Seetharama Serial: ಮತ್ತೆ ಮತ್ತೆ ಮೇಘಶ್ಯಾಮ, ಸೀತೆ ಮುಖಾಮುಖಿ, ಕಥೆ ಮುಂದುವರ್ಸಿ ಸರ್ ಅಂತಿದ್ದಾರೆ ಫ್ಯಾನ್ಸ್!
ಸೀತಾರಾಮದಲ್ಲಿ ಡಾ ಮೇಘಶ್ಯಾಮ್ ಎಂಟ್ರಿ ಬಳಿಕ ಕಣ್ಣಮುಚ್ಚಾಲೆಯಾಟ ಜೋರಾಗಿದೆ. ಮತ್ತೆ ಮತ್ತೆ ಸೀತಾ ಮೇಘಶ್ಯಾಮ್ ಮುಖಾಮುಖಿ ಸೀನ್ ನೋಡಿ ಸುಸ್ತಾಗಿರೋ ವೀಕ್ಷಕರು, ಕಥೆ ಮುಂದುವರ್ಸಿ ಸರ್ ಅಂತಿದ್ದಾರೆ.
ಸೀತಾರಾಮ ಜೀ ಕನ್ನಡದ ಸಖತ್ ಪಾಪ್ಯುಲರ್ ಸೀರಿಯಲ್. ಸದ್ಯಕ್ಕಂತೂ ಇದರಲ್ಲೀಗ ಏನೇನೋ ರಹಸ್ಯ ಕಥೆ ಹರಿದಾಡ್ತಿದೆ. ಒಂದು ಕಡೆ ಸೀತಾ, ರಾಮ ಮತ್ತು ಸಿಹಿಯ ಕಥೆ ಬಂದರೆ ಇನ್ನೊಂದು ಕಡೆ ಸಿಹಿ ತಂದೆ ಯಾರು ಅನ್ನೋ ಮಿಲಿಯನ್ ಡಾಲರ್ ಕೊಶ್ಚನ್. ಇದಕ್ಕೆಲ್ಲ ಉತ್ತರ ನಾನು ಅನ್ನೋ ಹಾಗೆ ಡಾ ಮೇಘಶ್ಯಾಮ್ ಎಂಟ್ರಿಯಾಗಿದೆ. ಈ ಪಾತ್ರಕ್ಕೂ ಸೀತಾ ಪಾತ್ರಕ್ಕೂ ಸಿಹಿಗೂ ಏನೋ ಕನೆಕ್ಷನ್ ಇದೆ. ಅದೇನು ಅಂತ ಹೇಳದೆ ವಾರಗಟ್ಟಲೆಯಿಂದ ಸೀರಿಯಲ್ ಟೀಮ್ ವೀಕ್ಷಕರನ್ನು ಸತಾಯಿಸುತ್ತಿದೆ. ಒಮ್ಮೆ ಡಾ ಮೇಘಶ್ಯಾಮ್ ಪ್ರಸ್ತಾಪ ಬರೋದು, ಅದು ಸೀತಾ ಕಿವಿಗೆ ಬೀಳೋದು, ಸೀತಾ ಮೇಘಶ್ಯಾಮನ ಹೆಸರು ಕೇಳಿ ಶಾಕ್‌ಗೆ ಒಳಗಾಗೋದು. ಇದನ್ನೇ ಮತ್ತೆ ಮತ್ತೆ ಪ್ರೋಮೋಗಳಲ್ಲಿ ಜೀ ಕನ್ನಡದವ್ರು ತೋರಿಸ್ತಿದ್ದಾರೆ. ಶುರು ಶುರುವಲ್ಲಿ ಇವನೇ ಸಿಹಿಯ ತಂದೆ, ಈ ಮೇಘಶಾಮ್‌ಗೂ ಸೀತಾ ಹೆಂಡತಿ ಶಾಲಿನಿಗೂ ಕನೆಕ್ಷನ್ ಇರುತ್ತೆ. ಈ ಮಗುವನ್ನು ಸೀತಾನೇ ಸಾಕ್ಕೊಂಡಿರ್ತಾಳೆ, ಹಾಗೆ ಹೀಗೆ ಅಂತೆ ವೀಕ್ಷಕರು ಎಗ್ಸೈಟ್‌ಮೆಂಟಿಂದಲೇ ಊಹಾಪೋಹಗಳಲ್ಲಿ ತೊಡಗಿದ್ರು.
ಇದನ್ನು ನೋಡಿ ಚಾನೆಲ್‌ನವ್ರು ಮತ್ತೆ ಮತ್ತೆ ಈ ವಿಚಾರವನ್ನೇ ಶಾಕಿಂಗ್ ಅನ್ನೋ ರೀತಿಯಲ್ಲಿ ಆ ರೀತಿಯ ಸೀನ್‌ಗಳನ್ನೇ ತೋರಿಸ್ತಾ ಬಂದ್ರು. ಸದ್ಯ ಇದಿದನ್ನೇ ನೋಡಿ ವೀಕ್ಷಕರಿಗೆ ಸುಸ್ತಾಗಿದೆ. ಮಹಾನುಭಾವರೇ, ದಯಮಾಡಿ ಕಥೆ ಮುಂದುವರಿಸುವಿರಾ ಅಂತ ಅವರು ನಾಟಕೀಯವಾಗಿ ಸೀರಿಯಲ್ ಟೀಮ್‌ನವ್ರ ಹತ್ರ ರಿಕ್ವೆಸ್ಟ್ ಮಾಡ್ತಿದ್ದಾರೆ.
ಇನ್ನೊಂದು ಕಡೆ ವಿಲನ್ ಚಾಂದನಿಗೆ ಸೀತಾ ಬರೆದಿರೋ ಪತ್ರ ಸಿಕ್ಕಿದೆ. ಅದರಲ್ಲಿ ಡಾ ಅನಂತಲಕ್ಷ್ಮೀ ಹೆಸರು ನೋಡಿ ತನ್ನ ಬಾವ ಡಾ ಮೇಘಶಾಮ್ ಇನ್‌ಫ್ಲುಯೆನ್ಸ್ ಬಳಸಿ ಆಕೆ ಡಾ ಅನಂತಲಕ್ಷ್ಮೀ ಭೇಟಿಗೆ ಮುಂದಾಗಿದ್ದಾಳೆ. ಡಾ. ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿ ಸೀತಾ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾಳೆ. ಸೀತಾ ತನಗೆ ಬಹಳ ಬೇಕಾಗಿರುವಾಕೆ. ಅವಳ ಸಂಪರ್ಕವಿಲ್ಲದೇ ತನಗೆ ಕಷ್ಟವಾಗಿದ್ದು, ಅವಳು ಈಗ ಎಲ್ಲಿರಬಹುದು ಎಂಬ ಮಾಹಿತಿ ನೀಡಿ ಎಂದು ಕೇಳುತ್ತಾಳೆ. ಲೆಟರ್ ತೋರಿಸಿ ವಿಚಾರಿಸಿದಾಗ ವೈದ್ಯರು ಬೈಯುತ್ತಾರೆ. ಡಾಕ್ಟರ್ ಆಗಿ ಹಾಗೆ ನಾನು ಯಾರ ಬಗ್ಗೆಯೂ ಹೇಳುವಂತಿಲ್ಲ. ಇದೆಲ್ಲಾ ಹೇಳಲು ಆಗದ ವ್ಯಕ್ತಿಯೊಬ್ಬರ ವಯುಕ್ತಿಕ ವಿಚಾರ ಎಂದು ಬೈದು ಚಾಂದಿನಿಯನ್ನು ಅಲ್ಲಿಂದ ಕಳಿಸುತ್ತಾಳೆ. ಸಿಹಿ ಬಗ್ಗೆ ಮಾಹಿತಿ ಸಿಗಬಹುದು ಅಂತ ಉತ್ಸಾಹದಿಂದ ಬಂದಿದ್ದ ಚಾಂದಿನಿ ಇದರಿಂದಾಗಿ ನಿರಾಸೆಯಿಂದ ಮರಳುವ ಹಾಗಾಗಿದೆ.
ಆದರೆ ಈಕೆ ಡಾ ಮೇಘಶ್ಯಾಮ್ ನಾದಿನಿ. ಸಿಹಿ ಬೋರ್ಡಿಂಗ್ ಸ್ಕೂಲಿಗೆ ಸೇರಿರೋದು ಇವಳಿಗೆ ಗೊತ್ತು. ಆ ವಿಚಾರವನ್ನು ಇವಳು ಘನಶ್ಯಾಮ ಗಮನಕ್ಕೆ ತರುತ್ತಾಳೆ. ಘನಶ್ಯಾಮ್‌ಗೆ ಸಿಹಿ ವಿಚಾರ ಹೇಳಿ ಈ ಸಿಹಿಗೆ ಈಗ ರಾಮ್ ಟೆಕ್ನಿಕಲೀ ತಂದೆ ಆಗಿದ್ದಾನೆ ಅನ್ನೋ ವಿಚಾರ ಹೇಳ್ತಾಳೆ. ಇದನ್ನು ಕೇಳಿ ಮೇಘಶ್ಯಾಮ್ ಉತ್ಸಾಹ ಹೆಚ್ಚಾಗುತ್ತೆ.
ತಾನು ಬೋರ್ಡಿಂಗ್ ಸ್ಕೂಲ್‌ನಲ್ಲಿ ಮೀಟ್ ಮಾಡುತ್ತಾ, ದಿನವೂ ಆಟವಾಡುತ್ತಾ ತನ್ನ ಖುಷಿ ಹೆಚ್ಚಿಸ್ತಾ ಇರೋ ಮಗು ಮತ್ಯಾರೂ ಅಲ್ಲ. ತನ್ನ ಸ್ನೇಹಿತನದೇ ಮಗಳು ಅನ್ನೋದು ಅವನ ಖುಷಿಯನ್ನ ಇನ್ನಷ್ಟು ಹೆಚ್ಚು ಮಾಡಿದೆ. ಆ ಖುಷಿಯಲ್ಲೇ ಆ ಮೇಘಶ್ಯಾಮ್ ರಾಮ್‌ಗೆ ಕಾಲ್ ಮಾಡ್ತಾನೆ. ಆದರೆ ಅಷ್ಟೊತ್ತಿಗೆ ಮತ್ತೆಲ್ಲೋ ಇರೋ ರಾಮ್‌ನ ಕಾಲ್ ಅನ್ನು ಸೀತಾ ರಿಸೀವ್ ಮಾಡ್ತಾಳೆ. ಈ ಕಡೆಯಿಂದ ನಾನು ಡಾ ಮೇಘಶ್ಯಾಮ್ ಮಾತಾಡ್ತಾ ಇರೋದು ಅಂದ ಕೂಡಲೇ ಸೀತಾ ಶಾಕ್ ಆಗಿದ್ದಾಳೆ.
ಮತ್ತೆ ಮತ್ತೆ ಸೀತಾ ಡಾ ಮೇಘಶಾಮ್ ಮುಖಾಮುಖಿ ಹೀಗೆ ಶಾಕ್‌ನಲ್ಲೇ ಕೊನೆಯಾಗ್ತಿರೋದು ನೋಡಿ ವೀಕ್ಷಕರಿಗೆ ತಲೆಚಿಟ್ಟು ಹಿಡ್ತಿದೆ. ಆವಾಗಿಂದ್ಲೂ ಅದನ್ನೇ ತೋರಿಸ್ತಿದ್ದೀರಲ್ಲಾ. ಕಥೆ ಮುಂದುವರಿಸಿ ಸಾರ್ ಅಂತ ಅವರು ಸೀರಿಯಲ್ ಟೀಮ್‌ಗೆ ಆವಾಜ್ ಹಾಕ್ತಿದ್ದಾರೆ. ಇದನ್ನು ಟೀಮ್ ನೋಡಿ ಕಥೆಯನ್ನು ಒಂಚೂರಾದ್ರೂ ಮುಂದೆ ತಗೊಂಡು ಹೋಗ್ತಾರ ಅಂತ ನೋಡ್ಬೇಕಿದೆ.