ಅಮೃತಧಾರೆ: ಮೊದಲು ಅಪ್ಪಿ ಪಾರ್ಥಗೆ ಕಾಯ್ಕೊಂಡು ಇರ್ತಿದ್ವಿ, ಈಗ ಮುಖ ಕಂಡ ಕೂಡ್ಲೇ ಚಾನೆಲ್ ಚೇಂಜ್ ಮಾಡ್ತೀವಿ ಅಂತಿರೋ ಫ್ಯಾನ್ಸ್
ಅಮೃತಧಾರೆಯ ಅಪ್ಪಿ ಪಾರ್ಥ ಕ್ಯೂಟ್ ಲವ್‌ಸ್ಟೋರಿ ಇಷ್ಟಪಡ್ತಿದ್ದ ಹಲವರು ಈಗ ಇವರನ್ನು ದ್ವೇಷಿಸೋದಕ್ಕೆ ಶುರುಮಾಡಿದ್ದಾರಪ್ಪಾ! ಹಿಂಗಾದ್ರೆ ಹೆಂಗೆ..
ಅಮೃತಧಾರೆ ಸೀರಿಯಲ್‌ನಲ್ಲಿ ಸದ್ಯ ಆನಂದ್ ಗೌತಮ್ ಗೆಳೆತನದ ಕಥೆಗೆ ಮತ್ತೆ ಜೀವ ಬಂದಿದೆ. ಇನ್ನೊಂದು ಕಡೆ ಪಾರ್ಥ ಮತ್ತು ಅರ್ಪಿತಾ ಸ್ಟೋರಿ ಲೈನ್ ಇದೆ. ಮೊದಲೆಲ್ಲ ಇವರ ಸೀನ್‌ಗೆ ಜನ ಕಾಯ್ಕೊಂಡು ನೋಡ್ತಾ ಇದ್ರಂತೆ. ಯಾಕೆಂದರೆ ಆಗ ಇವರಿಬ್ಬರದು ಕಲ್ಮಶ ಇಲ್ಲದ ಪ್ರೀತಿ ಆಗಿತ್ತು. ಇವರಿಬ್ಬರ ತುಂಟಾಟ, ಸ್ನೇಹ, ಜಗಳ, ಕಾಮಿಡಿ ಎಲ್ಲವನ್ನೂ ಜನ ಸಖತ್ತಾಗಿ ಇಷ್ಟ ಪಡ್ತಿದ್ರು. ಇನ್ನೊಂದು ರೀತಿಯಲ್ಲಿ ಗೌತಮ್ ಮತ್ತು ಭೂಮಿಕಾರದ್ದು ಹೆಚ್ಚು ಮೆಚೂರ್ಡ್ ಆದ ಪ್ರೀತಿ, ಪರಸ್ಪರ ಗೌರವವೇ ಪ್ರಧಾನ ಅಲ್ಲಿ. ಜೀವ ಮತ್ತು ಮಹಿಮಾರದ್ದು ಮತ್ತೊಂದು ರೀತಿ ಕೆಮಿಸ್ಟ್ರಿ. ಆದರೆ ಇವರದ್ದು ಹೆಚ್ಚು ಸಹಜ ಕ್ರಶ್. ಚಿಕ್ಕ ವಯಸ್ಸಿನ ಪ್ರೀತಿಗೆ ಬೀಳಬೇಕಾದ ವಯಸ್ಸಿನವರ ಪ್ರೀತಿ, ಪ್ರೇಮ. ಇದರಲ್ಲಿ ಆಸೆ, ಕನಸು ಎಲ್ಲ ಜಾಸ್ತಿ. ಅದರ ಜೊತೆಗೆ ಇವರಿಬ್ಬರ ಬಾಡಿ ಲ್ಯಾಂಗ್ವೆಜ್, ಆಟಿಟ್ಯೂಟ್, ಆಕ್ಟಿಂಗ್ ಸ್ಟೈಲ್ ಎಲ್ಲವೂ ಮ್ಯಾಚ್ ಆಗ್ತಿದ್ದ ಕಾರಣ ಜನ ತುಂಬು ಮನಸ್ಸಿಂದ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ರು.
ಇವರಿಬ್ಬರ ಪ್ರೀತಿ ಹೀಗೇ ಇರಲಿ. ಈ ಕ್ಯೂಟ್ ಲವ್ ಸ್ಟೋರಿ ಹೀಗೇ ಮುಂದುವರಿಯಲಿ ಅಂತಲೇ ಫ್ಯಾನ್ಸ್ ಆಶಿಸಿದ್ರು. ಆದರೆ ಸೀರಿಯಲ್ ಕಥೆ ಶಾಕ್ ಕೊಡೋ ಕ್ರೇಜ್‌ಗೆ ಬಿದ್ದು ಜನರ ಮನಸ್ಸಲ್ಲಿ ಚೆಂದಕ್ಕೆ ಕೂತಿದ್ದ ಜೋಡಿಯೊಂದನ್ನು ಬೇರೆ ಮಾಡಿತು. ಈ ಥರ ಟರ್ನ್ ಒಂದು ಪ್ರಯೋಗವೇ. ಆದರೆ ಇದು ಸೀರಿಯಲ್‌ನ ಗ್ರೋಥ್‌ಗೆ, ಟಿಆರ್‌ಪಿ ಡಿಸ್ಟರ್ಬ್ ಮಾಡಿದ್ರೆ ಕಷ್ಟ ಅನ್ನೋದು ಕೆಲವರ ಉಪಾಯ. ಇನ್ನೊಂದು ಅಂದರೆ ಪಾಸಿಟಿವ್ ಸ್ಟೋರಿಗಿಂತಲೂ ಇಲ್ಲಿ ನೆಗೆಟಿವ್ ಸ್ಟೋರಿಸ್ ಹೆಚ್ಚು ವರ್ಕೌಟ್ ಆಗುತ್ತೆ ಅನ್ನೋ ರೀಸನ್ ಕೂಡ ಇರುತ್ತೆ.
Seetharama Serial: ಮತ್ತೆ ಮತ್ತೆ ಮೇಘಶ್ಯಾಮ, ಸೀತೆ ಮುಖಾಮುಖಿ, ಕಥೆ ಮುಂದುವರ್ಸಿ ಸರ್ ಅಂತಿದ್ದಾರೆ ಫ್ಯಾನ್ಸ್!
ಇನ್ನೊಂದು ಕಡೆ ಕೋಮಾದಿಂದ ಆನಂದ್ ಹೊರಬಂದಿದ್ದಾನೆ. ಇದಕ್ಕೂ ಮೊದಲು ಜೈದೇವಿ ಕೋಮಾದಲ್ಲಿ ಮಲಗಿದ್ದ ಆತನ ಬಳಿ ಹೋಗಿ, 'ನಿನ್ನ ಹೆಂಡತಿ ತಾಳಿ ಭಾಗ್ಯದಿಂದ ಬದುಕಿ ಉಳಿದಿರುವೆ. ನೀನು ನನ್ನ ಲೈಫ್‌ನಲ್ಲಿರುವ ದೊಡ್ಡ ತಲೆನೋವು, ಆದರೆ, ಸಾಯಲಿಲ್ಲ. ನಮ್ಮ ಮನೆಯಲ್ಲಿ ನೀನು ಸೆಟಲ್ ಆಗಿದ್ದೀಯ. ನಿನ್ನನ್ನು ಸಾಯಿಸಲು ಹೊರಟವನ ಬಳಿಯೇ ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ಬಂದಿದೆ. ನಿನ್ನನ್ನು ಸುಮ್ಮನೆ ಬಿಡ್ಲ. ಪರ್ಮನೆಂಟ್ ಆಗಿ ಮುಗಿಸಿಬಿಡ್ಲಾ' ಎಂದೆಲ್ಲ ಹೇಳುತ್ತಾನೆ. ಇನ್ನೊಂದೆಡೆ ಗೌತಮ್ ಖುಷಿಯಲ್ಲಿದ್ದಾರೆ. 'ಆನಂದ್ ರಿಯಾಕ್ಟ್ ಮಾಡುತ್ತ ಇದ್ದಾನೆ. ಆತ ಹುಷಾರಾಗುತ್ತಾನೆ' ಎಂದು ಭೂಮಿಕಾ ಬಳಿ ಹೇಳುತ್ತಾನೆ.
'ಆನಂದ್ ನನ್ನ ಜೀವನದಲ್ಲಿ ಇಲ್ಲದೆ ಇದ್ದರೆ ನಾನು ಝೀರೋ. ಗೆದ್ದಾಗ ಮೊದಲ ಚಪ್ಪಾಳೆ, ಬಿದ್ದಾಗ ಮೊದಲ ಕೈ ಬರೋದು ಇವನದ್ದೇ. ನಾನು ಜೀವನದಲ್ಲಿ ಸಂತೋಷ ನೀಡಿದ ಎರಡು ವಿಚಾರ ಆನಂದ ಮತ್ತು ಭೂಮಿಕಾ' ಎನ್ನುವ ಗೌತಮ್ ಮಾತಿನಲ್ಲಿರೋ ಪ್ರಾಮಾಣಿಕತೆಯನ್ನೂ ಜನ ಇಷ್ಟಪಟ್ಟಿದ್ದಾರೆ.
ಆದರೆ ಸದ್ಯ ಅವರಿಗೀಗ ಅಪೇಕ್ಷಾ ಮತ್ತು ಪಾರ್ಥ ರಿಲೇಶನ್‌ಶಿಪ್ ಯಾಕೋ ಇಷ್ಟ ಆಗ್ತಿಲ್ಲ. ಇದರ ನಡುವೆ ಅಪೇಕ್ಷಾ ಪಾತ್ರಧಾರಿಯ ಬಾಡಿ ಶೇಮಿಂಗ್ ಕೂಡ ಕೆಲವರು ಮಾಡ್ತಿದ್ದಾರೆ. ಇದು ಜನರ ಮೂರ್ಖ ನಡವಳಿಕೆ ಕಥೆಗೆ ಪೂರಕವಾಗಿ ನಟ ಅಥವಾ ನಟಿ ಅಭಿನಯಿಸುವಾಗ ಅವರ ಪಾತ್ರವೇ ಅವರು ಅಂದುಕೊಂಡು ಪರ್ಸನಲ್ ಅಟ್ಯಾಕ್ ಮಾಡೋದು, ಅವರ ದೇಹದ ಬಗ್ಗೆ ಕಾಮೆಂಟ್ ಮಾಡೋದು ಅವರ ಕೊಳಕುತನಕ್ಕೆ ಸಾಕ್ಷಿ. ಏನೇ ಆಗಲಿ, ಪಾಸಿಟಿವ್ ಆಗಿದ್ದ ಅಪ್ಪಿ ಪಪ್ಪಿ ಜೋಡಿ ನೆಗೆಟಿವ್ ಆಗಿ ಬದಲಾಗಿದ್ದು ಮಾತ್ರ ಜನ ಇಷ್ಟಪಡ್ತಿಲ್ಲ ಅನ್ನೋದಂತೂ ಸದ್ಯದ ಸತ್ಯ.