ಕುಡಿಯೋದರಿಂದ ಹಿಡಿದು ಕ್ಲೀನ್ ಮಾಡುವವರೆಗೆ... ಎಲ್ಲವೂ ನಕಲಿ? ಬಿಗ್​ಬಾಸ್​ ಮನೆಯ ಅಸಲಿಯತ್ತಿನ ವಿಡಿಯೋ ವೈರಲ್​

ಬಿಗ್​ಬಾಸ್​ ಮನೆಯಲ್ಲಿ ವೀಕ್ಷಕರಿಗೆ ಕಾಣುವುದೆಲ್ಲಾ ಸತ್ಯವಲ್ಲ ಎನ್ನುವ ಆರೋಪದ ನಡುವೆಯೇ ಕೆಲವೊಂದು ಸತ್ಯವನ್ನು ತೆರೆದಿಟ್ಟಿದೆ ಈ ವಿಡಿಯೋ!
 

everything seen by the viewers in the Bigg Boss house is not true says this viral video suc

ಬಿಗ್​ಬಾಸ್​ ಇದಾಗಲೇ ಹಲವಾರು ಭಾಷೆಗಳಲ್ಲಿ ಹವಾ ಸೃಷ್ಟಿಸುತ್ತಿದೆ. ಇದಾಗಲೇ ಹಲವಾರು ಕಂತುಗಳು ಮುಗಿದಿವೆ. ಹಿಂದಿಯ ಬಿಗ್​ಬಾಸ್​ 18 ಸೀಸನ್​ಗಳನ್ನು ಮುಗಿಸಿ ಟಾಪ್​ನಲ್ಲಿದ್ದರೆ, ಇದೇ ರೀತಿ ಹಲವಾರು ಭಾಷೆಗಳಲ್ಲಿ ಬಿಗ್​ಬಾಸ್​ ಟಾಪ್​1 ಸ್ಥಾನದಲ್ಲಿಯೇ ಮುಂದುವರೆದಿದೆ. ಬಿಗ್​ಬಾಸ್​ ಬಗ್ಗೆ ಸಾಕಷ್ಟು ಆರೋಪಗಳಿದ್ದರೂ ಟಿಆರ್​ಪಿಯಲ್ಲಿ ಇದೇ ಮುಂದು. ಜನರನ್ನು ಬೈದುಕೊಳ್ಳುತ್ತಲೇ ಪ್ರತಿನಿತ್ಯ ಇದನ್ನು ನೋಡುವ ಕಾರಣ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಎಲ್ಲವೂ ಮೊದಲೇ ಹೇಳಿಕೊಟ್ಟು ಮಾಡಿಸುವುದು, ಇಲ್ಲಿರುವ ಸ್ಪರ್ಧಿಗಳು ಬಿಗ್​ಬಾಸ್​ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್​ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್​ಬಾಸ್​ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್​, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ. ಅದೇನೇ ಇದ್ದರೂ, ಈ ರಿಯಾಲಿಟಿ ಷೋ ಸಕತ್​ ಸದ್ದು ಮಾಡುತ್ತಿದೆ. 

ಇಲ್ಲಿರುವ ಸ್ಪರ್ಧಿಗಳ ಡೈಲಾಗ್​, ಕಿರುಚಾಟ, ರೊಮಾನ್ಸ್​ ಅಷ್ಟೇ ಏಕೆ... ಬಿಗ್​ಬಾಸ್​ನಲ್ಲಿ ಇವರು ಮಾಡುವ ಶುಚಿ ಕಾರ್ಯಗಳು, ಪಾತ್ರೆ ತೊಳೆಯುವುದು, ಮನೆ ಕ್ಲೀನ್​ ಮಾಡುವ ಟಾಸ್ಕ್​ ಎಲ್ಲವೂ ನಕಲಿ ಎನ್ನುವ ದೊಡ್ಡ ಆರೋಪವೂ ಇದೆ. ಹೀಗೆ ಬಿಗ್​ಬಾಸ್​ ಮನೆಯಲ್ಲಿ ನಡೆಯುವ ನಕಲಿಗಳ ಬಗ್ಗೆ ಸಿನೆ ಚಾರ್ಮ್​ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸಲಾಗಿದೆ. ನಟ ಸಲ್ಮಾನ್ ಖಾನ್​ ನಡೆಸಿಕೊಡುವ ಹಿಂದಿಯ ಬಿಗ್​ಬಾಸ್​ ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ. ಐದು ಪ್ರಮುಖ ಸುಳ್ಳುಗಳು ಅಂದರೆ ವೀಕ್ಷಕರನ್ನು ಮೋಸ ಮಾಡುವ ತಂತ್ರಗಳ ಕುರಿತು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

ಬಿಗ್​ಬಾಸ್​ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್​ ಜಗದೀಶ್​ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್​

ಈ ವಿಡಿಯೋದಲ್ಲಿ ಹೇಳಿರುವಂತೆ, ಮೊದಲನೆಯದ್ದು, ಬಿಗ್​ಬಾಸ್​ ಸ್ಪರ್ಧಿಗಳಿಗೆ ಮದ್ಯ ಸೇವನೆ ಮಾಡಬೇಕು ಎನ್ನುವ ಆಸೆ ಉಂಟಾದರೆ ಅವರಿಗೆ ನೇರವಾಗಿ ಮದ್ಯದ ಬಾಟಲಿ ನೀಡುವುದಿಲ್ಲ, ಬದಲಿಗೆ  ಕೋಲ್ಡ್​ ಡ್ರಿಂಕ್ಸ್​ ಬಾಟಲಿಯಲ್ಲಿ ಅದನ್ನು ಸೇರಿಸಿ ನೀಡುತ್ತಾರೆ. 2ನೇ ಯದ್ದು ಬಿಗ್​ಬಾಸ್​ನಲ್ಲಿ ಯಾವುದೇ ಧಾರ್ಮಿಕ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ. 3ನೇ ಯದ್ದು, ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳಿಗೆ ಹಗಲಿನಲ್ಲಿ ಮಲಗಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಸ್ಪರ್ಧಿಗಳು ಟೇಬಲ್​, ಖುರ್ಚಿ ಕೆಳಗೆ ಮಲಗಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. 

ಎಲ್ಲಕ್ಕಿಂತ ಮುಖ್ಯವಾಗಿ ಬಿಗ್​ಬಾಸ್​ನಲ್ಲಿ ಸ್ಚಚ್ಛಗೊಳಿಸುವ ಕಾರ್ಯ ಅಂದ್ರೆ ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ-ಬಟ್ಟೆ ತೊಳೆಯುವುದು ಇತ್ಯಾದಿ... ಇವೆಲ್ಲಾ ಮಾಡುವುದು ಸ್ಪರ್ಧಿಗಳಲ್ಲ, ಬದಲಿಗೆ ಕೆಲಸದವರು ಮಾಡುತ್ತಾರೆ. ಇದೇನೂ ನೇರ ಪ್ರಸಾರವಲ್ಲ, ಕೊನೆಯಲ್ಲಿ ಕೆಲಸದವರು ಮಾಡುವ ಕಾರ್ಯವನ್ನು ಎಡಿಟಿಂಗ್​ನಲ್ಲಿ ಬದಲಿಸಿ ಅದನ್ನು ಸ್ಪರ್ಧಿಗಳೇ ಮಾಡಿದಂತೆ ತೋರಿಸುತ್ತಾರೆ. ಇದು ಎಷ್ಟು ನೈಜವಾಗಿ ಇರುತ್ತದೆ ಎಂದರೆ, ಸತ್ಯ ಹೇಳಿದರೂ ಯಾವ ವೀಕ್ಷಕರೂ ನಂಬುವುದಿಲ್ಲ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನು 5ನೇಯದ್ದು ಎಂದರೆ ಈ ಷೋನಲ್ಲಿ ಷೋ ನಡೆಸಿಕೊಡುವವರ ಬಗ್ಗೆ (ಈ ವಿಡಿಯೋ ಹಿಂದಿ ಬಿಗ್​ಬಾಸ್​ದು ಆಗಿರುವ ಕಾರಣ, ಇಲ್ಲಿ ಸಲ್ಮಾನ್​ ಖಾನ್​ ಬಗ್ಗೆ ಉಲ್ಲೇಖಿಸಲಾಗಿದೆ) ಸ್ಪರ್ಧಿಗಳು ಆಡುವ ಮಾತುಗಳು ನೇರವಾಗಿ ವೀಕ್ಷಕರಿಗೆ ತೋರಿಸುವುದಿಲ್ಲ. ಬದಲಿಗೆ ಇದನ್ನು ಮೊದಲು ಷೋ ನಡೆಸುವವರಿಗೆ ತೋರಿಸಲಾಗುತ್ತದೆ. ಅವರು ಓಕೆ ಎಂದರೆ ಅದನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ, ಇಲ್ಲದೇ ಹೋದರೆ ಅದನ್ನು ಅಲ್ಲಿಯೇ ಕಟ್​ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದರ ಸತ್ಯಾಸತ್ಯತೆಯನ್ನು ಬಿಗ್​ಬಾಸ್​​ ಸ್ಪರ್ಧಿಗಳೇ ಹೇಳಬೇಕಿದೆ. 

ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!

Latest Videos
Follow Us:
Download App:
  • android
  • ios