ರಾಜ್ಯ ಪ್ರಶಸ್ತಿ ವಿಜೇತೆ ಅನುಪಮಾ ಗೌಡ, ಒಂದು ಕಾಲದಲ್ಲಿ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ('R' ಅಕ್ಷರದ ನಟಿಯರು) ಕನ್ನಡ ಚಿತ್ರರಂಗದಲ್ಲಿ ಪ್ರಾಬಲ್ಯ ಹೊಂದಿದ್ದರೆಂದು ತಿಳಿಸಿದ್ದಾರೆ. ಇದೀಗ 'A' ಅಕ್ಷರದಿಂದ ಆರಂಭವಾಗುವ ಅನುಶ್ರೀ, ಅನುಪಮಾ, ಆನಂದ್, ಅಕುಲ್ ಮುಂತಾದವರು ಜನಪ್ರಿಯ ನಿರೂಪಕರಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ರಾಜ್ಯ ಪ್ರಶಸ್ತಿ ವಿಜೇತೆ ಹಾಗೂ ಆಂಕರ್ ಅನುಪಮಾ ಗೌಡ (Anupama Gowda) ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ಬಹುಶಃ ಇಲ್ಲಿಯವರೆಗೆ ಯಾರೂ ಈ ಗುಟ್ಟನ್ನು ಹೇಳಿರಲೇ ಇಲ್ಲ. ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ನಟಿ ಅನುಪಮಾ ಗೌಡ ಸ್ವತಃ ಈ ಬಗ್ಗೆ ಮಾತನ್ನಾಡಿದ್ದಾರೆ. ಸದ್ಯ 2019ರ ಕರ್ನಾಟಕ ವಾರ್ಷಿಕ ರಾಜ್ಯ ಪ್ರಶಸ್ತಿ ಪಡೆದುಕೊಂಡು ಖುಷಿಯಾಗು ಕುಣಿದಾಡುತ್ತಿರುವ ಅನುಪಮಾ ಗೌಡ, ಅದೆಂತಹ ಗುಟ್ಟು ರಟ್ಟಾ ಮಾಡಿದ್ದಾರೆ ನೋಡಿ..
ಕನ್ನಡದಲ್ಲಿ ಒಂದಾನೊಂದು ಕಾಲದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿ ಮೆರೆದಿದ್ದ ಆ ಮೂವರು ನಟಿಯರ ಬಗ್ಗೆ ಅನುಪಮಾ ಗೌಡ ಅವರು ಹೇಳಿದ್ದಾರೆ. ರಮ್ಯಾ, ರಕ್ಷಿತಾ ಹಾಗೂ ರಾಧಿಕಾ ಈ ಮೂರು ನಟಿಯರು ಅಂದು ಕನ್ನಡ ಸಿನಿಮಾರಂಗವನ್ನು ಅಕ್ಷರಶಃ ಆಳಿದ್ದರು. ಆ ಕಾಲದಲ್ಲಿ ಯಾವುದೇ ಸಿನಿಮಾ ಇರಲಿ, ಇಂಗ್ಲೀಷಿನ 'ಆರ್ (R)' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಈ ನಟಿಯರೇ ಈ ಮೂವರು ನಟಿಯರೇ ಆಯ್ಕೆ ಆಗುತ್ತಿದ್ದರು.
ಡಿಪ್ರೆಶನ್ & ರಾಜ್ಯ ಪ್ರಶಸ್ತಿ ಎರಡನ್ನೂ ಅನುಭವಿಸಿದ ಅಂದಗಾತಿ ಅನುಪಮಾ; ಫೋಟೋಸ್ ನೋಡಿ, ಕಾಲೆಳಿಬೇಡಿ!
ಈ ಮೂವರು ನಟಿಯರು ಅದೆಷ್ಟು ಜನಪ್ರಿಯರಾಗಿದ್ದರು ಎಂದರೆ, ನಾಯಕರು ಯಾರೇ ಆಗಿರಲಿ, ನಾಯಕಿಯರು ಆ ಮೂವರಲ್ಲಿ ಯಾರಾದ್ರೂ ಒಬ್ರು ಫಿಕ್ಸ್ ಎಂಬಂತೆ ಆಗಿತ್ತು. ರಮ್ಯಾ ರಕ್ಷಿತಾ, ರಮ್ಯಾ ರಾಧಿಕಾ ಜೊತೆಯಾಗಿ ನಟಿಸಿದ್ದು ಇದೆ. ಆದರೆ, ರಕ್ಷಿತಾ ಹಾಗೂ ರಾಧಿಕಾ ಅದ್ಯಾಕೋ ಜೊತೆಯಾಗಿ ನಟಿಸುವ ಕಾಲ ಕೂಡಿ ಬಂದಿರಲಿಲ್ಲ. ಇದೊಂದು ಗುಟ್ಟನ್ನು ಹಂಚಿಕೊಂಡಿರುವ ಅನುಪಮಾ ಗೌಡ, ಇನ್ನೂ ಒಂದು ಗುಟ್ಟು ಬಿಚ್ಚಿಟ್ಟಿದ್ದಾರೆ.
ಅದು ಕನ್ನಡದ ಟಾಪ್ ಆಂಕರ್ಸ್ ಬಗ್ಗೆ. ಹೌದು ಕನ್ನಡದಲ್ಲಿ ಸದ್ಯ ಆಂಕರಿಂಗ್‌ನಲ್ಲಿ ಹೆಸರು ಮಾಡಿರುವವರ ಹೆಸರುಗಳು ಇಂಗ್ಲಿಷಿನ 'ಎ (A)' ಅಕ್ಷರದಿಂದ ಪ್ರಾರಂಭವಾಗಿವೆ. ಅನುಶ್ರೀ, ಅನುಪಮಾ ಗೌಡ, ಆನಂದ್, ಅಕುಲ್ ಬಾಲಾಜಿ ಹೀಗೆ ಎಲ್ಲರೂ ಎ ಅಕ್ಷರದವರೇ. ಅಷ್ಟೇ ಅಲ್ಲ, ಕಳೆದ ವರ್ಷ ನಮ್ಮನ್ನು ಅಗಲಿದ ಅಚ್ಚಗನ್ನಡದ ನಿರೂಪಕಿ ಅಪರ್ಣಾ ಕೂಡ 'ಎ' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರೇ ಆಗಿರುವುದು ವಿಶೇಷ!
ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!
ಈ ಗುಟ್ಟನ್ನು ಇತ್ತೀಚೆಗೆ ರಟ್ಟು ಮಾಡಿರುವ ಅನುಪಮಾ ಮಾತಿಗೆ ತಲೆದೂಗಲೇ ಬೇಕು. ಆ ನಿರ್ಧಿಷ್ಟ ಅಕ್ಷರ ಅಲ್ಲದೆಯೂ ಇರುವ ಜನಪ್ರಿಯ ನಿರೂಪಕರೂ ಕೂಡ ಇದ್ದಾರೆ. ಸೃಜನ್ ಲೋಕೇಶ್, ರಮೇಶ್ ಅರವಿಂದ್, ಸುದೀಪ್ ಹೀಗೆ ಒಂದು ಕಡೆಯಾದರೆ, ನ್ಯೂಸ್ ಚಾನೆಲ್ಸ್ ಆಂಕರ್ಸ್‌ದು ದೊಡ್ಡ ಪಟ್ಟಿಯೇ ಇದೆ. ಆದರೂ ಕೂಡ ನಟಿ, ಆಂಕರ್ ಅನುಪಮಾ ಹೇಳಿದ ಮಾತನ್ನು ಖಮಡಿತ ತಳ್ಳಿ ಹಾಕುವಂತಿಲ್ಲ, ಏನಂತೀರಾ?
