ಪ್ರಸಿದ್ಧ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸುಳ್ಯದಲ್ಲಿ ಯಕ್ಷಗಾನ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಬೆಳ್ತಂಗಡಿ ಬಳಿ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ (ಮಾ.31): ಪ್ರಸಿದ್ಧ ಯಕ್ಷಗಾನ ಭಾಗವತ, ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ 40 ವರ್ಷದ ಸತೀಶ್‌ ಆಚಾರ್ಯ ಬೈಕ್‌ಗಳ ನಡುವಿನ ಅಪಘಾತದಲ್ಲಿ ದಾುಣ ಸಾವು ಕಂಡಿದ್ದಾರೆ. ಯಕ್ಷಗಾನ ಭಾಗವತಿಕೆ ಮುಗಿಸಿ ಬರುತ್ತಿದ್ದ ವೇಳೆ ಬೆಳ್ತಂಗಡಿಯ ಅಡಿಂಜೆ ಬಳಿಕ ಕಿಲಾರ್‌ ಮಾರಿಕಾಂಬಾ ದೇವಸ್ಥಾನದ ತಿರುವಿನಲ್ಲಿ ನಡೆದ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಸೋಮವಾರ ಮುಂಜಾೆ ಈ ಘಟನೆ ನಡೆದಿದೆ. ಅಂಡಿಂಜೆ ಗ್ರಾಮದ ಪಿಲಿಯೂರು ಮನೆ ನಿವಾಸಿಯಾಗಿದ್ದ ಸತೀಶ್ ಆಚಾರ್ಯ ಅವರು ಭಾನುವಾರ ರಾತ್ರಿ ಸುಳ್ಯದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೊಂದು ಬೈಕ್ ಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತೀಶ್ ಆಚಾರ್ಯ ಅವರ ತಾಯಿ, ಸಹೋದರಿ ಮತ್ತು ಸಹೋದರನ್ನು ಅಗಲಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೆ ಯಕ್ಷಗಾನಕ್ಕಾಗಿ ಬಣ್ಣ ಹಚ್ಚಿದ ಭೂಮಿ ಶೆಟ್ಟಿ…ಸೀತೆ ಪಾತ್ರದಲ್ಲಿ ನಟಿಯ ಅಭಿನಯ ಹೇಗಿತ್ತು ನೋಡಿ

ಸುಳ್ಯದಲ್ಲಿ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಮುಂಜಾನೆ 4 ಗಂಟೆಯ ವೇಳೆಗೆ ಮನೆಗೆ ವಾಪಸಾಗುತ್ತಿದ್ದರು. ಇನ್ನೇನು ಮನೆಗೆ ಮುಟ್ಟಲು ಕೆಲವೇ ನಿಮಿಷದ ದೂರವಿದ್ದಾಗ, ಮನೆಯ ಸಮೀಪದ ಮಾರಿಕಾಂಬಾ ದೇವಸ್ಥಾನದ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಸತೀಶ್‌ ಅವರ ಬೈಕ್‌ ಢಿಕ್ಕಿಯಾಗಿದೆ. ರಸ್ತೆಗೆ ಬಿದ್ದ ಸತೀಶ್‌ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.

ಇಂದು ಉಮಾಶ್ರೀ, ನಾಳೆ ಸನ್ನಿ ಲಿಯೋನ್ ಸರದಿ..; ಯಕ್ಷಗಾನ ಪ್ರವೇಶಕ್ಕೆ ಹಿರಿಯ ಕಲಾವಿದರಿಂದ ಅಸಮಾಧಾನ!