Asianet Suvarna News Asianet Suvarna News

ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ನಟಿ ಭಾವನಾ ಶಾಕಿಂಗ್‌ ಹೇಳಿಕೆ

ಅವ್ನ ಜೊತೆ ಮದ್ವೆಯಾಯ್ತು, ನಾಲ್ಕು ಸಲ ಗರ್ಭಪಾತವಾಗಿ ಸತ್ತೇ ಹೋಗಿದ್ದೆ... ಹೀಗೆಲ್ಲಾ ನಟಿ ಭಾವನಾ ಶಾಕಿಂಗ್‌ ಹೇಳಿದ್ಯಾಕೆ? 
 

Jockey Actress Bhavana Menon talks about shocking gossip about her in industry suc
Author
First Published May 2, 2024, 4:19 PM IST

ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.   16 ನೇ ವಯಸ್ಸಿನಲ್ಲಿ `ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದ ನಟಿ, 2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕಿಚ್ಚ ಸುದೀಪ್ ಅವರ `ವಿಷ್ಣುವರ್ಧನ', ಗಣೇಶ್ ಅವರ `ರೋಮಿಯೊ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಚಿತ್ರರಂಗದಲ್ಲಿ ದಶಕಗಳನ್ನು ಕಳೆದರೂ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. 

 ಟೀವಿನೋ ಥಾಮಸ್‌ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ನಾಳೆ (ಮೇ 3) ಆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ನಟಿ  ಕೆಲವೊಂದು ಶಾಕಿಂಗ್‌ ಹೇಳಿಕೆಗಳನ್ನು ನೀಡಿದ್ದಾರೆ. ಮಲಯಾಳಿ ನಟ ಅನೂಪ್‌ ಮೆನನ್‌ ಜತೆಗೆ  ಮದ್ವೆ ಆಯಿತು, ಮೊದಲೇ ನಾಲ್ಕು ಬಾರಿ ಗರ್ಭಪಾತವಾಯ್ತು. ಅದೊಂದು ದಿನ ಸತ್ತು ಕೂಡ ಹೋಗಿದ್ದೆ... ಎಂದಿದ್ದಾರೆ. ಅಷ್ಟಕ್ಕೂ ನಟಿ ಇವುಗಳನ್ನು ಹೇಳಿದ್ದು ಮಾರ್ಮಿಕವಾಗಿ. ನಟಿ ದಕ್ಷಿಣದ ಚಿತ್ರಗಳಲ್ಲಿ  ಬಿಜಿಯಾಗಿರುವಾಗ ಕೆಲವೊಂದು ಗಾಸಿಪ್‌ಗಳು ಹಬ್ಬಿದ್ದವು. ಆ ಸಮಯದಲ್ಲಿ  ಮಲಯಾಳಂನಲ್ಲಿ ನಟಿ ಸಾಕಷ್ಟು ಹೆಸರು ಮಾಡಿದ್ದರಿಂದ ಮಲಯಾಳಿ ನಟ ಅನೂಪ್‌ ಮೆನನ್‌ ಜತೆಗೆ ಭಾವನಾ ಮದುವೆಯೂ ಆಯಿತೆಂದು ಹೇಳಲಾಗಿತ್ತು. ಇದು ಸಾಲದು ಎನ್ನುವದಕ್ಕೆ  ನಾಲ್ಕು  ಸಲ ಗರ್ಭಪಾತವೂ ಆಗಿತ್ತು ಎಂಬ ಸುದ್ದಿಯಾಗಿತ್ತು. ಇನ್ನೂ ಮುಂದಕ್ಕೆ ಹೋಗಿ ನಟಿ ಸತ್ತು ಹೋದರು ಎಂದೂ ಭಾರಿ ಗದ್ದಲವೇ ಎದ್ದು ಬಿಟ್ಟಿತು.  

25 ವರ್ಷಗಳಿಂದ ಸಕ್ಕರೆ ದೂರ, ಮದ್ಯ-ಸಿಗರೆಟ್​ ಮುಟ್ಟೇ ಇಲ್ಲ; ಮಾಂಸಾಹಾರಕ್ಕೆ ಜಾಗವೇ ಇಲ್ಲ!

ಇವುಗಳ ಬಗ್ಗೆ ನಟಿ ಈಗ ಮಾತನಾಡಿದ್ದಾರೆ.   ಅನೂಪ್‌ ಮೆನನ್‌ ಜೊತೆಗಿನ ಗಾಸಿಪ್‌ ಬಳಿಕ  ನಾನು ಅಮೆರಿಕಕ್ಕೆ ಹೋಗಿ ಗರ್ಭಪಾತ ಮಾಡಿಸಿಕೊಂಡೆ. ಆಲುವಾದಲ್ಲಿ ಗರ್ಭಪಾತ, ಕೊಚ್ಚಿಯಲ್ಲಿ ಗರ್ಭಪಾತ, ಚೆನ್ನೈನಲ್ಲಿ ಗರ್ಭಪಾತ ಹೀಗೆ ನಾಲ್ಕೈದು ಸಲ ಗರ್ಭಪಾತವಾಯ್ತು ಎಂದೆಲ್ಲಾ ಸುದ್ದಿ ಹರಡಿತ್ತು. ಕೊನೆಗೆ ಅಬಾರ್ಷನ್‌ನಿಂದ ಸತ್ತುಹೋದೆ ಎಂದೇ ಹೇಳಲಾಯಿತು. ಇವೆಲ್ಲ ಹೇಗೆ ಗಾಳಿ ಸುದ್ದಿ ಹರಿಡಿತೋ ಗೊತ್ತಿಲ್ಲ. ಆದರೆ ಎಲ್ಲವೂ ವಿಚಿತ್ರವಾಗಿದೆ ಎಂದಿದ್ದಾರೆ. ಅಂದಹಾಗೆ, ನಟಿಯ ಸಿನಿ ಪಯಣದ ಕುರಿತು ಹೇಳುವುದಾದರೆ, 2002ರಲ್ಲಿ ಮಲಯಾಳಂನ ನಮ್ಮಲ್‌ ಸಿನಿಮಾ ಮೂಲಕ ಸಿನಿ ಪಯಣ ಶುರುವಾಗಿತ್ತು. ಇದಾದ ಬಳಿಕ  ತಮಿಳು, ಕನ್ನಡ, ತೆಲುಗಿನಲ್ಲಿ ನಟಿಸಿದರು.  

 ಕೆಲ ವರ್ಷಗಳ ಹಿಂದೆ ಥ್ರಿಸ್ಸೂರಿನಿಂದ ಕೊಚ್ಚಿ ಹೋಗುವ ರಸ್ತೆಯಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ನಟಿಯ ಕಾರನ್ನು ಅಡ್ಡಗಟ್ಟಿ ತಡೆದು ಭಾವನರನ್ನು ಕಿಡ್ನಾಪ್ ಮಾಡಿ ಎರಡೂವರೆ ಗಂಟೆ ಕಾರಿನಲ್ಲಿ ಕಿರುಕುಳ ಕೊಟ್ಟು ,ಅಸಭ್ಯವಾಗಿ ಚಿತ್ರಗಳನ್ನು ತೆಗೆದು ನಂತರ ಕಾಕಿನಾಡದ ಹತ್ತಿರ ಬಿಟ್ಟು ಓಡಿಹೋದರು. ತಕ್ಷಣ ಭಾವನಾ ಹತ್ತಿರದ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದರು. ಈ ಘಟನೆ ಮಲಯಾಳಂ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು.   ಈ ಘಟನೆಯ ಸಂಬಂದಿಸಿದಂತೆ ಮಲಯಾಳಂ ಚಿತ್ರರಂಗದ ಒಬ್ಬ ಟಾಪ್ ನಟನ ಕೈವಾಡದ ಕುರಿತಾಗಿಯೂ ಕೇಳಿ ಬಂದಿತ್ತು. ಈ ಘಟನೆಗಳಿಂದ ಚೇತರಿಸಿಕೊಂಡು ಭಾವನಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾದರು. ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಕೈಹಿಡಿದರು.

ಧರ್ಮೇಂದ್ರ- ಹೇಮಾ ದಾಂಪತ್ಯಕ್ಕೆ 44 ವರ್ಷ: ಮದ್ವೆಗಾಗಿ ದಿಲಾವರ್ ಖಾನ್- ಆಯೇಷಾಬೀ ಆಗಿದ್ದ ರೋಚಕ ಕಥೆ ಇಲ್ಲಿದೆ...
 

Latest Videos
Follow Us:
Download App:
  • android
  • ios