Asianet Suvarna News Asianet Suvarna News

BBK9; ರಾತ್ರೋರಾತ್ರಿ ಎಲಿಮಿನೇಷನ್‌ಗೆ ಬೆಚ್ಚಿಬಿದ್ದ ಸ್ಪರ್ಧಿಗಳು, ಮನೆಯಿಂದ ಹೊರ ಹೋಗಿದ್ದು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕೊನೆಯವಾರ ಬಿಗ್ ಬಾಸ್ ಮನೆಯಲ್ಲಿ 6 ಮಂದಿ ಇದ್ದಾರೆ. ಫಿನಾಲೆ ದಿನಕ್ಕೆ ಕೇವಲ 5 ಮಂದಿಗೆ ಮಾತ್ರ ಎಂಟ್ರಿ. ಸದ್ಯ ಮಿಡ್‌ನೈಟ್ ಎಲಿಮಿನೇಷನ್ ಆಗಿದ್ದು ಮನೆಯಿಂದ ಹೊರ ಹೋಗಿದ್ದು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. 

contestants to face midnight eviction in Bigg Boss Kannada season 9 sgk
Author
First Published Dec 27, 2022, 4:19 PM IST

ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕೊನೆಯವಾರ ಬಿಗ್ ಬಾಸ್ ಮನೆಯಲ್ಲಿ 6 ಮಂದಿ ಇದ್ದಾರೆ. ಫಿನಾಲೆ ದಿನಕ್ಕೆ ಕೇವಲ 5 ಮಂದಿಗೆ ಮಾತ್ರ ಎಂಟ್ರಿ. ಹಾಗಾಗಿ ಈ ವಾರ ಮನೆಯಿಂದ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ದಿಢೀರ್ ಎಲಿಮಿನೇಷನ್ ಮಾಡಲಾಗಿದೆ. ಮಿಡಿ ನೈಟ್ ಎಲಿಮಿನೇಷನ್‌ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಒಟ್ಟು 6 ಜನರಲ್ಲಿ ಒಬ್ಬರು ಮನೆಯಿಂದ ಹೊರನಡೆದಿದ್ದಾರೆ. ಸದ್ಯ ಈ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ.  ಇಂದು (ಡಿಸೆಂಬರ್ 27) ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಕಳೆದ ವಾರಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದರು. ವಾರಾಂತ್ಯಕ್ಕೆ ಇಬ್ಬರು ಮನೆಯಿಂದ ಹೊರನಡೆದಿದ್ದಾರೆ. ಶನಿವಾರ (ಡಿಸೆಂಬರ್ 24) ಹಾಗೂ ಭಾನುವಾರ (ಡಿಸೆಂಬರ್ 25) ಎಲಿಮಿನೇಷನ್ ನಡೆದಿತ್ತು. ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ಇಬ್ಬರು ಮನೆಯಿಂದ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಒಬ್ಬರು ಮನೆಯಿಂದ ಹೊರ ಹೋಗುವ ಮೂಲಕ ಮನೆಯಲ್ಲಿ 5 ಮಂದಿ ಮಾತ್ರ ಉಳಿದಿದ್ದಾರೆ. 

ಅಂದಹಾಗೆ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಮನೆಯಿಂದ ಹೊರ ಹೋಗುವುದು ಯಾರು ಎನ್ನುವ ಆತಂಕ ಮುಖದಲ್ಲಿ ಕಾಣುತ್ತಿದೆ. ಎಲ್ಲರೂ ಭಯದಲ್ಲೇ ಭಾಗಿಯಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಕ್ರೇನ್‌ನಲ್ಲಿ ನಿಂತು ಕೊಳ್ಳಬೇಕು. ಕ್ರೇನ್ ಕೆಳಗೆ ಹೋಗಿ ಮೇಲೆ ಬರುತ್ತೆ. ಯಾವ ಸ್ಪರ್ಧಿ ಕಾಣುವುದಿಲ್ಲವೊ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದರ್ಥ. ಎಲಿಮಿನೇಷನ್ ಸಮಯದಲ್ಲಿ ಆರ್ಯವರ್ಧನ್ ಜೋರಾಗಿ ಅಳುತ್ತಿದ್ದಾರೆ.  

ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅರುಣ್ ಸಾಗರ್; ಮತ್ತೊಂದು ಬಿಗ್ ಶಾಕ್

ಸದ್ಯ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಇದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಬಂದಿದ್ದಾರೆ ಎನ್ನುವ ಕಾತರ ಹೆಚ್ಚಾಗಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ. ರೂಪೇಶ್ ಶೆಟ್ಟಿ ಹೆಸರು ಕೂಡ ಕೇಳಿಬರುತ್ತಿದೆ. ಆರ್ಯವರ್ಧನ್ ಅಥವಾ ರೂಪೇಶ್ ಶೆಟ್ಟಿ ಇಬ್ಬರಲ್ಲಿ ಒಬ್ಬರೂ ಮನೆಯಿಂದ ಹೊರಹೋಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಪಾಪ-ಮಮ್ಮ ಅನ್ಕೊಂಡು ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅಮೂಲ್ಯ ಗೌಡ

ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಒಟಿಟಿಯಿಂದ ಪ್ರರಾಂಭವಾಗಿದೆ ಟಿವಿಗೆ ಎಂಟ್ರಿ ಕೊಟ್ಟಿದೆ. ಒಟಿಟಿಯಲ್ಲಿ ಗೆದ್ದ 4 ಮಂದಿಯನ್ನು ಟಿವಿ ಬಿಗ್ ಬಾಸ್‌ ಕಳುಹಿಸಲಾಗಿತ್ತು. ಒಟಿಟಿಯಿಂದ ಬಂದವರಲ್ಲಿ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಇದ್ದಾರೆ. ಸದ್ಯ ಫಿನಾಲೆ ವಾರಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಸದ್ಯ ಉಳಿದ ಐದು ಮಂದಿಯಲ್ಲಿ ಬಿಗ್ ಬಾಸ್ ಸೀಸನ್ 9 ಪಟ್ಟ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.  

Follow Us:
Download App:
  • android
  • ios