ಸ್ವಾಮಿ!! ದುಡ್ದಿಲ್ಲ ಅಂದ್ರೆ ಜೀವನ ನಡೆಯಲ್ಲ; ನಾನು ಶ್ರೀಮಂತನಲ್ಲ ಎಂದ 'ರಾಮಚಾರಿ' ನಾರಾಯಣಾಚಾರ್!
ಕರೆ ಮಾಡಿ ಸಹಾಯ ಹೇಳುತ್ತಿರುವ ಜನರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡ ನಟ ಶಂಕರ್ ಅಶ್ವತ್ಥ್. ನಾನು ಶ್ರೀಮಂತನಲ್ಲ ಎಂದ ನಟ....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ ಪಾತ್ರದಲ್ಲಿ ಮಿಂಚುತ್ತಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವತ್ಥ್ ಫೇಸ್‌ಬುಕ್‌ನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ಅಭಿಪ್ರಾಯ, ಜೀವನದಲ್ಲಿ ಮರೆಯಲಾಗದ ಘಟನೆಗಳು, ಚಿತ್ರೀಕರಣ ಹೀಗೆ ಸಣ್ಣ ಪುಟ್ಟ ವಿಚಾರಗಳನ್ನು ಜನರೊಟ್ಟಿಗೆ ಹಂಚಿಕೊಳ್ಳುತ್ತಾರೆ. ಹೀಗೆ ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಶಂಕರ್ ಪಡೆದ ಸಂಭಾವನೆ ಬಗ್ಗೆ ಚರ್ಚೆ ನಡೆಯಿತ್ತು ಅದನ್ನು ನಿಜ ಎಂದು ನಂಬಿ ಜನರು ಪದೇ ಪದೇ ಕರೆ ಮಾಡಿ ಸಹಾಯ ಬೇಡುತ್ತಿದ್ದಾರಂತೆ. ಹೀಗಾಗಿ ನಾನು ಮಿಡಲ್ ಕ್ಲಾಸ್ ವ್ಯಕ್ತಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
'ನನ್ನ ಜೀವನ ಹೇಗಾಗಿದೆ ಅಂದ್ರೆ ಎಲ್ಲರೂ ನನ್ನನ್ನು ದೊಡ್ಡ ಶ್ರೀಮಂತ ಅಂತ ಅದೆಷ್ಟೋ ಜನ ಅಂದುಕೊಂಡಿದ್ದಾರೆ. ನಮ್ಮ ಮನೆಯ ಪಕ್ಕ ಒಂದು ಕಾಲಿ ಸೈಟ್ ಇದೆ ದೂರದಲ್ಲಿದ್ದ ಟ್ರ್ಯಾವಲ್ ಏಜೆನ್ಸಿ ಅವರು ಸುಮಾರು 30-40 ಕಾರುಗಳನ್ನು ನಿಲ್ಲಿಸುತ್ತಿದ್ದರು. ರಸ್ತೆಯಲ್ಲಿ ಹೋಗಿ ಬರುವವರು ಅಂದುಕೊಳ್ಳುತ್ತಿದ್ದರು ಇಷ್ಟು ಕಾರುಗಳು ಅಶ್ವತ್ಥ್ ಅವರ ಮನೆಯವರದ್ದು ಟ್ರ್ಯಾವಲ್ಸ್ ಹೊಂದಿದ್ದಾರೆ ಎನ್ನುತ್ತಿದ್ದರು. ಹಾಗೆ ಟಿವಿಯಲ್ಲಿ ನನ್ನ ಪಾತ್ರಕ್ಕೆ ದುಡ್ಡು ಕೊಟ್ಟಿರುವುದು ನೋಡಿ ನಿಜಕ್ಕೂ ನನ್ನ ಬಳಿ ಅಷ್ಟೊಂದು ದುಡ್ಡಿದೆ ಎಂದು ಅನೇಕರು ನನಗೆ ಕರೆ ಮಾಡಿ ಸಹಾಯ ಮಾಡಿ ಎನ್ನುತ್ತಿದ್ದಾರೆ. ಸ್ವಾಮಿ ನಾನು ಮಿಡಲ್ ಕ್ಲಾಸ್ ವ್ಯಕ್ತಿ ಮೇಲೂ ಇಲ್ಲ ಕೆಳಕ್ಕೂ ಇಲ್ಲ ಮಧ್ಯದಲ್ಲಿ ಸಿಲುಕಿಕೊಂಡಿರುವವರು ಆದುದರಿಂದ ದಯವಿಟ್ಟು ಇಂತಹ ತಪ್ಪು ಭಾವನೆಗಳಿಗೆ ಬರಬೇಡಿ. ನಾನು ದುಡಿದು ತಿನ್ನುತ್ತಿರುವ ವ್ಯಕ್ತಿ ದುಡಿದಿಲ್ಲ ಎಂದ್ರೆ ನಮಗೆ ಏನೂ ಇಲ್ಲ ನಮಗೂ ಅಭದ್ರತೆ ಅನ್ನೋದು ಇದ್ದಿದ್ದೇ. ನಾನು ಶ್ರೀಮಂತ ಅಲ್ಲ ಆದರೆ ತುಂಬಾ ಸ್ವಾಭಿಮಾನದಿಂದ ಬದುಕುತ್ತಿರುವೆ ದುಡಿದು ತಿನ್ನಬೇಕು ಅನ್ನೋ ಚಲ ಇದೆ. ನಾನು ಯಾರನ್ನೂ ಬೇಡುವುದಿಲ್ಲ ಹೀಗಾಗಿ ದಯವಿಟ್ಟು ಅನ್ಯತ ಭಾವಿಸಬೇಡಿ' ಎಂದು ಶಂಕರ್ ಮಾತನಾಡಿದ್ದಾರೆ.
ಲಾಭ ಬರುತ್ತಿರುವುದಕ್ಕೆ ಟಿವಿಯಲ್ಲಿ ಸತ್ಯ ಹರಿಶ್ಚಂದ್ರ, ಶ್ರೀ ಮಂಜುನಾಥ ಸಿನಿಮಾ ಹಾಕುತ್ತಿರುವುದು: ಶಂಕರ್ ಅಶ್ವತ್ಥ್
'ಸತ್ಯ ಹೇಳಲು ಧೈರ್ಯ ಬೇಕು ಯಾವಾಗಲೂ ಹೀಗೆ ಇದ್ದುದ್ದನ್ನು ಇದ್ದ ಹಾಗೆ ಹೇಳಬೇಕು, ಸರ್ ನೀವು ಗುಣದಲ್ಲಿ ಶ್ರೀಮಂತರು, ನನ್ನ ಕಷ್ಟದಲ್ಲಿ ನಿಮ್ಮ ಶ್ರೀಮಂತಿಕೆ ನಾನು ಕಂಡಿದ್ದೇನೆ ಸರ್..ಹಂಚಿಕೊಂಡು ಬದುಕುವ ಗುಣವೇ ನಿಮ್ಮ ಆಗರ್ಭ ಶ್ರೀಮಂತಿಕೆ ಸರ್' ಎಂದು ಅಶ್ವತ್ಥ್ ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.