ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ಹೆಲ್ಮೆಟ್‌ ಧರಿಸಿ ಗಲ್ಲಿಗಳಲ್ಲಿ ಸುತ್ತಾಡುತ್ತಿದ್ದು, ತಮ್ಮದೇ ಸಿನಿಮಾದ ದೃಶ್ಯ ಮರು ಸೃಷ್ಟಿಸಿದ್ದಾರೆ.

ಬೆಂಗಳೂರು (ಅ.07): ಭಾರತದಲ್ಲಿ ವಿಶ್ವಕಪ್‌ ಕ್ರಿಕೆಟ್‌ ನಡೆಯುತ್ತಿದ್ದು ಎಲ್ಲ ಕ್ರಿಕೆಟಿಗರೂ ಕೂಡ ಬಿಜಿಯಾಗಿದ್ದಾರೆ. ಆದರೆ, ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ಹೆಲ್ಮೆಟ್‌ ಧರಿಸಿ ಗಲ್ಲಿಯನ್ನು ಸುತ್ತಾಡಲು ಹೊರಟಿದ್ದಾರೆ. 

ಬಾಲಿವುಡ್‌ನಲ್ಲಿ ಭಾರಿ ಹವಾ ಎಬ್ಬಿಸಿದ ಸಿನಿಮಾಗಳಲ್ಲಿ ಧೋನಿ ಸಿನಿಮಾ ಕೂಡ ಒಂದಾಗಿದೆ. ಈ ಸಿನಿಮಾದಲ್ಲಿ ಧೋನಿ ಪಾತ್ರಧಾರಿ ಸುಶಾಂತ್‌ ಸಿಂಗ್‌ ರಜಪೂತ್‌ ಮುಖಕ್ಕೆ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ತನ್ನ ಪ್ರೇಯಸಿ ಸಾಕ್ಷಿ ಸಿಂಗ್‌ ಪಾತ್ರಧಾರಿ ನಾಯಕಿ ದಿಶಾ ಪಟಾನಿಯನ್ನು ಕೂರಿಸಿಕೊಂಡು ಗಲ್ಲಿ ಗಲ್ಲಿಯಲ್ಲಿ ಸುತ್ತಾಡುತ್ತಿದ್ದರು. ಇನ್ನು ಕೆಲವು ಸಣ್ಣಪುಟ್ಟ ಅಂಗಡಿಗಳಲ್ಲಿ ಏನಾದರೂ ಗಿಫ್ಟ್‌ ಕೊಡಿಸುವಾಗ ಹೆಲ್ಮೆಟ್‌ ಧರಿಸಿಯೇ ಗಲ್ಲಿಗಳಲ್ಲಿ ಓಡಾಡುತ್ತಿದ್ದರು. ಈಗ ಸಿನಿಮಾದ ಶೈಲಿಯಲ್ಲಿ ನಿಜ ಜೀವನದಲ್ಲಿ ಮಹೇಂದ್ರ ಸಿಂಗ್‌ ಧೋನಿ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಗಲ್ಲಿಗಳಲ್ಲಿ ಸುತ್ತಾಡುತ್ತಿದ್ದಾರೆ.

ಏಕದಿನ ವಿಶ್ವಕಪ್ (One day world cup-2023) ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪೂರ್ಣವಾಗಿ ನಿವೃತ್ತಿ ಘೋಷಣೆ ಮಾಡಿರುವ ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಮಹೇಂದ್ರ ಸಿಂಗ್‌ ಧೋನಿ ಈಗ ಐಪಿಎಲ್‌ನಲ್ಲಿ ಚೆನ್ನೈ ತಂಡದಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ. ಪಈಗಲೂ ತಮ್ಮ ಚಾರ್ಮ್‌ ತೋರಿಸುತ್ತಿರುವ ಧೋನಿ ಕ್ರಿಕೆಟ್‌ ಪ್ರೇಮಿಗಳ ಅಗಾಧ ಪ್ರೀತಿಯನ್ನು ಗಳಿಸಿದ್ದಾರೆ. ಇನ್ನು ನಮ್ಮ ದೇಶದಲ್ಲಿಯೇ ವಿಶ್ವಕಪ್‌ ಕ್ರಿಕೆಟ್‌ ನಡೆಯುತ್ತಿದ್ದು, ಕಪ್‌ ಗೆಲ್ಲುವ ಫೇವರೀಟ್‌ ತಂಡವಾಗಿ ಇಂಡಿಯಾ ತಂಡವೂ ಕೂಡ ಭಾರಿ ಪೈಪೋಟಿ ನೀಡುತ್ತಿದೆ. ಈ ಸಂದರ್ಭದಲ್ಲಿ ಕ್ರಿಕೆಟ್‌ ವೀಕ್ಷಣೆ ಮಾಡುತ್ತಾ ಟಿವಿ ಮುಂದೆ ಅಥವಾ ಮೈದಾನದಲ್ಲಿ ಕುಳಿತುಕೊಳ್ಳದ ಮಹೇಂದ್ರ ಸಿಂಗ್‌ ಧೋನಿ ತಮ್ಮ ನಿವೃತ್ತಿ ಜೀವನವನ್ನು ಜನಸಾಮಾನ್ಯರೊಂದಿಗೆ ಎಂಜಾಯ್‌ ಮಾಡುತ್ತಿದ್ದಾರೆ.

View post on Instagram

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, (India cricket captain Mahendra singh Dhoni) ಕಳೆದ ಒಂದೂವರೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಹಲವಾರು ಬಾರಿ ತಮ್ಮ ಹೇರ್‌ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು 2007ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವವರೆಗೆ ಇದ್ದ ಉದ್ದದ ಹೇರ್‌ಸ್ಟೈಲ್ ಹೆಚ್ಚು ಗಮನ ಸೆಳೆದಿತ್ತು. ಒಮ್ಮೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಿದ್ದಾಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಪರ್ವೇಜ್‌ ಮುಷರಫ್ ಕೂಡಾ ಧೋನಿ ಹೇರ್‌ಸ್ಟೈಲ್ ಗುಣಗಾನ ಮಾಡಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ವಿಂಟೇಜ್ ಧೋನಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಬಂದೊದಗಿದೆ. 

ಸುಶಾಂತ್‌ಗೆ ಸೂಕ್ತ ವಿದಾಯ ಹೇಳಲೇ ಇಲ್ಲ: ಧೋನಿ ಸಹ ನಟಿ ದಿಶಾ ಪಟಾನಿ

ಪ್ರಖ್ಯಾತ ಕೇಶ ವಿನ್ಯಾಸಕಾರರಾಗಿರುವ ಅಲಿಮ್ ಹಕೀಂ, ಇದೀಗ ಧೋನಿಗೆ ಮತ್ತೊಮ್ಮೆ ಹೊಸ ಹೇರ್‌ಸ್ಟೈಲ್ ಮಾಡಿದ್ದು, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ್ದು, ಯಾರಿದು ಹೀರೋ ಎಂದು ಅಭಿಮಾನಿಗಳು ಉದ್ಘಾರ ತೆಗೆದಿದ್ದಾರೆ. ಈ ಕುರಿತಂತೆ ಧೋನಿಯ ಜತೆಗಿನ ಒಡನಾಟವನ್ನು ಹಾಗೂ ಅವರ ಹೇರ್‌ ಸ್ಟೈಲ್‌ ಬಗ್ಗೆ ಅಲೀಮ್ ಹಕೀಂ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.