ಸಿಹಿ ಪುಟ್ಟಿ... ನಿನಗೆ ನಿನ್ ಫ್ರೆಂಡ್ ಸಿಗಬೇಕೆಂದ್ರೆ ಸೀತಮ್ಮಂಗೆ ಬುದ್ಧಿ ಹೇಳು., ಇಲ್ಲಾಂದ್ರೆ ಅನಾಹುತ ಆಗತ್ತೆ..
ಸೀತಾಳಿಂದಾಗಿ ಸಿಹಿಗೂ ಫ್ರೆಂಡ್ ರಾಮ್ ದೂರವಾಗುವ ಹಾಗೆ ಕಾಣಿಸುತ್ತಿದೆ. ಸೀತಾಳಿಗೆ ಬುದ್ಧಿ ಹೇಳುವಂತೆ ಫ್ಯಾನ್ಸ್ ಸಿಹಿಗೆ ಹೇಳ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಸೀತಾ ಹಾಗೂ ಸಿಹಿಯನ್ನು ಒಪ್ಪಿಕೊಂಡಿರುವ ದೇಸಾಯಿ, ಮದುವೆಯಾದ ಮೇಲೆ ತನಗೊಂದು ವಾರಸುದಾರ ಬೇಕು ಎಂದು ಹೇಳಿದ್ದನ್ನೇ ದೊಡ್ಡದು ಮಾಡಿಕೊಂಡು ಸೀತಾ ಮದುವೆಯನ್ನೇ ಒಲ್ಲೆ ಎಂದು ಬಂದಿದ್ದಾಳೆ. ಸಿಹಿಯನ್ನು ಬಿಟ್ಟು ಯಾವ ಮಗುವೂ ಬೇಡ ಎನ್ನುವುದು ಅವಳ ಮಾತು. ಇದೇ ಕಾರಣಕ್ಕೆ ಮನೆಗೆ ಬಂದು ಸಿಕ್ಕಾಪಟ್ಟೆ ಅತ್ತಿದ್ದಾಳೆ. ಆದರೆ ಪಾಪ ಸಿಹಿ, ಸೀತಮ್ಮನನ್ನು ನೋಡಿ ತನ್ನಂದಿ ಸೀತಾ ಮತ್ತು ರಾಮ್ ಮದ್ವೆಯಾಗುತ್ತಿಲ್ಲ ಎಂದು ನೊಂದುಕೊಂಡಿದ್ದಾಳೆ. ಸೀದಾ ದೇಸಾಯಿಗೆ ಕಾಲ್ ಮಾಡಿ ನನ್ನ ಸೀತಮ್ಮನಿಗೆ ಏನು ಹೇಳಿದ್ರಿ, ಅವಳು ಅಳ್ತಾ ಇದ್ದಾಳೆ ಎಂದು ಜೋರು ಮಾಡಿದ್ದಾಳೆ. ದೇಸಾಯಿ ಹಾಗೂ ರಾಮ್ ಎಷ್ಟೇ ಸಮಾಧಾನ ಮಾಡಲು ನೋಡಿದ್ರೂ ಅವಳು ಕೇಳುತ್ತಿಲ್ಲ.
ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ನೆಟ್ಟಿಗರು ಸೀತಾಳ ವಿರುದ್ಧ ಮತ್ತೆ ಕಿಡಿ ಕಾರುತ್ತಿದ್ದಾರೆ. ಸೀತಮ್ಮನಿಗೆ ನೀನೇ ಬುದ್ಧಿ ಹೇಳಬೇಕು, ಅವಳದ್ದು ಓವರ್ ಆಯ್ತು ಎಂದು ಸಿಹಿಗೆ ಹೇಳ್ತಿದ್ದಾರೆ ಅಭಿಮಾನಿಗಳು. ಇಲ್ಲದಿದ್ದರೆ ಸೀತಾ ರಾಮ ಒಂದಾಗಲ್ಲ, ನಿನಗೆ ನಿನ್ನ ಫ್ರೆಂಡ್ ರಾಮ್ ಸಿಗಲ್ಲ ಅಂತಿದ್ದಾರೆ. ಅಷ್ಟಕ್ಕೂ ಸೀತಾ- ರಾಮ ಒಂದಾಗಲಿ. ಸಿಹಿಯೂ ಅವರ ಬಾಳಲ್ಲಿ ಇರಲಿ. ಯಾವುದೇ ಕಾರಣಕ್ಕೂ ಸೀತಾ-ರಾಮ ಬೇರೆಯಾಗಬಾರದು. ಹೀಗೇನಾದ್ರೂ ಆದ್ರೆ ಸೀರಿಯಲ್ ನೋಡೋದನ್ನೇ ಬಿಟ್ಟುಬಿಡ್ತೀವಿ ಎಂದೆಲ್ಲಾ ಇಲ್ಲಿಯವರೆಗೆ ಹೇಳ್ತಿದ್ದ ಸೀತಾರಾಮ ಅಭಿಮಾನಿಗಳು ಈಗ ಉಲ್ಟಾ ಹೊಡೆದಿದ್ದಾರೆ. ಸೀತಾಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸೀತಾಳಿಗಾಗಿ ಮಿಡಿಯುತ್ತಿದ್ದ ಅಭಿಮಾನಿಗಳ ಮನಸ್ಸು ಜರ್ಜರಿತವಾಗಿ ಹೋಗಿದೆ. ಇವಳದ್ದು ಓವರ್ ಆ್ಯಕ್ಟಿಂಗ್ ಆಯ್ತು, ನೀನು ಯಾವುದೇ ಕಾರಣಕ್ಕೂ ರಾಮ್ಗೆ ತಕ್ಕವಳು ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ. ಇದೇ ವೇಳೆ ಪ್ಲೀಸ್ ರಾಮ್ ಇವಳು ನಿನಗೆ ಸರಿಯಾದ ಜೋಡಿಯಲ್ಲ, ಇವಳನ್ನು ಬಿಟ್ಟುಬಿಡು ಅನ್ನುತ್ತಿದ್ದಾರೆ!
ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ನಟಿ ಭಾವನಾ ಶಾಕಿಂಗ್ ಹೇಳಿಕೆ
ರಾಮ್ ಮತ್ತು ಸೀತಾಳ ಪ್ರೇಮವನ್ನು ದೇಸಾಯಿ ಒಪ್ಪಿಕೊಂಡಿದ್ದಾರೆ. ಸಿಹಿಯಿಂದ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿರೋದು ಸೀತಾಳ ಸಮಸ್ಯೆ. ದೇಸಾಯಿ ಅವರು ತಮ್ಮ ವಂಶವನ್ನು ಮುಂದುವರೆಸಲು ನಿನ್ನ ಮತ್ತು ರಾಮ್ನಿಂದ ಒಂದು ಮಗು ಬೇಕು ಎಂದಿದ್ದಾರೆ. ಆದರೆ ಇದು ಸೀತಾಳಿಗೆ ಇಷ್ಟವಿಲ್ಲ. ಸಿಹಿಯನ್ನು ಬಿಟ್ಟು ಬೇರೆ ಮಗು ಅವಳಿಗೆ ಬೇಡ. ಮತ್ತೊಂದು ಮಗು ಹೆರಲು ನಾನು ರೆಡಿ ಇಲ್ಲ. ಸಿಹಿ ಒಬ್ಬಳೇ ನನ್ನಮಗಳು ಎಂದಿದ್ದಾಳೆ. ಇದೇ ಮಾತನ್ನು ರಾಮ್ಗೂ ಹೇಳಿದ್ದಾಳೆ.
ಸೀತಾಳ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇವಳದ್ದು ಓವರ್ ಆಯ್ತು ಎನ್ನುತ್ತಿದ್ದಾರೆ. ಬೇರೊಂದು ಮಗುವನ್ನು ದೇಸಾಯಿ ಒಪ್ಪಿಕೊಂಡಿರುವುದು ಅವರ ದೊಡ್ಡತನ. ಹಾಗೆಂದು ಬೇರೆ ಮಗುವೇ ಬೇಡ ಎಂದು ಸೀತಾ ಪಟ್ಟುಹಿಡಿಯುವುದು ಎಷ್ಟು ಸರಿ ಎನ್ನುವುದು ನೆಟ್ಟಿಗರ ಪ್ರಶ್ನೆ. ವಂಶವನ್ನು ಮುಂದುವರೆಸುವ ಆಸೆ ದೇಸಾಯಿ ಕುಟುಂಬಕ್ಕೂ ಇರುವುದಿಲ್ಲವೆ? ತಮ್ಮದೇ ಒಂದು ಮಗು ಬೇಕು ಎಂದು ಅವರಿಗೆ ಇರುವುದಿಲ್ಲವೆ? ರಾಮ್ಗೂ ಆ ಆಸೆ ಇದ್ದೇ ಇರುತ್ತದೆ ತಾನೆ? ಇದರಲ್ಲಿ ತಪ್ಪೇನಿದೆ? ಯಾವುದೇ ಆ್ಯಂಗಲ್ನಿಂದ ನೋಡಿದರೂ ಸೀತಾ ಈ ಮಾತನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣವೇ ಇಲ್ಲ. ಇವಳದ್ದು ಅತಿಯಾಯ್ತು ಎಂದು ಹಲವಾರು ಮಂದಿ ಕಮೆಂಟ್ ಹಾಕಿದ್ದಾರೆ. ಸೀರಿಯಲ್ನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಇಂಥ ಘಟನೆ ನಡೆದರೆ ಅಂಥವಳು ಮದುವೆ, ಪ್ರೀತಿಗೆ ಅರ್ಹಳೇ ಅಲ್ಲ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು!
ಧರ್ಮೇಂದ್ರ- ಹೇಮಾ ದಾಂಪತ್ಯಕ್ಕೆ 44 ವರ್ಷ: ಮದ್ವೆಗಾಗಿ ದಿಲಾವರ್ ಖಾನ್- ಆಯೇಷಾಬೀ ಆಗಿದ್ದ ರೋಚಕ ಕಥೆ ಇಲ್ಲಿದೆ...