ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಾವ್ಯಾಂಜಲಿ'ಯಿಂದ ನಟಿ ದೀಪಾ ಜಗದೀಶ್ ಹೊರ ಬಂದಿದ್ದಾರೆ ಎನ್ನಲಾಗಿದೆ. ದೀಪಾ ಹೊರ ಬರಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಆದರೆ ಈಗಾಗಲೇ ಈ ಪಾತ್ರಕ್ಕೆ ಮೂರು ನಾಯಕಿಯರ ಬದಲಾವಣೆ ಮಾಡಲಾಗಿದೆ. 

ಫೆಬ್ರವರಿಯಲ್ಲಿ 'ಕಾವ್ಯಾಂಜಲಿ' ತಂಡಕ್ಕೆ ದೀಪಾ ಸೇರಿಕೊಂಡಿದ್ದರು. 4 ತಿಂಗಳಿಗೇ ಗುಡ್‌ ಬೈ ಹೇಳಿರುವುದು ವೀಕ್ಷಕರಿಗೆ ಶಾಕ್ ತಂದಿದೆ. 'ಮತ್ತೆ ವಸಂತ' ಧಾರಾವಾಹಿಯ ನಟಿ ಅಕ್ಷತಾ ದೇಶಪಾಂಡೆ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ದೀಪಾ ಪಾತ್ರಕ್ಕೆ ಆಗಮಿಸಿದ್ದಾರೆ, ಎಂದು ಹೇಳಲಾಗುತ್ತಿದೆ. ಇಬ್ಬರೂ ನಟಿಯರು ಈ ವಿಚಾರದ ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿ ಕೊಂಡಿಲ್ಲ.

ತಾಯಿಗೆ ಗಂಭೀರ ಆಪರೇಷನ್, ತಂದೆಗೆ ಕೊರೋನಾ; 'ಕಾವ್ಯಾಂಜಲಿ' ನಟಿ ದೀಪಾ ಮನ ಕಲಕುವ ಪೋಸ್ಟ್! 

ಈ ಲಾಕ್‌ಡೌನ್‌ ಸಮಯದಲ್ಲಿ ದೀಪಾ ಅವರ ತಾಯಿಗೆ ಗಾಯವಾಗಿತ್ತು, ಗಂಭೀರ ಆಪರೇಷನ್ ಮಾಡಿಸಲಾಗಿತ್ತು. ಅಷ್ಟರಲ್ಲಿ ತಂದೆಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂತು. ಒಂದಾದ ಮೇಲೊಂದು ಸಮಸ್ಯೆಗಳಿಂದ ದೀಪಾ ಕೆಲ ದಿನಗಳ ಕಾಲ ಮನೆಯಲ್ಲಿಯೇ ಉಳಿಯಬೇಕಾಗಿತ್ತು. ಎಲ್ಲವೂ ಸುಧಾರಿಸಿಕೊಳ್ಳುತ್ತಿದೆ ಎನ್ನುವ ಸಮಯದಲ್ಲಿ ಕಾವ್ಯಾಂಜಲಿ ತಂಡ ಸೇರಿದರು. ಈ ವಿಚಾರವನ್ನ ಸ್ವತಃ ದೀಪಾ ಹಂಚಿಕೊಂಡಿದ್ದರು.