ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಒಂದು ಕೆಲಸನಾ? ಟ್ರೋಲಿಗರಿಗೆ ಉತ್ತರ ಕೊಟ್ಟ ದಿಶಾ ಮದನ್.
ಡ್ಯಾನ್ಸ್ ರಿಯಾಲಿಟಿ ಶೋ ಮತ್ತು ಕುಲವಧು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜನರಿಗೆ ಪರಿಚಯವಾದ ದಿಶಾ ಮದನ್ ಇಂದು ಜನಪ್ರಿಯ Influencer. ವಿಭಿನ್ನ ವಿಡಿಯೋಗಳ ಮೂಲಕ ಜನರಿಗೆ ಮನೋರಂಜನೆ ನೀಡುವ ನಟಿ ಟ್ರೋಲ್ ಮತ್ತು ಓವರ್ ನೈಟ್ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.
'ಕೆಲವರು ನಾನು ಓವರ್ ನೈಟ್ ಸಕ್ಸಸ್ ಅಂದುಕೊಳ್ಳುತ್ತಾರೆ ಕೆಲವರು ಇದು ಸಕ್ಸಸ್ ಎನ್ನುತ್ತಾರೆ. ಇಂಟರ್‌ನೆಟ್‌ನಲ್ಲಿ ನಾನು ಪೋಸ್ಟ್ ಮಾಡಿದಾಗ ಹಲವರು ಹೇಳುತ್ತಾರೆ ವಾವ್ ಏನ್ ಟ್ಯಾಲೆಂಟ್ ಇದೆ ಎಂದು. ಜನ ಅಂದುಕೊಳ್ಳುತ್ತಾರೆ ಇದೂ ಒಂದು ಯಶಸ್ಸಾ ಎಂದು. 15 ಸೆಕೆಂಡ್ ವಿಡಿಯೋ ಮಾಡೋದು ಏನ್ ಸಕ್ಸಸ್?' ಎಂದು ಜೋಶ್ ಟಾಕ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಫ್ಯಾಮಿಲಿ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್; ಹಾಟ್ ಲುಕ್‌ಗೆ ಕಾಲೆಳೆದ ನೆಟ್ಟಿಗರು
'2019ರಲ್ಲಿ ನನ್ನ ಲೈಫ್‌ನಲ್ಲಿ ತುಂಬಾ ಘಟನೆಗಳು ನಡೆಯಿತ್ತು ಅದರಲ್ಲಿ ಮುಖ್ಯವಾದದ್ದು ನಾನು ಸೋಷಿಯಲ್ ಮಿಡಿಯಾ ಕ್ಲೆನ್ಸ್ ಮಾಡಿದ್ದು. ನಾನು 2019ಗಿಂತ ಮುಂಚೆ ಪೋಸ್ಟ್ ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದೆ. ಇದರಲ್ಲಿ ಅತಿ ಹೆಚ್ಚು ವೀಕ್ಷಣೆ, ವೈರಲ್ ಆದ ವಿಡಿಯೋ ಮತ್ತು ಕಾಮೆಂಟ್ ಬಂದ ವಿಡಿಯೋಗಳಿತ್ತು. ಹೊಸದಾಗಿ ಆರಂಭಿಸಬೇಕು ಎಂದು ಕಷ್ಟ ಪಟ್ಟೆ. ಮೆಂಟಲ್ ಬ್ರೇಕ್ ಡೌನ್ ಅಗಿತ್ತು, ಸೋಷಿಯಲ್ ಮೀಡಿಯಾ ಓಪನ್ ಮಾಡಿದಾಗ ತುಂಬಾ ಕೋಪ ಬರುತ್ತಿತ್ತು ಬೇಸರ ಆಗುತ್ತಿತ್ತು ಸುಮ್ಮನೆ ಅಳುತ್ತಿದ್ದೆ. ಯಾಕೆ ಅಳುತ್ತಿದೆ ಎಂದು ನನಗೆ ಗೊತ್ತಿರಲಿಲ್ಲ. ಮೆಂಟಲ್ ಸೆಲ್ಫ್ ಬ್ರೇಕ್ ತೆಗೆದುಕೊಂಡೆ ಅದೇ ಸಮಯಕ್ಕೆ ನಾನು ಪ್ರೆಗ್ನೆಂಟ್ ಆದೆ. ಹಾರ್ಮೋನ್ ಬದಲಾವಣೆ ಎಂದು ದೂರು ಹೇಳಬಹುದಿತ್ತು ಆದರೆ ಸತ್ಯ ಬೇರೆನೇ ಇತ್ತು. ಎಲ್ಲದನ್ನೂ ಡಿಲೀಟ್ ಮಾಡಿ ಬ್ರೇಕ್ ತೆಗೆದುಕೊಂಡು ಒಳ್ಳೆ ಆಹಾರ ದಿನಚರಿಯಲ್ಲಿ ತೊಡಗಿಸಿಕೊಂಡೆ. ಡಿಲೀಟ್ ಮಾಡಿದಾಗ ಹಲವರು ಬಂದು ಡಿಪ್ರೆಶನ್‌ಗೆ ಜಾರಿದ್ದೀರಾ ಎಂದು ಕೇಳಿದ್ದರು. ವೈದ್ಯರ ಸಂಪರ್ಕ ಬೇಕಾ? ಎನ್ನುತ್ತಿದ್ದರು. ಟ್ರೋಲ್ ಮಾಡುವುದು ಹೆಚ್ಚಿಗೆ ನಡೆಯುತ್ತಿತ್ತು. ದೊಡ್ಡ ಬ್ರೇಕ್ ನಂತರ ಕಮ್ ಬ್ಯಾಕ್ ಮಾಡಿದೆ. ಈ ಬ್ರೇಕ್‌ನಲ್ಲಿ ಸೆಲ್ಫ್ ಲವ್ ಬಗ್ಗೆ ತಿಳಿದುಕೊಂಡೆ.' ಎಂದು ದಿಶಾ ಹೇಳಿದ್ದಾರೆ.
ಮದುವೆ ಮುನ್ನ ಕುಡ್ದಿದ್ದಕ್ಕೆ ಗಂಡ-ಭಾವ ರೂಮ್‌ಗೆ ಎತ್ಕೊಂಡ್ ಹೋದ್ರು: ದಿಶಾ ಮದನ್ ಶಾಕಿಂಗ್ ಹೇಳಿಕೆ
'ನಾನು ಎಲ್ಲೇ ಹೋದರೂ ಜನರು ನನ್ನನ್ನು ಒಂದೇ ರೀತಿಯಲ್ಲಿ ಗುರುತಿಸುತ್ತಿದ್ದರು ನೀವು ಆ ಟಿಕ್‌ಟಾಕ್ ಹುಡುಗಿನಾ ಎಂದು. 15 ಸೆಕೆಂಡ್ ಮಾಡುವುದರಿಂದ ನಾನು ಫೇಮಸ್ ಆಗಿದ್ದು ನಿಜ ಆದರೆ ಬರೀ ಟಿಕ್‌ಟಾಕ್ ಹುಡುಗಿ ಮಾತ್ರವಲ್ಲ ಎಂದು ಜನರಿಗೆ ಅರ್ಥ ಮಾಡಿಸಬೇಕಿತ್ತು. ಜನರ ಅಭಿಪ್ರಾಯ ನಮಗೆ ಮುಖ್ಯವಾಗುತ್ತದೆ. ಅವರು ಹೇಳುವ ಮಾತುಗಳಿಂದ ನಾವು ಬೆಳೆಯಬೇಕು ಬದಲಿಗೆ ಹೆದರಿಕೊಂಡು ಮನೆಯಲ್ಲಿ ಕೂರಬಾರದು. ಒಂದು ವಿಡಿಯೋ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕು ಅಂದಾಗ ಜನರು ಏನೆಂದುಕೊಳ್ಳುತ್ತಾರೆ ಅಂತ ಒಮ್ಮೆ ಯೊಚನೆ ಮಾಡಿದ್ದರೆ ಲೈಫಲ್ಲಿ ಒಂದು ಪೋಸ್ಟ್ ಕೂಡ ಹಾಕಲ್ಲ ಆದರೆ ನಮ್ಮ ಮೇಲೆ ನಾವು ಹೆಚ್ಚಿಗೆ ನಂಬಿಕೆ ಇಟ್ಟು ಧೈರ್ಯದಿಂದ ಕೆಲಸ ಮಾಡಬೇಕು. ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗ ಜನರು ಕೇಳುತ್ತಾರೆ ಇದೂ ಒಂದು ವೃತ್ತಿನಾ? ಇಲ್ಲ ಏನು ಕೆಲಸ ಮಾಡುತ್ತಿದ್ದೀರಾ ಇದು ಒಂದು ಕೆಲಸನಾ? ಬೇರೆ ಏನೋ ಮಾಡಿಕೊಂಡು ವಿಡಿಯೋ ಮಾಡೋದಾ ಎನ್ನುತ್ತಾರೆ. ಜನರಿಗೆ ಈಗಲ್ಲೂ ಸೋಷಿಯಲ್ ಮೀಡಿಯಾದ ಬಗ್ಗೆ ಅರ್ಥ ಮಾಡಿಸುವುದು ತುಂಬಾ ಕಷ್ಟ. ಜನರು ಏನೇ ಹೇಳಿದ್ದರು ಅದನ್ನು ಪಾಸಿಟಿವ್ ಆಗಿ ಸ್ವೀಕರಿಸಿ ಸಾಧನೆ ಮಾಡಬೇಕು' ಎಂದಿದ್ದಾರೆ ದಿಶಾ.
