'ನಿನ್ನ ಪ್ರೇಮಪಾಶದಲ್ಲಿ ನಾನು ಲಾಕ್ ಡೌನ್ ಆಗಿದ್ದೇನೆ. ನಿನ್ನ ಹೃದಯದಲ್ಲಿ ಪರ್ಮನೆಂಟ್ ಕ್ವಾರೆಂಟೇನ್ ಆಗಬೇಕು ಅನ್ನೋದೇ ನನ್ನಾಸೆ. ಇಬ್ಬರೂ ಸೇರಿ ನಮ್ಮ ಪ್ರೇಮ ಬಂಧನವನ್ನು ಸೀಲ್ ಡೌನ್ ಮಾಡೋಣವೇ..ನಿನಗೆ ಅರ್ಥವಾಗುತ್ತೆ ಅಂದ್ಕೊಡಿದ್ದೀನಿ, ನನ್ನ ಮನಸ್ಸಾಳೋ ರಾಣಿ ನೀನೇ ಅಂತ ಆ ದೇವ್ರು ಫಿಕ್ಸ್ ಮಾಡಿರಬೇಕು. ಹೀಗೇ ಇರೋಣ್ವಾ ಮುಂದೆನೂ, ಹೇಳು ಚಿನ್ನ ನನ್ನ ಮದ್ವೆ ಆಗ್ತೀಯಾ..'

ಈ ಸಾಲುಗಳನ್ನು ಕೇಳಿದ್ರೆ ನಿಮ್ ಹಳೇ ಪ್ರೀತಿ ಅಥವಾ ಈಗಿನ ಪ್ರೀತಿ ನೆನಪಾಗಿ ಕಚಗುಳಿ ಇಟ್ಟಂಗಾಗ್ತಿದೆಯಾ.. ಅಷ್ಟಕ್ಕೂ ಇಷ್ಟು ಮುದ್ದಾಗಿ ಯಾರು ಲೌ ಲೆಟರ್ ಬರೆದಿರಬಹುದು. ಈ ಲೌ ಲೆಟರ್ ಓದಿದ ಹುಡುಗಿಯ ಪ್ರತಿಕ್ರಿಯೆ ಹೇಗಿರಬಹುದು.. ನಿಮ್ಮ ಈ ಸಂದೇಹಕ್ಕೆ ಉತ್ತರ ಇಲ್ಲೇ ಇದೆ. ಈ ಪ್ರೇಮ ಪತ್ರ ಬರ್ದಿರೋದು ಮತ್ಯಾರೂ ಅಲ್ಲ, ನಮ್ ಡಾರ್ಲಿಂಗ್ ಕೃಷ್ಣ.

ಯಾರಿಗೆ ಅಂತ ಈ ಹೊತ್ತಲ್ಲಿ ನೀವೇನಾದ್ರೂ ಕೇಳಿದ್ರೆ ಅಷ್ಟೇ, ಇನ್ನೇನು ವ್ಯಾಲೆಂಟೇನ್ ಡೇ ಬಂದೇ ಬಿಡ್ತು ಅನ್ನೋ ಹಾಗಿದೆ. ಈ ಸಲದ ವ್ಯಾಲೆಂಟೇನ್ ಡೇ ಬಹಳ ಸ್ಪೆಷಲ್. ಯಾಕಂದ್ರೆ ಬಹುಕಾಲದಿಂದ ಪ್ರೇಮಿಸಿದ ಜೋಡಿಯೊಂದು ಭರ್ಜರಿಯಾಗಿ ಲೈಫ್ ಫಾರ್ಟನರ್ಸ್ ಆಗ್ತಿದ್ದಾರೆ. ನಮ್ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಜೋಡಿಯದು. ಮಿಲನಾ ಮತ್ತು ಕೃಷ್ಣ. 

ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ಡಾಲಿಂಗ್ ಕೃಷ್ಣ-ಮಿಲನಾ ನಾಗರಾಜ್‌ ಫುಲ್ ಬ್ಯುಸಿ! ...

ಆ ಲೌ ಲೆಟರ್ ಬರೆದಿರೋದೇನೋ ಕೃಷ್ಣ. ಇದಕ್ಕೆ ಮಿಲನಾ ಹೇಗ್ ಪ್ರತಿಕ್ರಿಯಿಸಿರಬಹುದು.. ಆಕೆ ನಾಚ್ಕೆ ಗೀಚ್ಕೆ ಮಾಡದೇ ಮುದ್ದಾಗಿ ನಗುತ್ತಾ, ' ಓ ಎಸ್ ಮದ್ವೆ ಆಗೋಣ' ಅಂದಿದ್ದಾರೆ. ಇದನ್ನು ಕೇಳಿ ಕೃಷ್ಣ ಸಣ್ಣ ಸಂದೇಹದಲ್ಲಿ 'ಹೀಗೆಲ್ಲ ಪ್ರೊಪೋಸ್ ಮಾಡದಿದ್ರೂ ಓಕೆ ಅಂತಿದ್ಯಾ' ಅಂತ ಕೇಳಿದ್ದಾರೆ. ಮಿಲನಾ ಅದಕ್ಕೂ ಎಸ್ ಅಂದಿದ್ದಾರೆ. ಈ ಜೋಡಿ ಎಷ್ಟು ಕ್ಯೂಟೋ ಅವರಿಬ್ಬರ ಈ ಮಾತುಕತೆಯೂ ಅಷ್ಟೇ ಕ್ಯೂಟ್.

ಇವರ ಈ ಮಾತುಕತೆ ಮುಂದುವರಿದಿದೆ. ಕೃಷ್ಣಗೆ ಮಿಲನಾ ಕಾಲೆಳೆಯೋ ಆಸೆ ಆಗಿದೆ, 'ಈಗ ನಿನ್ನ ಮಿಲನಾ ನಾಗರಾಜ್ ಅಂತ ಕರಿಯೋದಾ, ಮಿಲನಾ ಕೃಷ್ಣ ಅಂತ ಕರೆಯೋದಾ ಅಂತ ಕೇಳಿದ್ದಾರೆ. ಮಿಲನಾ ಗೊಂದಲಕ್ಕೆ ಬಿದ್ದಿದ್ದಾರೆ.

ಮದುವೆ ಪತ್ರಿಕೆ ಹಂಚುತ್ತಿರುವ ಕೃಷ್ಣ-ಮಿಲನಾ; ಯಾರೆಲ್ಲಾ ಸೆಲೆಬ್ರಿಟಿಗಳು ಬರ್ತಿದ್ದಾರೆ? ...

ಹಾಗೆ ನೋಡಿದರೆ ಗಂಡನ ಹೆಸರನ್ನು ತಮ್ಮ ಹೆಸರಿನ ಜೊತೆ ಜೋಡಿಸಿಕೊಳ್ಳೋದು ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲೂ ಫ್ಯಾಶನ್ ಆಗಿತ್ತು. ಕೊಂಚ ಹಿಂದೆಲ್ಲ ಹೇಗಿತ್ತು ಅಂದರೆ, ಒಬ್ಬ ನಟ ಮತ್ತು ನಟಿ ಮದುವೆ ಆದ್ರು ಅಂದರೆ ಆ ನಟಿ ತನ್ನ ಗಂಡನ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಳ್ಳಲಿಲ್ಲ ಅಂದುಕೊಳ್ಳಿ. ಆಗ ಮೀಡಿಯಾದವ್ರೇ ನಟಿಯ ಹೆಸರಿನ ಜೊತೆ ನಟ ಹೆಸರನ್ನು ಸೇರಿಸಿ ತಾವೇ ಬರೆದುಬಿಡುತ್ತಿದ್ದರು.

ಆ ಪಾಪದ ನಟಿಗೆ ನಂಗೋ ಹಾಗೂ ಇಲ್ಲ, ಉಗುಳೋ ಹಾಗೂ ಇಲ್ಲ ಅನ್ನೋ ಸ್ಥಿತಿ. ಇದಕ್ಕೆ ಬೆಸ್ಟ್ ಉದಾಹರಣೆ ಶಂಕರ್ ನಾಗ್- ಅರುಂಧತಿ ರಾವ್ ಜೋಡಿ. ಅರುಂಧತಿ ರಾವ್ ಆಗಿಯೇ ಇರಬೇಕು ಅಂದುಕೊಂಡಿದ್ದವರನ್ನು ಪತ್ರಕರ್ತರು ಅರುಂಧತಿ ನಾಗ್ ಮಾಡಿಬಿಟ್ಟಿದ್ರು.

ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ ಇಂಥ ಸಂಪ್ರದಾಯ ಕಡಿಮೆ ಆಗ್ತಿದೆ. ಯಶ್-ರಾಧಿಕಾ ಪಂಡಿತ್ ಜೋಡಿ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ರಾಧಿಕಾ ಪಂಡಿತ್ ತನ್ನ ಸರ್ ನೇಮ್ ಬದಲಿಸಲಿಲ್ಲ. ಬಾಲಿವುಡ್ ನಲ್ಲಂತೂ ಈಗೀಗ ಹೆಚ್ಚಿನ ಸೆಲೆಬ್ರಿಟಿಗಳ್ಯಾರೂ ಸರ್‌ನೇಮ್ ಬದಲಿಸೋದಿಲ್ಲ. 

ಸಿಂಪಲ್ ಡ್ರೆಸ್‌ನಲ್ಲೂ ಸಖತ್ ಕ್ಯೂಟ್: ಇದು ಮಿಲನಾ ಫ್ಯಾಷನ್ ಸೀಕ್ರೆಟ್ ...

ಈಗ ವಿಷ್ಯಕ್ಕೆ ಬರೋಣ. ಮಿಲನಾ ಹತ್ರ ಕೃಷ್ಣ ನೀನು ಈಗ ಮಿಲನಾ ನಾಗರಾಜೋ ಅಲ್ಲಾ ಮಿಲನಾ ಕೃಷ್ಣನೋ ಅಂತ ಕೇಳಿದಾಗ ಮಿಲನಾಗೆ ಕನ್‌ಫ್ಯೂಶನ್‌. ಈ ಪ್ರಶ್ನೆ ಇಲ್ಲೀವರೆಗೆ ಬಂದೇ ಇರಲಿಲ್ಲ ಅಲ್ವಾ.. ಮಿಲನಾ ಕೃಷ್ಣ ಅನ್ನೋದೂ ಚೆನ್ನಾಗಿದೆ, ಮಿಲನಾ ನಾಗರಾಜ್ ಕೂಡ ಚೆನ್ನಾಗಿದೆ ಅಂತ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಹೇಳಿದ್ದಾರೆ. ಇದನ್ನ ನೋಡಿ ಕೃಷ್ಣಗೇ ಗಲಿಬಿಲಿ ಆಗಿರಬೇಕು. ಮಿಲನಾ ಕೃಷ್ಣ ಗಿಂತ ಮಿಲನಾ ನಾಗರಾಜ್ ಚೆನ್ನಾಗಿ ಕೇಳುತ್ತೆ, ಮಿಲನಾ ಕೃಷ್ಣ ಸ್ವಲ್ಪ ಆಕ್ವರ್ಡ್ ಅನಿಸುತ್ತೆ ಅಂದಿದ್ದಾರೆ. ಇದನ್ನು ಗಮನಿಸಿದರೆ ಮುಂದೆ ಮಿಲನಾ ನಾಗರಾಜ್, ಮಿಲನಾ ಕೃಷ್ಣ ಆಗಲ್ಲ ಅನಿಸುತ್ತೆ. ಎಲ್ಲಕ್ಕೂ ಫೆ.14ರ ನಂತರ ಉತ್ತರ ಸಿಗುತ್ತೆ.