Asianet Suvarna News Asianet Suvarna News

ದೃಷ್ಟಿಬೊಟ್ಟು: ಖಡಕ್ ಹೀರೋ ಆಗಿ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ!

ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ 'ದೃಷ್ಟಿಬೊಟ್ಟು' ಧಾರಾವಾಹಿಯ ಮೂಲಕ ಮರಳಿದ್ದಾರೆ. ಈ ಬಾರಿ ಖಡಕ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Drishti Bottu serial Actor Vijay Surya is back on colors Kannada TV serial sat
Author
First Published Aug 16, 2024, 12:42 PM IST | Last Updated Aug 16, 2024, 12:46 PM IST

ಬೆಂಗಳೂರು (ಆ.16): ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಆದರೆ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ ವಿಜಯ್ ಸೂರ್ಯ ಬೆಳ್ಳಿ ಪರದೆಗೆ ಕಾಲಿಟ್ಟು ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದರೆ, ತುಂಬಾ ದಿನಗಳು ಸೈಕಲ್ ತುಳಿದರೂ ನಿರೀಕ್ಷಿತ ಯಶಸ್ಸು ಸಿಗದ ಹಿನ್ನೆಲೆಯಲ್ಲು ಪುನಃ ಕಿರುತೆರೆಗೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಖಡಕ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ವಿಜಯ್ ಸೂರ್ಯ ಅವರ ಎರಡನೇ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನ ನಟ ವಿಜಯ್ ಸೂರ್ಯ ನಿಮ್ಮ ಮನೆಗೆ ಬರಲಿದ್ದಾರೆ ಎಂದು ಹಿಂಟ್ ನೀಡಿತ್ತು. ಇಂದು ಬೆಳಗ್ಗೆ ಕಲರ್ಸ್ ಕನ್ನಡದಿಂದ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ 'ಹೆಸರು ದತ್ತಾ ಶ್ರೀರಾಮ ಪಾಟಿಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಅಂತ. ಮಗು ಮನಸ್ಸಿನವನು ಸ್ವಲ್ಪ ಖಡಕ್, ಕೊಟ್ಟ ಮಾತು ತಪ್ಪಲ್ಲ. ಆದ್ರೆ ಸೌಂದರ್ಯ ಕಂಡ್ರೆ ಆಗಲ್ಲ.ದತ್ತಾ ಭಾಯ್ ಬರ್ತಿದ್ದಾರೆ ಶ್ರೀಘ್ರದಲ್ಲೇ..! ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಂದು ಮನೆ ಮೆನೆಗೂ ಬರ್ತಿದ್ದಾರೆ ವಿಜಯ್ ಸೂರ್ಯ; ದೃಷ್ಟಿಬೊಟ್ಟು ಇಟ್ಕೊಳ್ಳಕ್ಕೆ ರೆಡಿನಾ?

ಇನ್ನು ಕನ್ನಡ ಕಿರುತೆರೆ ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಸಿನಿಮಾದಲ್ಲಿಯೂ ಸಿಗದ ಮಾಸ್ ಲುಕ್ ಮೂಲಕ ಪುನಃ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಸೂರ್ಯ ಅವರುಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ದೃಷ್ಟಿಬೊಟ್ಟ ಆರಂಭವಾಗುತ್ತಿದ್ದು, ನಾಯಕನಾಗಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಜಯ್ ಸೂರ್ಯನನ್ನು ನೋಡಿದ ಅಭಿಮಾನಿಗಳು ಹೋ... ದತ್ತಾ ಭಾಯ್... ವಿಜಯ್ ಸೂರ್ಯ ಈಸ್ ಬ್ಯಾಕ್ ಎಂದು ಪ್ರೇರಣೆ ನೀಡಿದ್ದಾರೆ.

ಭಾರತದ ಐಟಿ ಉದ್ಯಮ ಕುಸಿತ ಭೀತಿ: ಅಮೇರಿಕದ ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳು ವಿಯೆಟ್ನಾಂ, ಫಿಲಿಪೈನ್ಸ್ ಪಾಲು

ಧಾರಾವಾಹಿಗಳಿಂದ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ನಟ ವಿಜಯ್ ಸೂರ್ಯ ಅವರು ಕ್ರೇಜಿಲೋಕದಲ್ಲಿ ನಟಿಸಿದ್ದರು. ಈ ಸಿನಿಮಾದ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ನಂತರ ಇಷ್ಟಕಾಮ್ಯ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಕೆಲವು ಚಿತ್ರಗಳ ಆಫರ್‌ಗಳೂ ಬಂದವು. ಕದ್ದುಮುಚ್ಚಿ, ಗಾಳಿಪಟ-2 ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆದರೆ, ವಿಜಯ್ ಸೂರ್ಯಗೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾದಲ್ಲಿ ಯಶಸ್ಸು ಸಿಗಲಿಲ್ಲ. ಪ್ರಸ್ತುತ ವೀರಪುತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಖಡಕ್ ಲುಕ್‌ನಲ್ಲಿ ದೃಷ್ಟಿಬೊಟ್ಟು ಧಾರಾವಾಹಿಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ.

Latest Videos
Follow Us:
Download App:
  • android
  • ios