ರ್ಯಾಪಿಡ್ ರಶ್ಮಿಕಾ ಹೊಸ ಮನೆಯ ವಿಡಿಯೋ ಹಂಚಿಕೊಂಡಿದ್ದಾರೆ. ರಶ್ಮಿ ಅವರ ದುಬಾರಿ ಮನೆ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಇಷ್ಟೊಂದು ಶ್ರೀಮಂತೆನಾ ಎಂದು ಕೇಳುತ್ತಿದ್ದಾರೆ. 

ಸದಾ ಸುದ್ದಿಯಲ್ಲಿರೂ ಆರ್‌ ಜೆ ಅಂದ್ರೆ ಅದು ರ್ಯಾಪಿಡ್‌ ರಶ್ಮಿ. ಒಂದಲ್ಲ ಒಂದು ಕಾರಣಕ್ಕೆ ರಶ್ಮಿ ಟಾಕ್‌ ಆಫ್‌ ದಿ ಟೌನ್‌ ಆಗಿರ್ತಾರೆ. ಕೆಲವೊಮೆ ಅದು ಪರ್ಸನಲ್‌ ಆದ್ರೆ ಇನ್ನು ಕೆಲವೊನ್ಮೆ ಪ್ರೊಫೆಷನಲ್‌ ಆಗಿ ಆಗತ್ತೆ. ಅದ್ರಲ್ಲೂ ರಾಜರಥ ಸಿನಿಮಾ ಪ್ರಮೋಷನ್ ಸಮಯದಲ್ಲಿ ಆದ ಯಡವಟ್ಟಿನಿಂದ ರಶ್ಮಿ ಅವ್ರನ್ನಹಚ್ಚು ಕಾಂಟ್ರವರ್ಸಿ ಆಗಲ್‌ ನಲ್ಲಿ ನೋಡೋರೆ ಹೆಚ್ಚು. ಆದ್ರೆ ಸದ್ಯ ರಶ್ಮಿ ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ ಮನೆಯ ವಿಡಿಯೋ ಶೇರ್‌ ಮಾಡಿದ್ದಾರೆ...ಅದನ್ನ ನೋಡಿದವ್ರೆಲ್ಲರೂ ರಶ್ಮಿ ಬೆಳವಣಿಗೆ ಕಂಡು ಫಿದಾ ಆಗಿದ್ದಾರೆ.

ಸಖತ್ತಾಗಿದೆ ರ್ಯಾಪಿಡ್‌ ರಶ್ಮಿ ಅವ್ರ ನ್ಯೂ ವಿಲ್ಲಾ 

ರಶ್ಮಿ ಆಗಾಗ ಓಷಿಯಲ್‌ ಮಿಡಿಯಾದಲ್ಲಿ ತಮ್ಮ ಮನೆಯ ಬಾಲ್ಕನಿ , ಅಲ್ಲಿರೋ ಗಿಡಗಳನ್ನ ವಿಡಿಯೋ ಮಾಡಿ ಅಪ್ಲೋಡ್‌ ಮಾಡ್ತಾ ಇರ್ತಾರೆ ಆದ್ರೆ ಈ ಬಾರಿ ರಶ್ಮಿ ಅವ್ರ ಹೊಸ ಮನೆಯ ವಿಡಿಯೋ ಶೇರ್‌ ಮಾಡಿದ್ದಾರೆ. ಮನೆ ವಿಡಿಯೋ ನೋಡಿದವ್ರು ಶಾಕ್‌ ಆಗೋದ್ರ ಜೊತೆಗೆ ರಶ್ಮಿ ಇಷ್ಟೋಂದು ಶ್ರೀಮಂತರಾ ಅಂತ ಆಶ್ಚರ್ಯ ಪಡ್ತಿದ್ದಾರೆ. 

ಕಲರ್‌ ಫುಲ್‌ ವಿಲ್ಲಾ ವಿಡಿಯೋ ಮಾಡಿದ ಆರ್‌ ಜೆ 


ರ್ಯಾಪಿಡ್‌ ರಶ್ಮಿ ಕಲರ್‌ ಫುಲ್‌ ಆಗಿರೋ ವಿಲ್ಲಾ ಕಟ್ಟಿಸಿಕೊಂಡಿದ್ದಾರೆ. ಫ್ಯಾಮಿಲಿ ಪರ್ಸನಲ್‌ ಲೈಫ್‌ ಬಗ್ಗೆ ಹೆಚ್ಚು ಗುಟ್ಟುಬಿಟ್ಟುಕೊಡದ ರಶ್ಮಿ ತಮ್ಮ ಹೊಸದಾದ ಹಾಗೂ ಅದ್ದೂರಿಯಾದ ವಿಲ್ಲಾ ವಿಡಿಯೋ ಶೇರ್‌ ಮಾಡಿದ್ದಾರೆ. ಮನೆಯ ಬಗ್ಗೆ ಈ ವಿಡಿಯೋದಲ್ಲಿ ಕಂಪ್ಲೀಟ್‌ ಆಗಿ ಡಿಟೇಲ್ಸ್‌ ಕೂಡ ಕೊಟ್ಟಿದ್ದಾರೆ.

ಕನಸಿನ ಮನೆಯನ್ನ ಕಟ್ಟಿಸಿಕೊಂಡ ಆರ್‌ ಜೆ 

ರಶ್ಮಿ ತಮ್ಮ ಕನಸಿನ ಮನೆ ಹೀಗೆ ಇರಬೇಕು ಅನ್ನೋ ಆಸೆ ಇಟ್ಟುಕೊಂಡಿದ್ರಂತೆ. ಅದೇ ರೀತಿ ತಮ್ಮ ಮನೆ ನಿರ್ಮಾಣ ಆಗಿದೆ ಅನ್ನೋ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಸಾಥ್‌ ಕೊಟ್ಟವ್ರಿಗೆ ಥ್ಯಾಂಕ್ಸ್‌ ಕೂಡ ಹೇಳಇದ್ದಾರೆ. ಇನ್ನು ಮನೆಯ ಒಳಗೆ ಗೋಡೆಗಳು ಯಾವ ಬಣ್ಣ ಇರಬೇಕು, ಹೊರಗಿನ ಗೋಡೆ ಯಾವ ಬಣ್ಣ ಇದ್ದರೆ ಚಂದ. ಬೆಡ್‌ ರೂಂ ಲೀವಿಂಗ್‌ ಏರಿಯಾ ಇದೆಲ್ಲಕ್ಕೂ ಯಾವ ಬಣ್ಣ ಇದ್ದರೆ ಮನೆಯ ಒಳಾಂಗಣ ಅಂದ ಹೆಚ್ಚಿಸುತ್ತದೆ ಅನ್ನೋ ಎಲ್ಲಾ ವಿಚಾರವನ್ನೂ ವಿಡಿಯೋ ಶೇರ್‌ ಮಾಡಿದ್ದಾರೆ.

ರಪ್ ರಪ್ ಅಂತ ಉತ್ತರ ಕೊಡುವ ರ‍್ಯಾಪಿಡ್ ರಶ್ಮಿ ಅಸಲಿ ಕಹಾನಿಯಿದು!

ಮುದ್ದು ಶ್ವಾನಗಳಿಗೂ ವಿಲ್ಲಾದಲ್ಲಿಯೇ ಜಾಗ 

ಐಶಾರಾಮಿ ವಿಲ್ಲಾ ಕಟ್ಟಿಸಿಕೊಂಡಿದ್ದು ತಮ್ಮ ಮನೆಯಲ್ಲಿರೋ ಮುದ್ದು ಶ್ವಾನಗಳಳಿಗೂ ಜಾಗ ಮಾಡಿಸಿಕೊಂಡಿದ್ದಾರೆ. ಶ್ವಾನಗಳನ್ನ ಮಗುವಿನಂತೆ ಪ್ರೀತಿಸೋ ರಶ್ಮಿ ಹಾಗೂ ಅವ್ರ ಪತಿ ಐಶಾರಾಮಿ ವಿಲ್ಲಾದಲ್ಲಿ ಅವುಗಳ ಜೊತೆ ಜೀವನ ಎಂಜಾಯ್‌ ಮಾಡ್ತಿದ್ದಾರೆ. ಸದ್ಯ ಮನೆಯ ಒಂದು ಭಾಗದ ವಿಡಿಯೋ ಮಾತ್ರ ಶೇರ್‌ ಮಾಡಿದ್ದು ಇನ್ನು ಮುದ್ದ ವಿಡಿಯೋಗಳನ್ನೂ ಶ್ರೀಘ್ರದಲ್ಲೇ ಶೇರ್‌ ಮಾಡ್ತಾರಂತೆ.

View post on Instagram

RJ Rashmi reveals ಆರ್‌ಜೆ ರಚನಾ ಮಗು ದತ್ತು ಪಡೆದುಕೊಳ್ಳಬೇಕೆಂದುಕೊಂಡಿದ್ದರಂತೆ!

ರಶ್ಮಿ ಮನೆ ವಿಡಿಯೋಗೆ ಕಮೆಂಟ್ಸ್‌ ಗಳ ಸುರಿಮಳೆ 

ರ್ಯಾಪಿಡ್‌ ರಶ್ಮಿ ತಮ್ಮ ಮನೆಯ ವಿಡಿಯೋ ಶೇರ್‌ ಮಾಡಿದ ತಕ್ಷಣ ವಿಡಿಯೋ ನೋಡಿದವ್ರೆಲ್ಲರೂ ಪಾಸಿಟಿವ್‌ ಆಗಿ ಕಮೆಂಟ್ಸ್‌ ಮಾಡಿದ್ದಾರೆ. ಮನೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ನಮ್ಮ ಕನಸಿನಂತೆ ಇರಬೇಕು ಎಂದಿದ್ದಾರೆ. ಇನ್ನು ಕೆಲವು ಇಂಥಹ ಸಂಭ್ರಮ ಸಡಗರ ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದ್ದಾರೆ. ನೀವು ಕೂಡ ರಶ್ಮಿ ಅವ್ರ ಮನೆ ವಿಡಿಯೋ ನೋಡಿದ್ರೆ ಶಾಕ್‌ ಆಗೋದ್ರ ಜೊತೆಯಲ್ಲಿ ವಾವ್ಹ್‌ ಅನ್ನೋದು ಖಂಡಿತ.