Asianet Suvarna News Asianet Suvarna News

ಆಸ್ಪತ್ರೆಯಿಂದ ವಾಪಸಾದ ಸಂಗೀತಾ, ಡ್ರೋನ್​ ಪ್ರತಾಪ್ ಕಣ್ಣಿಗೆ ಡ್ಯಾಮೇಜ್​? ವಿಡಿಯೋ ನೋಡಿ ಫ್ಯಾನ್ಸ್​ ಕಣ್ಣೀರು

ಟಾಸ್ಕ್​ ವೇಳೆ ಕಣ್ಣಿಗೆ ಡ್ಯಾಮೇಜ್​ ಆಗಿದ್ದರಿಂದ ಡ್ರೋನ್ ಪ್ರತಾಪ್​  ಮತ್ತು ಸಂಗೀತಾ ಚಿಕಿತ್ಸೆ ಪಡೆದುಕೊಂಡಿದ್ದು, ಬಿಗ್​ಬಾಸ್​ಗೆ ವಾಪಸ್​ ಆಗಿದ್ದಾರೆ. 
 

Drone Pratap and Sangeeta returned to Bigg Boss after eye treatment suc
Author
First Published Dec 9, 2023, 3:57 PM IST

 ಬಿಗ್​ಬಾಸ್ ಎರಡನೆಯ ತಿಂಗಳಿಗೆ ಕಾಲಿಟ್ಟಿದ್ದು,  ಹುಚ್ಚಾಟ ದಿನೇ ದಿನೇ ಹೆಚ್ಚಾಗುತ್ತಿದೆ.  ಇದೀಗ ಟಾಸ್ಕ್​ ಹೆಸರಿನಲ್ಲಿ ಸ್ಪರ್ಧಿಗಳಾದ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಅವರ ಕಣ್ಣಿಗೆ ಏಟು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರಿಗೂ ಚಿಕಿತ್ಸೆ ಕೊಡಿಸಿ ವಾಪಸ್​ ಕರೆತರಲಾಗಿದೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆಯ ಬಳಿಕ ಜನರು ಬಿಗ್​ಬಾಸ್​ ಷೋ ವಿರುದ್ಧ ಇನ್ನಷ್ಟು ಕಿಡಿ ಕಾರುತ್ತಿದ್ದಾರೆ.  ಕಳೆದ ಗುರುವಾರ ರಾತ್ರಿ ಏಕಾಏಕಿ ಭಾರಿ ಬೆಳವಣಿಗೆ ಬಿಗ್​ಬಾಸ್ ಮನೆಯಲ್ಲಿ ನಡೆದಿದೆ. ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ ಅವರ ಕಣ್ಣಿಗೆ ಏಟು ಬಿದ್ದಿತ್ತು ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಆದರೆ ಇದೀಗ ಡ್ರೋನ್​ ಪ್ರತಾಪ್​  ಮತ್ತು ಸಂಗೀತಾ ಚಿಕಿತ್ಸೆ ಪಡೆದು ಬಿಗ್​ಬಾಸ್​ ಮನೆಗೆ ವಾಪಸಾಗಿರುವ ಪ್ರೊಮೋ ರಿಲೀಸ್​ ಮಾಡಲಾಗಿದೆ.  

ಕಳೆದ ಕೆಲವು ದಿನಗಳಿಂದ ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕಿತ್ತಾಟ, ಮಾರಾಮಾರಿಗಳು ನಡೆದಿವೆ. ಈ ಮೂಲಕವೇ ಬಿಗ್​ಬಾಸ್​ನ ಟಿಆರ್​ಪಿ ರೇಟೂ ಹೆಚ್ಚಾಗುತ್ತಿವೆ. ಇದೀಗ ಇದೇ ಟಾಸ್ಕ್​ ಸಮಯದಲ್ಲಿ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ (Sangeetha Sringeri) ಅವರಿಗೆ ಹಾನಿ ಆಗಿದೆ ಎನ್ನಲಾಗುತ್ತಿದೆ. ಸೋಪ್​ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್​ನಲ್ಲಿ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ  ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಇದೀಗ ಇಬ್ಬರೂ ವಾಪಸಾಗಿದ್ದಾರೆ. 

ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?

ಇಬ್ಬರ ಕಣ್ಣಿಗೂ ಕಪ್ಪನೇ ದಪ್ಪ ಗ್ಲಾಸ್​ ಹಾಕಲಾಗಿದೆ. ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಇವರ ಈ ಅವಸ್ಥೆ ಕಂಡು ಬಿಗ್​ಬಾಸ್​ನ ಇತರ ಸ್ಪರ್ಧಿಗಳು ಕಣ್ಣೀರು ಹಾಕುವುದನ್ನು ಪ್ರೊಮೋದಲ್ಲಿ ನೋಡಬಹುದು. ಇದರ ಬಗ್ಗೆ ಒಂದಷ್ಟು ಜನ ಸಿಕ್ಕಾಪಟ್ಟೆ ಕಿಡಿ ಕಾರುತ್ತಿದ್ದಾರೆ. ಈ ಪ್ರೊಮೋ ನೋಡಿದ ವೀಕ್ಷಕರು ಸಂಗೀತಾ ಮತ್ತು ಡ್ರೋನ್​ ಪ್ರತಾಪ್​ಗೆ ಅನುಕಂಪದ ಅಲೆ ಹರಿದುಬರುತ್ತಿದೆ. ನಿನ್ನ ಸಂಗೀತಾಗೆ  ಪಾಪಿಗಳು ಹಿಂಸೆ ಕೊಡೋದನ್ನ ನೋಡಿ ನನ್ನ ತಾಯಿ ಟಿವಿ ನೋಡುತ್ತಾ ಕಣ್ಣೀರು ಹಾಕಿದಳು, ಹೆತ್ತ ತಾಯಿ ಇನ್ನೆಷ್ಟು ಕಣ್ಣೀರು ಹಾಕಿರಬೇಡಾ ಎಂದು ಕೆಲವು ನೆಟ್ಟಿಗರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ, ಇನ್ನಷ್ಟು ಮಂದಿ ಇವೆಲ್ಲವೂ ಸ್ಕ್ರಿಪ್ಟೆಡ್​, ಎಲ್ಲವೂ ನಾಟಕ. ಟಿಆರ್​ಪಿ ರೇಟ್​ ಹೆಚ್ಚು ಮಾಡಿಸಿಕೊಳ್ಳುವ ತಂತ್ರವಿದು. ಇದಕ್ಕೂ, ಧಾರಾವಾಹಿಯಲ್ಲಿ ನಡೆಯುವ ಕಥೆಗೂ ಏನೂ ವ್ಯತ್ಯಾಸವಿಲ್ಲ. ಸ್ಪರ್ಧಿಗಳೆಲ್ಲಾ ಅದೆಷ್ಟು ಚೆನ್ನಾಗಿ ಡ್ರಾಮಾ ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ. ಬಿಗ್​ಬಾಸ್ ಬದ್ಲು ಡ್ರಾಮಾ ಸೀನಿಯರ್ಸ್​ ಎಂದು ಹೆಸರಿಡ್ಬೋದು. ಆ ಕಣ್ಣೀರೆಲ್ಲಾ ಎಷ್ಟು ನಾಟಕೀಯ ಎಂದಿದ್ದಾರೆ. ಹೀಗೆ ಹೇಳುತ್ತಿರುವವರ ವಿರುದ್ಧ ಬಿಗ್​ಬಾಸ್​ ಪ್ರೇಮಿಗಳು ಕಿಡಿ ಕಾರುತ್ತಿದ್ದು, ಇವೆಲ್ಲವೂ ನಿಜ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಪ್ರತಾಪ್​ ಮತ್ತು ಸಂಗೀತಾ ಮೇಲೆ ಅನುಕಂಪದ ಅಲೆ ಹೆಚ್ಚಾಗುತ್ತಿದ್ದು, ಟಾಸ್ಕ್ ಹೆಸರಿನಲ್ಲಿ ಹೀಗೆ ದೌರ್ಜನ್ಯ ನಡೆಯುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. 

ಹೇಗಿದ್ದೋರು ಹೇಗಾಗೋದ್ರು! ದೇವ್ರೆ ಕರುಣೆ ಇಲ್ವಾ, ಯಾರ್​ ಕಣ್ಣು ಬಿತ್ತಪ್ಪಾ ಅಂತಿದ್ದಾರೆ ಬಿಗ್​ಬಾಸ್​ ಫ್ಯಾನ್ಸ್​!

Follow Us:
Download App:
  • android
  • ios