ಲಾಭ ಬರುತ್ತಿರುವುದಕ್ಕೆ ಟಿವಿಯಲ್ಲಿ ಸತ್ಯ ಹರಿಶ್ಚಂದ್ರ, ಶ್ರೀ ಮಂಜುನಾಥ ಸಿನಿಮಾ ಹಾಕುತ್ತಿರುವುದು: ಶಂಕರ್ ಅಶ್ವತ್ಥ್

 ಮತ್ತೆ ಸುದ್ದಿಯಲ್ಲಿದ್ದಾರೆ ನಟ ಶಂಕರ್ ಅಶ್ವತ್ಥ್‌. ಟಿವಿಯಲ್ಲಿ ದೇವರ ಸಿನಿಮಾ ಹಾಕೋದೇ ತಪ್ಪು ಎನ್ನುವ ರೀತಿ ಮಾತನಾಡಿದ ಮಾತು ಬದಲಾಯಿಸಿದ್ದಾರೆ ಎಂದು ಗರಂ ಆದ ನೆಟ್ಟಿಗರು... 

Colors Kannada Ramachari Shankar Ashwath talks about Sri Manjunatha and Sathya Harishchandra film vcs

ಕನ್ನಡ ಚಿತ್ರರಂಗದ ಮೇರು ನಟ ಶಂಕರ್ ಅಶ್ವತ್ಥ್‌ ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣ ಆಚಾರ್ ಪಾತ್ರದಲ್ಲಿ ತುಂಬಾನೇ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಟಲ್, ಪಿಜಿ ಮತ್ತು ಕೇಟರಿಂಗ್ ಜೊತೆ ಜೊತೆಯಲ್ಲಿ ನಟನೆ ಮಾಡುತ್ತಾ ಜೀವನ ನಡೆಸುತ್ತಿರುವ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡು ಚರ್ಚೆ ಮಾಡುತ್ತಾರೆ. ಬರುವ ಕಾಮೆಂಟ್‌ಗಳನ್ನು ಓದಿ ಅದಕ್ಕೊ ಉತ್ತರ ಕೊಡುತ್ತಾರೆ. 

ಸಾಮಾನ್ಯವಾಗಿ ಹಬ್ಬ ಅಥವಾ ಸ್ಪೆಷಲ್ ದಿನಗಳಲ್ಲಿ ಮಾತ್ರ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವುದು ಉಳಿದ ದಿನಗಳಲ್ಲಿ ಹಳೆ ಸಿನಿಮಾಗಳು ಬರುತ್ತದೆ. ಹಳೆ ಸಿನಿಮಾಗಳಲ್ಲಿ ಎವರ್‌ ಗ್ರೀನ್ ಅನಿಸಿಕೊಂಡಿರುವುದು ಶ್ರೀ ಮಂಜುನಾಥ ಮತ್ತು ಸತ್ಯ ಹರಿಶ್ಚಂದ್ರ ಸಿನಿಮಾ. ಜನರು ಯಾವಾಗ ಟಿವಿ ಹಾಕಿದರೂ ಈ ಸಿನಿಮಾಗಳನ್ನು ನೋಡಬಹುದು ಒಂದು ಒಳ್ಳೆ ಕಥೆ ಇದೆ ಮತ್ತೊಂದು ಜನರಿಗೆ ಸಂಸ್ಕಾರದ ಬಗ್ಗೆ ತಿಳಿಸುತ್ತದೆ. ಇದನ್ನು ವಿಚಾರವಾಗಿಟ್ಟುಕೊಂಡು ಅಶ್ವತ್ಥ್ ವಿಡಿಯೋ ಮಾಡಿದ್ದಾರೆ. 

ಎರಡು ಸಲವೂ ಅಂಗಡಿಗೆ ಲಾಸ್, ಎಲ್ಲಾ ಮೋಸ ಮಾಡುವವರೇ ಸಿಗುತ್ತಿದ್ದರು: ನಟ ಶಂಕರ್ ಅಶ್ವತ್ಥ್

'ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಂಜುನಾಥ ಸಿನಿಮಾವನ್ನು ನೋಡುತ್ತಿರುವೆ. ನಾವು ಬೇಕಾದಷ್ಟು ಸಲ ಅಂದುಕೊಳ್ಳುತ್ತಿರುತ್ತೀವಿ ಅಂದಿರುತ್ತೀವಿ ಅಲ್ಲದೆ ಎಲ್ಲರಿಗೂ ಹೇಳುತ್ತೀವಿ ನಾವು ನಮ್ಮ ಸಂಸ್ಕಾರದಿಂದ  ದೂರ ಆಗುತ್ತಿದ್ದೀವಿ ನಮ್ಮ ಸಂಪ್ರದಾಯವನ್ನು ಬಿಡುತ್ತಿದ್ದೀವಿ ನಮ್ಮ ಹಳೆ ಚಿತ್ರಗಳು ಒಳ್ಳೆ ಸಂದೇಶ ಕೊಡುವ ಚಿತ್ರಗಳನ್ನು ನೋಡುತ್ತಿಲ್ಲ ಅಂತ. ಅದೆಲ್ಲಾ ಬರೀ ಸುಳ್ಳು ಅನಿಸುತ್ತದೆ ಯಾಕೆ ಅಂದ್ರೆ ಶ್ರೀ ಮಂಜುನಾಥ್ ಸಿನಿಮಾ ಟಿವಿಯಲ್ಲಿ ಅದೆಷ್ಟು ಸಲ ಬಂದಿದೆ, ಸತ್ಯ ಹರಿಶ್ಚಂದ್ರ ಟಿವಿಯಲ್ಲಿ ಅದೆಷ್ಟು ಸಲ ಬಂದಿದೆ ...ಹೀಗೆ ಹಲವಾರು ಹಳೆ ಚಿತ್ರಗಳು ಮತ್ತೆ ಮತ್ತೆ ಟಿವಿಯಲ್ಲಿ ಬರಬೇಕಂದ್ರೆ ಟಿವಿ ಅವರಿಗೆ ಬ್ಯುಸಿನೆಸ್ ಆಗುವುದರಿಂದಲೇ ಜನರು ನೋಡುತ್ತಿರುವುದಕ್ಕೆ ಈ ಚಿತ್ರಗಳನ್ನು ಹಾಕುತ್ತಿದ್ದಾರೆ. ನಮ್ಮ ಸಂಸ್ಕಾರದಿಂದ ನಾವು ದೂರ ಆಗಿಲ್ಲ ನಮ್ಮ ಸಂಪ್ರದಾಯದಿಂದ ದೂರವಾಗಿಲ್ಲ, ನಾವು ಹೇಗೇ ಹೋದರೂ ತಿರುಗಿಸಿ ನೋಡಿದಾಗ ಪ್ರಪಂಚ ಗುಂಡಗಿದೆ ಎನ್ನುತ್ತೀವಿ ಹಾಗೆ ಮತ್ತೆ ಮತ್ತೆ ಅಲ್ಲಿಗೆ ಬರುತ್ತೀವಿ. ಸನಾತನ ಧರ್ಮ ಯಾರೂ ಅಳಿಸುವುದಕ್ಕೆ ಆಗಲ್ಲ ನಾವು ಉಳಿಸುವುದು ಬಿಡುವುದು ಬೇರೆ ಪ್ರಶ್ನೆ' ಎಂದು ಶಂಕರ್ ಮಾತನಾಡಿದ್ದಾರೆ. 

ನನ್ನ ತಂದೆ ತಲೆ ಸುತ್ತಿ ಬಿದ್ದರೂ ನನ್ನ ಸಹಾಯ ಕೇಳಲಿಲ್ಲ: ನಟ ಶಂಕರ್ ಅಶ್ವತ್ಥ್

'ನಮಸ್ಕಾರ ಸಾರ್ ದಯವಿಟ್ಟು ತಪ್ಪು ತಿಳಿಯಬೇಡಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ದಕ್ಕೆ ಬರುತ್ತಿಲ್ಲ ವೇ ಅಥವಾ ಪಾಲಿಸುತ್ತಿಲ್ಲವೇ ಒಂದೇ ಒಂದು ಸಣ್ಣ ಉದಾಹರಣೆ ನಮ್ಮ ಹೆಣ್ಣು ಮಕ್ಕಳ ಹಣೆಯ ಮೇಲೆ ಕುಂಕುಮ ಕಾಣುತ್ತದೆ ಯೇ ಅಥವಾ ಇಷ್ಟ ವಿಲ್ಲವೇ ನಮ್ಮ ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಅನ್ನು ವ ಅಹಂ ದಯವಿಟ್ಟು ಕ್ಷಮೆಯಿರಲಿ' ಎಂದು ಜಗದೀಶ್ವರ್ಚಾರ್ ಜಗದೀಶ್ ಕಾಮೆಂಟ್ ಮಾಡಿದ್ದಾರೆ. 'ಭಕ್ತಿ ಪ್ರಧಾನ ಸಿನಿಮಾ ಶ್ರೀ ಮಂಜುನಾಥ್ ನನಗೆ ತುಂಬಾ ಇಷ್ಟ ವಾದ ಸಿನಿಮಾ ಸರ್, ಹೌದು ಸರ್ ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ ಮುಂದೆಯೂ ಇರುತ್ತೆ, ಸಂಸಾರ ಬಿಡಬಹುದು ಸಂಸ್ಕಾರ ಬಿಡಲಾಗದು' ಎಂದು ಮೂರ್ನಾಲ್ಕು ಮಂದಿ ಕಾಮೆಂಟ್ ಮಾಡಿದ್ದಾರೆ.  

 

Latest Videos
Follow Us:
Download App:
  • android
  • ios