ಈ ಬಾರಿ ಯಾಕೆ Majaa Takies ಶೋಗೆ ಬರ್ಲಿಲ್ಲ? ಕೊನೆಗೂ ಮೌನ ಮುರಿದ 'ಇಜಿಲಾ' ಇಂದ್ರಜಿತ್ ಲಂಕೇಶ್!
ಐದು ವರ್ಷಗಳ ಬಳಿಕ ‘ಮಜಾ ಟಾಕೀಸ್’ ಶೋ ಎರಡನೇ ಸೀಸನ್ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ಕೆಲ ಕಲಾವಿದರು ಗೈರಾಗಿದ್ದಾರೆ. ನಿರ್ದೇಶಕ ಇಂದ್ರಜಿತ್ ಅವರು ಯಾಕೆ ಈ ಸೀಸನ್‌ನಲ್ಲಿ ಕಾಣಿಸ್ತಿಲ್ಲ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

6 ವರ್ಷಗಳ ಕಾಲ 600ಕ್ಕೂ ಅಧಿಕ ಎಪಿಸೋಡ್ ಪ್ರಸಾರ ಆಗಿದ್ದ ‘ಮಜಾ ಟಾಕೀಸ್’ ಶೋನಲ್ಲಿ ಈ ಬಾರಿ ಶ್ವೇತಾ ಚೆಂಗಪ್ಪ, ಅಪರ್ಣಾ ವಸ್ತಾರೆ, ಇಂದ್ರಜಿತ್ ಲಂಕೇಶ್ ಅನುಪಸ್ಥಿತಿ ಕಾಡ್ತಿದೆ. ಐದು ವರ್ಷಗಳ ಗ್ಯಾಪ್ ಬಳಿಕ ಈ ಕಾಮಿಡಿ ಶೋ ಪ್ರಸಾರ ಆಗ್ತಿದೆ. ಇಂದ್ರಜಿತ್ ಲಂಕೇಶ್ ಅವರು ಯಾಕೆ ಈ ಸೀಸನ್‌ನಲ್ಲಿ ಭಾಗವಹಿಸಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಕಳೆದ ಸೀಸನ್‌ನಲ್ಲಿ ಯಾರಿದ್ರು?
ಹೌದು, ಈ ಶೋನ ಆರಂಭದಲ್ಲಿ ಅಪರ್ಣಾ ವಸ್ತಾರೆ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ಇಂದ್ರಜಿತ್ ಲಂಕೇಶ್, ರೆಮೋ, ಮಂಡ್ಯ ರಮೇಶ್ ಮುಂತಾದವರು ಭಾಗವಹಿಸಿದ್ದರು. ಆದರೆ ಈ ಬಾರಿ ಶ್ವೇತಾ ಚೆಂಗಪ್ಪ, ಇಂದ್ರಜಿತ್ ಲಂಕೇಶ್, ಮಂಡ್ಯ ರಮೇಶ್ ಅವರು ಇದರಿಂದ ಹೊರಗಡೆಯಿದ್ದಾರೆ. ಈ ಬಗ್ಗೆ ಇಂದ್ರಜಿತ್ ಅವರು ವಿವಿಧ ಖಾಸಗಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬೆಳ್ಳಿ ಕೊಳ್ಳಲು ದುಡ್ಡಿಲ್ಲದೇ ಗೋವಾದಲ್ಲಿ ಕಳ್ಳತನ ಮಾಡಿದ ನಟಿ ಸೋನು ಗೌಡ!
ಇಂದ್ರಜಿತ್ ಲಂಕೇಶ್ ಏನಂದ್ರು?
“ಮಜಾ ಟಾಕೀಸ್ ಶೋಗೆ ಯಾಕೆ ಬರ್ತಿಲ್ಲ? ನೀವು ಯಾಕೆ ಬಿಟ್ರಿ? ನೀವಿದ್ರೆ ನಗು ಇರ್ತಿತ್ತು, ವಿಡಂಬನೆ ಇರ್ತಿತ್ತು ಅಂತ ಅನೇಕರು ಕೇಳುತ್ತಿದ್ದಾರೆ. ಹೌದು, ಆ ಶೋನಲ್ಲಿ ನಾನಿದ್ದೆ, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ಅಪರ್ಣಾ, ರೆಮೋ, ಸೃಜನ್ ಲೋಕೇಶ್ ಇದ್ದರು. 600 ಎಪಿಸೋಡ್ ಪ್ರಸಾರ ಆಯ್ತು. ನಂ ಒನ್ ಟಿಆರ್‌ಪಿ ಕೊಟ್ಟಿದ್ದ ಶೋ ಆಗಿತ್ತು. ಅದ್ಭುತವಾದ ಹಿಟ್ ಆಯ್ತು, ಮನೆ ಮನೆ ತಲುಪಿತು. ಈ ಯಶಸ್ಸಿನ ನಡುವೆ ನಾನು ಬ್ರೇಕ್ ತಗೊಂಡು ಎರಡು ಸಿನಿಮಾ ಮಾಡಿದೆ. ಆಗಲೇ ತುಂಬ ಕಷ್ಟ ಆಗ್ತಿತ್ತು. ಸಿನಿಮಾ ನಿರ್ದೇಶಕನಾಗಿ ಪ್ರತಿಯೊಂದು ಹಂತದಲ್ಲಿ ನಾನು ಉಪಸ್ಥಿತಿ ಇರಬೇಕಾಗುತ್ತದೆ” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿಕೆ ನೀಡಿದ್ದಾರೆ.
“ಸಿನಿಮಾ ನಿರ್ದೇಶಕ ಅಂದ್ಮೇಲೆ ಆಕ್ಷನ್ ಕಟ್ ಹೇಳಬೇಕು. ಆರು ವರ್ಷ ಬ್ರೇಕ್ ಇಲ್ಲದೆ ಮಾಡಿದಂತಹ ಕಾರ್ಯಕ್ರಮ ಅದು. ಈ ಬಾರಿಯ ಮಜಾ ಟಾಕೀಸ್ ಶೋಗೂ ನನ್ನ ಕರೆದರು, ಆದರೆ ನನಗೆ ಆಗುತ್ತಿಲ್ಲ. ನನ್ನ ಮಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾನೆ. ನಾನು ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಯಶಸ್ವಿ ಶೋ ಇದು. ಮತ್ತೆ ಈ ಯಶಸ್ಸು ಸೃಷ್ಟಿ ಆಗತ್ತೋ ಇಲ್ವೋ ಗೊತ್ತಿಲ್ಲ. ರೆಮೋ ಸಂಗೀತದಲ್ಲಿ ಬ್ಯುಸಿ ಇದ್ದಾರೆ, ಶ್ವೇತಾ ಚೆಂಗಪ್ಪ ಇನ್ನೊಂದು ಶೋನಲ್ಲಿ ಬ್ಯುಸಿ ಇದ್ದಾರೆ. ಮಂಡ್ಯ ರಮೇಶ್ ಅವರು ಧಾರಾವಾಹಿ ಜೊತೆಗೆ ರಂಗಭೂಮಿಯಲ್ಲಿ ಆಕ್ಟಿವ್ ಆಗಿದ್ದಾರೆ. ನಾನು ರಿಟೈರ್ ಆಗಿಲ್ಲ, ಆದರೆ ಸಿನಿಮಾ ನಿರ್ದೇಶನ ಮಾಡ್ತಿರೋದಿಕ್ಕೆ ಇದಕ್ಕೆ ಸಮಯ ಕೊಡೋಕೆ ಆಗ್ತಿಲ್ಲ” ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.
ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಅಪರ್ಣಾ ವಸ್ತಾರೆ ಅವರು ಜುಲೈ ತಿಂಗಳಿನಲ್ಲಿ ಅಸುನೀಗಿದ್ದರು. ಈ ಸೀಸನ್‌ನಲ್ಲಿ ಅಪರ್ಣಾ ಅವರನ್ನು ಸ್ಮರಿಸಲಾಗಿತ್ತು.
ಕುಡುಕರ ಆಂಥಮ್ ‘ಅಲ್ಲಾಡ್ಸು ಅಲ್ಲಾಡ್ಸು’ ಹಾಡು ರೆಡಿಯಾಗಿದ್ದು ಹೇಗೆ... ಭಟ್ರು ಏನ್ ಹೇಳಿದ್ರು ಕೇಳಿ....
ಈ ಸೀಸನ್‌ನಲ್ಲಿ ಏನಿದೆ?
ಸೃಜನ್ ಲೋಕೇಶ್ ಅವರ ಸಾರಥ್ಯದಲ್ಲಿ ವಿಶ್ವ, ಕುರಿ ಪ್ರತಾಪ್, ಪ್ರಿಯಾಂಕಾ ಶಿವಣ್ಣ ಅವರು ಈ ಶೋನಲ್ಲಿ ಇದ್ದಾರೆ. ಇಂದ್ರಜಿತ್ ಲಂಕೇಶ್ ಸ್ಥಾನಕ್ಕೆ ಯೋಗರಾಜ್ ಭಟ್ ಎಂಟ್ರಿ ಆಗಿದೆ. ಅಂದಹಾಗೆ ಈ ಸೀಸನ್‌ನ ಮೊದಲ ಎಪಿಸೋಡ್‌ನಲ್ಲಿ ಯೋಗರಾಜ್ ಭಟ್ ಅವರು ಪತ್ನಿ ರೇಣುಕಾ ಜೊತೆಗೆ ಆಗಮಿಸಿದ್ದರು. ಈಗಾಗಲೇ ತರುಣ್ ಸುಧೀರ್, ಶರಣ್ ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳಾದ ತ್ರಿವಿಕ್ರಮ್, ಭವ್ಯಾ ಗೌಡ, ಗೌತಮಿ ಜಾಧವ್, ಉಗ್ರಂ ಮಂಜು ಅವರು ಭಾಗವಹಿಸಿದ್ದರು.