Asianet Suvarna News Asianet Suvarna News

BBK9 Finale; ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಔಟ್?

ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ದಿವ್ಯಾ ಉರುಡುಗ ಮನೆಯಿಂದ ಔಟ್ ಆಗಿದ್ದಾರೆ.

divya uruduga out from bigg boss kannada season 9 sgk
Author
First Published Dec 30, 2022, 5:14 PM IST

'ಬಿಗ್ ಬಾಸ್ ಕನ್ನಡ ಸೀಸನ್ 9'ಗೆ ಅದ್ದೂರಿ ತೆರೆ ಬೀಳುತ್ತಿದೆ. ಇಂದು ಮತ್ತು ನಾಳೆ (ಡಿಸೆಂಬರ್ 30, 31) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆ ವಾರದಲ್ಲಿ ಒಟ್ಟು 5 ಮಂದಿ ಸ್ಪರ್ಧಿಗಳಿದ್ದರು. ಈ 5 ಮಂದಿಯ ನಡುವೆ ಬಿಗ್ ಟ್ರೋಫಿಗಾಗಿ ಸಿಕ್ಕಾಪಟ್ಟೆ ಪೈಪೋಟಿ ಇದೆ. ಇವರಲ್ಲಿ ಬಿಗ್ ಬಾಸ್ ಯಾರು ಗೆದ್ದು ಬೀಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ವಿನ್ನರ್ ಯಾರು ಎನ್ನುವುದು ನಾಳೆ ಗೊತ್ತಾಗಲಿದೆ. ಸದ್ಯ ಬಿಗ್ ಮನೆಯಲ್ಲಿರುವ 5 ಮಂದಿಯಲ್ಲಿ ಇಬ್ಬರು ಇಂದು ಹೊರಬರುತ್ತಾರೆ. ಇನ್ನ ಮೂವರು ಉಳಿದುಕೊಳ್ಳಲಿದ್ದಾರೆ. ಸದ್ಯ ಮನೆಯಲ್ಲಿರುವ 5 ಮಂದಿ ಎಂದರೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ. 

ಈಗಾಗಲೇ ಫಿನಾಲೆ ಸಂಭ್ರಮ ಪ್ರಾರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಕೂಡ ಹಂಚಿಕೊಂಡಿದೆ. ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಸ್ಪರ್ಧಿಗಳ ಡಾನ್ಸ್ ಭರ್ಜರಿಯಾಗಿದೆ. ಈ ನಡುವೆ ಬಿಗ್ ಬಾಸ್ ಮನೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಫಿನಾಲೆವರೆಗೂ ಬಂದಿದ್ದ ದಿವ್ಯಾ ಉರುಡುಗ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ. ಹೌದು ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. 5ನ್ ಸ್ಪರ್ಧಿಯಾಗಿ ದಿವ್ಯಾ ಮನೆಯಿಂದ ಹೊರಬಂದಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕಲರ್ಸ್ ಮಾಹಿನಿ ಇನ್ನೂ ಅಧಿಕೃತಗೊಳಿಸಿಲ್ಲ. 

BBK9; ಡಬಲ್ ಸರ್ಪ್ರೈಸ್ ನೀಡಿದ ಬಿಗ್ ಬಾಸ್; ಅರವಿಂದ್ ನೋಡಿ ಅಚ್ಚರಿಯಾದ ದಿವ್ಯಾ ಉರುಡುಗ

ಅಂದಹಾಗೆ ದಿವ್ಯಾ ಉರುಡುಗ ಬಳಿಕ ದೀಪಿಕಾ ದಾಸ್ ಕೂಡ ಔಟ್ ಆಗಿದ್ದಾರೆ ಎನ್ನಲಾಗಿದೆ. 4ನೇ ಸ್ಪರ್ದಿಯಾಗಿ ದಿವ್ಯಾ ಮನೆಯಿಂದ ಹೊರನಡೆದಿದ್ದಾರಂತೆ. ದಿವ್ಯಾ ಮತ್ತು ದೀಪಿಕಾ ಇಬ್ಬರೂ ಮನೆಯಿಂದ ಹೊರ ಬಂದ ಬಳಿಕ ಇನ್ನೂ ಮನೆಯಲ್ಲಿ 3 ಸ್ಪರ್ಧಿಗಳು ಮಾತ್ರ ಇದ್ದಾರೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಮತ್ತು ರಾಕೇಶ್ ಅಡಿಗ ಬಿಗ್ ಮನೆಯಲ್ಲಿ ಇದ್ದಾರೆ. ಈ ಮೂವರಲ್ಲಿ ಬಿಗ್ ಬಾಸ್ ಟ್ರೋಫಿ ಯಾರ ಮುಡಿಗೆ ಎನ್ನುವ ಕುತೂಹಲ ಹೆಚ್ಚಾಗಿದೆ. 

ಅಸಲಿ-ನಕಲಿ ಆಟದ ನಡುವೆ ನಾನೇ ಬದಲಾಗಿರುವೆ: ಅನುಪಮಾ ಗೌಡ ವೈರಲ್ ಪೋಸ್ಟ್‌

ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಒಟಿಟಿಯಿಂದ ಪ್ರರಾಂಭವಾಗಿದ್ದು ಟಿವಿಗೆ ಎಂಟ್ರಿ ಕೊಟ್ಟಿದೆ. ಒಟಿಟಿಯಲ್ಲಿ ಗೆದ್ದ 4 ಮಂದಿಯನ್ನು ಟಿವಿ ಬಿಗ್ ಬಾಸ್‌ ಕಳುಹಿಸಲಾಗಿತ್ತು. ಒಟಿಟಿಯಿಂದ ಬಂದವರಲ್ಲಿ ಸದ್ಯ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಮನೆಯೊಳಗೆ ಇದ್ದಾರೆ. ಫಿನಾಲೆಯಲ್ಲಿ ಒಟಿಟಿಯಿಂದ ಬಂದ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇರ್ತಾರಾ ಕಾದು ನೋಡಬೇಕು. ಅಂದಹಾಗೆ ಬಿಗ್ ಬಾಸ್ ವಿನ್ನರ್ ಯಾರು ಎನ್ನುವ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ. 

Follow Us:
Download App:
  • android
  • ios