Asianet Suvarna News Asianet Suvarna News

ಪ್ರತಾಪ್ ಕಂಟ್ರೋಲ್ ವಿರುದ್ಧ ತೊಡೆ ತಟ್ಟಿದ ಸ್ನೇಹಿತ್, ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಇನ್ನೆಷ್ಟು ದಿನ?

ಮೊದಲನೇ ವಾರದಲ್ಲಿ ಡಲ್ ಆಗಿದ್ದ ಡ್ರೋನ್ ಪ್ರತಾಪ್, ವಾರಗಳು ಕಳೆದಂತೆ ತಮ್ಮ ಖದರ್ ಹೆಚ್ಚಿಸಿಕೊಳ್ಳುತ್ತ ಸಾಗಿದ್ದಾರೆ ಎನ್ನಬಹುದು. ಒಂದಷ್ಟು ದಿನಗಳು ಬಿಗ್ ಬಾಸ್ ಮನೆಯಲ್ಲಿ ವಿನಯ್ ಹವಾ ಇತ್ತು. ಆದರೆ ಈಗ, ವಿನಯ್ ಹವಾ ನಡೆಯುತ್ತಿಲ್ಲ. ಈಗೇನಿದ್ದರೂ ಪ್ರತಾಪ್ ಹವಾ ಎನ್ನವವರೇ ಹೆಚ್ಚು. ಆದರೂ ಇನ್ನೆಷ್ಟು ದಿನ ಅದು ಹೀಗೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. 

Drone Prathap takes control on Contestants of Bigg Boss kannada season 10 srb
Author
First Published Nov 24, 2023, 3:19 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಪ್ರತಾಪ್ ಆಡಿದ್ದೇ ಆಟ ಎಂಬಂತಾಗಿದೆಯೇ? ಹಾಗ್ ಮಾಡ್ಬೇಡಿ ಅಣ್ಣಾ, ಹೀಗ್ ಮಾಡ್ಬೇಡಿ ಅಣ್ಣಾ, ಎನ್ನುತ್ತ ಉಳಿದ ಸ್ಪರ್ಧಿಗಳನ್ನು ಪ್ರತಾಪ್ ಸಖತ್ ಗೋಳು ಹುಯ್ದುಕೊಳ್ಳುತ್ತಿದ್ದಾರಾ? ಹೀಗೊಂದು ಸಂದೇಹ ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತಿದೆ. ಕಾರಣ, ಇತ್ತೀಚೆಗೆ, ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರತಾಪ್ ಮಾಡುತ್ತಿರುವ ರಿಸ್ಟ್ರಿಕ್ಷನ್ಸ್‌ ಉಳಿದವರಿಗೆ ಕಿಂಚಿತ್ತೂ ಕೂಡ ಹಿಡಿಸುತ್ತಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ, ಏನಾಗುತ್ತಿದೆ ಬಿಗ್ ಬಾಸ್ ಮನೆಯಲ್ಲಿ?

ಸ್ನೇಹಿತ್ ಬಾತ್‌ ರೂಮ್ ಪಕ್ಕ ನಿಂತರೆ ಕಿರಿಕ್, ಅಲ್ಲಿಂದ ಬಂದರೂ ಕಿರಿಕ್ ಮಾಡುತ್ತಿದ್ದಾರೆಯೇ ಪ್ರತಾಪ್? ಯಾಕೆ ಅವರು ಹಾಗೆ ಮಾಡುತ್ತಿದ್ದಾರೆ? ಬಿಗ್ ಬಾಸ್ ಮನೆಯಲ್ಲಿ ಬಾತ್‌ರೂಂ ಶಾರ್ಟೆಜ್ ಇದೆ. ಈ ಕಾರಣಕ್ಕೆ ಒಬ್ಬರು ತುಂಬಾ ಹೊತ್ತು ಅಲ್ಲಿ ಇದ್ದುಬಿಟ್ಟರೆ, ಉಳಿದವರಿಗೆ ಇಲ್ಲಿ ಜಾಗ ಸಿಗುವುದಿಲ್ಲ. ಹೀಗಾಗಿ ಪ್ರತಾಪ್ ಹೇಳಿದ್ದು ಸರಿ ಎನ್ನುವವರಿದ್ದಾರೆ. ಆದರೆ, ಎಲ್ಲರೂ ಒಂದೇ ಸಮನಾಗಿ ಬಾತ್‌ ರೂಂ ಉಪಯೋಗಿಸಲು ಸಾಧ್ಯವಿಲ್ಲ. ಒಬ್ಬೊಬ್ಬರದು ಒಂದೊಂದು ಕಾಲ. ಹೀಗಿರುವಾಗ ಅದಕ್ಕೂ ಕಿರಿಕ್ ಮಾಡಿಬಿಟ್ಟರೆ ಹೇಗೆ ಎಂಬ ವಾದವೂ ಹರಿದಾಡುತ್ತಿದೆ. 

ಡ್ಯಾಡೀಸ್ ಲಿಟಲ್ ಗರ್ಲ್ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಅಬ್ಬಾ ಇಂಥ ನಟಿಯೇ ಈಕೆ!

ಮೊದಲನೇ ವಾರದಲ್ಲಿ ಡಲ್ ಆಗಿದ್ದ ಡ್ರೋನ್ ಪ್ರತಾಪ್, ವಾರಗಳು ಕಳೆದಂತೆ ತಮ್ಮ ಖದರ್ ಹೆಚ್ಚಿಸಿಕೊಳ್ಳುತ್ತ ಸಾಗಿದ್ದಾರೆ ಎನ್ನಬಹುದು. ಒಂದಷ್ಟು ದಿನಗಳು ಬಿಗ್ ಬಾಸ್ ಮನೆಯಲ್ಲಿ ವಿನಯ್ ಹವಾ ಇತ್ತು. ಆದರೆ ಈಗ, ವಿನಯ್ ಹವಾ ನಡೆಯುತ್ತಿಲ್ಲ. ಈಗೇನಿದ್ದರೂ ಪ್ರತಾಪ್ ಹವಾ ಎನ್ನವವರೇ ಹೆಚ್ಚು. ಆದರೂ ಇನ್ನೆಷ್ಟು ದಿನ ಅದು ಹೀಗೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕಾರಣ, ವೀಕೆಂಡ್ ಬಂದಾಗ ಹತ್ತುಹಲವು ಬದಲಾವಣೆಗಳು ಆಗುತ್ತವೆ. ಯಾರೋ ಒಬ್ಬರು ಡಲ್‌ ಆಗಿ ಇನ್ನೊಬ್ಬರು ಶೈನ್ ಆಗಲು ತೊಡಗುತ್ತಾರೆ. ಆದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಯಾರ ಹವಾ ನಡೆಯುತ್ತಿದೆ ಎಂಬುದಷ್ಟೇ ಮ್ಯಾಟರ್.

ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್‌

ಅಂದಹಾಗೆ, ಸದ್ಯಕ್ಕೆ ಪ್ರತಾಪ್ ಮನೆಯವರನ್ನೆಲ್ಲ ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಬಹುದು. ಮುಂದಿನ ವಾರದ ಕಥೆ ಏನು ಎಂಬುದನ್ನು ಕಾದು ನೋಡಬೇಕಿದೆ. ಯಾರು ಗೆಲ್ಲಲಿದ್ದಾರೆ ಎಂಬುದು ಎಲ್ಲರಿಗೂ ಮುಖ್ಯವಾದ ಸಂಗತಿ. ಗೆಲ್ಲುವವರೆಗೆ ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುತ್ತಲೇ ಇರುತ್ತಾರೆ. ಗೆಲುವು ಯಾರಿಗೆ ಎಂಬುದನ್ನು ತಿಳಿಯಲು ಬಿಗ್ ಬಾಸ್ ಮುಗಿಯುವವರೆಗೆ ಕಾಯಲೇಬೇಕು. ಒಟ್ಟಿನಲ್ಲಿ, ಹೊಸ ಹೊಸ ಕತೆಗಳು ದೊಡ್ಮನೆಯಲ್ಲಿ ತೆರೆದುಕೊಳ್ಳುತ್ತಲೇ ಇರುತ್ತವೆ.

Follow Us:
Download App:
  • android
  • ios