗಳ ಕಥೆಗಳು ಇಷ್ಟವಾಗದೇ ಹೋದರೆ, ಧಾರಾವಾಹಿಗಳಲ್ಲಿ ಮಿತಿಮೀರಿರುವ ಅಕ್ರಮ ಸಂಬಂಧ, ಜಗಳ-ಕಾದಾಟ ಇವುಗಳು ಇನ್ನು ಕೆಲವರಿಗೆ ಹಿಡಿಸದೇ ಹೋಗಬಹುದು. ಅದೇನೇ ಇದ್ದರೂ ಈ ಎರಡು ಧಾರಾವಾಹಿಗಳು ಜನರಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದು, ಅದನ್ನು ಶೀಘ್ರದಲ್ಲಿಯೇ ಮುಕ್ತಾಯ ಮಾಡುತ್ತಿದ್ದಾರೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಮಾಹಿತಿ ನೀಡಲಿಲ್ಲ. 

ಮದುವೆಗೂ ಮೊದಲೇ ಒಡಲಲ್ಲಿ ಮಗು ಇಟ್ಟುಕೊಂಡಿರುವ ನಾಯಕಿ  ಜಗತ್ತನ್ನು ಹೇಗೆ ಎದುರಿಸುತ್ತಾಳೆ ಎಂಬ ವಿಷಯವನ್ನು ಗಂಡ-ಹೆಂಡ್ತಿ ಸೀರಿಯಲ್‌ ಹೊಂದಿದ್ದರೆ, ಬಾಲ್ಯದಲ್ಲೇ ತಾಯಿ ಮತ್ತು ಮಗಳನ್ನು ತ್ಯಜಿಸಿ ದೂರ ಹೋಗಿರುವ ತಂದೆಯ ಹುಡುಕಾಟಕ್ಕೆ ಹೊರಟ ಮಗಳ ಕಥೆಯನ್ನು ಗೃಹ ಪ್ರವೇಶ ಹೊಂದಿದೆ. ಆದರೆ ಈ ಧಾರಾವಾಹಿಗಳನ್ನು ಜನ ಏಕೋ ಅಷ್ಟು ಮೆಚ್ಚಿಕೊಂಡಿಲ್ಲ. ಹಾಳಾದ ಧಾರಾವಾಹಿಗಳು ನೆಮ್ಮದಿ ಇಲ್ಲ, ಇಂಥವೆಲ್ಲ ನೋಡಿ ಬಿಪಿ ಶುಗರ್ ಬರುತ್ತೆ ಎಂಬ ಕಮೆಂಟ್‌ಗಳೂ ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಇವುಗಳನ್ನು ಬೇಗ ಮುಗಿಸುತ್ತಿದ್ದಾರೆ ಎನ್ನುವ ಸುದ್ದಿ ಇದ್ದರೂ, ವಾಹಿನಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆಯಷ್ಟೇ. ಈ ಸುದ್ದಿ ನಿಜವೇ ಆಗಿದ್ದರೆ ಥ್ಯಾಂಕ್‌ ಗಾಡ್‌ ಅಂತಿದ್ದಾರೆ ನೆಟ್ಟಿಗರು.

'ಸೀತಾ ರಾಮ' ತಂಡದ ಬಾಯಲ್ಲಿ ಕೇಳಿ ಸಪ್ತಸಾಗರದಾಚೆಯಲ್ಲೋ ಹಾಡು: ಸಿಹಿನೇ ಸೂಪರ್​ ಎಂದ ಫ್ಯಾನ್ಸ್​!

 

Follow Us:
Download App:
  • android
  • ios