ಬಿಗ್ ಬಾಸ್ ಮನೆಯ 'ಅಣ್ಣ-ತಂಗಿ ಜಿಂಕೆ' ಜೋಡಿ ಧನರಾಜ್ ಮತ್ತು ಭವ್ಯಾ ಗೌಡ ಅನುಷಾ ಹುಟ್ಟುಹಬ್ಬದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಧನರಾಜ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ತ್ರಿವಿಕ್ರಮ್ ಅವರ ಅನುಪಸ್ಥಿತಿಯನ್ನು ಗಮನಿಸಿ, 'ಭಾವ ಜಿಂಕೆ' ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ತ್ರಿವಿಕ್ರಮ್ ಮತ್ತು ಭವ್ಯಾ ಒಟ್ಟಿಗೆ ಕಾಣಿಸಿಕೊಳ್ಳಬೇಕೆಂಬ ಅಭಿಮಾನಿಗಳ ಬೇಡಿಕೆ ಮುಂದುವರೆದಿದೆ.
ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ನೀಡುವ ಪ್ರತಿಯೊಬ್ಬ ಸ್ಪರ್ಧಿಗಳು ಒಂಟಿಯಾಗಿ ಹೋರಾಡ್ತೇನೆ ಎಂದೇ ಆರಂಭದಲ್ಲಿ ಹೇಳ್ತಾರೆ. ಒಳಗೆ ಹೋಗ್ತಿದ್ದಂತೆ ಅವರ ಭಾವನೆ ಬದಲಾಗುತ್ತೆ. ಬಿಗ್ ಬಾಸ್ ಮನೆ ಅನೇಕ ಸಂಬಂಧಗಳಿಗೆ ಸಾಕ್ಷ್ಯವಾಗಿದೆ. ಅಣ್ಣ – ತಂಗಿ, ಅಕ್ಕ – ತಮ್ಮ, ಅಮ್ಮ – ಮಗನ ಜೊತೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಚಿಗುರಿ, ಮದುವೆಯಾದ, ಮದುವೆಯಾಗ್ತಿರುವ ಜೋಡಿಗಳೂ ಇದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಲ್ಲರ ಗಮನ ಸೆಳೆದ ಒಂದು ಜೋಡಿ ಅಂದ್ರೆ ಅದು ಧನರಾಜ್ (Dhanraj) ಹಾಗೂ ಭವ್ಯಾ ಗೌಡ (Bhavya Gowda). ಇಬ್ಬರ ಬಾಂಡಿಂಗ್ ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗಿತ್ತು. ಆರಂಭದಿಂದಲೇ ಫ್ಯಾನ್ಸ್ ಕ್ಲಬ್ ಹೊಂದಿದ್ದ ಈ ಜೋಡಿ ಮಧ್ಯದಲ್ಲಿ ಸ್ವಲ್ಪ ದೂರವಾದ್ರೂ, ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ತಮ್ಮ ಸಂಬಂಧವನ್ನು ಮುಂದುವರೆಸಿದ್ದಾರೆ. ಅಣ್ಣ ಜಿಂಕೆ, ತಂಗಿ ಜಿಂಕೆ ಎಂದೇ ಇಬ್ಬರು ಪ್ರಸಿದ್ಧಿ ಪಡೆದಿದ್ದಾರೆ.
ಬರ್ತ್ ಡೇ ಪಾರ್ಟಿ, ಸಿನಿಮಾ ರಿಲೀಸ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಫೋಟೋಕ್ಕೆ ಫೋಸ್ ನೀಡ್ತಿರುತ್ತಾರೆ. ಈಗ ಮತ್ತೆ ಧನರಾಜ್, ಭವ್ಯಾ ಗೌಡ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರು ಮಸ್ತಿ ಮಾಡ್ತಿರೋದನ್ನು ನೀವು ಕಾಣ್ಬಹುದು. ಭವ್ಯ ಗೌಡ ಜೊತೆಗಿರುವ ಐದು ಫೋಟೋಗಳನ್ನು ಪೋಸ್ಟ್ ಮಾಡಿರುವ ಧನರಾಜ್, ತಂಗಿ ಜಿಂಕೆ ಅಣ್ಣ ಜಿಂಕೆ ಇಬ್ಬರೂ ಜೊತೆಯಾದ್ರೆ ಹೇಗೆ ಅಂತ ಶೀರ್ಷಿಕೆ ಹಾಕಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಅನುಷಾ ಬರ್ತ್ ಡೇ ಪಾರ್ಟಿಯಲ್ಲಿ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಧನರಾಜ್ ಫೋಟೋಕ್ಕೆ ಭವ್ಯಾ ಗೌಡ ಕಮೆಂಟ್ ಹಾಕಿದ್ದಾರೆ. ಅಣ್ಣ ಜಿಂಕೆ ಲವ್ ಯು ಅಂತ ಬರೆದುಕೊಂಡಿದ್ದಾರೆ. ಭವ್ಯಾ ಹಾಗೂ ಧನರಾಜ್ ಈ ಫೋಟೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಅಣ್ಣ ತಂಗಿ ಬಾಂಧವ್ಯ ಹೀಗೆ ಇರಲಿ ಅಂತ ಕಮೆಂಟ್ ಮಾಡಿದ್ದಾರೆ. ಕೆಲ ಫ್ಯಾನ್ಸ್ ಫೋಟೋ ಫ್ರೇಮ್ ಸಂಪೂರ್ಣವಾಗಿಲ್ಲ ಎನ್ನುವ ಕಮೆಂಟ್ ಮಾಡಿದ್ದಾರೆ. ಒಬ್ಬರು ಈ ಫೋಟೋದಲ್ಲಿ ಮಿಸ್ ಆಗಿದ್ದಾರೆ, ಭಾವ ಜಿಂಕೆ ಎಲ್ಲಿ ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ. ತ್ರಿವಿಕ್ರಮ್ ಹಾಗೂ ಭವ್ಯ ಗೌಡ ಬಿಗ್ ಬಾಸ್ ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅವರಿಬ್ಬರನ್ನು ಒಂದೇ ಫ್ರೇಮ್ ನಲ್ಲಿ ನೋಡುವ ಆಸೆ ಅಭಿಮಾನಿಗಳದ್ದು. ಭವ್ಯಾ್ಯ ಹಾಗೂ ತ್ರಿವಿಕ್ರಮ್ ಸೀರಿಯಲ್ ಅಥವಾ ಸಿನಿಮಾ ಮಾಡ್ಬೇಕು ಎನ್ನುವ ಬೇಡಿಕೆ ಇಡ್ತಿರುವ ಅಭಿಮಾನಿಗಳು, ಅದು ಹೋಗ್ಲಿ ಒಮ್ಮೆ ಒಟ್ಟಿಗೆ ಕಾಣಿಸಿಕೊಳ್ಳಿ ಎನ್ನುತ್ತಿದ್ದಾರೆ. ಆದಷ್ಟು ಬೇಗ ನಮ್ಮ ಆಸೆ ತೀರಿಸಿ, ಫ್ರೇಮ್ ಪೂರ್ಣಗೊಳಿಸಿ ಎನ್ನುವ ಮೆಸ್ಸೇಜ್ ಹೆಚ್ಚಾಗಿ ಕಂಡು ಬಂದಿದೆ.
ಮಾರ್ಚ್ ನಲ್ಲಿ ಕೂಡ ಭವ್ಯಾ ಗೌಡ ಹಾಗೂ ಧನರಾಜ್ ಜೊತೆಗಿರುವ ಫೋಟೋವನ್ನು ಧನು ಹಂಚಿಕೊಂಡಿದ್ದರು. ಅದ್ರಲ್ಲೂ ಅವರು ತಂಗಿ ಜಿಂಕೆ ಅಂತ ಭವ್ಯ ಅವರನ್ನು ಕರೆದಿದ್ದರು. ಅಲ್ಲಿ ಕೂಡ ಫ್ಯಾನ್ಸ್, ಫೋಟೋ ಪೂರ್ಣವಾಗಿಲ್ಲ. ಆದಷ್ಟು ಬೇಗ ನಮ್ಮಿಷ್ಟದ ಫೋಟೋ ಬೇಕು ಎಂದಿದ್ದರು. ಈಗ್ಲೂ ಅದೇ ಬೇಡಿಕೆ ಕೇಳಿ ಬಂದಿದೆ. ಅಭಿಮಾನಿಗಳ ಆಸೆಯನ್ನು ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಯಾವಾಗ ಈಡೇರಿಸ್ತಾರೆ, ಒಂದೇ ಫ್ರೇಮ್ ನಲ್ಲಿ ಯಾವಾಗ ಕಾಣಿಸಿಕೊಳ್ತಾರೆ ಕಾದು ನೋಡ್ಬೇಕಿದೆ. ಭವ್ಯಾ, ಜೀ ಕನ್ನಡದ ಸೀರಿಯಲ್ ನಲ್ಲಿ ಬ್ಯುಸಿಯಿದ್ರೆ, ತ್ರಿವಿಕ್ರಮ್ ಕಲರ್ಸ್ ಕನ್ನಡ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ.


