MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಸಲಿ-ನಕಲಿ ಆಟದ ನಡುವೆ ನಾನೇ ಬದಲಾಗಿರುವೆ: ಅನುಪಮಾ ಗೌಡ ವೈರಲ್ ಪೋಸ್ಟ್‌

ಅಸಲಿ-ನಕಲಿ ಆಟದ ನಡುವೆ ನಾನೇ ಬದಲಾಗಿರುವೆ: ಅನುಪಮಾ ಗೌಡ ವೈರಲ್ ಪೋಸ್ಟ್‌

ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್‌ಬಾಸ್‌ ಸೀಸನ್ 9‌ನ ಅಪ್‌ಡೇಟ್ಸ್‌ ಆಗಾಗ ವೀಕ್ಷರಿಗೆ ಸರ್ಪ್ರೈಸ್‌ ನೀಡುತ್ತದೆ. ಅದೇ ರೀತಿ ಬಿಗ್‌ ಬಾಸ್‌ 9  ((Bigg Boss Kannada) ಸ್ಟ್ರಾಂಗ್‌ ಸ್ಪರ್ಧಿ ಎಂದು ಅನಿಸಿಕೊಂಡಿದ್ದ ಅನುಪಮಾ ಗೌಡ (Anupama Gowda) ಹೊರಬಿದ್ದಾರೆ. ಈ ಸೀಸನ್‌ನ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾದ ಅನುಪಮ ಗೌಡ ಅವರು ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿರುವುದು ಫ್ಯಾನ್ಸ್‌ಗೆ ಶಾಕ್‌ ಆಗಿದೆ. ಅಂದಹಾಗೆ ಬಿಗ್‌ ಬಾಸ್‌ನಲ್ಲಿ ಅನುಪಮಾ ಗೌಡ ಅವರಿಗೆ ಇದು ಎರಡನೇ ಅವಕಾಶವಾಗಿತ್ತು.

2 Min read
Author : Suvarna News
| Updated : Dec 22 2022, 05:06 PM IST
Share this Photo Gallery
  • FB
  • TW
  • Linkdin
  • Whatsapp
19

ಬಿಗ್ ಬಾಸ್ ಸೀಸನ್ 9ರಲ್ಲಿ  ಪ್ರಮುಖ ಸ್ಪರ್ಧಿಯಾಗಿ ಮೋಡಿ ಮಾಡಿದ್ದ ಅನುಪಮಾ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ಇವರು 2017ರಲ್ಲಿ ಬಿಗ್ ಬಾಸ್ ಐದನೇ ಸೀಸನ್‌ನಲ್ಲಿ 98 ದಿನಗಳನ್ನು ಪೂರೈಸಿದರು.

29

ಹೀಗೆ ಬಿಗ್‌ ಬಾಸ್‌ನಲ್ಲಿ ಎರಡನೇ ಅವಕಾಶ ಸಿಗುವುದು ಆದೃಷ್ಟವೇ ಸರಿ ಮತ್ತು ಅನುಪಮ ಅವರು ಎರಡನೇ ಬಾರಿ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 

39

'ಈ ಋತುವಿನಲ್ಲಿ ನಾನು ಸಾಕಷ್ಟು ಬೆಳೆದಿದ್ದೇನೆ ಎಂದು ನನಗೆ ಅನಿಸುತ್ತದೆ. ಒಮ್ಮೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ನಾನು ಮನೆಯೊಳಗಿದ್ದ ಅಷ್ಟೂ ದಿನಗಳೂ ಕೋಪಗೊಳ್ಳಲಿಲ್ಲ ಅಥವಾ ಹಿಂದಿನ ಸೀಸನ್‌ನಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸಲಿಲ್ಲ. ಬಿಗ್ ಬಾಸ್‌ನಂತಹ ರಿಯಾಲಿಟಿ ಶೋನ ಭಾಗವಾಗುವುದು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನಡೆಯುವ ಸಂಗತಿ. ಅದು ನಿಮಗೆ ಎರಡನೇ ಬಾರಿಗೆ ಸಿಕ್ಕರೆ, ನೀವು ಅದು ನಮ್ಮ ಲಕ್ ಎಂದು ನಾನು ನಂಬುತ್ತೇನೆ. ನನ್ನ ಹಿಂದಿನ ಶೋನಲ್ಲಿ ನಂಗೇನೂ ಅಷ್ವು ವಿಶ್ವಾಸವಿರಲಿಲ್ಲ. ನಾನು ಹಿಂಜರಿಯುತ್ತಿದ್ದೆ. ಇತರರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂದು ಯಾವಾಗಲೂ ತಲೆ ಕೆಡಿಸಿಕೊಳ್ಳುತ್ತಿದ್ದೆ. ನಾನೂ ದುರ್ಬಲಳಾಗಿದ್ದೆ. ಆದರೆ ಈ ಸಮಯದಲ್ಲಿ, ನಾನು ಹೆಚ್ಚು ಆತ್ಮವಿಶ್ವಾಸ ಮತ್ತು ಬಲಶಾಲಿಯಾಗಿದ್ದೇನೆ' ಎಂದು ಹೇಳಿದ್ದರು. 

49

ಅನುಪಮಾ ಗೌಡ ಈ ಸೀಸನ್‌ನಲ್ಲಿ ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಈಗ 13ನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ 85 ದಿನಗಳನ್ನು ಕಳೆದರು ಮತ್ತು ಕಳೆದ ವಾರವಷ್ಟೇ ಆಟದಿಂದ ಹೊರಬಿದ್ದಿದ್ದಾರೆ. 

59

ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ನಂತರ ಅನುಪಮ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮಲ್ಲರ ಪ್ರೀತಿ ಬಿಗ್‌ ಬಾಸ್‌ ಗೆದ್ದಷ್ಟೇ ಸಂತೋಷ ನೀಡಿದೆ ಎಂದು ತಮ್ಮ ಕೆಲವು ಫೋಟೋಗಳ ಜೊತೆ ಇನ್‌ಸ್ಟ್ರಾಮ್‌ನಲ್ಲಿ ಅನುಪಮಾ ಒಂದು ಪೋಸ್ಟ್ ಅನ್ನು ಹಾಕಿದ್ದಾರೆ. 

69

2003ರಲ್ಲಿ ಲಂಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅನುಪಮಾ ಅವರು 2015ರ ನಗಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

79

ಸಿನಿಮಾದಲ್ಲಿ ನಾಯಕಿಯಾಗುವ ಮೊದಲು ಅನುಪಮಾ ಅವರು ಅವರು ಹಳ್ಳಿ ದುನಿಯಾ ಎಂಬ ರಿಯಾಲಿಟಿ ಶೋ (Reality Show) ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಅವರು ಬಿಗ್ ಬಾಸ್ ಕನ್ನಡದ ಐದನೇ ಸೀಸನ್‌ ಮೂಲಕ ಮನೆ ಮಾತಾದರು.

89

ಕನ್ನಡ ಕೋಗಿಲೆ, ರಾಜ-ರಾಣಿ, ಮಜಾ ಭಾರತ ಮುಂತಾದ ಶೋಗಳಲ್ಲಿ ನಿರೂಪಕಿಯಾಗಿಯೂ ಸೈ ಅನಿಸಿಕೊಂಡಿರುವ ಇವರು ಚಿ ಸೌ ಸಾವಿತ್ರಿ ಮತ್ತು ಅಕ್ಕ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ.

99

ಆ ಕರಾಳ ರಾತ್ರಿ, ತ್ರಯಂಬಕಂ, ಪುಟ 109  ಮತ್ತು ಬೆಂಕಿಯಲ್ಲಿ ಆರಳಿದ ಹೂವು ಸೇರಿದಂತೆ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಅನುಪಮ ಗೌಡ ಭಾಗವಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಅನುಪಮಾ ಗೌಡ

Latest Videos
Recommended Stories
Recommended image1
Karna Serial: ಆಸ್ಪತ್ರೆ ಸೀಜ್​! ನಿತ್ಯಾಗೆ ಹೊಟ್ಟೆ ಬಂದಿದ್ರೆ ಹೀಗೆ ಆಗ್ತಿರಲಿಲ್ಲ ಎನ್ನೋದಾ ನೆಟ್ಟಿಗರು?
Recommended image2
ಡ್ಯಾನ್ಸರ್ ಸತ್ಯಭಾಮಾಗೆ ಕೆಟ್ಟ ಚಾಳಿ: ನಾಯಿ ಸಾಕೋದು ತಮ್ಮನೇಲಿ, ಆದ್ರೆ ಕಕ್ಕ ಮಾಡಿಸೋದು ಪಕ್ಕದ ಮನೇಲಿ!
Recommended image3
Sanya Iyer: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಬೋಲ್ಡ್ ಫೋಟೋಸ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved