ಇತ್ತೀಚಿನ ದಿನಗಳಲ್ಲಿ ಹಲವು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಕಾಂಟ್ರವರ್ಸಿ ಮತ್ತು ಕಾಮಿಡಿ ಮಾಡುತ್ತಿರುವ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಕಿರುತೆರೆಗೆ ಬಂದಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನಟಿಯೊಂದಿಗೆ ಕಾಡಿನಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟರೂ ಆಗಿರುವ ಓಂ ಪ್ರಕಾಶ್ ರಾವ್ ಅವರು ಶೂಟಿಂಗ್ ಲೊಕೇಶನ್ ನೋಡಲು ನಟಿಯನ್ನು ಕರೆದುಕೊಂಡು ಹೋದಾಗ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ದಟ್ಟ ಕಾಡಿನಲ್ಲಿ ಕಾರು ನಿಲ್ಲಿಸಿದಾಗ ನಟಿ ಕೇಳಿದ್ದನ್ನು ಹೇಗೆ ಪೂರೈಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕ್ಲಾಟ್ಲೆ ಕಿಚನ್‌ಗೆ ಹೇಗೆ ಸೆಲೆಕ್ಟ್ ಆದರು ಎಂಬುದನ್ನು ಹೇಳುತ್ತಾ, ನಟಿಯೊಂದಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ನಮ್ಮ ಸಿನಿಮಾ ಹೀರೋಯಿನ್ ಜೊತೆಗೆ ಲೊಕೇಶನ್ ನೋಡೋದಕ್ಕೆ ಹೋಗಿದ್ದೆವು. ಅವರು ನನ್ನನ್ನ ಸುಬ್ಬ ಎಂದು ಕರೆಯುತ್ತಿದ್ದರು. ನಾನು ಅವರಿಗೆ ಸುಬ್ಬಲಕ್ಷ್ಮಿ ಎಂದು ಹೆಸರಿಟ್ಟಿದ್ದೇನೆ. ಕುದುರೆಮುಖ ರೋಡಲ್ಲಿ ಹೋಗುವಾಗ ಕಾಡಿನ ಮಧ್ಯದಲ್ಲಿ ಕಾರ್ಕಳದಲ್ಲಿ ಕಾರು ನಿಲ್ಲಿಸಿದ್ದೆವು. ಆಗ ನನಗೆ ತುಂಬಾ ಹೊಟ್ಟೆ ಹಸಿವು ಎಂದು ಹೇಳಿದರು. ಸುಮ್ಮನಿರು ನೀನು ನನ್ನ ತಲೇನೂ ತಿನ್ನಬೇಡ, ನನ್ನನ್ನೂ ತಿನ್ನಬೇಡ. ನಿನಗೆ ರೆಡಿ ಮಾಡಿರೋ ಹೊಟ್ಟೆ ತುಂಬಾ ಊಟ ಬೇಕು ಅಲ್ವಾ ಅಡುಗೆ ಮಾಡಿಕೊಡ್ತೇನೆ ಸುಮ್ಮನಿರು ಎಂದು ಹೇಳಿದೆ.
ಸ್ಥಳದಲ್ಲೇ ಸಿದ್ಧವಾಯಿತು ಹಲಸಿನ ಹಣ್ಣಿನ ಬರ್ಫಿ!
ಆಗ ನಾನು ಅಡುಗೆ ಮಾಡೋದಕ್ಕೆ ಏನಾದರೂ ಸಿಗುತ್ತಾ ಎಂದು ನೋಡಿದಾಗ ಒಲೆ ಹಚ್ಚೋಕೆ ಸೌದೆಗಳು ಸಿಕ್ಕವು. ಹಳ್ಳೀಲಿ ಅವರರಿವರ ಮನೆಯಲ್ಲಿ ಹೋಗಿ ಬೆಲ್ಲ ಹಾಗೂ ಹಲಸಿನ ಹಣ್ಣು ಕೊಯ್ದಿದ್ದರು ಅದನ್ನ ಇಸ್ಕೊಂಡು ಬಂದೆ. ಜೊತೆಗೆ ಒಂದಷ್ಟು ತೆಂಗಿನಕಾಯಿ ತೆಗೆದುಕೊಂಡು ಬಂದೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿ ಒಂದು ಹಂಚು ಇಸ್ಕೊಂಡು ಒಲೆ ಸಿದ್ಧಪಡಿಸಿ ಸೌದೆಗೆ ಬೆಂಕಿಹಚ್ಚಿ ಹಲಸಿನ ಹಣ್ಣಿನ ಬರ್ಫಿಯನ್ನು ಮಾಡಿಕೊಟ್ಟೆ. ಅದು ಸುಬ್ಬಲಕ್ಷ್ಮಿಗೆ ತುಂಬಾ ಇಷ್ಟ ಆಯ್ತು. ಅದನ್ನು ತಿಂದು ನಾನೂ ತಿಂದು ಖುಷಿಪಟ್ಟಿದ್ದೆ. ನಾನು ಈಗ ಅದನ್ನೇ ಕ್ಲಾಟ್ಲೆ ಕಿಚನ್‌ನಲ್ಲಿ ಮಾಡಬೇಕು ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದರು.
ತರಹೇವಾರಿ ಅಡುಗೆ ಮಾಡುವ ನಳಪಾಕ
ನಾನು ಎಲ್ಲಾರ ಜೊತೆಗೆ ಹೋಗಿಲ್ಲ. ಒಂದಿಬ್ಬರ ಜೊತೆಗೆ ಲೊಕೇಶನ್ ನೋಡಲು ಹೋದಾಗ ಈ ತರಹದ ಅಡುಗೆ ಮಾಡಿದ್ದೇನೆ. ಇನ್ನು ಉಪ್ಪಿಟ್ಟು, ದೋಸೆ, ಪೂರಿ, ಚಟ್ನಿ, ಗಸಗಸೆ ಪಾಯಸ ಮಾಡ್ತೇನೆ. ದೋಸೆ ಹಿಟ್ಟಿಗೆ ಅಕ್ಕಿ, ಉದ್ದಿನಬೇಳೆ ಹಾಕಿ ಸ್ವಲ್ಪ ಒಗ್ಗರಣೆ ಹಾಕಿಕೊಳ್ಳಬಹುದು. ನಾನು ಮೊಟ್ಟೆ ದೋಸೆ ತಿನ್ನಲು ಇಷ್ಟಪಡ್ತೇನೆ ಎಂದು ತಮಗೆ ಸಿದ್ಧಿಸಿರುವ ಅಡುಗೆ ಕಲೆಯನ್ನು ತಿಳಿಸಿದರು.


