ಬಿಗ್​ಬಾಸ್​ ಮನೆಯಿಂದ ಸಂಗೀತಾ- ಡ್ರೋನ್​ ಪ್ರತಾಪ್​ ಹೊರಕ್ಕೆ, ಆಸ್ಪತ್ರೆಗೆ ದಾಖಲು? ಏನಿದು ಸುದ್ದಿ?

ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಅವರ ಮುಖಕ್ಕೆ ಹಾನಿಯಾಗಿದೆ ಎನ್ನಲಾಗುತ್ತಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವ ಸುದ್ದಿ ಹರಡಿದೆ. ಏನಿದು ವಿಷಯ? 
 

Drone Pratap and  Sangeeta have been admitted to the hospital from BiggBoss suc

ಬಿಗ್​ಬಾಸ್​ನಲ್ಲಿ ನಿನ್ನೆ ರಾತ್ರಿ ಏಕಾಏಕಿ ಭಾರಿ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದ್ದು, ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ ಹೊರಹೋಗಿದ್ದಾರೆ ಎನ್ನಲಾಗಿದೆ.  ಕಳೆದ ಕೆಲವು ದಿನಗಳಿಂದ ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕಿತ್ತಾಟ, ಮಾರಾಮಾರಿಗಳು ನಡೆದಿವೆ. ಈ ಮೂಲಕವೇ ಬಿಗ್​ಬಾಸ್​ನ ಟಿಆರ್​ಪಿ ರೇಟೂ ಹೆಚ್ಚಾಗುತ್ತಿವೆ. ಇದೀಗ ಇದೇ ಟಾಸ್ಕ್​ ಸಮಯದಲ್ಲಿ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ (Sangeetha Sringeri) ಅವರಿಗೆ ಹಾನಿ ಆಗಿದೆ ಎನ್ನಲಾಗುತ್ತಿದೆ. ಸೋಪ್​ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್​ನಲ್ಲಿ ಇವರಿಬ್ಬರ ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಸುದ್ದಿ ಇದೆ. ನಿನ್ನೆ ರಾತ್ರಿಯೇ ಈ ಘಟನೆ ನಡೆದಿದೆ ಎನ್ನುವ ಸುದ್ದಿಯಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸದ್ಯ ಈ ಗಾಳಿಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಡ್ರೋನ್ ಪ್ರತಾಪ್​ ಮತ್ತು ಸಂಗೀತಾ ಅವರ​ ಕಣ್ಣು, ಮೂಗು, ಬಾಯಿಗೆ ನೀರು ಬಿದ್ದಿದ್ದರಿಂದ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಬಿಗ್​ಬಾಸ್​ ಮನೆಯಿಂದ ಅವರನ್ನು ಹೊರಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎನ್ನುವ ಸುದ್ದಿ ಹರಡುತ್ತಿದೆ.

ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?
 
ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್ ಬಾಸ್‌ ಮನೆಯಲ್ಲಿ  ದಿನೇ ದಿನೇ ಸ್ಪರ್ಧೆ ಟಫ್​ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್​ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್​, ತನಿಷಾ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್, ಕಾರ್ತಿಕ್​ ಸೇರಿದಂತೆ ಇತರ ಸ್ಪರ್ಧಿಗಳ​ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್​ಬಾಸ್​ ಮನೆಯ ಹೊರಗೂ ಇವರ ಫ್ಯಾನ್ಸ್​ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್​  ಮಾಡುತ್ತಿದ್ದಾರೆ.  ಇದರ ಜೊತೆಗೆ ಸ್ಪರ್ಧಿಗಳಲ್ಲಿ ಕಿತ್ತಾಟವೂ ಹೆಚ್ಚಾಗುತ್ತಿದೆ. 


ಇದರ ನಡುವೆಗೆ 2-3 ದಿನಗಳಿಂದ ಬಿಗ್​ಬಾಸ್​ ಮನೆ  ಬಿಗ್​ಬಾಸ್​ ಲೋಕ ಆಗಿ ಪರಿವರ್ತನೆ ಆಗಿದೆ.  ಇಲ್ಲಿ ಒಂದಿಷ್ಟು ಸ್ಪರ್ಧಿಗಳು ಗಂಧರ್ವರಾಗಿಯೂ, ಇನ್ನೊಂದಿಷ್ಟು ಮಂದಿ ರಾಕ್ಷಸರಾಗಿಯೂ ಪರಿವರ್ತನೆಯಾಗಿದ್ದಾರೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್​, ಡ್ರೋನ್ ಪ್ರತಾಪ್​, ತನಿಷಾ ರಾಕ್ಷಸ ಗಣದ ಟೀಮ್ ಹಾಗೂ ವಿನಯ್, ನಮ್ರತಾ, ವರ್ತೂರು ಸಂತೋಷ್​, ಮೈಕಲ್​, ಪವಿ ಗಂಧರ್ವರ ಟೀಮ್​ನಲ್ಲಿದ್ದರು. ಇಬ್ಬರ ನಡುವೆ ಭಾರಿ ಪೈಪೋಟಿ ನಡೆದಿತ್ತು. ಇದಾದ ಬಳಿಕ ಒಂದು ಹಂತದಲ್ಲಿ ಸೇಡಿಗೂ ಕಾರಣವಾಗಿತ್ತು. ಈ ಟಾಸ್ಕ್​ ಬಳಿಕ ಗಂಧರ್ವರು ರಾಕ್ಷಸರಾಗಿ, ರಾಕ್ಷಸರು ಗಂಧರ್ವರಾಗಿದ್ದರು. ಹಿಂದಿನ ಸೇಡು ತೀರಿಸಿಕೊಳ್ಳಲು ಕಾತರರಾಗಿದ್ದ ಸ್ಪರ್ಧಿಗಳು, ಟಾಸ್ಕ್​ ಹೆಸರಲ್ಲಿ ಸೇಡು ತೀರಿಸಿಕೊಳ್ಳಲು ಶುರುವಿಟ್ಟುಕೊಂಡಿದ್ದರು. ಇದೇ ಕಾರಣಕ್ಕೆ, ಸೋಪಿನ ನೀರಿನ ಎರೆಚಾಟದ ಟಾಸ್ಕ್​ನಲ್ಲಿ ಪ್ರತಾಪ್​ ಮತ್ತು ಸಂಗೀತಾ ಅವರಿಗೆ ಹಾನಿಯಾಗಿದೆ ಎನ್ನಲಾಗುತ್ತಿದ್ದು, ಇದರ ಅಧಿಕೃತ ಮಾಹಿತಿ ಹೊರಬರಬೇಕಷ್ಟೇ. 

ಅನುಕಂಪ ಗಿಟ್ಟಿಸಿಕೊಳ್ಳಲು ಸುಳ್ಳು ಹೇಳಿ ತಗ್ಲಾಕೊಂಡ್ರಾ ಪ್ರತಾಪ್​? 2 ದಿನಗಳಲ್ಲಿ ತಪ್ಪು ಒಪ್ಪಿಕೊಳ್ಳದಿದ್ರೆ ಕೇಸ್​ ದಾಖಲು!

Latest Videos
Follow Us:
Download App:
  • android
  • ios