ಅನು ಸಿರಿಮನೆ ಅಂತಲೇ ಫೇಮಸ್ ಮೇಘಾ ಶೆಟ್ಟಿ. ಎಂಬಿಎ ಮಾಡುತ್ತಿದ್ದ ಸಾದಾ ಸೀದಾ ಹುಡುಗಿಯೊಬ್ಬಳಿಗೆ ಇಂಥಾ ಫೇಮ್ ತಂದುಕೊಟ್ಟಿದ್ದು ಜೊತೆ ಜೊತೆಯಲಿ ಸೀರಿಯಲ್. ಹಾಗೆ ನೋಡಿದರೆ ಮೇಘಾ ಶೆಟ್ಟಿ ಕನಸಲ್ಲೂ ನಟನೆ ಬಗ್ಗೆ ಯೋಚಿಸಿದವರಲ್ಲ. ಮೇಲ್ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಅನು ತಾನಾಯ್ತು, ತನ್ನ ಓದಾಯ್ತು ಅಂತಲೇ ಇದ್ದರು. ನಮ್ಮ ಅಕ್ಕ ಪಕ್ಕದ ಕಾಲೇಜ್ ಹುಡುಗ್ರು ಹೆಂಗಿರ್ತಾರೋ ಅದೇ ಥರದ ಲೈಫ್ ಲೀಡ್ ಮಾಡ್ತಿದ್ರು. ಇನ್ ಸ್ಟಾದಲ್ಲಿ ಇವರ ಫೋಟೋ ನೋಡಿದ್ದೇ ಜೊತೆ ಜೊತೆಯಲಿ ಸೀರಿಯಲ್ ಗೆ ಹೀರೋಯಿನ್ ಬೇಟೆಯಲ್ಲಿದ್ದವರಿಗೆ ಪಕ್ಕಾ ತಾವು ಹುಡುಕ್ತಿದ್ದ ಹೀರೋಯಿನ್ನೇ ಎದುರು ಬಂದ ಹಾಗಾಯ್ತು. ಆ ಹುಡುಗಿಯನ್ನು ಕಾಂಟ್ಯಾಕ್ಟ್ ಮಾಡಿ ಸೀರಿಯಲ್ ನಲ್ಲಿ ಆಕ್ಟ್ ಮಾಡ್ತಿಯೇನಮ್ಮಾ, ಅನಿರುದ್ಧ ಅವರೇ ಹೀರೋ ಅಂದಾಗ ಈಕೆ ಖಡಾಖಂಡಿತವಾಗಿ ಒಲ್ಲೆ ಅಂತಾಳೆ. ಕಾರಣ ಮತ್ತೇನಿಲ್ಲ, ವರ್ಷವಿಡೀ ಕಷ್ಟಪಟ್ಟು ಓದಿದ್ದು ಎಕ್ಸಾಂ ಹತ್ರ ಬರುವಾಗ ಬಿಟ್ಟು ಸೀರಿಯಲ್ ಗೆ ಬರೋದು ಹೇಗೆ. ಆದರೆ ಇಂಥದ್ದೊಂದು ಅವಕಾಶ ಮತ್ತೆ ಸಿಗೋದಿಲ್ಲ ಅನ್ನೋದೂ ತಲೆಯಲ್ಲಿತ್ತು. ಕೊನೆಗೆ ಎಕ್ಸಾಂ ಮುಗಿಸಿ ಬರಲಾ ಅಂತ ಕೇಳಿದ್ರು ಮೇಘಾ. ಓಕೆ ಅಂತು ಸೀರಿಯಲ್ ಟೀಮ್. ಆಮೇಲಿಂದ ನಡೆದದ್ದೆಲ್ಲಾ ಮ್ಯಾಜಿಕಲ್ ಕ್ಷಣಗಳು. ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಮೇಘಾ ಶೆಟ್ಟಿ ಹೋಗಿ ಅನು ಸಿರಿಮನೆ ಅನ್ನೋ ಹೆಸರೇ ಗಟ್ಟಿಯಾಯ್ತು. ಈಕೆಗೆ ನಟನೆ ಬರುತ್ತಾ ಅತ ಅಡಿಶನ್ ಸಹ ಮಾಡದೇ ಒಪ್ಪಿಕೊಂಡ ನಿರ್ದೇಶಕರಿಗೆ ನಟನೆಯೇ ಗೊತ್ತಿಲ್ಲದ ಈಕೆ ಯಾವತ್ತೂ ಟೆನ್ಶನ್ ಕೊಡಲಿಲ್ಲ. ತನ್ನೊಳಗೊಬ್ಬ ನಟಿ ಇದ್ದಾಳೆ ಅಂತ ಬಹುಶಃ ಈ ಅವಕಾಶ ಸಿಗದಿದ್ರೆ ಈಕೆಗೆ ಗೊತ್ತೇ ಆಗುತ್ತಿರಲಿಲ್ಲವೇನೋ..

ಅಂದ ಹಾಗೆ ಸದ್ಯಕ್ಕೆ ಈ ಹುಡುಗಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಚಂದನ್ ಶೆಟ್ಟಿ ಜೊತೆಗೆ ಒಂದು ಆಲ್ಬಂ ಸಾಂಗ್ ನಲ್ಲಿ ಈ ಹುಡುಗಿ ಕಾಣಿಸಿಕೊಳ್ಳಲಿದ್ದಾಳೆ. ಮೋನಿಕಾ ಕಲ್ಲೂರಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ವೀಡಿಯೋ ಸಾಂಗ್ ಸಿದ್ದಗೊಳ್ಳಲಿದೆ. 'ನೋಡು ಶಿವ..' ಅನ್ನೋ ಸಖತ್ ಥ್ರಿಲ್ಲಿಂಗ್ ಹಾಡನ್ನು ಚಂದನ್ ಶೆಟ್ಟಿ ಅವರೇ ಹಾಡಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ನ ಸಿಂಪಲ್ ಅನು ಸಿರಿಮನೆ ಅನ್ನೋ ಪಾತ್ರಧಾರಿ ಅಲಿಯಾಸ್ ಮೇಘಾ ಶೆಟ್ಟಿ ಸಖತ್ ಗ್ಲಾಮರಸ್ ಆಗಿ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡನ್ನು ಬರೆದಿರೋದು ಸುಮೀಕ್ ಎಂಕೆ. ಇದಕ್ಕೆ ನಿರ್ದೇಶನವೂ ಅವರದೇ. ಚಂದನ್ ಶೆಟ್ಟಿ ಹಾಡಿಗೆ ಮೇಘಾ ಶೆಟ್ಟಿ ಜೊತೆಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡೋರೂ ಇವರೇ. ಆದರೆ ಚಂದನ್ ಶೆಟ್ಟಿ ಅವರ ಎಂಟ್ರಿಯೂ ಈ ಹಾಡಿಗಿರುತ್ತೆ. 

ಮೇಘನಾ ರಾಜ್‌ ಭೇಟಿ ಮಾಡಲು ಬರೋದಾ ಎಂದ ಪನ್ನಗಾಭರಣ ಪುತ್ರ; ವಿಡಿಯೋ ವೈರಲ್! ...

ಈಗ ಇದೆಲ್ಲವನ್ನು ಮೀರಿದ ಮತ್ತೊಂದು ವಿಷ್ಯ ಅಂದರೆ ಮೇಘಾ ಶೆಟ್ಟಿ ಅವರ ಸೀರಿಯಲ್ ಲೈಫ್ 'ಜೊತೆ ಜೊತೆಯಲಿ' ಸೀರಿಯಲ್ ಗೇ ಕೊನೆಗೊಳ್ಳುತ್ತಾ ಅನ್ನೋದು. ಇದಕ್ಕೆ ಕಾರಣಗಳನ್ನು ನೀವು ಊಹಿಸಬಹುಡು. ಈಕೆಗೆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ, ಚಂದನ್ ಶೆಟ್ಟಿ ಆಲ್ಬಂ ಸಾಂಗ್ ಕೈಯಲ್ಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಮಿಂಚಿದ್ಮೇಲೆ ಸೀರಿಯಲ್ ಕಡೆಗೆಲ್ಲಾ ಮುಖ ಮಾಡ್ತಾಳಾ, ಸಿನಿಮಾ ಫೀಲ್ಡ್ ನಲ್ಲೇ ಮುಂದೆ ಹೋಗಬಹುದಪ್ಪಾ ಅಂತ. ಯಾಕೆಂದರೆ ಸ್ಯಾಂಡಲ್ ವುಡ್ ಪರಂಪರೆಯೇ ಹಾಗಿದೆ. ಈಗ ಕನ್ನಡ ನಾಯಕಿಯರಲ್ಲಿ ಲೀಡ್ ನಟಿಯಾಗಿರುವ ರಚಿತಾ ರಾಮ್ ಬಂದಿದ್ದು ಸೀರಿಯಲ್ ಹಿನ್ನೆಲೆಯಿಂದಲೇ. ರಾಧಿಕಾ ಪಂಡಿತ್ ಎಂಬ ಪ್ರತಿಭಾವಂತೆಯ ಆಕ್ಟಿಂಗ್ ಕೆರಿಯರ್ ಶುರುವಾಗಿದ್ದೂ ಸೀರಿಯಲ್ ನಿಂದಲೇ. ಈಗ ಈಕೆಯ ಸರದಿ ಅಂತ. 


ನಿಮ್ಮ ಊಹೆಯನ್ನು ಅಲ್ಲಗೆಳೆಯೋದಕ್ಕೆ ಆಗಲ್ಲ. ಆದರೆ ಈಗ ಮ್ಯಾಟರ್ ನಲ್ಲಿ ಸ್ವಲ್ಪ ಟ್ವಿಸ್ಟ್ ಇದೆ.

ಚಂದನ್ ಶೆಟ್ಟಿ ಜೊತೆಯಾದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ; 'ನೋಡು ಶಿವಾ' ಹಿಟ್? ...

ಮೇಘಾ ಲೈಫ್ ನ ಬಹುದೊಡ್ಡ ಕನಸು ತಾನು ಐಎಎಸ್ ಮಾಡಬೇಕು ಅನ್ನೋದು. ಕಳೆದ ಹತ್ತು ವರ್ಷಗಳಿಂದ ಅದಕ್ಕೆ ತಯಾರಿ ಮಾಡ್ಕೊಳ್ತಾನೇ ಇದ್ದಾರೆ. ಈಗಲೂ ಅವರಿಗೆ ಸಿಗುವ ಬಿಡುವಿನ ವೇಳೆ ಎಲ್ಲ ಓದಿಗೇ ಮೀಸಲು. ಅವರ ಆಪ್ತವಲಯದಲ್ಲಿ ಕೇಳಿಬರುತ್ತಿರುವ ಮಾತು ಅಂದರೆ ಜೊತೆ ಜೊತೆಯಲಿ ಬಳಿಕ ಮೇಘಾ ಮತ್ಯಾವುದೂ ಸೀರಿಯಲ್ ಆಫರ್ ಒಪ್ಪಿಕೊಳ್ಳಲ್ಲ. ಒಳ್ಳೆಯ ಚಾನ್ಸ್ ಸಿಕ್ಕರೆ ಸಿನಿಮಾದಲ್ಲಿ ಮುಂದೆ ಹೋಗಬಹುದೇನೋ. ಆದರೆ ಅವರ ಐಎಎಸ್ ಕನಸನ್ನು ಸದ್ಯದಲ್ಲೇ ನನಸಾಗಿಸಿಕೊಳ್ಳಲಿದ್ದಾರೆ. ಯಾರಿಗೊತ್ತು, ಈ ಮುದ್ದು ಹುಡುಗಿಯನ್ನು ಕಿರುತೆರೆಯಲ್ಲಿ ನೋಡೋ ಭಾಗ್ಯ ಎಷ್ಟು ದಿನ ಇರುತ್ತೆ ಅಂತ ಅಲ್ವಾ!

ಚಿರಂಜೀವಿ ಸರ್ಜಾ ಸಮಾಧಿ ಶಂಕುಸ್ಥಾಪನೆ;ಪೂಜೆಯಲ್ಲಿ ಧ್ರುವ ಸರ್ಜಾ ದಂಪತಿ! ...