ಬಿಗ್​ಬಾಸ್​ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್​ ಜಗದೀಶ್​ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್​

ಲಾಯರ್​ ಜಗದೀಶ್​ ಅವರನ್ನು ಬಿಗ್​ಬಾಸ್​ಗೆ ವಾಪಸ್​ ಕರೆಸಿಕೊಳ್ಳಲ್ಲ ಎಂದು ತಿಳಿದ್ಮೇಲೆ ಮನೆಯಲ್ಲಿ ಅವರ ಸ್ಥಿತಿ ಹೇಗಿದೆ? ಕಿರಿಕ್​ ಕೀರ್ತಿ ವಿಡಿಯೋದಲ್ಲಿ ನೋಡಿ...
 

state of lawyer Jagdish in house after knowing that he will not be called back to Bigg Boss video viral suc

ಈ ಸಾರಿ ಬಿಗ್ ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು   ಲಾಯರ್ ಜಗದೀಶ್. ಬಿಗ್​ಬಾಸ್​ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್​.  ಈ ಸೀಸನ್​ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್​​ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ  , ಸಾಕ್ಷಾತ್ ಬಿಗ್ ಬಾಸ್​​ಗೇನೇ ಚಾಲೆಂಜ್ ಹಾಕಿದ್ರು   ಜಗದೀಶ್. ಬೇರೆ ಸ್ಪರ್ಧಿಗಳಿಗೆ  ಮಾತ್ರ ಅಲ್ಲ ಖುದ್ದು ಬಿಗ್ ಬಾಸ್​​ಗೇನೇ ತಿರುಗೇಟು ಕೊಟ್ಟವರು. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್​ರನ್ನೇ ಹೊರಹಾಕಲಾಗಿದೆ.  ಲಾಯರ್ ಜಗದೀಶ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್​​ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ  ಲಾಯರ್ ಜಗದೀಶ್​​ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ. 

 ಇದೀಗ ಲಾಯರ್​ ಜಗದೀಶ್​ ಅವರಿಗೆ ಮನೆಯಲ್ಲಿ ಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಅಸಂಖ್ಯ ಅಭಿಮಾನಿಗಳು ಮರುಕ ಪಟ್ಟುಕೊಳ್ಳುತ್ತಿದ್ದಾರೆ. ಇವರ ಸ್ಥಿತಿಯನ್ನು ಕಿರಿಕ್​ ಕೀರ್ತಿಯವರು ತೋರಿಸಿಕೊಟ್ಟಿದ್ದಾರೆ. ಕೀರ್ತಿಯವರು ಜಗದೀಶ್​ ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಜಗದೀಶ್​ ಅವರು ಪಾತ್ರೆ ತೊಳೆಯುತ್ತಿದ್ದರು. ಬಿಗ್​ಬಾಸ್​ನಿಂದ ಬಂದ ಮೇಲೆ ಈ ಸ್ಥಿತಿ ಆಯ್ತಾ ಎಂದು ಕೇಳಿದಾಗ, ಜಗದೀಶ್​ ಪತ್ನಿ, ಹೌದು. ಬಿಗ್​ಬಾಸ್​​ನಲ್ಲಿ ಪಾತ್ರೆ ತೊಳೆಯುತ್ತಿದ್ದರಲ್ಲ, ಇನ್ನು ಇಲ್ಯಾಕೆ ತೊಳೆಯಬಾರದು ಅದಕ್ಕಾಗಿ ಪಾತ್ರ ತೊಳೆಸುತ್ತಿದ್ದೇನೆ ಎಂದರು. ಆಗ ಜಗದೀಶ್​ ಅವರು, ಮೊದ್ಲು ಕೂಡ ಪಾತ್ರೆ ತೊಳೀತಿದ್ದೆ. ಅಲ್ಲಿ ಬಿಗ್​ಬಾಸ್​​ ಆರ್ಡರ್​ ಮಾಡ್ತಿದ್ರು, ಈಗ ಇಲ್ಲಿ ಈ ಬಾಸ್​ ಆರ್ಡರ್​ ಮಾಡೋಕೆ ಶುರು ಮಾಡಿದ್ದಾರೆ ಎಂದರು. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ಜಗದೀಶ್​ ಅವರನ್ನು ಮನೆಗೆ ವಾಪಸ್​ ಕರೆಸಿಕೊಳ್ಳಿ ಎಂದು ಜನರು ದುಂಬಾಲು ಬಿದ್ದಿದ್ದಾರೆ.  

ಲಾಯರ್​ ಜಗದೀಶ್​ ಬಿಗ್​ಬಾಸ್​ಗೆ ವಾಪಸ್​ ಬರ್ತಾರಾ? ವೀಕ್ಷಕರ ಕಾಡ್ತಿರೋ ಪ್ರಶ್ನೆಗೆ ಸುದೀಪ್​ ಉತ್ರ ಕೇಳಿ

ಅಷ್ಟಕ್ಕೂ ಸುದೀಪ್​ ಅವರು ಇದಾಗಲೇ ಬಿಗ್​ಬಾಸ್​ಗೆ ತಾವು ವಾಪಸ್​ ಜಗದೀಶ್​ ಅವರನ್ನು ಕರೆಸಿಕೊಳ್ಳಲ್ಲ ಎಂದು ಹೇಳಿಯಾಗಿದೆ..  ಬಿಗ್​ಬಾಸ್​ನಿಂದ ಹೊರ ಬಂದ ಮೇಲೆ, ತಾವು ಕಿರುಚಾಡಲ್ಲ, ಪುನಃ ಕರೆಸಿಕೊಳ್ಳಿ ಎಂದು ಸುದೀಪ್​ ಅವರ ಬಳಿ ಜಗದೀಶ್​ ದುಂಬಾಲು ಬಿದ್ದಿದ್ದರು. ಬಿಗ್​ಬಾಸ್​ ಪ್ರೇಮಿಗಳ ಆಸೆಯೂ ಅದೇ ಆಗಿದೆ. ಜಗದೀಶ್​ ಇಲ್ಲದ ಬಿಗ್​ಬಾಸ್​  ನಮಗೆ ಬೇಡ ಎಂದೇ ಸೋಷಿಯಲ್​  ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಇವೆಲ್ಲಾ ಬಿಗ್​ಬಾಸ್​ ಗಿಮಿಕ್​. ಮತ್ತೆ ಜಗದೀಶ್​ ಬಂದೇ ಬರ್ತಾರೆ ಎಂದು ಬಿಗ್​ಬಾಸ್​ ಪ್ರೇಮಿಗಳು ಅಂದುಕೊಂಡಿದ್ದು ಉಂಟು. 

ಆದರೆ ಯಾವುದೇ ಕಾರಣಕ್ಕೂ ಜಗದೀಶ್​ ಅವರನ್ನು ವಾಪಸ್​ ಕರೆಸಿಕೊಳ್ಳುವುದಿಲ್ಲ ಎಂದು ಸುದೀಪ್​ ಹೇಳಿದ್ದಾರೆ.   ತಪ್ಪು ಮಾಡಿ ಮನೆಯಿಂದ ಹೊರಗೆ ಹಾಕಿಸಿಕೊಂಡವರನ್ನು ಪುನಃ ಮನೆಯ ಒಳಗೆ ಕರೆಸಿಕೊಳ್ಳಬೇಕು ಎಂಬುದಾದರೆ 3ನೇ ಸೀಸನ್​ನಲ್ಲಿ ಹಲ್ಲೆ ಮಾಡಿ ಹೊರಹಾಕಿಸಿಕೊಂಡ ಹುಚ್ಚ ವೆಂಕಟ್​ ಅವರನ್ನು ಕೂಡ ಮತ್ತೆ ಕರೆಸಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. ಅದನ್ನು ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ. ‘ಹೋಗಿರುವವರ ಬಗ್ಗೆ ಜಾಸ್ತಿ ಮಾತಾಡಲ್ಲ’ ಎಂದು ಹೇಳುವುದರೊಂದಿಗೆ  ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ ಬರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios