ರಾಮಾಚಾರಿ ಸೀರಿಯಲ್: ತಾಳಿ ಹಿಡಿದು ಚಾರು ಹಿಂದೆ ಓಡುತ್ತಿರುವ ರಾಮಾಚಾರಿ!
ಚಾರುಲತಾ ಮತ್ತು ರಾಮಾಚಾರಿ ಮದುವೆ ಸಂಭ್ರಮ ‘ರಾಮಾಚಾರಿ’ ಸೀರಿಯಲ್‌ನಲ್ಲಿ ಆರಂಭವಾಗಿದೆ. ವಿಶೇಷ ಅಂದ್ರೆ ಮದುಮಗಳು ಚಾರುವನ್ನು ಮದುಮಗ ರಾಮಾಚಾರಿ ತಾಳಿ ಹಿಡಿದು ಅಟ್ಟಿಸಿಕೊಂಡು ಹೋಗುತ್ತಿದ್ದಾನೆ.
ಬಹಳ ಸೀರಿಯಸ್ ಘಟ್ಟ ತಲುಪಿದ್ದ ‘ರಾಮಾಚಾರಿ’ ಸೀರಿಯಲ್ ಈಗ ಬಿದ್ದೂ ಬಿದ್ದೂ ನಗುವಂತೆ ಮಾಡುತ್ತಿದೆ. ಅದಕ್ಕೆ ಕಾರಣ ‘ರಾಮಚಾರಿ’ ಮದುವೆ. ಇದು ಮದುವೆಯೋ ಮಕ್ಕಳಾಟವೋ ಅಂತ ವೀಕ್ಷಕರು ಬೆಕ್ಕಸಬೆರಗಾಗಿ ನೋಡುವಂತೆ ಮದುವೆ ಸೀಸ್ ಅನ್ನು ಹೆಣೆಯಲಾಗಿದೆ. ವಿಶೇಷ ಅಂದರೆ ಕೊನೇ ಹಂತದವರೆಗೂ ತಾನೇ ವಧು ಅಂತ ಚಾರುಲತಾಗೂ ಗೊತ್ತಿಲ್ಲ. ಅವಳಿಗೆ ರಾಮಾಚಾರಿ ಕೊಡುವ ಸರ್ಟಿಫಿಕೇಟ್ ಬೇಕು. ಅದಕ್ಕಾಗಿ ಈ ಹಿಂದೆ ಪ್ರೀತಿಯ ನಾಟಕ ಆಡಿದ್ದಾಳೆ. ಆದರೆ ಆತ ಇದನ್ನೇ ಸೀರಿಯಸ್ ಆಗಿ ತಗೊಂಡು ಮದುವೆ ಆಗಬಹುದು ಅಂತ ಅವಳು ಕನಸು ಮನಸಲ್ಲೂ ಅಂದುಕೊಂಡಿಲ್ಲ. ಕೊನೇಕ್ಷಣದಲ್ಲಿ ಅವಳೇ ವಧು ಅಂತ ತಾಳಿ ತಗೊಂಡು ರಾಮಾಚಾರಿ ಬಂದಾಗ ಗಾಬರಿಯಲ್ಲಿ ಓಡತೊಡಗಿದ್ದಾಳೆ. ರಾಮಾಚಾರಿಯೂ ಅವಳನ್ನು ಅಟ್ಟಿಸಿಕೊಂಡು ಓಡುತ್ತಿದ್ದಾನೆ. ಸಖತ್ ಫನ್ನಿಯಾಗಿದೆ ಈ ಮದುವೆ.
ರಾಮಾಚಾರಿ ಸೀರಿಯಲ್ ಮೊದಲಿಂದಲೂ ಹೊಸತನದ ಮೂಲಕ ಗಮನಸೆಳೆಯುತ್ತಿದೆ. ಬೇರೆಲ್ಲಾ ಸೀರಿಯಲ್‌ಗಳಲ್ಲಿ ನಾಯಕಿಗೇ ಪ್ರಾಧಾನ್ಯತೆಯಾದರೆ ಇದು ಹೀರೋ ಪ್ರಧಾನ ಸೀರಿಯಲ್. ಇದರಲ್ಲಿ ರಾಮಾಚಾರಿಯೇ ಹೀರೋ. ಪುರೋಹಿತರ ಮಗನಾಗ ಆತನಿಗೆ ಶಾಸ್ತ್ರ, ಸಂಪ್ರದಾಯಗಳಲ್ಲಿ ಬಹಳ ನಂಬಿಕೆ. ಆದರೆ ಸದ್ಯಕ್ಕೀಗ ಆತ ಚಾರುಲತಾಳನ್ನು ಪ್ರೀತಿಸುತ್ತಿರುವ ಸುದ್ದಿ ಅವನ ಮನೆಯಲ್ಲಿ, ಆಫೀಸಿನಲ್ಲೆಲ್ಲ ಹಬ್ಬಿದೆ. ಆದರೆ ನಿಜದಲ್ಲಿ ರಾಮಾಚಾರಿಗೂ ಚಾರುಲತಾಗೂ ಪ್ರೀತಿ ಗೀತಿ ಏನೂ ಹುಟ್ಟಿಲ್ಲ. ಬದಲಾಗಿ ಚಾರುಲತಾ ತಾನು ರಾಮಾಚಾರಿಯನ್ನು ಪ್ರೀತಿಸುವ ನಾಟಕ ಆಡುತ್ತಿದ್ದಾಳೆ. ರಾಮಾಚಾರಿ ಮನೆಗೂ ಹೋಗಿ ತಾನು ಆತನನ್ನು ಪ್ರೀತಿಸುವ ನಾಟಕ ಆಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲೂ ಯಾರದೋ ದೇಹಕ್ಕೆ ತಮ್ಮಿಬ್ಬರ ಮುಖ ಸೇರಿಸಿ ತಾವಿಬ್ಬರೂ ಪ್ರೇಮಿಗಳು ಅಂತ ಬಿಂಬಿಸಿದ್ದಾಳೆ. ಇತ್ತ ಮನೆಯಲ್ಲೂ ಟಾರ್ಚರ್, ಅತ್ತ ಆಫೀಸಿನಲ್ಲೂ ಟಾರ್ಚರ್, ಇನ್ನೊಂದೆಡೆ ಸರ್ಟಿಫಿಕೇಟ್‌ಗಾಗಿ ಏನು ಮಾಡಲೂ ಹೇಸದ ಚಾರುತಲಾ. ಬೇರೆ ದಾರಿ ಕಾಣದೇ ಇದೀಗ ರಾಮಾಚಾರಿ ಚಾರುಲತಾಳನ್ನು ಮದುವೆ ಆಗ್ತಿದ್ದಾನೆ.
ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!
ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ನಡೀತಿದೆ. ಎಲ್ಲ ಶಾಸ್ತ್ರ ಆರಂಭವಾಗಿದೆ. ಮದುಮಕ್ಕಳಿಗೆ ಹಾರೖಸಲು ಮನಸ್ಸಿಲ್ಲದ ಮನಸ್ಸಿಂದ ರಾಮಾಚಾರಿ ಮನೆಯವರೆಲ್ಲ ಬಂದಿದ್ದಾರೆ. ಅತ್ತ ಚಾರುಲತಾಳ ತಂದೆ ದೊಡ್ಡ ಉದ್ಯಮಿ ಜೖ ಶಂಕರ್ ಅವರನ್ನೂ ಮದುವೆಗೆ ಕರೆಸಿದ್ದಾನೆ ರಾಮಾಚಾರಿ. ಒಂದು ಹಂತದಲ್ಲಿ ಅವರಿಗೂ ತಾನು ಮದುವೆಯಾಗುತ್ತಿರುವುದು ಅವರ ಮಗಳನ್ನೇ ಅಂತ ಸ್ಪಷ್ಟಪಡಿಸಿದ್ದಾನೆ. ಈ ವಿಚಾರ ಅವರಿಗೆಷ್ಟು ಶಾಕ್ ತಂದಿದೆಯೋ ಅವರ ಮಗಳು ಚಾರುಲತಾಗೂ ಅಷ್ಟೇ ಶಾಕ್ ತಂದಿದೆ. ಅವಳಿಗೆ ತಾನೇ ವಧು ಅಂತ ಗೊತ್ತಾಗಿ ಏನು ಮಾಡಲೂ ತೋಚುತ್ತಿಲ್ಲ. ಇತ್ತ ರಾಮಾಚಾರಿ ತಾಳಿ ಕಟ್ಟಲು ಮುಂದಾಗಿದ್ದಾನೆ. ಅವಳು ತಪ್ಪಿಸಿಕೊಂಡು ಓಡುತ್ತಿದ್ದಾಳೆ. ದೇವಸ್ಥಾನದೊಳಗೆಲ್ಲ ಅವರಿಬ್ಬರ ಜೂಟಾಟ ನಡೆಯುತ್ತಿದೆ. ಇಲ್ಲೇನು ನಡೆಯುತ್ತಿದೆ ಅಂತ ಗೊತ್ತಾಗದೇ ಇಬ್ಬರ ಮನೆಯವರೂ ಅವಕ್ಕಾಗಿದ್ದಾರೆ.
ಬಹುಶಃ ಸೀರಿಯಲ್‌ನಲ್ಲಿ ಈ ರೀತಿಯ ಮದುವೆ ನಡೀತಿರೋದು ಇದೇ ಮೊದಲೇನೋ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ನಡೆದ ’ಕನ್ನಡತಿ’ ಸೀರಿಯಲ್‌ನ ಹರ್ಷ ಭುವಿ ಮದುವೆಯೂ ಬಹಳ ವಿಭಿನ್ನವಾಗಿತ್ತು. ಸಖತ್ ಕಲರ್‌ಫುಲ್ ಆಗಿ ಕನ್ನಡದಲ್ಲೇ ಮದುವೆ ನಡೆದಿತ್ತು. ಆದರೆ ಇದರ ಅತಿಯಾದ ಡ್ರಾಮಾದಿಂದ ವೀಕ್ಷಕರು ಬೇಸತ್ತು ಈ ಸೀರಿಯಲ್ ಬೖಕಾಟ್ ಮಾಡೋದಾಗಿ ಕಮೆಂಟ್ ಮಾಡಿದ್ರು.
ಅದಕ್ಕೆ ಪ್ರತಿಯಾಗಿ ರಾಮಾಚಾರಿ ಸೀರಿಯಲ್‌ನಲ್ಲಿ ಬೇರೆಯದೇ ರೀತಿ ಮದುವೆ ನಡೀತಿದೆ. ಇದು ಜಟ್‌ಪಟ್ ಮದುವೆ. ಇದರಲ್ಲಿ ರಾಮಾಚಾರಿ ಮದುವೆ ಆಗ್ತೀನಿ ಅಂದುಕೊಂಡ ಮರುದಿನವೇ ಮದುವೆ ಆಗಿದ್ದಾನೆ. ನೋಡು ನೋಡುತ್ತಿರುವ ಹಾಗೆ ತಾಳಿ ಕಟ್ಟೋ ಲೆವೆಲ್‌ಗೂ ಸೀರಿಯಲ್ ಬಂದಿದೆ.
ಆದರೆ ಈಗ ನಡೀತಿರೋ ಡ್ರಾಮಾ ನೋಡಿದ್ರೆ ಈ ಮದುವೆ ನಿಜಕ್ಕೂ ನಡಿಯುತ್ತಾ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಉತ್ತರ ಮುಂದಿನ ವಾರ ಸಿಗಲಿದೆ. ರಿತ್ವಿಕ್ ಕೃಪಾಕರ್ ರಾಮಚಾರಿಯಾಗಿ, ಮೌನಾ ಗುಡ್ಡೆಮನೆ ಚಾರುಲತಾ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡತಿ: ಹರ್ಷ ಭುವಿ ಡಿವೋರ್ಸಾ? ಏನಪ್ಪಾ ಈ ಡೈರೆಕ್ಟರ್ ಕಥೆ?