ಪುಟ್ಟಕ್ಕ ನಿಜಕ್ಕೂ ಸತ್ತೋದ್ಲಾ? ಮನೆಯ ಮುಂದಿರೋ ಶವ ಯಾರದ್ದು? 'ಬೈಕಾಟ್' ಬೆನ್ನಲ್ಲೇ ಸಿಗತ್ತಾ ಟ್ವಿಸ್ಟ್?
ಪುಟ್ಟಕನ ಮಕ್ಕಳು ಸೀರಿಯಲ್ ರೋಚಕ ತಿರುವು ಪಡೆದಿದೆ. ಪುಟ್ಟಕ್ಕ ನಿಜಕ್ಕೂ ಸತ್ತು ಹೋದಳಾ? ಶವ ಯಾರದ್ದು? ಸೀರಿಯಲ್ಗೆ ಇನ್ನಷ್ಟು ಟ್ವಿಸ್ಟ್ ಇದ್ಯಾ?
ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಕುತೂಹಲದ ತಿರುವು ಪಡೆದುಕೊಂಡಿದೆ. ಪುಟ್ಟಕ್ಕ ಅಪಘಾತದಲ್ಲಿ ಸಾವಿಗೀಡಾಗಿದ್ದಾಳೆ ಎಂಬ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮನೆಯವರ ಹೃದಯ ಚೂರುಚೂರಾಗಿದೆ. ಬಂಗಾರಮ್ಮ ಕೂಡ ಆಘಾತಗೊಂಡಿದ್ದಾರೆ. ಪುಟ್ಟಕ್ಕನನ್ನು ಹೇಗಾದರೂ ಸಾಯಿಸಲೇಬೇಕು ಎಂದು ರಾಜೇಶ್ವರಿ ಪಣತೊಟ್ಟಿದ್ದಳು. ಅವಳ ಕುತಂತ್ರದಿಂದಲೇ ಈ ಸಾವು ಸಂಭವಿಸಿದೆ. ಪುಟ್ಟಕ್ಕನನ್ನು ಅಪಘಾತದಲ್ಲಿ ಸಾಯಿಸಲು ನೋಡಲಾಗಿತ್ತು. ಕಂಠಿ ಬಂದು ರಕ್ಷಿಸುವ ಸಮಯದಲ್ಲಿಯೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಈಕೆಯ ಶವ ಅಂಬುಲೆನ್ಸ್ನಲ್ಲಿ ಮನೆಯ ಮುಂದೆ ಬಂದಿದೆ. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಫ್ಯಾನ್ಸ್ ಸಹನೆಯ ಕಟ್ಟೆ ಒಡೆದು ಹೋಗಿದೆ. ಪುಟ್ಟಕ್ಕನ ಸೀರಿಯಲ್ ಬೈಕಾಟ್ ಮಾಡುವುದಾಗಿ ಹೇಳುತ್ತಿದ್ದಾರೆ.
ಪುಟ್ಟಕ್ಕನಿಗೆ ಈ ರೀತಿಯ ಸಾವು ಕೊಟ್ಟಿರುವುದನ್ನು ಅಭಿಮಾನಿಗಳು ಸಹಿಸುತ್ತಿಲ್ಲ. ಪುಟ್ಟಕ್ಕ ಎಲ್ಲರಿಗೂ ಆದರ್ಶ. ಅದೆಷ್ಟೋ ಮಂದಿ ಇದೊಂದು ಧಾರಾವಾಹಿ ಎಂದು ಅಂದುಕೊಳ್ಳದೇ ತಮ್ಮ ಮನೆಯ ಕಥೆಯೇ ಅಂದುಕೊಂಡಿದ್ದರು. ಎಲ್ಲಾಸಂಕಷ್ಟಗಳನ್ನು ಹಿಮ್ಮೆಟ್ಟಿ ಬದುಕು ಸವೆಸುತ್ತಿದ್ದ ಪುಟ್ಟಕ್ಕ ಇನ್ನೊಬ್ಬಳ ಅಟ್ಟಹಾಸಕ್ಕೆ ಬಲಿಯಾಗುವುದನ್ನು ನಾವೆಂದೂ ಸಹಿಸುವುದಿಲ್ಲ. ಪುಟ್ಟಕ್ಕನಿಲ್ಲದ ಸೀರಿಯಲ್ ನಮಗೆ ಬೇಡ್ವೇ ಬೇಡ ಅಂತಿದ್ದಾರೆ ಫ್ಯಾನ್ಸ್. ಬೇರೆ ಯಾರನ್ನು ಸಾಯಿಸಿದರೂ ತಡೆದುಕೊಳ್ಬೋದಿತ್ತು. ಪುಟ್ಟಕ್ಕನನ್ನೇ ಸಾಯಿಸಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಸತ್ಯವೇ ಶೀಘ್ರ ಸಾಯುತ್ತದೆ, ವಿಲನ್ಗೇ ಗೆಲ್ಲುತ್ತಾರೆ ಎಂದು ಹೇಳುತ್ತಿರುವುದು ನಿಜಕ್ಕೂ ಶೋಚನೀಯ ಎಂದು ನಿರ್ದೇಶಕರ ವಿರುದ್ಧ ಗರಂ ಆಗಿದ್ದಾರೆ ಫ್ಯಾನ್ಸ್. ನಿಮ್ಮ ಸೀರಿಯಲ್ಗೆ ಟಿಆರ್ಪಿ ಬೇಕಿದ್ದರೆ, ಬೇರೆ ಏನಾದ್ರೂ ಮಾಡಿ, ಪುಟ್ಟಕ್ಕನನ್ನು ಸಾಯಿಸಬೇಡಿ ಅಂತಿದ್ದಾರೆ ಅಭಿಮಾನಿಗಳು.
ಚೀನಾ ಹೊಗಳಿ ಪೇಚಿಗೆ ಸಿಲುಕಿದ್ರಾ ಡಾ.ಬ್ರೋ ಸುದ್ದಿ ಬೆನ್ನಲ್ಲೇ ಅಪಾಯಕಾರಿ ವಿಡಿಯೋ ಶೇರ್: ಫ್ಯಾನ್ಸ್ ಡವಡವ...
ಆದರೆ ಟ್ವಿಸ್ಟ್ ಇಲ್ಲಿಗೇ ಮುಗಿದಿಲ್ಲ ಎಂಬ ಸಂದೇಹವೂ ಇದೇ ವೇಳೆ ವ್ಯಕ್ತವಾಗುತ್ತಿದೆ. ಅದೇನೆಂದರೆ, ಅಂಬುಲೆನ್ಸ್ನಲ್ಲಿ ಬಂದಿರೋ ಶವ ನಿಜಕ್ಕೂ ಪುಟ್ಟಕ್ಕಂದಾ? ಆಕೆಯನ್ನು ಸಾಯಿಸಿಬಿಟ್ಟರೆ ಸೀರಿಯಲ್ ಜೀವಾಳವೇ ಹೋಗುತ್ತದೆಯಲ್ಲ, ಹಾಗಿದ್ದರೆ ಪುಟ್ಟಕ್ಕ ಅಷ್ಟು ಬೇಗ ಸಾಯುತ್ತಾಳಾ, ಶವ ಬೇರೆಯವರದ್ದಾ ಎಂಬೆಲ್ಲಾ ಸಂಶಯಗಳು ಈಗ ಶುರುವಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ಎಲ್ಲರೂ ಕಣ್ಣೀರು ಹಾಕುತ್ತಿದ್ದರೆ, ರಾಜಿ ಮತ್ತು ಕಾಳಿ ಖುಷಿ ಪಡುತ್ತಿದ್ದಾರೆ. ಸ್ನೇಹಾ-ಕಂಠಿ ನಾಪತ್ತೆಯಾಗಿದ್ದಾರೆ. ಇದರ ಹಿಂದಿರೋ ಉದ್ದೇಶವೇನು? ಸತ್ತಿದ್ದು, ಪುಟ್ಟಕ್ಕ ಅಲ್ವಾ ಎನ್ನುವ ಅನುಮಾನ ಕಾಡುತ್ತಿದ್ದು, ಇದೇನು ಎನ್ನುವ ಕಾತರ ಈಗ ಪ್ರೇಕ್ಷಕರಿಗೆ ಶುರುವಾಗಿದೆ.
ಅಷ್ಟಕ್ಕೂ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ. ಆದ್ದರಿಂದ ಪುಟ್ಟಕ್ಕ ಸತ್ತರೆ ಅದು ಸತ್ಯ ಸತ್ತಂತೆ ಎನ್ನುವುದು ಪ್ರೇಕ್ಷಕರ ಅನಿಸಿಕೆ.
ಅಮ್ಮಾ-ಅಪ್ಪಾ ತಪ್ಪು ಮಾಡ್ಬಿಟ್ಟೆ, ತುಂಬಾ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ ನಮ್ರತಾ: ಕಾಲೆಳೀತಿರೋ ನೆಟ್ಟಿಗರು!