ಕನ್ನಡ ಬಿಗ್ ಬಾಸ್ ಶೋ ಮೂಲಕ ಭವ್ಯಾ ಗೌಡ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಟ್ರೋಫಿ ಗೆಲ್ಲದಿದ್ದರೂ ಭವ್ಯಾ ಗೌಡ ಖ್ಯಾತಿ ದುಪ್ಪಟ್ಟಾಗಿದೆ. ಇದೀಗ ಬಿಗ್ ಬಾಸ್‌ನಲ್ಲಿ ಭವ್ಯಾ ಗೌಡಗೆ ಪ್ರೀತಿ ತೋರಿದ ಅಭಿಮಾನಿಗಳು ಇದೀಗ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. 

ಬೆಂಗಳೂರು(ಫೆ.02) ಕನ್ನಡ ಬಿಗ್ ಬಾಸ್ ಸೀಸನ್ 11 ಅದ್ಧೂರಿಯಾಗಿ ತೆರೆಕಂಡಿದೆ. ಮುಗ್ದ ಮನಸ್ಸಿನ ಹನುಮಂತ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಬಿಗ್ ಬಾಸ್ ಆವೃತ್ತಿಯಲ್ಲಿ ಕಾಣಿಸಿಕೊಂಡ ಎಲ್ಲಾ ಸ್ಪರ್ಧಿಗಳು ಅಪಾರ ಪ್ರೀತಿ ಗಳಿಸಿದ್ದಾರೆ. ಈ ಪೈಕಿ ಫಿನಾಲೆ ವರೆಗೆ ಟಫ್ ಫೈಟ್ ಕೊಟ್ಟಿದ್ದ ಸ್ಪರ್ಧಿ ಭವ್ಯ ಗೌಡ ಇದೀಗ ಬಿಗ್ ಬಾಸ್ ಯಶಸ್ಸಿನ ಅಲೆಯಲ್ಲಿದ್ದಾರೆ. ಎಲ್ಲಿ ಹೋದರು ಭವ್ಯ ಗೌಡಾಗೆ ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದರ ನಡುವೆ ಭವ್ಯ ಗೌಡಗೆ ಅಭಿಮಾನಿಗಳು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭವ್ಯ ಗೌಡ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಬಾರಿಯ ಆವೃತ್ತಿಯಲ್ಲಿ ಮೊದಲ ಸ್ಪರ್ಧಿಯಾಗಿ ಭವ್ಯ ಗೌಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಆದರೆ 118 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇದೀಗ ಭವ್ಯ ಅಭಿಮಾನಿಗಳು ಅವರ ಮನೆಗೆ ತೆರಳಿ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು, ಭವ್ಯ ಗೌಡಗೆ ಅಭಿಮಾನಿಗಳ ಬಳಗ ಪ್ರೀತಿಯ ಉಡುಗೊರೆ ನೀಡಿದೆ.

ʼತ್ರಿವಿಕ್ರಮ್‌ ಜೊತೆ ತನ್ನ ಅಕ್ಕ ದಿವ್ಯಾ ಗೌಡ ಮದುವೆ ಮಾಡಿಸೋಣ ಅಂತ Bigg Boss ಮನೇಲಿ ಮಾತಾಡಿದ್ದೆʼ: ಭವ್ಯಾ ಗೌಡ!

ಭವ್ಯಗೆ ಸಿಕ್ಕ ಸರ್ಪ್ರೈಸ್ ಗಿಫ್ಟ್ ಏನು?
ಬಿಗ್ ಬಾಸ್‌ನಿಂದ ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಭವ್ಯ ಗೌಡ ಮನೆಗೆ ಅಭಿಮಾನಿಗಳ ಬಳಗವೊಂದು ತೆರಳಿದೆ. ಬಳಿಕ ಭವ್ಯ ಗೌಡ ಭೇಟಿಯಾಗಿ ಉಡುಗೊರೆ ನೀಡಲು ಮುಂದಾಗಿದ್ದಾರೆ. ಆದರೆ ಅಭಿಮಾನಿಗಳು ಮನೆಗೆ ತೆರಳಿದಾಗ ಭವ್ಯ ಗೌಡ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಭಿಮಾನಿಗಳ ಬಳಗ ಮನೆಯಲ್ಲಿ ಭವ್ಯ ಗೌಡಗೆ ಗಿಫ್ಟ್ ತಲುಪಿಸಲು ಹೇಳಿ ಹೊರಟಿದ್ದಾರೆ. ಇತ್ತ ಭವ್ಯ ಗೌಡ ಮರಳಿ ಮನೆಗೆ ಬಂದಾಗ ಅಭಿಮಾನಿಗಳ ನೀಡಿದ ಗಿಫ್ಟ್‌ನ್ನು ಕುಟುಂಬಸ್ಥರು ಹಸ್ತಾಂತರಿಸಿದ್ದಾರೆ.

ಅಭಿಮಾನಿಗಳು ಭವ್ಯ ಗೌಡ ದೊಡ್ಡ ಫೋಟೋವನ್ನು ಫ್ರೇಮ್ ಹಾಕಿಸಿ ಉಡುಗೊರೆಯಾಗಿ ನೀಡಿದ್ದಾರೆ. ಬಿಗ್ ಬಾಸ್ ಶೋ ಎಪಿಸೋಡ್ ಕೊನೆಯಲ್ಲಿ ಬರುವ ಸ್ಪರ್ಧಿಗಳ ಫೋಟೋ ಹಾಗೂ ಬಿಗ್ ಬಾಸ್ ಎಸ್ಎಂಎಸ್ ವೋಟಿಂಗ್ ಮಾಹಿತಿಯ ಫ್ರೇಮ‌್‌ನ್ನೇ ಫೋಟೋವಾಗಿ ನೀಡಿದ್ದಾರೆ. ಇತ್ತ ಭವ್ಯ ಗೌಡ ಅಭಿಮಾನಿಗಳ ಉಡುಗೊರೆಯಿಂದ ಫುಲ್ ಖುಷ್ ಆಗಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ಸರ್ಪ್ರೈಸ್ ಗಿಫ್ಟ್ ನೀಡಿರುವುದಕ್ಕೆ ತುಂಬಾ ಧನ್ಯವಾದ. ನನ್ನ ಮನೆಗೆ ಬಂದು ಈ ಉಡುಗೊರೆ ನೀಡಿದ್ದೀರಿ. ಈ ವೇಳೆ ನಾನು ಮನೆಯಲ್ಲಿ ಇರಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಆದಷ್ಟು ಬೇಗ ನಿಮ್ಮಲ್ಲೆರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಹೀಗೆ ಟಾಸ್ಕ್ ಕ್ವೀನ್‌ನ್ನು ಸದಾ ಪ್ರೀತಿ ಹಾಗೂ ಬೆಂಬಲ ಕೊಟ್ಟು ಬೆಳೆಸಿ ಎಂದಿದ್ದಾರೆ.

View post on Instagram

ಭವ್ಯ ಗೌಡ ಬಿಗ್ ಬಾಸ್ ಮನೆಯಲ್ಲಿರುವಾಗಲೇ ಎಲ್ಲೆಡೆ ಭಾರಿ ಚರ್ಚೆಯಾಗಿದ್ದರು. ಭವ್ಯ ಗೌಡ ಸ್ಟೈಲ್, ಡ್ರೆಸ್, ಹೇರ್ ಸ್ಟೈಲ್ ಎಲ್ಲವೂ ಚರ್ಚೆಯಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಭವ್ಯಾ ಗೌಡ, ಬಿಗ್ ಬಾಸ್‌ಗೆ ಹೋಗುವ ಮುನ್ನ ಹೇರ್ ಕಟ್ ಮತ್ತು ಹೊಸ ಫ್ಯಾಶನ್ ಮೂಲಕ ತಮ್ಮ ಲುಕ್ ಬದಲಾಯಿಸಿಕೊಂಡಿದ್ದರು. ಅವರ ಹೊಸ ಕೇಶವಿನ್ಯಾಸದ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿತ್ತು. ಭವ್ಯಾ ದಟ್ಟವಾದ, ನೈಸರ್ಗಿಕವಾಗಿ ಕಪ್ಪು ಕೂದಲನ್ನು ಹೊಂದಿದ್ದಾರೆ, ಇದನ್ನು ಅವರು ಕೆಲವೊಮ್ಮೆ ಬಣ್ಣ ಮಾಡುತ್ತಾರೆ. ತಮ್ಮ ಉದ್ದನೆಯ ಕೂದಲಿಗೆ ಆಕಾರ ಮತ್ತು ವಾಲ್ಯೂಮ್ ಸೇರಿಸಲು ಅವರು ಹೇರ್ ಕಟ್ ಮಾಡಿಸಿಕೊಂಡಿದ್ದರು. ಭವ್ಯಾ ತಮ್ಮ ಹೊಸ ಹೇರ್ ಕಟ್‌ನೊಂದಿಗೆ ಚೆನ್ನಾಗಿ ಕಾಣುತ್ತಿದ್ದಾರೆ ಮತ್ತು ಪ್ರಶಂಸೆಗಳನ್ನು ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭವ್ಯ ಪರ ಹಲವು ಅಭಿಮಾನಿಗಳು ಬ್ಯಾಟ್ ಬೀಸಿದ್ದರು. ಇನ್ನು ಸಹಜವಾಗಿ ಅಸಮಾಧಾನ ವ್ಯಕ್ತಪಡಿಸಿದ ಕಮೆಂಟ್ ಕೂಡ ವ್ಯಕ್ತವಾಗಿತ್ತು.

ಆಂಕರ್ಸ್ & ಫೇಮಸ್ ಸ್ಟಾರ್ ನಟಿಯರ 'ಆ ಒಂದು ಗುಟ್ಟು' ಬಿಚ್ಚಿಟ್ಟ ಅನುಪಮಾ ಗೌಡ!