Asianet Suvarna News Asianet Suvarna News

BBK 10: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಡ್ರೋನ್​ ಪ್ರತಾಪ್! ಏನ್​ ಅದೃಷ್ಟ ಗುರೂ ಎಂದ ಫ್ಯಾನ್ಸ್​

ಬಿಗ್​ ಬಾಸ್ ಮನೆಯಲ್ಲಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ ಡ್ರೋನ್​ ಪ್ರತಾಪ್! ಸುದೀಪ್​ ಹೇಳಿದ್ದೇನು? 
 

Drone Pratap has won the applause of Kiccha in the Bigg Boss house suc
Author
First Published Nov 11, 2023, 5:08 PM IST

ಸದ್ಯ ಕನ್ನಡದ ಬಿಗ್​ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್​ ಇತರ ಕೆಲವು ಪ್ರಬಲ ಸ್ಪರ್ಧಿಗಳಿಗೆ ಟಫ್​ ಕಾಂಪಿಟೀಷನ್​ ಒಡ್ಡುತ್ತಿದ್ದಾರೆ.  ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟುಕೊಂಡಿದೆ. ಬಿಗ್​ ಬಾಸ್​ ಮನೆಯಲ್ಲಿಯೂ ಒಳ್ಳೆಯ ಹೆಸರು ಗಳಿಸುತ್ತಿದ್ದಾರೆ. ಇದೇ ಡ್ರೋನ್​ ಪ್ರತಾಪ್​ ಕಳೆದ ವರ್ಷ ಹಂಗಾಮಾನೇ ಸೃಷ್ಟಿಸಿದ್ದರು.  ಕೆಲ ವರ್ಷಗಳ ಹಿಂದೆ ಡ್ರೋನ್​ ಪ್ರತಾಪ್​ ಎನ್ನುವ ಯುವಕ ಎಲ್ಲರಿಗೂ ಮಾದರಿಯಾಗಿದ್ದರು. ಇವರ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋನ್​​. ಇವರ ಈ ಪ್ರತಿಭೆಗೆ ಮೆಚ್ಚಿ ಧನಸಹಾಯ ಮಾಡಿದವರೂ ಇದ್ದಾರೆ. 

ಡ್ರೋನ್​ ​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಇದಾದ ಬಳಿಕ ಕಥೆ ಕಟ್ಟಿ ತಮ್ಮಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿ ಹಲವರು ಆರೋಪ ಮಾಡಿದ್ದೂ ಇದೆ. ನಟ ಜಗ್ಗೇಶ್​ ಕೂಡ ಡ್ರೋನ್​ ಪ್ರತಾಪ್​ ತಮಗೆ ಹೇಗೆ ಮೋಸ ಮಾಡಿದ್ದ ಎನ್ನುವುದನ್ನು ಹೇಳಿಕೊಂಡಿದ್ದರು. ಈತನ ಮಾತನ್ನು ನಂಬಿ ಕೆಟ್ಟೆ, ನನ್ನ ಬುದ್ಧಿಗೆ ಏನೆನ್ನಬೇಕು ಎಂದೂ ಬೇಸರ ವ್ಯಕ್ತಪಡಿಸಿದ್ದರು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್​ಬಾಸ್​ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಪ್ರತಾಪ್​. 

ಡ್ರೋನ್​ ಪ್ರತಾಪ್​ ಕುರಿತು ನಟ ಜಗ್ಗೇಶ್​ ಹೊಸ ಪೋಸ್ಟ್​: ಅಭಿಮಾನಿಗಳು ಏನೆಂದ್ರು?

ಈಗಲೂ ತಮ್ಮದೇನು ತಪ್ಪು ಇಲ್ಲ ಎನ್ನುತ್ತಲೇ ಡ್ರೋನ್​ ತಯಾರಿಸುತ್ತೇನೆ ಎನ್ನುತ್ತಲೇ ಇರುವ ಪ್ರತಾಪ್​ ಮಾತ್ರ ಬಿಗ್​ಬಾಸ್​ನಿಂದ ಮನೆ ಮನೆ ಮಾತಾಗಿದ್ದಾರೆ. ಯಾರೂ ಮಾಡದ ತಪ್ಪೇನೂ ಪ್ರತಾಪ್​ ಮಾಡಿಲ್ಲ ಎಂದು ಅವರ ಬೆನ್ನಿಗೆ ಹಲವರು ನಿಂತಿದ್ದಾರೆ. ಕೋಟಿ ಕೋಟಿ ಲೂಟಿ ಮಾಡುವ ರಾಜಕಾರಣಿಗಳು ಇರುವಾಗ ಪ್ರತಾಪ್​ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ದೇಶದ್ರೋಹದ ಕೆಲಸವೇನೂ ಮಾಡಿಲ್ಲವಲ್ಲ ಎನ್ನುತ್ತಿದ್ದಾರೆ. ಅದೇನೇ ಇರಲಿ. ಸದ್ಯ ಡ್ರೋನ್​ ಪ್ರತಾಪ್​ ಬಿಗ್​ಬಾಸ್​ ಮನೆಯಿಂದ ಒಳ್ಳೆಯ ಹೆಸರು ಮಾಡುತ್ತಿದ್ದಾರೆ.

ಇದೀಗ ಅವರ ಕಿಚ್ಚ ಸುದೀಪ್​ ಅವರ ಪ್ರಶಂಸೆಯನ್ನೂ ಗಳಿಸಿದ್ದಾರೆ. ನಿಮ್ಮ ಈ ವಾರದ ಪರ್ಫಾಮೆನ್ಸ್​ ನೋಡಿ ಕಿಚ್ಚನ ಚಪ್ಪಾಳೆ ನಿಮಗೆ ಸಿಗುತ್ತಿದೆ ಎಂದಾಗ ಡ್ರೋನ್​ ಪ್ರತಾಪ್​ ಖುಷಿಯಿಂದ ಕುಣಿದಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಾಪ್​, ಹೊರಗಡೆಯಾದ್ರೆ ಎರಡೂ ಕಡೆ ಏನು ತಪ್ಪು ಆಗಿದೆ ಅಂತ ಕಾಣಿಸುವುದಿಲ್ಲ ಸರ್​. ಕೆಲವೊಂದು ತಪ್ಪು ಮಾಡಿದ್ದೇನೆ, ಅದನ್ನು ಹೇಳುವುದಕ್ಕೆ ಮುಜುಗರ ಇಲ್ಲ ಸರ್​. ಕಳ್ಳ-ಸುಳ್ಳ ಎಂದೋರನ್ನು ಈಗ ನೆನಪಿಸಿಕೊಂಡರೆ ಮನಸ್ಸು ಹಗುರ ಆಗ್ತಿದೆ ಸರ್​ ಎಂದಿದ್ದಾರೆ. ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿರುವ ಕಾರಣ, ಡ್ರೋನ್​ ಪ್ರತಾಪ್​ ಫ್ಯಾನ್ಸ್ ಸಕತ್​ ಖುಷಿಯಿಂದ ಇದ್ದು, ಏನ್​ ಗುರೂ ನಿನ್​ ಅದೃಷ್ಟ ಅನ್ನುತ್ತಿದ್ದಾರೆ. 

ನಟಿ ಎಂದ್ಮೇಲೆ ಎಲ್ಲದ್ದಕ್ಕೂ ಸಿದ್ಧವಿರ್ಬೇಕು ಎಂದ ಬಿಗ್​ಬಾಸ್​ ತನಿಷಾ, ಪೂಜಾ ಗಾಂಧಿಗೂ ಲಿಪ್​ಲಾಕ್​ ಮಾಡಿದ್ರಂತೆ!

Follow Us:
Download App:
  • android
  • ios