ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಅವರ ಅಭಿಮಾನಿಗಳು ನಮ್‌ ಏರಿಯಾ ಗಣಪತಿ ಹಬ್ಬದ ಡಿಜೆ ಡ್ಯಾನ್ಸ್‌ಗೆ ನೀವೇ ಬರಬೇಕು ಎಂದು ಆಹ್ವಾನ ನೀಡಿದ್ದಾರೆ. 

ಬೆಂಗಳೂರು (ಅ.08): ಬಿಗ್‌ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ಗೌಡ ಅವರು ಈಗ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅವರ ಸಾಮಾಜಿಕ ಜಾಲತಾಣದಲ್ಲಿ ಮಾಡುವ ರೀಲ್ಸ್‌ಗಳನ್ನು ನೋಡಿದ ನೆಟ್ಟಿಗರು ಹಾಗೂ ಆಕೆಯ ಫಾಲೋವರ್ಸ್‌ಗಳು ನಮ್ಮ ಏರಿಯಾ ಗಣಪತಿ ಡಿಜೆಗೆ ಡ್ಯಾನ್ಸ್‌ ಮಾಡಲು ನೀವು ಬರಲೇಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಸೋನುಗೌಡ ಮಾತ್ರ ಏನೂ ಹೇಳಿಲ್ಲ. 

ಬಿಗ್ ಬಾಸ್ ಬೆಡಗಿ ಸೋನು ಗೌಡ ಇತ್ತೀಚೆಗಷ್ಟೇ ಮಾಲ್ಡೀವ್ಸ್​ನಲ್ಲಿ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದಾರೆ. ಈ ವೇಳೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೋನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಟೋಗಳನ್ನು ಹಾಗೂ ರೀಲ್ಸ್‌ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ. ಸೋನು ಗೌಡ ಹಳದಿ ಪಾರದರ್ಶಕ ಸೀರೆಯನ್ನು ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ಮಾತಿನಲ್ಲಿ ಹೇಳಲಾರೆನೂ ಹಾಡಿಗೆ ಹೆಜ್ಜೆ ಹಾಕಿ ಸಮುದ್ರ ತೀರದಲ್ಲಿ ರೀಲ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಸೋನುಗೌಡ ವಿಡಿಯೋ ನೋಡಿಗರ ಸಂಖ್ಯೆಯೂ ಹೆಚ್ಚಾಗೊದ್ದು, ಹಲವು ಸೂಪರ್‌ ಎಂದು ಕಮೆಂಟ್‌ ಮಾಡಿದ್ದಾರೆ. 

ಮಾಲ್ಡೀವ್ಸ್‌ನಲ್ಲಿ ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ಗೊಂಡ್ ಹೊಡೆದ್ರಂತೆ ಗಿಚ್ಚಿಗಿಲಿ ಗಿಲಿ ಧನ್‌ರಾಜ್!

ಸೋನು ಗೌಡ ಹಂಚಿಕೊಂಡಿರುವ ಈ ವಿಡಿಯೋ ನೋಡಿದ ನೆಟ್ಟಿಗನೊಬ್ಬ ನಮ್ ಏರಿಯಾ ಗಣಪತಿ ಡಿಜೆಗೆ ಈ ಡ್ಯಾನ್ಸ್‌ ಮಾಡೋಕೆ ಸೋನುಗೌಡಳನ್ನು ಕರೆಸಲೇಬೇಕು ಎಂದು ಹೇಳೊಕೊಂಡಿದ್ದಾನೆ. ಈ ಮೂಲಕ ಗಣಪತಿ ಹಬ್ಬದ ಡಿಜೆ ಡ್ಯಾನ್ಸ್‌ಗೆ ಆಹ್ವಾನವನ್ನೂ ನೀಡಿದ್ದಾನೆ. ಆದರೆ, ಇದಕ್ಕೆ ಸೋನುಗೌಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ನೆಟ್ಟಿಗನ ಆಹ್ವಾನಕ್ಕೆ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, ನೀವು ಡಿಜೆ ಡ್ಯಾನ್ಸ್‌ಗೆ ಸೋನುಗೌಡಳನ್ನು ಕರೆಸಿದರೆ ನಮಗೂ ಹೇಳಿ ನಾವು ಕೂಡ ಡ್ಯಾನ್ಸ್‌ ನೋಡಲು ಬರುತ್ತೇವೆ ಎಂದು ಹೇಳಿದ್ದಾನೆ. ಒಂದು ವೇಳೆ ನೀವು ಡಿಜೆ ಡ್ಯಾನ್ಸ್‌ಗೆ ಸೋನುಗೌಡ ಕರೆಸಿದರೆ ಭಾರಿ ಫೇಮಸ್‌ ಆಗ್ತೀರಿ ಎಂದು ಹೇಳಿದ್ದಾನೆ. 

View post on Instagram

ಅಂದಹಾಗೆ, ಯಾರೇ ಕೂಗಾಡಲಿ ಯಾರೇ ಹೋರಾಡಲಿ ಯೆಮ್ಮೆ ನಿಂಗೆ ಸಾಟಿ ಇಲ್ಲಾ ಎನ್ನುವಂತೆ ಯಾರೇನೇ ಕಮೆಂಟ್‌ ಮಾಡಿದರೂ, ತಾನು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಆಗಿರುವುದರಿಂದ ದೂರ ಸರಿಯುವುದಿಲ್ಲ. ಇನ್ನು ತಾನು ಅಪ್ಲೋಡ್‌ ಮಾಡುವ ಫೋಟೋ, ವಿಡಿಯೋ ಹಾಗೂ ಡ್ಯಾನ್ಸ್‌ನ ರೀಲ್ಸ್‌ಗಳನ್ನು ನೋಡುವ ನೆಟ್ಟಿಗರಲ್ಲಿ ಬಹುತೇಕರು ಲೈಕ್‌ ಮಾಡಿ ಪ್ರೇರಣೆ ಮಾಡುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಸ್ಟಾರ್‌ ಆಗಿ ಸೋನುಗೌಡ ಸಕತ್ತಾಗೆ ಲೈಪ್‌ ಎಂಜಾಯ್ ಮಾಡುತ್ತಿದ್ದಾಳೆ.

ಟಿಕ್‌ಟಾಕ್‌ ಮತ್ತು ಇತರೆ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಫೇಮಸ್‌ ಆಗಿದ್ದ ಸೋನುಗೌಡ ಅವರು ‘ಬಿಗ್ ಬಾಸ್ ಒಟಿಟಿ' ಮೂಲಕ ಮತ್ತಷ್ಟು ಹೆಚ್ಚು ಜನಪ್ರಿಯತೆ ಪಡೆದರು. ಇನ್​ಸ್ಟಾಗ್ರಾಮ್​ನಲ್ಲಿ ಫುಲ್‌ ಆ್ಯಕ್ಟೀವ್ ಆಗಿದ್ದು, ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಸಂಭ್ರಮಿಸುತ್ತಾರೆ. ಕೆಲ ದಿನದ ಹಿಂದೆ ಸೋನು ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದರು. ನೀಲಿ ಸ್ಕರ್ಟ್‌ ತೊಟ್ಟು ಕೈಯಿಂದ ಮೈ ಮುಚ್ಚಿಕೊಂಡ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವಿಶ್ವಕಪ್‌ ಕ್ರಿಕೆಟ್‌ ಮ್ಯಾಚ್‌ ನಡುವೆಯೂ ಹೆಲ್ಮೆಟ್‌ ಧರಿಸಿ ಗಲ್ಲಿ ಸುತ್ತಲು ಹೊರಟ ಕ್ಯಾಪ್ಟನ್‌

ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ. ಇನ್ನು ಸಾಮಾಜಿಕ ಜಾಲತಾಣದಿಂದ ಭರ್ಜರಿ ಆದಾಯವನ್ನು ಗಳಿಸುವ ಸೋನುಗೌಡ ಕಷ್ಟಪಟ್ಟು ದುಡಿದು ಮೈ ಮುರಿದುಕೊಳ್ಳೋರಿಗಿಂತ ಹೆಚ್ಚಾಗಿ ಆದಾಯ ಗಳಿಸುತ್ತಿದ್ದಾಳೆ.