ಭಾಗ್ಯಲಕ್ಷ್ಮಿ ಮತ್ತು ಅಮೃತಧಾರೆ ಸೀರಿಯಲ್​ನ ನಾಯಕಿಯರನ್ನು ನೋಡಿ ಖುಷಿ ಪಡುತ್ತಿದ್ದ ಪ್ರೇಕ್ಷಕರಿಗೆ ಶಾಕ್​  ನೀಡಲಾಗಿದೆ. ಇವರಿಬ್ಬರೂ ಮತ್ತೆ ಸೋತಿದ್ದಾರೆ. ಅಭಿಮಾನಿಗಳು ಏನಂತಿದ್ದಾರೆ ನೋಡಿ... 

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ನಾಯಕಿಯರನ್ನು ಅಳುಮುಂಜಿಯಾಗಿಯೇ ತೋರಿಸಲಾಗುತ್ತದೆ. ಲೇಡಿ ವಿಲನ್​ಗಳೇ ರಾಜಾಜಿಸುತ್ತಾರೆ. ಸೀರಿಯಲ್​ಗಳು ಅಂತ್ಯ ಕಾಣುವ ಹೊತ್ತಿನಲ್ಲಿ, ನಾಯಕಿಗೆ ಜಯವಾಗುವುದು ಮಾಮೂಲಾಗಿದರೂ ಎಷ್ಟೋ ವರ್ಷಗಳು ನಡೆಯುವ ಸೀರಿಯಲ್​ನಲ್ಲಿ ನಾಯಕಿ ಅಂದರೆ ಎಲ್ಲವನ್ನೂ ಸಹಿಸಿಕೊಂಡು ಇರುವಾಕೆಯೇ ಎಂದು ಬಿಂಬಿಸಲಾಗುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿರುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಅಮೃತಧಾರೆ. ಇದರಲ್ಲಿನ ಭೂಮಿಕಾ ಕ್ಯಾರೆಕ್ಟರ್​ ವಿಭಿನ್ನ ಆಗಿರೋ ಕಾರಣದಿಂದಲೇ ಈ ಸೀರಿಯಲ್​ ಎಲ್ಲರಿಗೂ ಅಷ್ಟು ಇಷ್ಟವಾಗುವುದು. ಇಲ್ಲಿ ಭೂಮಿಕಾ, ವಿಲನ್​ ಅತ್ತೆ ಶಕುಂತಲಾ ವಿರುದ್ಧ ಸದಾ ಜಯ ಗಳಿಸುತ್ತಲೇ ಸಾಗುತ್ತಿರುವ ಕಾರಣ, ಭೂಮಿಕಾ ಎಂದರೆ ಎಲ್ಲರಿಗೂ ಇಷ್ಟ.

ಅದೇ ಇನ್ನೊಂದೆಡೆ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​. ಇಲ್ಲಿ ವರ್ಷಗಟ್ಟಲೆ ನಾಯಕಿ ಭಾಗ್ಯಳನ್ನು ಅಳುಮುಂಜಿಯಾಗಿಯೇ ತೋರಿಸಿಕೊಂಡು ಬರಲಾಗಿದೆ. ಆದರೆ ಈಗ ಭಾಗ್ಯ ಬದಲಾಗಿದ್ದಾಳೆ. ಸ್ಟಾರ್​ ಹೊಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯಳ ಬದುಕು ಬದಲಾಗಿದೆ. ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದಾಳೆ. ಬದಲಾದ ಭಾಗ್ಯಳನ್ನು ನೋಡಿ, ಪ್ರೇಕ್ಷಕರಿಗೆ ಖುಷಿಯೋ ಖುಷಿ. ನೀವೇ ನಮ್ಮ ಮಾಡೆಲ್​, ನಿಮ್ಮನ್ನು ನೋಡಿ ಅದೆಷ್ಟು ಹೆಣ್ಣುಮಕ್ಕಳಿಗೆ ಧೈರ್ಯ ಸಿಕ್ಕಿದೆ ಎನ್ನುತ್ತಲೇ ಇದ್ದಾರೆ ಪ್ರೇಕ್ಷಕರು.

ಬ್ರಹ್ಮಗಂಟು ದೀಪಾಳ ರೀಲ್ಸ್​ಗೆ ಫಿದಾ: ಅಕ್ಕ ಪ್ಲೀಸ್​ ಸುಂದರ ಮುಖ ಗಂಡಕ್ಕೆ ತೋರಿಸಿ ಅಂತಿರೋ ಫ್ಯಾನ್ಸ್​!

ಆದರೆ ಇದೀಗ ಎರಡೂ ಸೀರಿಯಲ್​ಗಳು ಉಲ್ಟಾ ಹೊಡೆದಿವೆ. ಇತ್ತ ಅಮೃತಧಾರೆಯಲ್ಲಿ ಶಕುಂತಲಾ ದೇವಿಯ ಕುತಂತ್ರಕ್ಕೆ ಬುದ್ಧಿವಂತೆ ಭೂಮಿಕಾ ಗಾಳವಾಗಿಬಿಟ್ಟಿದ್ದಾಳೆ. ಅತ್ತೆ ಕುತಂತ್ರವನ್ನು ಅರಿತರೂ, ಅವಳು ಏಕೆ ಹೀಗೆ ಎಡವಿಬಿದ್ದಳು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಸ್ವಂತ ತಂಗಿ ಮತ್ತು ಮನೆಯವರನ್ನು ಶಕುಂತಳಾದ ಕುತಂತ್ರದಿಂದ ಎದುರು ಹಾಕಿಕೊಂಡಿದ್ದಾಳೆ ಭೂಮಿಕಾ. ಈಗ ಹೆಜ್ಜೆ ಹೆಜ್ಜೆಗೂ ಆಕೆಗೆ ಅಗ್ನಿಪರೀಕ್ಷೆ. ಅದರ ನಡುವೆಯೇ ಜೈದೇವ್​ ಎಂಟ್ರಿ ಕೊಟ್ಟಿದ್ದು, ಭೂಮಿಕಾ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಈಗ ಎಲ್ಲವೂ ಅವಳು ವಿರುದ್ಧವಾಗಿ ನಡೆಯುತ್ತಿದೆ. 

ಅದೇ ಇನ್ನೊಂದೆಡೆ, ಭಾಗ್ಯಲಕ್ಷ್ಮಿಯಲ್ಲೂ ಮತ್ತೆ ಭಾಗ್ಯ ಅಳುಮುಂಜಿಯಾಗಿದ್ದಾಳೆ! ಶ್ರೇಷ್ಠಾಳ ಕುತಂತ್ರದಿಂದ ಭಾಗ್ಯಳ ವಿರುದ್ಧ ಇಲ್ಲಸಲ್ಲದ ವಿಡಿಯೋಗಳು ವೈರಲ್​ ಆಗುವ ಹಾಗೆ ಮಾಡುತ್ತಿದ್ದಾಳೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಒಂದರ್ಥದಲ್ಲಿ ಸೆಲೆಬ್ರಿಟಿಯಾಗಿದ್ದ ಭಾಗ್ಯಳ ಮಾನವನ್ನು ಹರಾಜು ಮಾಡುವಲ್ಲಿ ಅವಳು ಯಶಸ್ವಿಯಾಗಿದ್ದಾಳೆ. ನೌಕರಿ ಸಿಕ್ಕ ಕೂಡಲೇ ಡಿವೋರ್ಸ್​ ಕೊಡಲು ಮುಂದಾಗಿದ್ದಾಳೆ ಎಂದೆಲ್ಲಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇನ್ನು ತಾಂಡವ್​ ಕೇಳಬೇಕೆ? ಹಿಗ್ಗಾಮುಗ್ಗ ಭಾಗ್ಯಳಿಗೆ ಬೈಯುತ್ತಾ ಇದ್ದು, ಮತ್ತೆ ಮೊದಲಿನಂತೆಯೇ ಆಗಿದ್ದಾಳೆ ಭಾಗ್ಯ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಹೆಣ್ಣು ಮಕ್ಕಳು ಸ್ಟ್ರಾಂಗ್​ ಆಗಿ ಇರುವುದನ್ನು ನೋಡಲು ಆಗಲ್ವಾ? ಮತ್ಯಾಕೆ ಈ ರೀತಿ ಅವರನ್ನು ಅಳುಮುಂಜಿ ರೀತಿ ಪದೇ ಪದೇ ತೋರಿಸ್ತೀರಾ ಎಂದು ಸೀರಿಯಲ್​ ಪ್ರೇಮಿಗಳು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಎಲ್ಲವೂ ಸರಿಯಾಗ್ತಿದೆ ಅನ್ನೋ ಹೊತ್ತಲ್ಲೇ ತುಳಸಿ-ಮಾಧವ್​ ನಡುವೆ ಬಿರುಕು! ಮನೆಬಿಟ್ಟು ಹೋಗೆ ಬಿಟ್ಟಳಲ್ಲಾ!