22ನೇ ವಯಸ್ಸಿಗೆ ಮದ್ವೆ ಮಾಡಿಬಿಟ್ಟರು, ಸುಮಾರು ಒಡವೆ ಕಳೆದುಬಿಟ್ಟಿದ್ದೀನಿ: ನಟ ಕೋಮಲ್
ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕೋಮಲ್. ಜರ್ನಿ ಬಗ್ಗೆ ಮಾತನಾಡುವಾಗ ಪೋಷಕರನ್ನು ನೆನಪಿಸಿಕೊಂಡ ನಟ.....
ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಕೋಮಲ್ ಈಗ ಗಿಚ್ಚಿ ಗಿಲಿಗಿಲಿ ಸೀಸನ್ 3ರ ತೀರ್ಪುಗಾರರು. ಸಿನಿಮಾಗಳಿಗಿಂತ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದು ರಿಯಾಲಿಟಿ ಶೋ ಮೂಲಕ. ಪ್ರತಿಯೊಬ್ಬ ಸ್ಪರ್ಧಿಗೂ ಸ್ನೇಹಿತನಂತೆ ಸಲಹೆ ಕೊಟ್ಟು ಜೊತೆ ನಿಂತಿದ್ದಾರೆ. ಈ ವೇದಿಕೆ ಮೇಲೆ ಕೋಮಲ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
'ನನ್ನ ತಂದೆ ಈಶ್ವರ್ ಪೇಪರ್ ಮಿಲ್ ಹೆಸರಿನಲ್ಲಿ ಫ್ಯಾಕ್ಟರಿ ಮಾಡಿದ್ದರು. ಆ ಫ್ಯಾಕ್ಟರಿ ದೊಡ್ಡ ಮಟ್ಟದಲ್ಲಿ ಹೋಗುತ್ತಿದ್ದ ಖುಷಿಯಲ್ಲಿ ನಾನು ಹುಟ್ಟುಬಿಟ್ಟೆ. ನಾನು ಹುಟ್ಟಿದ ಮೇಲೆ ನನ್ನ ತಂದೆಗೆ ತುಂಬಾ ಒಳ್ಳೆ ಲಕ್ ಇತ್ತು ಅಂತ ಅವರೇ ಹೇಳುತ್ತಿದ್ದರು. ನನ್ನ ತಂದೆ ಫುಲ್ ಲೈಫ್ ಲೀಡ್ ಮಾಡಿದ್ದಾರೆ ಆದರೆ ನನ್ನ ತಾಯಿ ಬಗ್ಗೆ ಹೇಳಬೇಕು ಏಕೆಂದರೆ ನನ್ನ ತಾಯಿಗೋಸ್ಕರ ತುಂಬಾ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಂಡೆ. ನನ್ನ ತಾಯಿಗೆ ವ್ಯಾಲ್ವ್ ಹೋಗಿಬಿಟ್ಟಿದೆ ತುಂಬಾ ದಿನ ಇರಲ್ಲ ಎಂದು ಡಾಕ್ಟರ್ ಹೇಳಿಬಿಟ್ಟಿದ್ದರು ಹೀಗಾಗಿ 22ನೇ ವಯಸ್ಸಿಗೆ ಮದುವೆ ಮಾಡಿಕೊಂಡೆ, ನನ್ನ ಮದುವೆಯಾಗಿ 40 ದಿನಕ್ಕೆ ತಾಯಿ ತೋರಿಕೊಂಡರು. ನನ್ನ ಮದುವೆ ನೋಡಲು ಅಂತ ಅಣ್ಣ ಜಗ್ಗೇಶ್ ಅರ್ಜೆಂಟ್ ಅರ್ಜೆಂಟಲ್ಲಿ ಮದುವೆ ಮಾಡಿದ. ನನ್ನ ಎಲ್ಲಾ ಯಶಸ್ಸು ನೋಡುವವರೆಗೂ ತಂದೆ ಇದ್ದರು. ನನ್ನ ತಂದೆಗೆ ತುಂಬಾ ತೊಂದರೆ ಕೊಟ್ಟಿದ್ದೀನಿ ಏಕೆಂದರೆ ನಾನು ಜಾಸ್ತಿ ಎಕ್ಸ್‌ಪರೀಮೆಂಟ್ ಮಾಡುವುದು ಸುಮಾರು ಒಡವೆಗಳನ್ನು ಸಿನಿಮಾ ವಿತರಣ ಮಾಡಲು ಹೋಗಿ ಕಳೆದುಬಿಟ್ಟಿದ್ದೀನಿ. ಕಿರಿಮಗ ಆದ ಕಾರಣ ಪ್ರೀತಿ ಜಾಸ್ತಿ ನನ್ನ ಮೇಲೆ ನಿರೀಕ್ಷೆ ಹೆಚ್ಚಿತ್ತು ನಾನು ಚೆನ್ನಾಗಿ ಓದಬೇಕು ಅನ್ನೋ ಆಸೆ ಇತ್ತು. ಒಮ್ಮೆ ನನ್ನ ಕಟೌಟ್ ನೋಡಿದಾಗ ...ಅವರಿಗೆ ಕಾಲು ಇರಲಿಲ್ಲ ವೀಲ್‌ಚೇರ್ ಮೇಲೆ ಕುಳಿತುಕೊಂಡು ಫೋಟೋ ತೆಗೆಸಿಕೊಂಡರು ಅದು ನನ್ನ ಮರೆಯಲಾಗದ ಕಷ್ಟ' ಎಂದು ಕೋಮಲ್ ಮಾತನಾಡಿದ್ದಾರೆ.
ಚಿಟ್ಟೆ ದೊಡ್ಡದಾದ್ರೂ ಸಖತ್ತಾಗಿದೆ; ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಫೋಟೋ ವೈರಲ್
ಕೋಮಲ್ ಹೀರೋ ಆಗುವ ಮುನ್ನ ಅವರ ಅಣ್ಣನ ಪ್ರೋಡಕ್ಷನ್ ಸಮಯದಿಂದಲೂ ನನ್ನ ಜೊತೆಗಿದ್ದರು. ಸಿನಿಮಾ ಬಿಟ್ಟು ಅವರಿಗೆ ಏನೂ ಗೊತ್ತಿಲ್ಲ ಸಿನಿಮಾದಲ್ಲೇ ಇರಬೇಕು ಸಿನಿಮಾದಲ್ಲಿ ಸಾಧನೆ ಮಾಡಬೇಕು ಹಾಗೂ ಸಾಧನೆ ಮಾಡುತ್ತಿದ್ದಾರೆ. ನೀವೊಬ್ಬ ಕ್ರಿಯೇಟರ್ ನಮ್ಮ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಕ್ಕೆ ಹೋಗುತ್ತೀರಿ ಎಂದು ಕೋಮಲ್ ಬಗ್ಗೆ ಸಾಧು ಹೇಳಿದ್ದಾರೆ.
2 ವರ್ಷ ಆದ್ರೂ ಗಂಡನಿಂದ ಆ ಆಸೆ ಈಡೇರಿಲ್ಲ ಎಂದ ಶುಭಾ ಪೂಂಜಾ; ಮ್ಯಾಟರ್ ಬಿಟ್ಕೊಡ್ಬೇಕಾ ಕಣ್ಣಮ್ಮ ಎಂತಾರೆ ನೆಟ್ಟಿಗರು
ಸಿನಿಮಾಗಳಲ್ಲಿ ಕೋಮಲ್ ಜೊತೆ ಹೆಚ್ಚಿಗೆ ಕೆಲಸ ಮಾಡಿ ಗೊತ್ತಿರಲಿಲ್ಲ ಆದರೆ ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಆಪ್ತರಾದರು. ಇದನ್ನು ಮುನ್ನ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದಾಗ ಮೇಡಂ ನಿಮ್ಮ ಶೋನಲ್ಲಿ ಸೂಟು ಬೂಟು ಹಾಕಿಕೊಂಡು ಬರಬೇಕು ನನಗೆ ತುಂಬಾ ಮುಜುಗರ ಆಗುತ್ತದೆ...ನೋಡಿ ನಾನು ಹಾಕಿಕೊಳ್ಳುವ ಡ್ರೆಸ್ ಈ ರೀತಿ ಇರುತ್ತದೆ ಎಂದರು. ಅಂದು ಪಂಚೆ ಮತ್ತು ಶರ್ಟ್ ಧರಿಸಿದ್ದರು ಅಷ್ಟು ಸಿಂಪಲ್ ವ್ಯಕ್ತಿ. ಕೋಮಲ್ ಮಾತನಾಡುವ ಆ ಎರಡು ಮಾತುಗಳನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳುತ್ತಾರೆ ಏಕೆಂದರೆ ಅಷ್ಟು ಯೂನಿಕ್ ಆಗಿರುತ್ತದೆ ಎಂದಿದ್ದಾರೆ ಶ್ರುತಿ.