ನವೆಂಬರ್ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಸಂಭ್ರಮದಲ್ಲಿರುವ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ  ನವೆಂಬರ್ 28ರಂದು ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಪೂಜೆ ವಿಧಿವಿಧಾನದಲ್ಲಿ ಸರ್ಜಾ ಕುಟುಂಬ ಭಾಗಿಯಾಗಿತ್ತು.

ಮೇಘನಾ ರಾಜ್‌ ಭೇಟಿ ಮಾಡಲು ಬರೋದಾ ಎಂದ ಪನ್ನಗಾಭರಣ ಪುತ್ರ; ವಿಡಿಯೋ ವೈರಲ್! 

ಕನಕಪುರ ರಸ್ತೆಯ ನೆಲಗೋಳಿ ಗ್ರಾಮದಲ್ಲಿ ಧ್ರುವ ಸರ್ಜಾರ ಫಾರ್ಮ್ ಹೌಸ್‌ನಲ್ಲಿ ಚಿರು ಅಂತ್ಯಕ್ರಿಯೆ ಮಾಡಲಾಗಿತ್ತು. ಧ್ರುವ ಸರ್ಜಾ, ಪ್ರೇರಣಾ, ಅಜ್ಜಿ ಲಕ್ಷ್ಮೀದೇವಿ, ತಾಯಿ ಅಮ್ಮಾಜಿ ಹಾಗೂ ತಂದೆ ಪೂಜೆಯಲ್ಲಿ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. ಧ್ರುವ ಸರ್ಜಾಗೆ ಅಣ್ಣನ ಮೇಲಿರುವ ಪ್ರೀತಿ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಜೂನ್‌ 7ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅಂದಿನಿಂದ ಧ್ರುವ ಅಣ್ಣ ಸ್ಥಾನದಲ್ಲಿ ನಿಂತು, ಕುಟುಂಬದ ಎಲ್ಲಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಅಣ್ಣನ ಆಸೆಯಂತೆ ಅತ್ತಿಗೆ ಮೇಘನಾ ರಾಜ್‌ಗೆ ಸೀಮಂತ ಕಾರ್ಯ ಮಾಡಿಸಿ, ಮಗು ಹುಟ್ಟುವ ಮುನ್ನವೇ ಬೆಳ್ಳಿ ತೊಟ್ಟಿಲನ್ನೂ ಚಿರಿಂಜೀವಿ ಆಸೆಯನ್ನು ಪೂರೈಸುವ ಸಲುವಾಗಿ ಉಡುಗೊರೆಯಾಗಿ ನೀಡಿದ್ದಾರೆ. 

ಮೇಘನಾ ರಾಜ್‌ ಪುತ್ರನಿಗೆ ಕಿಚ್ಚ ಸುದೀಪ್‌ ಕೊಟ್ಟ ಸ್ಪೇಷಲ್ ಗಿಫ್ಟ್! 

ಜೂನಿಯರ್‌ ಹುಟ್ಟಿದ ತಕ್ಷಣವೇ ಮಗುವನ್ನು ಮೊದಲು ಹಿಡಿದು ಮಾತನಾಡಿಸಿದ ಧ್ರುವ ಸರ್ಜಾ ಸಂತಸ ವ್ಯಕ್ತ ಪಡಿಸಿದ್ದರು. ಧ್ರುವ ಸರ್ಜಾ ಅಭಿಮಾನಿಗಳು ಆಸ್ಪತ್ರೆ ಎದುರು ಪಟಾಕಿ ಹೊಡೆದು ಸಂಭ್ರಮಿಸಿದ್ದರು