ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್​ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...

ಶ್ರೀಲಂಕದಲ್ಲಿರುವ ಡಾ.ಬ್ರೋ ಅಲ್ಲಿನ ರಾವಣನ ಗುಹೆಯ ಕುತೂಹಲದ ಮಾಹಿತಿಯನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಅಪಾಯಕಾರಿ ಗುಹೆಯಲ್ಲಿ ಇಳಿದು ಸಂಪೂರ್ಣ ದರ್ಶನ ಮಾಡಿಸಿದ್ದಾರೆ. 
 

Dr Bro in SreeLanka has shown interesting information about Ravanas dangerous cave suc

ರಾಮಾಯಣ-ಮಹಾಭಾರತದ ಕುರಿತು ಹಲವಾರು ಕುರುಹುಗಳು ಇಂದಿಗೂ ಸಿಗುತ್ತಿರುವುದು ಕುತೂಹಲ ಎನ್ನಿಸುತ್ತಿದೆ. ಜನರ ಅರಿವಿಗೆ ಬಾರದ ಅದೆಷ್ಟೋ ಕೌತುಕಗಳು ಇಂದಿಗೂ ಕೆಲವೆಡೆಗಳಲ್ಲಿ ಜೀವಂತವಾಗಿದೆ. ರಾಮನು ನವರಾತ್ರಿಯ 10ನೇ ದಿನ  ಶ್ರೀರಾಮನು ರಾವಣನನ್ನು ಕೊಂದ ಎನ್ನುವುದು ಪುರಾಣ.  ರಾಮ ಅಯೋಧ್ಯೆಗೆ ಮರಳಿದ 20 ದಿನಗಳ ಬಳಿಕ ದೀಪಾವಳಿಯನ್ನು ಆಚರಿಸಲಾಯಿತು. ಸಂಶೋಧನೆಯ ಪ್ರಕಾರ ರಾವಣನ ದೇಹವನ್ನು ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ಇರಿಸಲಾಗಿದೆ ಎಂದು ಜನರು ಹೇಳುತ್ತಾರೆ. ಗುಹೆಯಲ್ಲಿ ರಾವಣನ ದೇಹವಿದೆ ಎಂದು ಇದಾಗಲೇ ಶ್ರೀಲಂಕಾದ ರಾಷ್ಟ್ರೀಯ ರಾಮಾಯಣ ಸಂಶೋಧನಾ ಕೇಂದ್ರ ಮತ್ತು ಪ್ರವಾಸೋದ್ಯಮ ಸಚಿವಾಲಯ ಕೂಡ ಹೇಳಿದೆ.  ಆದರೆ ಈ ಬಗ್ಗೆ ಸಾಕಷ್ಟು ವಿಭಿನ್ನ ಹೇಳಿಕೆಗಳಿವೆ. ರಾಮನು ರಾವಣನನ್ನು ಕೊಂದರೂ, ರಾಮನು ರಾವಣನ ದೇಹವನ್ನು ರಾವಣನ ಸಹೋದರನ ಕೈಗೆ ಹಸ್ತಾಂತರಿಸಿದ್ದನು ಎಂದು ಹೇಳಲಾಗುವುದು. ರಾವಣನ ಸಹೋದರನಿಗೆ ಮೃತ ದೇಹವನ್ನು ಹಸ್ತಾಂತರಿಸಿದ ನಂತರ ಏನಾಯಿತು ಎನ್ನುವುದರ ಕುರಿತು ಯಾವುದೇ ಕಥೆ-ಪುರಾಣಗಳು ಇಲ್ಲ. ಹಾಗಾಗಿ ರಾವಣನ ಅಂತ್ಯ ಕ್ರಿಯೆಯ ಬಗ್ಗೆ ಸಾಕಷ್ಟು ಸಂದಿಗ್ಧತೆ ಹಾಗೂ ರಹಸ್ಯಗಳು ಅಡಗಿವೆ ಎಂದು ಊಹಿಸಲಾಗುತ್ತದೆ.
 
ಇದೀಗ ಈ ರಾವಣನ ಗುಹೆಯ ಕುರಿತು ಡಾ.ಬ್ರೋ ಅರ್ಥಾತ್​ ಗಗನ್​ ಕೆಲವೊಂದು ಕುತೂಹಲದ ಮಾಹಿತಿ ನೀಡಿದ್ದಾರೆ. ಬಹಳ ಅಪಾಯಕಾರಿ ಎನ್ನುವ ಗುಹೆಯೊಳಕ್ಕೆ ಹೋಗಿ ಅಲ್ಲಿನ ಸಂಪೂರ್ಣ ವಿವರ ನೀಡಿದ್ದಾರೆ. ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಯೋಧ್ಯೆ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಇರುವ ಶ್ರೀರಾಮನ ನೆಲೆ, ರಾಮಾಯಣಕ್ಕೆ ಸಂಬಂಧಿಸಿದಂತೆ ಇರುವ ಸ್ಥಳಗಳ ದರ್ಶನ ಭಾಗ್ಯ ಮಾಡಿಸಿ ಕೆಲಕಾಲ ಕಣ್ಮರೆಯಾಗಿದ್ದ ಡಾ.ಬ್ರೋ ಅರ್ಥಾತ್​ ಗಗನ್​ ಮತ್ತೆ ಕಾಣಿಸಿಕೊಂಡಿದ್ದಾರೆ. ರಾಮನ ದರ್ಶನ ಮಾಡಿಸಿದ ಬಳಿಕ ಇದೀಗ ಲಂಕೆಗೆ ಹೋಗಿರುವ ಅವರು ಅಲ್ಲಿಯ ಕೆಲವು ಕುತೂಹಲದ ಮಾಹಿತಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ  ಶ್ರೀಲಂಕಾದಲ್ಲಿರುವ ರಾವಣನ ಚಿನ್ನದ ಅರಮನೆಯ ಮಾಹಿತಿ ನೀಡಿದ್ದರು.  ಪುರಾಣಗಳ ಪ್ರಕಾರ,  ರಾವಣ ಲಂಕೆಯಲ್ಲಿ ಚಿನ್ನದ ಅರಮನೆಯನ್ನು ಹೊಂದಿದ್ದ. ಇದನ್ನು ರಾವಣನು  ಕುಬೇರನಿಂದ ತೆಗೆದುಕೊಂಡನೆಂದು ಹೇಳಲಾಗುತ್ತದೆ. ಈ ಬಗ್ಗೆ ಗಗನ್​ ಮಾಹಿತಿ ನೀಡಿದ್ದರು.

ಲಂಕೆಗೆ ಹಾರಿದ ಡಾ.ಬ್ರೋ: ವಿಶ್ವದ ಎಂಟನೇ ಅದ್ಭುತ ಎನಿಸಿರುವ ರಾವಣನ ಚಿನ್ನದ ಅರಮನೆ ದರುಶನ...

ಇದೀಗ ಸುಮಾರು ಮುಕ್ಕಾಲು ಕಿಲೋ ಮೀಟರ್​ ಎಂದರೆ 800 ಮೀಟರ್​ ಆಳದಲ್ಲಿ ಇರುವ ರಾವಣನ ಗುಹೆ ಕುರಿತು ಮಾಹಿತಿ ನೀಡಿದ್ದಾರೆ. ಈ ಹಿಂದೆ ಇದರ ವಿಚಾರವಾಗಿ ಸಂಶೋಧನೆ ನಡೆದಿತ್ತು.  ಅದರ ಪ್ರಕಾರ ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆ ಎನ್ನುವುದು ತಿಳಿದು ಬಂದಿದೆ. ಈ ಕುತೂಹಲಕಾರಿ ಸಂಶೋಧನೆಯ ಪ್ರಕಾರ ರಾಮಾಯಣಕ್ಕೆ ಸಂಬಂಧಿಸಿದ 50 ಪ್ರದೇಶಗಳನ್ನು ತನಿಖೆ ಮಾಡಲಾಗಿತ್ತು. ಅದರಲ್ಲಿರುವ ಒಂದು ಗುಹೆಯಲ್ಲಿ ರಾವಣನ ದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಾವಣ ನಿಜವಾಗಿಯೂ ಯಾವ ಗುಹೆಯಲ್ಲಿ ಇರುತ್ತಿದ್ದ ಎನ್ನುವುದನ್ನು ತಮ್ಮದೇ ಆದ ಕುತೂಹಲದ ಶೈಲಿನಲ್ಲಿ ಡಾ.ಬ್ರೋ ಮಾಹಿತಿ ನೀಡಿದ್ದಾರೆ. 

ಪ್ರತಿ ಸಲದಂತೆ ಈ ಸಲವೂ ಸ್ವಲ್ಪ ರಿಸ್ಕ್​ ತೆಗೆದುಕೊಂಡಿರುವ ಡಾ.ಬ್ರೋ ಬಗ್ಗೆ ಅಭಿಮಾನಿಗಳ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ರಿಸ್ಕ್​ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ಇನ್ನು ರಾಮಾಯಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದಲ್ಲಿರುವ  ವಾಸ್ತುಶಿಲ್ಪಕ್ಕೆ ಎಲ್ಲರೂ ಬೆರಗಾಗಲೇಬೇಕು.  ಮೇಲಕ್ಕೆ ಸುಮಾರು 1000 ಮೆಟ್ಟಿಲುಗಳನ್ನು ಹೊಂದಿರುವ ಇದು ರಾವಣ ಮತ್ತು ಅವನ ಸಂದರ್ಶಕರಿಗೆ ಮೇಲಕ್ಕೆ ಹೋಗಲು ಒಂದು ಲಿಫ್ಟ್ ಅನ್ನು ಹೊಂದಿತ್ತು. ಸುಮಾರು 50 ಶತಮಾನಗಳ ಹಿಂದೆ ಲಿಫ್ಟ್‌ ಹೊಂದಿತ್ತೆಂದರೆ ಈ ಸ್ಥಳ ಹೇಗಿತ್ತು ಅನ್ನೋದನ್ನು ಊಹಿಸಿಕೊಳ್ಳುವುದೂ ಕಷ್ಟ. ಈ ಬಂಡೆಯ ಪ್ರಸ್ಥಭೂಮಿಯ ಕೆಳಭಾಗವನ್ನು  ಹತ್ತಿರದಿಂದ ನೋಡಿದರೆ,  ಹಲವು ಗುಹೆಗಳನ್ನು ಕಾಣಬಹುದು.  ಇಲ್ಲಿನ ಒಂದು ಗುಹೆಗಳಲ್ಲಿ ರಾವಣನು ಸೀತೆಯನ್ನು ಅಪಹರಿಸಿದ ನಂತರ ಜೈಲಿನಲ್ಲಿದ್ದನು. ಗುಹೆಯ ಗೋಡೆಗಳು ಗಾಢ ಬಣ್ಣದ ವರ್ಣಚಿತ್ರಗಳನ್ನು ಹೊಂದಿದ್ದು, ರಾಮಾಯಣದ ಯುಗದ ದೃಶ್ಯಗಳನ್ನು ಚಿತ್ರಿಸುತ್ತಿರುವುದರಿಂದ ಈ ಕಥೆ ನಿಜವಾಗಿರಬಹುದು.  

ಶೇವಿಂಗ್​ ಮಾಡಿಸಿಕೊಂಡ್ರೆ 800 ರೂ. ಬೋಳಿಸ್ತಾರೆ ... ಖಾಲಿ ದೋಸೆಗೂ 450 ಕೇಳ್ತಾರೆ ... ಅಬ್ಬಬ್ಬಾ ಎಲ್ಲಿದು ಅಂತೀರಾ?


Latest Videos
Follow Us:
Download App:
  • android
  • ios