ನಾಯಕ ತೊಡೆ ಮೇಲೆ ಕೈಯಿಟ್ಟಾಗ ಪವಿತ್ರಾ ಗೌಡ ರಿಯಾಕ್ಷನ್​ ಹೇಗಿತ್ತು? ಘಟನೆ ವಿವರಿಸಿದ ನಿರ್ದೇಶಕಿ ಚಂದ್ರಕಲಾ

ಕೊಲೆ ಕೇಸ್​ನಲ್ಲಿ ಜೈಲುಪಾಲಾಗಿರುವ ನಟಿ, ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಕುರಿತು ನಿರ್ದೇಶಕಿ ಚಂದ್ರಕಲಾ ಹೇಳಿದ್ದೇನು? ನಾಯಕ ತೊಡೆ ಮೇಲೆ ಕೈಯಿಟ್ಟಾಗ ಆಕೆ ಮಾಡಿದ್ದೇನು?
 

director Chandrakala about Darshans friend Pavitra Gowdas behaviour in shooting set suc

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಟ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಸದ್ಯ ಆರೋಪಿ ನಂಬರ್​ 1 ಆಗಿದ್ದು, ಅವರ ಬಗ್ಗೆ ಇದಾಗಲೇ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತವೆ. ಆಶಿಖಿ-3 ಚಿತ್ರದಲ್ಲಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದ ನಿರ್ದೇಶಕಿ ಚಂದ್ರಕಲಾ ಅವರು ತಾವು ಅನುಭವಿಸಿದ ಸಂಕಟಗಳ ಬಗ್ಗೆ ಮಾಧ್ಯಮಗಳ ಎದುರು ತೆರೆದಿಟ್ಟಿದ್ದಾರೆ.  ಪವಿತ್ರಾ ಗೌಡ ಅವರ ಅದ್ಭುತ ಸೌಂದರ್ಯವನ್ನು ಕೊಂಡಾಡಿದ ನಿರ್ದೇಶಕಿ, ವೃತ್ತಿಯ ಬಗ್ಗೆ ಪವಿತ್ರಾ ಅವರಿಗೆ ಇರುವ ನಿರ್ಲಕ್ಷ್ಯ, ನಿಷ್ಕಾಳಜಿ, ಕಡೆಗಣನೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ಅವರನ್ನು ಆಯ್ಕೆ  ಮಾಡಿರುವುದಕ್ಕೆ ತಾವು ಅನುಭವಿಸಿದ್ದ ಹಿಂಸೆಯ ಕುರಿತು ಮಾತನಾಡಿದ್ದಾರೆ. ಆಶಿಖಿ-3 ತ್ರಿಕೋನ ಪ್ರೇಮದ ಕಥೆ. ಅದರಲ್ಲಿ ಇಬ್ಬರು ನಾಯಕರು, ಒಬ್ಬಳು ನಾಯಕಿ. ಸಂಪೂರ್ಣ ಚಿತ್ರ ನಾಯಕಿ ಆಧರಿತವಾಗಿದ್ದಾಗಿತ್ತು. ಪವಿತ್ರಾಳ ಸೌಂದರ್ಯಕ್ಕೆ ನಾನು ಬೆರಗಾಗಿದ್ದೆ. ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೆ. ಅವರ ಸೌಂದರ್ಯ ಕಂಡು ಈಕೆ ಬಾಲಿವುಡ್​ ರೇಂಜ್​ಗೆ ಹೋಗಬಹುದು ಎನ್ನುವ ಆಸೆಯನ್ನೂ ವ್ಯಕ್ತಪಡಿಸಿದ್ದೆ. ಆದರೆ ವೃತ್ತಿಯ ಮೇಲೆ ಆಕೆಗೆ ಇದ್ದ ಅಸಡ್ಡೆ, ತಾತ್ಸಾರ, ತಾನೇ ಎಲ್ಲ ಎನ್ನುವ ಹುಚ್ಚುತನ ನೋಡಿ ಯಾಕಾದರೂ ಆಕೆಯನ್ನು ಆಯ್ಕೆ ಮಾಡಿದ್ದೆನೋ ಎನ್ನುವಷ್ಟು ಆಗೋಯಿತು ಎಂದಿದ್ದಾರೆ ಚಂದ್ರಕಲಾ. 

 ಈ ಚಿತ್ರದಲ್ಲಿ ಹಗ್​ ಮಾಡುವುದು, ಕಿಸ್​ ಮಾಡುವುದು ಎಲ್ಲವೂ ಇರುತ್ತದೆ. ಅದೇ ಇಲ್ಲಿ ಪ್ರಧಾನ ಎಂದು ಹೇಳಿದ್ದೆ. ಆಕೆ ಒಪ್ಪಿಕೊಂಡಿದ್ದರು. ಇವೆಲ್ಲಾ ಮಾಡಲು ರೆಡಿ ಎಂದು ಹೇಳಿದ್ದರು. ಆದರೆ ಸಿನಿಮಾದಲ್ಲಿ ನಟಿಯಾಗಬೇಕು ಎಂಬ ಕನಸು, ಡೆಡಿಕೇಷನ್​ ಇರಲೇ ಇಲ್ಲ. ಎಲ್ಲದಕ್ಕೂ ಮೊದಲು ಒಪ್ಪಿದ್ದರೂ ಆನಂತರ ಶೂಟಿಂಗ್​ನಲ್ಲಿ ಬೇರೆಯದ್ದೇ ರೀತಿಯ ಸೀನ್​ ಕ್ರಿಯೇಟ್​ ಮಾಡಿಬಿಟ್ಟರು ಪವಿತ್ರಾ ಎಂದು ಚಂದ್ರಕಲಾ ಹೇಳಿದ್ದಾರೆ. ನಾಯಕ ತೊಡೆಯ ಮೇಲೆ ಕೈಹಾಕುವ ದೃಶ್ಯವೊಂದು ಇತ್ತು. ಸುಮ್ಮನೆ ಮಾತನಾಡುವ ಸಂದರ್ಭದಲ್ಲಿ ತೊಡೆಯ ಮೇಲೆ ಕೈಹಾಕಬೇಕಿತ್ತು. ಇಂಥ ದೃಶ್ಯವನ್ನೆಲ್ಲಾ ಮಾಡಬಲ್ಲೆ ಎಂದು ಒಪ್ಪಿಕೊಂಡಿದ್ದ ನಟಿ, ತೊಡೆಯ ಮೇಲೆ ಕೈಹಾಕುತ್ತಿದ್ದಂತೆಯೇ ಎದ್ದು ಹೋದರು. ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಮಾರನೆಯ ದಿನ ಕರೆ ಮಾಡಿ ಇಂಥ ದೃಶ್ಯಗಳನ್ನು ನಾನು ಮಾಡುವುದಿಲ್ಲ ಎಂದುಬಿಟ್ಟರು. ಇಡೀ ಸಿನಿಮಾ ಅದರ ಮೇಲೆ ಆಧಾರವಾಗಿದ್ದು. ಹೀಗೆ ಹೇಳುತ್ತಾ ಹೋದರೆ ಅವರ ಬಗ್ಗೆ ಅಸಮಾಧಾನದ ಹಲವಾರು ಅಂಶಗಳು ಇವೆ ಎಂದಿದ್ದಾರೆ ಚಂದ್ರಕಲಾ. 

ದರ್ಶನ್​ ಅಣ್ಣ ಸಹೃದಯಿ, ಕನಸಲ್ಲೂ ಕೇಡು ಬಯಸುವವರಲ್ಲ... ಆದರೆ... ನಟ ನಾಗಶೌರ್ಯ ಭಾವುಕ ಪೋಸ್ಟ್​

ಪವಿತ್ರಾ ಗೌಡಂ ಇಲ್ಲಿಗೆ ಬಂದಿರುವುದು ಟೈಂಪಾಸ್​ಗೆ ಅನ್ನೋ ರೀತಿ ಮಾಡುತ್ತಿದ್ದರು. ಅವರಿಗೆ ಎಲ್ಲವೂ ಅದ್ಧೂರಿಯಾಗಿಯೇ ಆಗಬೇಕಿತ್ತು.  ನಾಯಕಿ ಪಾತ್ರಕ್ಕೆ ನಾವು ಶಾಪಿಂಗ್ ಮಾಡಲು ಹೋದರೆ ಎಲ್ಲವೂ ಬ್ರ್ಯಾಂಡಡ್​ ಬಟ್ಟೆಗಳೇ ಆಗಬೇಕಿತ್ತು.  ಅವರು ಹೇಳಿದ ಬ್ರ್ಯಾಂಡ್​ನ ಬಟ್ಟೆಗಳನ್ನೇ  ಕೊಡಿಸಿದ್ದೆ ಕೂಡ. ಚಪ್ಪಲಿ ಕೂಡ  ಬ್ರ್ಯಾಂಡೆಡ್​ ಆಗಬೇಕಿತ್ತು.  ಮದುವೆ ಮನೆಯಿಂದ ತಪ್ಪಿಸಿಕೊಂಡು ಹೋಗುವ ಹುಡುಗಿಯ ಪಾತ್ರವದು. ಹಾಗಾಗಿ ಮೆಹಂದಿ ಸಹ ಪವಿತ್ರಾ ಕೇಳಿದವರಿಂದಲೇ ಹಾಕಿಸಿದ್ದೆ. ಇದಕ್ಕಾಗಿ ಕಮರ್ಷಿಯಲ್​ ಸ್ಟ್ರೀಟ್​ಗೆ ಹೋಗಬೇಕು ಎಂದಿದ್ದರು. ನಾನೇ ಖುದ್ದಾಗಿ ಅವರ ಜೊತೆ ಹೋಗಿ ಮೆಹಂದಿ ಹಾಕಿಸಿದ್ದೆ. ಆದರೆ ಸಿನಿಮಾದ ಶೂಟಿಂಗ್ ದಿನ ಪವಿತ್ರಾ ಕೈಯಲ್ಲಿ  ಕೈಯಲ್ಲಿ ಮೆಹಂದಿ ಇರಲಿಲ್ಲ. ಅವರು ಅಳಿಸಿಕೊಂಡು ಬಿಟ್ಟಿದ್ದರು.  ಕೃತಕ ಮೆಹಂದಿ ತರಿಸಿ ಹಾಕಿಸಿ ಶೂಟಿಂಗ್ ಅಂತೂ ಪ್ರಾರಂಭ ಮಾಡಲಾಯ್ತು. ಒಟ್ಟಿನಲ್ಲಿ  ಅವರಿಗೆ ಸಿನಿಮಾದ ಮೇಲೆ, ನಟನೆ ಮೇಲೆ ಶ್ರದ್ಧೆ ಇರಲಿಲ್ಲ ಎಂಬುದು ಆಗಲೇ ನನಗೆ ಗೊತ್ತಾಗಿದ್ದು ಎಂದಿದ್ದಾರೆ ಚಂದ್ರಕಲಾ.

 ಬಟ್ಟೆ ಚೇಂಜ್ ಮಾಡುವ ವಿಷಯಕ್ಕೆ ಬಹಳ ಸಮಸ್ಯೆ ಕೊಟ್ಟರು. ಪದೇ ಪದೇ  ಕಿರಿಕಿರಿ ಮಾಡುತ್ತಿದ್ದರು. ಎಲ್ಲವನ್ನೂ ತಡೆದುಕೊಂಡಿದ್ದೆ. ಕಾರ್​ನಲ್ಲಿ   ಸಿನಿಮಾದ ದೃಶ್ಯವೊಂದನ್ನು ಶೂಟ್ ಮಾಡುತ್ತಿದ್ದೆವು. ಆದರೆ ಆಕೆಗೆ ನಟನೆಯೇ ಬರಲಿಲ್ಲ.  ಬಹಳ ಕಷ್ಟಪಟ್ಟರು. ಶೂಟಿಂಗ್​ ಮಾಡುವಾಗಲೆಲ್ಲಾ  ಕಿರಿಕ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ ಚಂದ್ರಕಲಾ. 
 

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...

Latest Videos
Follow Us:
Download App:
  • android
  • ios