Asianet Suvarna News Asianet Suvarna News

ದರ್ಶನ್​ ಅಣ್ಣ ಸಹೃದಯಿ, ಕನಸಲ್ಲೂ ಕೇಡು ಬಯಸುವವರಲ್ಲ... ಆದರೆ... ನಟ ನಾಗಶೌರ್ಯ ಭಾವುಕ ಪೋಸ್ಟ್​

ತೆಲಗು ನಟ ನಾಗಶೌರ್ಯ ಅವರು ದರ್ಶನ್​ ಪರವಾಗಿ ನಿಂತಿದ್ದು, ಈ ಕುರಿತು ಸೋಷಿಯಲ್​  ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
 

Telugu actor Nagashurya stood by Darshan and shared an emotional post suc
Author
First Published Jun 28, 2024, 1:33 PM IST

 ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ  ಜೈಲು ಸೇರಿರುವ  ನಟ ದರ್ಶನ್ ಅವರು ಬಗ್ಗೆ ಇದಾಗಲೇ ಪರ -ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ನಟನ ವಿರುದ್ಧವಿದ್ದರೆ, ಇನ್ನು ಕೆಲವರು ದರ್ಶನ್​ ಪರವಾಗಿದ್ದಾರೆ.   ನಟ,ನಟಿಯರು, ನಿರ್ದೇಶಕರು, ನಿರ್ಮಾಪಕರು... ಹೀಗೆ ಸಿನಿಮಾ ಕ್ಷೇತ್ರದವರಲ್ಲಿಯೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೀಗ ತೆಲುಗು ನಟ ನಾಗಶೌರ್ಯ ಅವರು ದರ್ಶನ್​ ಪರವಾಗಿ ಪೋಸ್ಟ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಅವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ.  ಅದರಲ್ಲಿ ಅವರು, ದರ್ಶನ್​ ಈ ರೀತಿ ಕೊಲೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆರಂಭದಲ್ಲಿ, ಮೃತ ರೇಣುಕಾಸ್ವಾಮಿಯ ಸಾವಿಗೆ ಮರಗಿರುವ ನಾಗಶೌರ್ಯ ಅವರು.  ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯ ಮರುಗುತ್ತೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.ಈ ಥರದ ಕಷ್ಟದ ಸಂದರ್ಭದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎನ್ನುತ್ತಲೇ ದರ್ಶನ್​ ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಅವರು ಬರೆದಿದ್ದಾರೆ.

ನಾಗಶೌರ್ಯ ಅವರು ತಮ್ಮ ಪೋಸ್ಟ್​ನಲ್ಲಿ,  ರೇಣುಕಾಸ್ವಾಮಿ ಕೊಲೆ  ವಿಷಯದಲ್ಲಿ ಜನರು ಈಗಲೇ ತೀರ್ಮಾನಕ್ಕೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತಿದೆ. ದರ್ಶನ್ ಅಣ್ಣ ಕನಸಿನಲ್ಲಿಯೂ ಯಾರಿಗೂ ಕೇಡು ಬಯಸುವವರಲ್ಲ,  ತೊಂದರೆ ಕೊಡುವವರಲ್ಲ. ದರ್ಶನ್​ ಅಣ್ಣ ಉದಾರತೆ, ಸಹೃದಯ ಸ್ವಭಾವ, ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುವವರು. ಎಷ್ಟೋ ಮಂದಿ  ಅಸಹಾಯಕರಿಗೆ ಅವರು ನೆರವಿನ ಹಸ್ತ ನೀಡಿದ್ದಾರೆ,  ಹಲವರಿಗೆ ಶಕ್ತಿಯಾಗಿದ್ದಾರೆ. ಆದರೆ... ಅವರನ್ನು ಈ ಕೇಸ್​ನಲ್ಲಿ ಸಿಲುಕಿಸಲಾಗಿದೆ. ಅವರು ಕೊಲೆ ಮಾಡಿದ್ದಾರೆ ಎನ್ನುವ  ಸುದ್ದಿ ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದ್ದು, ಆದಷ್ಟು ಬೇಗ ಸತ್ಯ ಹೊರಬೀಳಲಿದೆ ಎಂದು ಆಶಿಸುತ್ತೇನೆ ಎಂದು ನಾಗಶೌರ್ಯ ಅವರು ಹೇಳಿದ್ದಾರೆ. 

ನಿಗೂಢವಾಗಿ ನಾಪತ್ತೆಯಾದ ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?

ಇನ್ನು ರೇಣುಕಾಸ್ವಾಮಿ ಕೊಲೆ  ಕೇಸ್​ನ ವಿಷಯಕ್ಕೆ ಬರುವುದಾದರೆ,  ಇವರನ್ನು ಜೈಲಿನಲ್ಲಿ ನೋಡುವುದಕ್ಕಾಗಿ ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ. ಈ ಬಗ್ಗೆ ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದಿರುವ ದರ್ಶನ್​ ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಇವೆಲ್ಲ ಆಗುವುದು ಬೇಡ. ಅದರಲ್ಲಿಯೂ  ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದ ಬಗ್ಗೆ, ಭೇಟಿಯಾಗಲು ಅಸಾಧ್ಯವಾದ ಬಗ್ಗೆ  ಬೇಸರವಾಗಿದೆ ಎಂದಿದ್ದಾರೆ.  ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಈ ಸಂದೇಶವನ್ನು ಅವರು ರವಾನೆ ಮಾಡಿದ್ದಾರೆ. 

ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು ಸೌಮ್ಯ. ಆದರೆ ಅವರಿಗೆ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅನ್ನ ಆಹಾರ ಸೇವಿಸದೇ ಹಠ ಮಾಡಿ ದರ್ಶನ್ ಭೇಟಿಗೆ ಆಗಮಿಸಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದ್ದರು ಸೌಮ್ಯ. ಆಕೆ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ಬೇಸರಗೊಂಡ ದರ್ಶನ್. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ. ದೂರದ ಗುಲ್ಬರ್ಗದಿಂದ ತ್ರಿವೀಲರ್​ನಲ್ಲಿ ಆಗಮಿಸಿದ್ದರು. ಈ ಬಗ್ಗೆ ದರ್ಶನ್​ ಹೇಳಿದ್ದಾರೆ.  

ನಿಗೂಢವಾಗಿ ನಾಪತ್ತೆಯಾದ ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?

Latest Videos
Follow Us:
Download App:
  • android
  • ios