ಫ್ಯಾಮಿಲಿ ಮ್ಯಾನ್ 3 ಸೂಪರ್ ಹಿಟ್ ವೆಬ್‌ಸೀರಿಸ್ ಮೂಲಕ ಭಾರಿ ಜನಪ್ರಿಯವಾಗಿರುವ ನಟ ರೋಹಿತ್ ಬಸ್‌ಫೊರೆ ಶವವಾಗಿ ಪತ್ತೆಯಾಗಿದ್ದಾರೆ. ಜಲಪಾತದ ಬಳಿಕ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ.
ಗುವ್ಹಾಟಿ(ಏ.29) ಅಮೋಘ ಅಭಿನಯ, ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷರ ಮನಗೆದ್ದ ನಟ ರೋಹಿತ್ ಬಾಸ್‌ಫೋರೆ ದಾರುಣ ಅಂತ್ಯಕಂಡಿದ್ದಾರೆ. ಫ್ಯಾಮಿಲಿ ಮ್ಯಾನ್ 3 ವೆಬ್‌ಸರೀಸ್ ಮೂಲಕ ಜನರ ಪ್ರೀತಿಗೆ ಪಾತ್ರವಾಗಿರುವ ನಟ ರೋಹಿತ್ ಮೃತದೇಹ ಗುಹ್ವಾಟಿಯ ಜಲಪಾತದ ಬಳಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮತೃದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಇದು ಅಚನಕ್ಕಾಗಿ ನಡೆದ ಘಟನೆಯಲ್ಲ, ಕೊಲೆ ಅನ್ನೋ ಆರೋಪ ಕೇಳಿಬಂದಿದೆ. ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಸ್ಸಾಂ ಮೂಲದ ರೋಹಿತ್ ಫ್ಯಾಮಿಲಿ ಮ್ಯಾನ್ 3 ಸೂಪರ್ ಹಿಟ್ ವೆಬ್‌ಸೀರಿಸ್‌ನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಈ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದರು. ಈ ಫ್ಯಾಮಿಲಿ ಮ್ಯಾನ್ 3 ವೆಬ್ ಸೀರಿಸ್ ಮೂಲಕ ಹಲವು ಅವಕಾಶಗಳನ್ನು ಪಡೆದುಕೊಂಡಿದ್ದರು. ಸತತ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ರೋಹಿತ್ ಬಾಸ್‌ಫೊರೆ ಕೆಲ ದಿನಗಳ ಹಿಂದೆ ತವರಿಗೆ ಆಗಮಿಸಿದ್ದರು. ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ತವರಿಗೆ ಆಗಮಿಸಿದ್ದ ರೋಹಿತ್ ಇದೀಗ ಅಂತ್ಯಕಂಡಿದ್ದಾರೆ.
ದೇಶಿ ಸೊಗಡಿನ ನಟ ಮನೋಜ್ ಕುಮಾರ್: ದೇಶಭಕ್ತಿಯ ಪ್ರತಿರೂಪ, ಭಾರತ್ ಕುಮಾರ್ ಇನ್ನಿಲ್ಲ
ಅಸ್ಸಾಂ ಕಾಡಿನಲ್ಲಿ ಶವ ಪತ್ತೆ
ಅಸ್ಸಾಂ ಕಾಡಿನಲ್ಲಿರುವ ಘರ್ಬಂಗಾ ಜಲಪಾತದ ಬಳಿಕ ರೋಹಿತ್ ಮೃತದೇಹ ಪತ್ತೆಯಾಗಿದೆ. ಭಾನುವಾರ(ಏ.27) ಮಧ್ಯಾಹ್ನ 12.30ರ ಸುಮಾರಿಗೆ ಮನೆಯಿಂದ ಗೆಳೆಯರ ಜೊತೆ ಪ್ರವಾಸಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ರೋಹಿತ್ ಬಳಿಕ ಮನಗೆ ಬಂದಿಲ್ಲ. ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ರೋಹಿತ್ ಪೋಷಕರು ಹಾಗೂ ಕುಟುಂಬಸ್ಥರು ಅಸ್ಸಾಂ ಪೊಲೀಸರಿಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ರೋಹಿತ್ ಗೆಳೆಯನೊಬ್ಬ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ರೋಹಿತ್ ಸಂಚರಸುತ್ತಿರುವಾಗ ಅಪಘಾತವಾಗಿದೆ. ಹೀಗಾಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ರೋಹಿತ್ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ವ್ಯವಸ್ಥಿತ ಕೊಲೆ ಷಡ್ಯಂತ್ರ
ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೋಹಿತ್ ಟವರ್ ಲೊಕೇಶನ್ ಪತ್ತೆ ಹಚ್ಚಿದ ಪೊಲೀಸರು ಘರ್ಬಂಗ್ ವಾಟರ್‌ಫಾಲ್ ಬಳಿ ಮೃತದೇಹ ಪತ್ತೆ ಹಚ್ಚಿದ್ದಾರೆ. ರೋಹಿತ್ ದೇಹದಲ್ಲಿ ಹಲವು ಗಾಯದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ರೋಹಿತ್ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಕಾರಣ ಇತ್ತೀಚೆಗೆ ಪಾರ್ಕಿಂಗ್ ವಿಚಾರದಲ್ಲಿ ನಡೆದ ಜಗಳದಲ್ಲಿ ರೋಹಿತ್ ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ರೋಹಿತ್ ಪೋಷಕರು ಹೇಳಿದ್ದಾರೆ.
ಪಾರ್ಕಿಂಗ್ ವಿಚಾರದಲ್ಲಿ ರಂಜಿತ್ ಬಾಸ್‌ಫೊರೆ, ಅಶೋಕ್ ಬಾಸ್‌ಫೊರೆ, ಧರ್ಮ ಬಸ್‌ಫೊರೆ ಪಾರ್ಕಿಂಗ್ ವಿಚಾರದಲ್ಲಿರೋಹಿತ್ ಜೊತೆ ಜಗಳವಾಡಿದ್ದರು. ಈ ವೇಳೆ ಕೊಲೆ ಬೆದರಿಕೆ ಹಾಕಿದ್ದರು. ಇತ್ತ ಭಾನುವಾರ ಜಿಮ್ ಮಾಲೀಕ ಅಮರ್ದೀಪ್ ಪ್ರವಾಸಕ್ಕೆ ಹೋಗಲು ರೋಹಿತ್‌ನ ಕರೆದಿದ್ದರು. ಪೋಷಕರು ಇದೀಗ ಅಮರ್ದೀಪ್ ವಿರುದ್ಧವೂ ಕೊಲೆ ಆರೋಪ ಮಾಡಿದ್ದಾರೆ. ಇದು ವ್ಯವಸ್ಥಿತವಾಗಿ ಕರೆಸಿ ಮಾಡಿದ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ
ರೋಹಿತ್ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದಾನೆ ಅನ್ನೋ ಹೇಳಿಕೆ ಸುಳ್ಳು ಎಂದು ಪೊಲೀಸರು ಹೇಳಿದ್ದರೆ. ಕಾರಣ ಯಾವುದೇ ಅಪಘಾತವಾಗಿಲ್ಲ, ರೋಹಿತ್ ಆಸ್ಪತ್ರೆಗೆ ದಾಖಲಿಸಿದ ಯಾವುದೇ ಆಸ್ಪತ್ರೆಯಲ್ಲಿ ದಾಖಲೆ ಇಲ್ಲ. ಇನ್ನು ಅಪಘಾತದ ಗಾಯಗಳು ರೋಹಿತ್ ಮೇಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಆದರೆ ರೋಹಿತ್ ದೇಹದಲ್ಲಿ ದಾಳಿ ಮಾಡಿದ, ಹಲ್ಲೆ ಮಾಡಿದ ಗುರುತುಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಇದು ಕೊಲೆ ಅನ್ನೋ ಅನುಮಾನ ಬಲವಾಗಿದೆ.
