ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ನಿರೂಪಕಿ ಅಪರ್ಣಾರವರ ಮನದಾಳದ ಮಾತೇನು ಗೊತ್ತಾ?
ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅಪರ್ಣಾ ಅವರು ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಅವರು ನಿಧನರಾದ ಸಮಯದಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು.
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ನಿಂದ ತೀವ್ರವಾಗಿ ಬಳಲುತ್ತಿದ್ದ ಅಪರ್ಣಾ ಅವರು ಇಂದು ನಿಧನರಾಗಿದ್ದಾರೆ. ಇನ್ನೂ ಅಪರ್ಣಾ ಸಾವಿನ ಸುದ್ದಿ ತಿಳಿದು ಎಲ್ಲರಿಗೂ ಶಾಕ್ ಆಗಿದೆ. ಅಪರ್ಣಾ ಅವರು ತಮ್ಮ ಬನಶಂಕರಿ ನಿವಾಸದಲ್ಲಿ ನಿಧನರಾಗಿದ್ದು, ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದ್ದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅಪರ್ಣಾ ಅವರು ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಅವರು ನಿಧನರಾದ ಸಮಯದಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು.
ಅಪ್ಪು ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ದೇವರ ಸ್ಥಾನ ಪಡೆದ ನಟ. ಕಲಾವಿದನಿಗೆ ಸಾವಿಲ್ಲ, ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲವಾದರೂ ಭಾವನಾತ್ಮಕವಾಗಿ ಯಾವಾಗಲೂ ನಮ್ಮ ಜೊತೆ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಚಿರಂಜೀವಿ. ಪುನೀತ್ ಅವರ ನಿಧನದ ಬಳಿಕ ನಾವು ಕಲಿಯಬೇಕಾದ ನಿಜಾಂಶ ಇರುವಷ್ಟು ದಿನ ನಗುತ್ತಾ ಪ್ರೀತಿಯಿಂದ ನಾಲ್ಕು ಜನಕ್ಕೆ ನೆರವಾಗಬೇಕು. ದೊಡ್ಮನೆ ಹುಡುಗನಾಗಿ ಅಪ್ಪಾಜೀಯವರ ಮುದ್ದಿನ ಮಗನಾಗಿ ಕರುನಾಡ ಜನರ ಮನೆ ಮಗನಾಗಿ, ಇನ್ನೊಂದು ಕಡೆ ಸಮಾಜಮುಖಿ ಸೇವೆ ಮಾಡುತ್ತಾ ವಿಶಾಲವಾದ ಹೃದಯವಂತಿಕೆ ಸ್ನೇಹಮಹಿ ಜೀವನ ಇವುಗಳನ್ನ ನಾವು ಅವರಲ್ಲಿ ಕಂಡಿದ್ದೇವೆ. ನಾವೆಲ್ಲ ಅವರಿಗೆ ತೋರಿಸುವ ಅಭಿಮಾನ ಅವರ ಜೀವನ ಶೈಲಿಯನ್ನು ಅಳವಡಿಸಿಕೊಂಡಾಗ ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಅಪರ್ಣಾ ಹೇಳಿದ್ದರು.
ಇನ್ನು ದೂರದರ್ಶನ ಎಂಬ ಮಧ್ಯಮ ಆಗಷ್ಟೇ ಹುಟ್ಟಿದ ಕೂಸು. 1983ರಲ್ಲೇ ಟೆಲಿವಿಷನ್ ಶುರುವಾಗಿದ್ದು. ಆಗ ಹಿಂದಿ ಕಾರ್ಯಕ್ರಮಗಳು ಮಾತ್ರ ಪ್ರಸಾರ ಆಗುತ್ತಿದ್ದವು. ನನಗೆ ಮೊದಲ ಬಾರಿ ದೂರದರ್ಶನ ಕಂಡಾಗ ಎಲ್ಲಿಲ್ಲದ ಸಂತೋಷ. ಯಾವತ್ತೋ ಒಂದು ದಿನ ದೂರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಅವತ್ತೇ ಕನಸು ಕಂಡಿದ್ದೆ ಎಂದಿದ್ದರು ಅಪರ್ಣಾ. ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದ ಅಪರ್ಣಾ, ಡ್ರಾಮಾ ಆಡಿಷನ್ ಮೂಲಕ ಕಲಾವಿದೆ ಆಗಬೇಕು ಎಂದು ಕನಸು ಕಂಡಿದ್ದೆ. ಆಗ ನನಗೆ ಸಹಾಯ ಮಾಡಿದವರು ಶ್ರೀನಿವಾಸ ಪ್ರಭು ಅವರು. ಬಳಿಕ ಸೂರಿ ಅವರ ನಿರ್ದೇಶನದಲ್ಲಿ ನಾಪತ್ತೆ ಆದ ಪ್ರೇಮಿ ಎಂಬ ನಾಟಕ ಮಾಡಿದೆ ಎಂದರು.
ಜೀವನದಲ್ಲಿ ಏನ್ ಬೇಕಾದ್ರೂ ಮಾಡ್ತೀನಿ.. ಇಂಥ ಕಾರ್ಯಕ್ರಮದ ನಿರೂಪಣೆ ಯಾವತ್ತಿಗೂ ಬೇಡ ಅಂದಿದ್ರು ಅಪರ್ಣಾ..
ರಂಗ ಭೂಮಿ ಕಲಾವಿದರಾದ ವಿಶ್ವನಾಥ್ ರಾವ್, ಮಂಗಳ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಚಿತ್ರರಂಗಕ್ಕೆ ಬರುವ ಮುಂಚೆ ನಮ್ಮೊಂದಿಗೆ ಇದ್ದರು. ನಮ್ಮ ಜೊತೆ ರಂಗ ಭೂಮಿಯ ಕಲಾವಿದರಾಗಿ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಎಂದರು. ನಾನು 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದೆ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಲ್ಲಿ ನಟಿಸಿದ್ದೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ. ರೇಡಿಯೋ ಜಾಕಿ ಕೂಡ ಆಗಿದ್ದೆ. ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಭಾಗವಹಿಸಿದ್ದೇನೆ. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದೆ ಎಂದು ತಮ್ಮ ಕೊನೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಅಪರ್ಣಾ.