'ಮೆಟ್ರೋ'ಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ: ಭಾಷೆಗೆ ತಕ್ಕ ಭಾವನೆ ಎಂದರೆ ಅದು ಅಪರ್ಣಾ!
ಅಚ್ಚಗನ್ನಡದ ನಿರೂಪಕಿ ಅಪರ್ಣ ಅವರ ಧ್ವನಿ ಕೇವಲ ನಿರೂಪಣೆಗಷ್ಟೇ ಮೀಸಲಾಗಿರಲಿಲ್ಲ. ಅರ್ಪಣ ಧ್ವನಿಯನ್ನು ಮೆಟ್ರೋದಲ್ಲಿಯೂ ಕೇಳಬಹುದಿತ್ತು. 2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಆರಂಭ ಆದಾಗ..
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರಿಂದು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ʻಮಸಣದ ಹೂವುʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಿರಲಿಲ್ಲ. ನಟನೆ, ನಿರೂಪಣೆ, ಕಿರುತೆರೆಯಲ್ಲಿ ಅವರು ಮಿಂಚಿದ್ದರು. ಅವರಿಂದು ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ. ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣ ಧ್ವನಿಯನ್ನು ಕೇಳದವರೇ ಇಲ್ಲ. ಅಪರ್ಣ ನಿರೂಪಣೆಗೆ ನಿಂತರೆ, ನಿರರ್ಗಳವಾಗಿ ಗಂಟೆಗಟ್ಟಲೇ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು.
ಇವರ ನಿರೂಪಣೆಯ ಶೈಲಿಗೆ ಅಪ್ಪಟ ಕನ್ನಡಕ್ಕೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರ ಫೇವರಿಟ್ ನಿರೂಪಕಿ ಈಕೆ. ಅಚ್ಚಗನ್ನಡದ ನಿರೂಪಕಿ ಅಪರ್ಣ ಅವರ ಧ್ವನಿ ಕೇವಲ ನಿರೂಪಣೆಗಷ್ಟೇ ಮೀಸಲಾಗಿರಲಿಲ್ಲ. ಅರ್ಪಣ ಧ್ವನಿಯನ್ನು ಮೆಟ್ರೋದಲ್ಲಿಯೂ ಕೇಳಬಹುದಿತ್ತು. ಬೆಂಗಳೂರಿನ ನಮ್ಮ ಮೆಟ್ರೋ ಆರಂಭ ಆದಾಗ, ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವುದಕ್ಕೆ ಮೊದಲು ಇವರ ಧ್ವನಿಯನ್ನೇ ಆಯ್ಕೆ ಮಾಡಲಾಗಿತ್ತು. ನಿಜಕ್ಕೂ ಮೆಟ್ರೋಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ. ಅಷ್ಟಕ್ಕೂ ನಮ್ಮ ಮೆಟ್ರೋಗೆ ನಿರೂಪಕಿ, ನಟಿ ಅಪರ್ಣ ಅವರ ಧ್ವನಿ ಆಯ್ಕೆಯಾಗಿದ್ದೇ ಒಂದು ರೋಚಕ ಸಂಗತಿ.
ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ನಿರೂಪಕಿ ಅಪರ್ಣಾರವರ ಮನದಾಳದ ಮಾತೇನು ಗೊತ್ತಾ?
ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು. ಆಗ ಸ್ವತ: ಅಪರ್ಣ ಅವರು ಮೆಟ್ರೋದಲ್ಲಿ ತಮ್ಮದೇ ಧ್ವನಿಯನ್ನು ಕೇಳುವುದಕ್ಕೆ ಹೋಗಿದ್ದರು. ಆ ವಿಷಯವನ್ನು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬಿಎಸ್ಎನ್ಎಲ್, ಏರ್ಟೆಲ್ ಮುಂತಾದ ಸಂಸ್ಥೆಗಳಿಗೂ ಅವರು ಧ್ವನಿ ನೀಡಿದ್ದಾರೆ. ಮೆಟ್ರೋ ಮಾತ್ರವಲ್ಲ, ಟಿವಿ ಕಾರ್ಯಕ್ರಮದಲ್ಲಿ ನಿರೂಪಣೆ, ಸರ್ಕಾರಿ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳ ನಿರೂಪಣೆ, ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ, ಚಂದನ ವಾಹಿನಿಯಲ್ಲಿ ನಿರೂಪಣೆ, ಹಿನ್ನಲೆ ಧ್ವನಿ ಸೇರಿದಂತೆ ಹಲವು ರೀತಿಯಲ್ಲಿ ಅಪರ್ಣಾ ಕನ್ನಡಗಿರ ಮನೆ ಮಾತಾಗಿದ್ದರು.
1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ʻಮಸಣದ ಹೂವುʼಚಿತ್ರದಿಂದ ಅಪರ್ಣಾ ವಸ್ತಾರೆ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. ಆಕೆಯ ಧ್ವನಿಯಲ್ಲಿ ಹೊಮ್ಮುತ್ತಿದ್ದ ಕನ್ನಡ ನುಡಿಗಳು ಎಂಥವರನ್ನೂ ತಲೆದೂಗುವಂತೆ ಮಾಡುತ್ತಿತ್ತು, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಇಂದು ಚಿರಮೌನಕ್ಕೆ ಜಾರಿದೆ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ಅಪರ್ಣಾ ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ.