Asianet Suvarna News Asianet Suvarna News

BBK9; ಡಬಲ್ ಸರ್ಪ್ರೈಸ್ ನೀಡಿದ ಬಿಗ್ ಬಾಸ್; ಅರವಿಂದ್ ನೋಡಿ ಅಚ್ಚರಿಯಾದ ದಿವ್ಯಾ ಉರುಡುಗ

ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಅರವಿಂದ್ ಕೆಪಿ ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ನೋಡಿ ದಿವ್ಯಾ ಅಚ್ಚರಿ ಪಡಿಸಿದ್ದಾರೆ. 

Divya Uruduga happy after aravind kp enters to bigg boss kannada season 9 sgk
Author
First Published Dec 28, 2022, 10:28 AM IST

'ಬಿಗ್ ಬಾಸ್ ಕನ್ನಡ ಸೀಸನ್ 9' ಫಿನಾಲೆ ವಾರಕ್ಕೆ ಕಾಲಿಟ್ಟಿದೆ.  ಈ ಬಾರಿಯ ಬಿಗ್ ಬಾಸ್ ಯಾರು ಗೆದ್ದು ಬೀಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸ್ಪರ್ಧಿಗಳಲ್ಲೂ ಆತಂಕ ಹೆಚ್ಚಾಗಿದೆ. ಈ ನಡುವೆ ಬಿಗ್ ಬಾಸ್ ಸರ್ಪ್ರೈಸ್ ನೀಡುವ ಮೂಲಕ ಸ್ಪರ್ಧಿಗಳನ್ನು ಸಂತಸ ಪಡಿಸುತ್ತಿದೆ. ಇತ್ತೀಚಿಗಷ್ಟೆ ದಿವ್ಯಾ ಉರುಡುಗ ಬಿಗ್ ಬಾಸ್‌ಗೆ ಒಂದು ಮನವಿ ಮಾಡಿದ್ದರು. ಅರವಿಂದ್ ಕೆಪಿ ಅವರನ್ನು ಮನೆಯೊಳಗೆ ಕಳುಹಿಸಿ ಎಂದು ಕೇಳಿಕೊಂಡಿದ್ದರು. ದಿವ್ಯಾ ಆಸೆಯಂತೆ ಅರವಿಂದ್ ಕೆಪಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ಅರವಿಂದ್ ನೋಡಿ ದಿವ್ಯಾ ಅಚ್ಚರಿ ಪಟ್ಟಿದ್ದಾರೆ. 

ಬಿಗ್ ಬಾಸ್ ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಒಂದೊಂದು ಆಸೆ ಈಡೇರಿಸುವುದಾಗಿ ಹೇಳಿದ್ದರು. ಆಗ ದಿವ್ಯಾ ಉರುಡುಗ ಅರವಿಂದ್ ಮನೆ ಒಳಗೆ ಬರಲಿ ಎಂದು ಕೇಳಿಕೊಂಡಿದ್ದರು. ಇನ್ನೂ ರೂಪೇಶ್ ಶೆಟ್ಟಿ ಹುಲಿ ಕುಣಿತ ನೋಡಬೇಕೆಂದು ಹೇಳಿದ್ದರು. ಇಬ್ಬರ ಆಸೆಯನ್ನು ಬಿಗ್ ಬಾಸ್ ಈಡೇರಿಸಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿದ್ದು ಹುಲಿ ಕುಣಿತ ಮಾಡುವವರು ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಅರವಿಂದ್ ಕೆಪಿ ಬಂದರು. ಹುಲಿ ಮುಖವಾಡ ಹಾಕಿ ಮನೆಯೊಳಗೆ ಎಂಟ್ರಿ ಕೊಟ್ಟರು. ಅರವಿಂದ್ ನೋಡಿ ದಿವ್ಯಾ ಸಖತ್ ಎಗ್ಸಾಯಿಟ್ ಆದರು. ಬಳಿಕ ಅರವಿಂದ್ ಅವರನ್ನು ತಬ್ಬಿಕೊಂಡು ಸಂತಸ ಪಟ್ಟರು. 

BBK9; ರಾತ್ರೋರಾತ್ರಿ ಎಲಿಮಿನೇಷನ್‌ಗೆ ಬೆಚ್ಚಿಬಿದ್ದ ಸ್ಪರ್ಧಿಗಳು, ಮನೆಯಿಂದ ಹೊರ ಹೋಗಿದ್ದು ಯಾರು?

ಅರವಿಂದ್‌ ಬಂದ ಖುಷಿಗೆ ದಿವ್ಯಾ ಹಾಡನ್ನು ಬರೆದು ಹಾಡಿದರು. ದಿವ್ಯಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು, ನಿಮ್ಮ ಬಗ್ಗೆ ಯಾವಾಗಲೂ ಹೇಳುತ್ತಿದ್ದರು ಎಂದು ರೂಪೇಶ್ ಶೆಟ್ಟಿ ವಿವರಿಸಿದರು. ದಿವ್ಯಾ ಅನೇಕ ಬಾರಿ ಅರವಿಂದ್ ಬಗ್ಗೆ ಸಹ ಸ್ಪರ್ಧಿಗಳಿಗೆ ಹೇಳುತ್ತಿದ್ದರು ಸದ್ಯ ರಿಲೀಸ್ ಆಗಿರುವ ಪ್ರೋಮೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅರುಣ್ ಸಾಗರ್; ಮತ್ತೊಂದು ಬಿಗ್ ಶಾಕ್

ಅಂದಹಾಗೆ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಇಬ್ಬರೂ 'ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಪರಚಿತರಾದವರು. ಬಿಗ್ ಮನೆಯಲ್ಲಿ ಇಬ್ಬರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯಿತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು. ಈ ಬಗ್ಗೆ ಇಬ್ಬರೂ ಅನೇಕ ಬಾರಿ ಪರೋಕ್ಷವಾಗಿ ಹೇಳಿಕೊಂಡಿದ್ದಿದೆ. ಈ ಬಾರಿಯ‘ಬಿಗ್ ಬಾಸ್ ನಲ್ಲಿ ದಿವ್ಯಾ ಮಾತ್ರ ಎಂಟ್ರಿ ಕೊಟ್ಟಿದರು. ಆದರೆ ದಿವ್ಯಾ ಅವರನ್ನು ಮನೆಯೊಳಗೆ ಕಳುಹಿಸಲು ಅರವಿಂದ್ ಕೂಡ ಬಂದಿದ್ದರು. ಇದೀಗ ಬಿಗ್ ಮನೆಗೆ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
 

Follow Us:
Download App:
  • android
  • ios