ಬಿಗ್ಬಾಸ್ ಅಂದ್ರೆ ಪ್ರತಾಪ್ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್ ಹೇಳಿದ್ದೇನು?
ಬಿಗ್ಬಾಸ್ ಬಗ್ಗೆ ಡ್ರೋನ್ ಪ್ರತಾಪ್ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಹೇಳಿದ್ದೇನು? ಬಿಗ್ಬಾಸ್ ಅಂದ್ರೆ ಅವ್ರಿಗೆ ಹೀಗಂತೆ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರೋ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಮುಗಿಸಿದ್ದು ಮೂರನೆಯ ಸೀಸನ್ ಶುರುವಾಗಿದೆ. ಇದಾಗಲೇ ಹಲವಾರು ಕಾಮಿಡಿ ಸ್ಟಾರ್‌ಗಳನ್ನು ಚಲನಚಿತ್ರ ರಂಗಕ್ಕೆ ಈ ಷೋ ನೀಡಿದೆ. ಸಾಮಾನ್ಯವಾಗಿ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶವೇ ಸಿಗುತ್ತದೆ. ಅದೇ ರೀತಿಯ ಕಾರ್ಯಕ್ರಮದಲ್ಲಿ ಒಂದು ಗಿಚ್ಚಿ ಗಿಲಿಗಿಲಿ. ಈ ರಿಯಾಲಿಟಿ ಷೋನ ಸೀಸನ್ ಒಂದರಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ವಿಜೇತರಾಗಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ರನ್ನರ್ ಆಪ್ ಆಗಿದ್ದರು. ಸೀಸನ್-2ರ ವಿಜೇತರಾಗಿ ಚಂದ್ರಪ್ರಭಾ ಗೆದ್ದಿದ್ದರು. ಇದೀಗ ಗಿಚ್ಚಿ ಗಿಲಿ ಗಿಲಿ ಸೀಸನ್-3 ಶುರುವಿಗೆ ಕ್ಷಣ ಗಣನೆ ಆರಂಭವಾಗಿದೆ. ನಿನ್ನೆಯಿಂದ ಈ ಷೋ ಆರಂಭವಾಗಿದೆ.
ಈ ಸೀಸನ್ ವಿಶೇಷ ಏನೆಂದ್ರೆ ಈ ಬಾರಿಯ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಭಾಗವಹಿಸಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಬಗ್ಗೆ ಮಾತನಾಡಿದ ಡ್ರೋನ್, ಅಪ್ಪ-ಅಮ್ಮ ಬಿಟ್ಟರೆ ನನಗೆ ಬಿಗ್ಬಾಸೇ ಎಲ್ಲ ಎಂದಿದ್ದಾರೆ. ಬಿಗ್ಬಾಸ್ಗೆ ಹೋಗುವ ಮುಂಚೆ ಏನೇ ಟೀಕೆ-ಟಿಪ್ಪಣೆ ಮಾಡಿದರೂ ಉತ್ತರ ಕೊಡುತ್ತಿಲ್ಲ. ಇದೀಗ ಷೋ ಗೆಲ್ಲುವ ಮೂಲಕ ಎಲ್ಲರಿಗೂ ಉತ್ತರ ಕೊಟ್ಟಿದ್ದೇನೆ. ನಾನು ಷೋ ಗೆಲ್ಲುವುದಕ್ಕಿಂತ ಹೆಚ್ಚಾಗಿ ನನ್ನನ್ನು ನಾನು ಗೆಲ್ಲೋಕೆ ಹೋಗಿದ್ದೆ, ಅದನ್ನು ಗೆದ್ದು ಬಂದಿದ್ದೇನೆ ಎಂದಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಜನರು ಪ್ರೀತಿಯಿಂದ ಡ್ರೋನು ಅಂತಾರೆ, ಪ್ರತಾಪು ಅಂತಾರೆ, ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫ್ಯಾನ್ಸ್ ಪೇಜ್ ನೋಡಿ ತುಂಬಾ ಖುಷಿ ಆಯ್ತು ಅಂದರು.
ನಾನು ಸತ್ತಿಲ್ಲ, ಹ್ಯಾಂಗ್ ಓವರ್ ಕುರಿತು ಅರಿವು ಮೂಡಿಸ್ತಿದ್ದೇನೆ.. ಪೂನಂಗೆ ತಿರುಗೇಟು ಕೊಟ್ಟ ಉರ್ಫಿ ಹೇಳಿದ್ದೇನು?
ಅಂದಹಾಗೆ, ಡ್ರೋನ್ ಪ್ರತಾಪ್ ಬಗ್ಗೆ ಇದಾಗಲೇ ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಡ್ರೋನ್ ನೀಡುವುದಾಗಿ ಹಲವರಿಗೆ ಮೋಸ ಮಾಡಿರುವ ಗಂಭೀರ ಆರೋಪವೂ ಇದೆ. ಇದೇ ಹಿನ್ನೆಲೆಯಲ್ಲಿ ಇವರ ವಿರುದ್ಧ ಸಾಕಷ್ಟು ಕೇಸ್ಗಳೂ ದಾಖಲಾಗಿವೆ. ಬಿಗ್ಬಾಸ್ ಮನೆಯಲ್ಲಿ ಅನುಕಂಪ ಗಿಟ್ಟಿಸುವ ಹಿನ್ನೆಲೆಯಲ್ಲಿ ಕೋವಿಡ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟಿರುವುದಾಗಿ ಹೇಳಿ ಫಜೀತಿಗೆ ಸಿಲುಕಿದ್ದಾರೆ. ಅದೇ ಇನ್ನೊಂದೆಡೆ ಫುಡ್ ಪಾಯ್ಸನ್ ಆದ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಒಂದು ಹೇಳಿಕೆ, ಹೊರಗಡೆ ಬಂದ ಮೇಲೆ ಇನ್ನೊಂದು ಹೇಳಿಕೆ ನೀಡುವ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳೂ ಇವೆ.
ಕಾಂಟ್ರವರ್ಸಿಯಿಂದಾಗಿಯೇ ಬಿಗ್ಬಾಸ್ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದ ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಬಿಗ್ಬಾಸ್ನಲ್ಲಿ ಹೊರಹೊಮ್ಮಿದ್ದಾರೆ. ಅಸಂಖ್ಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಮೇಲೆ ಯಾರು ಎಷ್ಟೇ ಆರೋಪ ಮಾಡಿದರೂ ಪ್ರತಾಪ್ ತಲೆ ಕೆಡಿಸಿಕೊಳ್ಳದೇ ತಮ್ಮ ಎಂದಿನ ಮಾತಿನ ಮೋಡಿಯಲ್ಲಿ ನಿರತರಾಗಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿಯಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಆಗಿ ಡ್ಯಾನ್ಸ್ಗೆ ಸ್ಟೆಪ್ ಹಾಕಿ ಒಳ್ಳೆಯ ನೃತ್ಯಗಾರ ಎನಿಸಿಕೊಂಡಿದ್ದಾರೆ. ಇದಾಗಲೇ ಬಿಗ್ಬಾಸ್ ಸ್ಪರ್ಧಿ ವಿನಯ್ ಕೂಡ ಡ್ರೋನ್ ಪ್ರತಾಪ್ ಒಳ್ಳೆಯ ನಟ ಎಂದು ಹೇಳಿದ್ದು, ಅದನ್ನೀಗ ಡ್ರೋನ್ ಸಾಬೀತು ಮಾಡುತ್ತಿದ್ದಾರೆ.
ಅಯ್ಯೋ ಇದು ಧಾರಾವಾಹಿ ಪಾರ್ಟ್ ಕಣಮ್ಮಾ ಎಂದ್ರೂ ಬಿಡಲಿಲ್ಲ- ನಾಯಕನ ಹಿಡಿದು ಝಾಡಿಸಿದ ಮಹಿಳೆ!