Asianet Suvarna News Asianet Suvarna News

ಪ್ಲೀಸ್​... ಇಷ್ಟೆಲ್ಲಾ ಶಾಕ್​ ಒಂದೇ ಸಲ ಕೊಡ್ಬೇಡಮ್ಮಾ... ಹೃದಯನೇ ಕಿತ್ತು ಬರ್ತಿದೆ ಅಂತಿರೋದ್ಯಾಕೆ ಫ್ಯಾನ್ಸ್​?

ಶ್ರೀರಸ್ತು ಶುಭಮಸ್ತು ತುಳಸಿ ಒಂದರ ಮೇಲೊಂದರಂತೆ ಶಾಕ್​ ಕೊಡುತ್ತಿದ್ದಾಳೆ. ಡ್ರೈವಿಂಗ್​, ಭರತನಾಟ್ಯದ ಬಳಿಕ ಈಗ ಕೊಟ್ಟ ಇನ್ನೊಂದು ಶಾಕ್​ ಏನು?
 

driving dance and now english Shreerastu Shubhamastu Tulsi giving shock again suc
Author
First Published Jun 17, 2024, 12:11 PM IST

ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ನಾಯಕಿ ಎಂದರೆ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳು ಹಾಗೂ ಮನೆಯಲ್ಲಿರುವ ಎಲ್ಲರ ಟಾರ್ಚರ್​ಗಳನ್ನು ಸಹಿಸಿಕೊಂಡವಳು ಎಂದೇ ಬಿಂಬಿಸಲಾಗುತ್ತದೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಆಕೆ ಅಳುಮುಂಜಿಯೇ, ಏಕೆಂದರೆ ಅಷ್ಟೊಂದು ನೋವಿನ ಭಾರವನ್ನು ಹೊತ್ತು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲವಲ್ಲ! ಇದೇ ಕಾರಣಕ್ಕೆ ಸೀರಿಯಲ್​ ಪ್ರೇಮಿಗಳಿಗೆ ಅದರಲ್ಲಿಯೂ ಧಾರಾವಾಹಿಗಳನ್ನು ಹೆಚ್ಚಾಗಿ ನೋಡುವ ಮಹಿಳೆಯರಿಗೆ ಯಾಕೋ ತುಂಬಾ ಬೇಸರ. ಆದರೆ ನಾಯಕಿ ವಿಲನ್​ಗೆ ಸೆಡ್ಡು ಹೊಡೆತು ಎತ್ತರಕ್ಕೆ ಬೆಳೆದು ನಿಂತಾಗ, ಹೆಜ್ಜೆ ಹೆಜ್ಜೆಗೂ ಆಕೆಯ ಹೆಡೆಮುರಿ ಕಟ್ಟುತ್ತಲೇ ಹೋದಾಗ ಅಂಥ ಸೀರಿಯಲ್​ಗಳನ್ನು ನೋಡುವುದೇ ರೋಚಕ. 

ಜೀ ಟಿ.ವಿಯಲ್ಲಿ ಪ್ರಸಾರ  ಆಗ್ತಿರೋ ಅಮೃತಧಾರೆ ಸೀರಿಯಲ್​ ಜನರಿಗೆ ಇಷ್ಟವಾಗಲೂ ಇದೇ ಕಾರಣ. ಅದೇ ರೀತಿ ಕಲರ್ಸ್​  ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಅಳುಮುಂಜಿ ನಾಯಕಿ ಈಗ ಸಂಪಾದನೆ ಮಾಡಲು ಶುರು ಮಾಡಿದಾಗ ಕಮೆಂಟಿಗರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿರುವುದನ್ನು ನೋಡಿದರೆ ಪ್ರೇಕ್ಷಕರಿಗೆ ಯಾವ ರೀತಿಯ ನಾಯಕಿ ಬೇಕು ಎನ್ನುವುದು ಅರ್ಥವಾಗುತ್ತದೆ. ಇದೀಗ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಇದೊಂದು ರೀತಿಯಲ್ಲಿ ಭಿನ್ನ ಕಥೆ. ತುಳಸಿ ಎಂಬ ವಿಧವೆ, ಮದುವೆಯಾದ ಮಕ್ಕಳ ತಾಯಿ ಇನ್ನೊಂದು ಮದ್ವೆಯಾಗಿ ಬೇರೊಬ್ಬರ ಮನೆಗೆ ಬಂದಾಗ ಅನುಭವಿಸುವ ನೋವು. ಇದರಲ್ಲಿ ಗಂಡ ಸೇರಿದಂತೆ ಇನ್ನು ಸದಸ್ಯರು ಈಕೆಯನ್ನು ತುಂಬಾ ಇಷ್ಟಪಟ್ಟರೆ ವಿಲನ್​ಗಳ ಕೈ ಮೇಲಾಗುತ್ತಿತ್ತು. ಇದರಿಂದ ತುಳಸಿಯ ಗೋಳು ನೋಡಲು ಆಗ್ತಿಲ್ಲ ಎನ್ನುತ್ತಿದ್ದರು. ಆದರೆ ಈಗ ಸೀನೇ ಚೇಂಜ್​  ಆಗಿದೆ.

ಮಹಾನಟಿ ಫೈನಲ್​ಗೂ ಮುನ್ನವೇ ವಿನ್ನರ್​ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ...

ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಅರಿತಿರುವಂತೆ ತೋರುತ್ತಿರುವ ನಿರ್ದೇಶಕರು ಸೀರಿಯಲ್​ ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಶಾಕ್​ ನೀಡುತ್ತಿದ್ದಾರೆ. ಮಾಧವ್​ ಕಿರಿಯ ಮಗ ಅಭಿಯ ಮನಸ್ಸು ಒಲಿಸಿಕೊಳ್ಳಲು ತುಳಸಿ ಡ್ರೈವಿಂಗ್ ಕಲಿತು ಶಾಕ್​ ನೀಡಿದಳು, ನಂತರ ಕಂಪೆನಿಯ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಮಾಡಿ ಶಾಕ್​ ನೀಡಿದಳು. ಇವೆಲ್ಲವನ್ನೂ ಅಭಿಮಾನಿಗಳು ಅರಗಿಸಿಕೊಳ್ಳುವ ಮೊದಲೇ ತುಳಸಿ ಈಗ ಇಂಗ್ಲಿಷ್​ ಮಾತನಾಡಿದ್ದಾಳೆ! ಮಾಧವ್​ ಮನೆಗೆ ಬಂದಿರುವ ಇಂಗ್ಲಿಷ್​ ಮಾತನಾಡುವವನೊಬ್ಬರು ಇಂಗ್ಲಿಷ್​ನಲ್ಲಿ ಮಾತನಾಡುತ್ತಾ ತುಳಸಿಗೆ ಪ್ರಶ್ನೆ ಕೇಳುತ್ತಾರೆ. ​ ಅದಕ್ಕೆ ಶಾರ್ವರಿ ತುಳಸಿಗೆ ಎಲ್ಲಿ ಇಂಗ್ಲಿಷ್​ ಬರುತ್ತೆ ಎಂದು ಹಂಗಿಸುತ್ತಾಳೆ. ಆಗ ತುಳಸಿ ಇಂಗ್ಲಿಷ್​ನಲ್ಲಿಯೇ ಉತ್ತರ ಕೊಟ್ಟು ಎಲ್ಲರಿಗೂ ಶಾಕ್​  ಕೊಡುತ್ತಾಳೆ.

ಗೃಹಿಣಿಯೊಬ್ಬಳು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುತ್ತಲೇ ಕಮೆಂಟಿಗರು ತುಳಸಿ ಪಾತ್ರಕ್ಕೆ ಫಿದಾ ಆಗಿಬಿಟ್ಟಿದ್ದಾರೆ. ಈ ಸೀರಿಯಲ್​ನನ್ನು ನೋಡಲೇಬಾರದು ಎಂದುಕೊಂಡಿದ್ದೆ. ಈಗ ತುಳಸಿ ಪಾತ್ರಕ್ಕೆ ಬೆಲೆ ಬಂದಿದೆ. ಎಲ್ಲಾ ಗೃಹಿಣಿಯರಿಗೂ ಈಕೆ ಮಾದರಿ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ತುಳಸಿಯೇ ಸಾಕ್ಷಿ ಎಂಬಿತ್ಯಾದಿಯಾಗಿ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ಯಾವುದೇ ಕಲಿಕೆಗೆ ವಯಸ್ಸಿನ ಹಂಗಿಲ್ಲ, ಹೆಣ್ಣು ಗೃಹಿಣಿಯ ಜೊತೆಗೆ ಅವಳಿಗೆ ಅವಕಾಶ ಸಿಕ್ಕರೆ ಎಲ್ಲವನ್ನೂ ಸಾಧಿಸಿ ತೋರಿಸಿಯಾಳು ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ತುಳಸಿ ಪಾತ್ರವನ್ನು ಈಗ ಅಭಿಮಾನಿಗಳು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇಷ್ಟೆಲ್ಲಾ ಶಾಕ್​ ಒಟ್ಟಿಗೇ ಕೊಟ್ಟುಬಿಟ್ಟರೆ ಹಾರ್ಟ್​ ಒಡೆದೇ ಹೋಗುತ್ತೆ ಅನ್ನುತ್ತಿದ್ದಾರೆ. 

ಸತ್ಯ ಸೀರಿಯಲ್​ ದಿವ್ಯಾಗೆ ಹುಟ್ಟುಹಬ್ಬವಿಂದು: ಕಮೆಂಟ್ಸ್​ ನೋಡಿ ಅಳ್ತಿದ್ದ ನಟಿಯ ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...


Latest Videos
Follow Us:
Download App:
  • android
  • ios