Asianet Suvarna News Asianet Suvarna News

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

ನಿವೇದಿತಾ ಗೌಡ ಸೆಕ್ಸಿ ವಿಡಿಯೋ ಶೇರ್​ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ

 

Nivedita Gowda shares new video fans compare to bollywood actress trupthi dimri suc
Author
First Published Aug 9, 2024, 6:05 PM IST | Last Updated Aug 10, 2024, 4:19 PM IST

ಸದ್ಯ ಬಾಲಿವುಡ್​ ಬೆಡಗಿ ತೃಪ್ತಿ ಡಿಮ್ರಿ ಹೆಸರು ಕೇಳದ ಸಿನಿ ಪ್ರಿಯರು ಇಲ್ಲವೆನ್ನಬಹುದೇನೋ. ಈಕೆ ಯಾರು, ಏನು ಎತ್ತ ಎಂದು ತಿಳಿಯದರ ನಡುವೆಯೇ ರಾತ್ರೋರಾತ್ರಿ ನ್ಯಾಷನಲ್​ ಕ್ರಷ್​ ಆದಾಕೆ ಈಕೆ. ಇದಕ್ಕೆ ಕಾರಣ ಎನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ, ಅರೆಬರೆ ಬೆತ್ತಲ ನಟಿಯರನ್ನೂ ದಂಗುಬಡಿಸಿದಾಕೆ. ಈ ಚಿತ್ರದ ಬಳಿಕ ಈಕೆಗೆ ಸಿಗುತ್ತಿರುವ ಅವಕಾಶಗಳು ಅಷ್ಟಿಷ್ಟಲ್ಲ. ನಗ್ನ ದೇಹ ಪ್ರದರ್ಶಿಸುತ್ತಿರುವವ ಪೋರ್ನ್​ ಸ್ಟಾರ್​ಗಳನ್ನೂ ಮೀರಿ ತೃಪ್ತಿ ಡಿಮ್ರಿ ಕಾಣಿಸಿಕೊಂಡು ದಾಖಲೆಯ ಕೀರ್ತಿ ಗಳಿಸಿದರು. ಆದರೆ ಇದೀಗ ಇದೇ ತೃಪ್ತಿ ಡಿಮ್ರಿಯನ್ನು ನಿವೇದಿತಾ ಗೌಡ ಅವರಿಗೆ ಹೋಲಿಸಲಾಗುತ್ತಿದೆ. ಇದಕ್ಕೆ ಕಾರಣ ಡಿವೋರ್ಸ್​ ಬಳಿಕ ನಿವೇದಿತಾ ದಿನಕ್ಕೊಂದರಂತೆ ಸೆಕ್ಸಿ ಡ್ರೆಸ್​ನಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. 

ಅಷ್ಟಕ್ಕೂ, ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ಅದೇನೇ ಇದ್ದರೂ, ನಿವೇದಿತಾಗೂ ಚೆನ್ನಾಗಿ ಗೊತ್ತು, ಟ್ರೋಲ್​ನಿಂದಲೇ ರೀಲ್ಸ್​ ಮಾಡುವವರ ಜೀವನ ಸಾಗುವುದು ಎನ್ನುವುದು. ಅದೇ ಕಾರಣಕ್ಕೆ ಹೆಚ್ಚಿನ ರೀಲ್ಸ್​ ತಾರೆಯರು ತಮಗೆ ಬಂದಿರುವ ಕೆಟ್ಟ ಕಮೆಂಟ್ಸ್​ಗಳನ್ನು ಡಿಲೀಟ್​ ಮಾಡುವುದಿಲ್ಲ. ಏಕೆಂದರೆ ಅದೇ ಅವರಿಗೆ ಜೀವನ. ಹೆಚ್ಚೆಚ್ಚು ಕೆಟ್ಟ ಕಮೆಂಟ್​  ಪಡೆದರೆ, ಹೆಚ್ಚೆಚ್ಚು ಜನಪ್ರಿಯರಾಗಬಹುದು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದೇ ರೀತಿಯ ಕಮೆಂಟ್​ ಮೂಲಕವೇ ಕೆಲವು ಜನಪ್ರಿಯ ರಿಯಾಲಿಟಿ ಷೋಗಳಲ್ಲಿಯೂ ತಮಗೆ ಸ್ಥಾನ ಸಿಕ್ಕು ಇನ್ನಷ್ಟು ಉತ್ತುಂಗಕ್ಕೆ ಏರಬಹುದು ಎನ್ನುವುದು ರೀಲ್ಸ್​ ತಾರೆಯರಿಗೆ ಚೆನ್ನಾಗಿ ಅರಿವಿದೆ. ಇನ್ನು ನಿವೇದಿತಾ ಅಂತೂ ಮೊದಲೂ ಇಂಥ ಕಮೆಂಟಿಗೆ ತಲೆ ಕೆಡಿಸಿಕೊಂಡವರಲ್ಲ, ಈಗಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಬೆತ್ತಲೆಯಾದ ನಟಿ ಜೊತೆ ನಿವೇದಿತಾ ಗೌಡ ಹೋಲಿಕೆ? ಯಾರು ಆ ನಗ್ನ ಸುಂದರಿ? ಇಲ್ಲಿದೆ ಮಾಹಿತಿ

ಇನ್ನು ಕೆಲವರು ಡಿವೋರ್ಸ್​ ಆದ ಮೇಲೆ ಸೋಷಿಯಲ್​ ಮೀಡಿಯಾದಲ್ಲಿ ನಿವೇದಿತಾ ವರ್ಚಸ್ಸು ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಪ್ರಚಾರಕ್ಕಾಗಿ ಈ ರೀತಿ ಅವರು ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಜರ್ನಿ ಮುಂದುವರೆಸಿದ್ದಾರೆ. ಹೀಗೆ ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. 

ಸೀತಾರಾಮ ಅಶೋಕ ಭರ್ಜರಿ ಡಾನ್ಸ್​ ಮಾಡಿದ್ರೆ, ನಿಮ್ಮಂಥ ಗಂಡ ಬೇಕು ಎನ್ನೋದಾ ಲೇಡಿ ಫ್ಯಾನ್ಸ್​?

Latest Videos
Follow Us:
Download App:
  • android
  • ios