ಅತ್ತಿಗೆ ಮೇಲೆ ದಬ್ಬಾಳಿಕೆ ಮಾಡಿದ್ದೀನಿ; ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಕಣ್ಣೀರಿಟ ಮುರುಗಾ

ತಾಯಿ ರೀತಿ ಅತ್ತಿಗೆ ಪ್ರೀತಿ ಕೊಟ್ಟರೂ ನಾನು ದಬ್ಬಾಳಿಕೆ ಮಾಡಿರುವೆ ಎಂದು ವೇದಿಕೆ ಮೇಲೆ ಕಣ್ಣೀರಿಟ್ಟ ಡ್ಯಾನ್ಸರ್‌ ಮುರುಗಾನಂದ್. 
 

Dancer Muruganand gets emotional recalling sister in law love at Gicchi gili gili show vcs

ಸೆಲೆಬ್ರಿಟಿ ಡ್ಯಾನ್ಸರ್‌ ಮುರುಗಾನಂದ್ ಕಿರುತೆರೆ ನಟಿ ಇಶಿತಾ ವರ್ಷ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ರಾಜಾ ರಾಣಿ ಸೀಸನ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಇದಾದ ನಂತರ ಮುರುಗಾ ಗಿಚ್ಚಿ ಗಿಲಿಗಿಲಿ ಸೀನಸ್ 2ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಈಗ ತಾಯಿ ರೀತಿ ಪ್ರೀತಿ ಕೊಟ್ಟಿರುವ ಅತ್ತಿಗೆಯನ್ನು ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. 

ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಅತ್ತಿಗೆ ಜೊತೆ ಮುರುಗಾನಂದ್ ಹೆಚ್ಚೆ ಹಾಕಿದ್ದಾರೆ. 'ಎಷ್ಟು ಖುಷಿ ಆಗುತ್ತಿದೆ ಎಂದು ಪದಗಳಲ್ಲಿ ಹೇಳುವುದಕ್ಕೆ ಆಗಲ್ಲ. ಯಾವತ್ತೂ ಅವರಿಗೆ ಏನೂ ಮಾಡಿಲ್ಲ. ನಾನು 7 ವರ್ಷದ ಹುಡುಗನಿದ್ದಾಗ ಅಪ್ಪ ತೀರಿಕೊಂಡರು ಆ ದಿನದಿಂದ ನನ್ನನ್ನು ನೋಡಿಕೊಂಡಿದ್ದು ನನ್ನ ಅತ್ತಿಗೆ. ದೇವರ ಮೇಲೆ ಆಣೆ ಮಾಡಿ ಹೇಳುತ್ತೀನಿ ಈ ರೀತಿಇ ಅತ್ತಿಗೆ ಯಾರಿಗೂ ಸಿಗುವುದಿಲ್ಲ. ನಾನು ಅವರನ್ನು ಅತ್ತಿಗೆ ಎಂದು ಕರೆಯುವುದಕ್ಕಿಂತ ಅಮ್ಮನೇ. ಅಣ್ಣ ಅತ್ತಿಗೆಗೆ ಇಬ್ಬರು ಮಕ್ಕಳಿದ್ದಾರೆ ...ಫಸ್ಟ್‌ ಏನೇ ಇದ್ದರು ನನಗೆ ಆಮೇಲೆ ಅವರ ಮಕ್ಕಳಿಗೆ. ಅಣ್ಣ ಕೂಡ ಅಷ್ಟೇ ಪ್ರೀತಿ ಕೊಡುತ್ತಾರೆ ಅಣ್ಣ ಅಂತ ಜೊತೆಗೆ ಹುಟ್ಟಿ ಬೆಳೆದವರು ಅಷ್ಟೇ ಪ್ರೀತಿ ಇರುತ್ತದೆ ಆದರೆ ಅತ್ತಿಗೆ ಬೇರೆ ಅವರ ಮನೆಯಿಂದ ಬಂದು ನಮ್ಮ ದೊಡ್ಡ ಕುಟುಂಬಕ್ಕೆ ಹೊಂದಿಕೊಂಡು ನಾವು 15 ಜನರನ್ನು ಚೆನ್ನಾಗಿ ನೋಡಿಕೊಂಡು ಒಂದೇ ರೀತಿ ಪ್ರೀತಿ ಕೊಟ್ಟಿದ್ದಾರೆ. 15 ಜನರನ್ನು ಅತ್ತಿಗೆ ಒಬ್ಬರೇ ನೋಡಿಕೊಳ್ಳುತ್ತಿದ್ದರು ಅವರಿಗೆ ಅಡುಗೆ ಮನೆ ಮಾತ್ರ ಗೊತ್ತು ಬೇರೆ ಏನೂ ಗೊತ್ತಿಲ್ಲ ಅದರಲ್ಲಿ ನಾವು ದಬ್ಬಾಳಿಕೆ ಮಾಡುತ್ತಿದ್ದವರೇ ಹೆಚ್ಚು ಅದೇ ಬೇಕು ಇದೇ ಬೇಕು ಎಂದು....ಪಾಪ ಅವರ...ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ' ಮುರುಗಾ ಭಾವುಕರಾಗಿದ್ದಾರೆ.

ಅನುಪಮಾ ಗೌಡ - ಮುರುಗಾ ಸಿಕ್ಕಾಪಟ್ಟೆ ಕ್ಲೋಸ್; ಹೊಟ್ಟೆ ಉರಿ, ಜಗಳ ಜಾಸ್ತಿ ಎಂದವರಿಗೆ ಉತ್ತರ ಕೊಟ್ಟ ಪತ್ನಿ ಇಶಿತಾ

'ಮುರುಗಾನಂದ್‌ ಜೊತೆ ವೇದಿಕೆ ಮೇಲೆ ಇರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನ್ನ ಮೈದನ ರೀತಿ ನೋಡಿಲ್ಲ ಈತ ನನ್ನ ಮಗನೇ. 7 ವರ್ಷದ ಪುಟ್ಟ ಹುಡುಗ ಇದ್ದಾಗಿನಿಂದ ನೋಡಿದ್ದೀನಿ. ನಮ್ಮ ಮದುವೆ ಎಲ್ಲಾ ಫೋಟೋದಲ್ಲಿ ಮುರುಗಾ ಇದ್ದಾನೆ ಹಾಗೆ ಬರ್ತಾ ಬರ್ತಾ ನನ್ನನ್ನು ತಾಯಿ ರೀತಿ ಪ್ರೀತಿ ಕೊಟ್ಟಿದ್ದಾರೆ. ತಾಯಿ ಜೊತೆ ಮಕ್ಕಳು ಹೇಗೆ ಇರುತ್ತಾರೆ ಹಾಗೆ ಬೆಳೆದಿದ್ದಾನೆ ನನ್ನ ಜೊತೆ. ಮನೆಯಲ್ಲಿ ಏನೇ ಇದ್ದರೂ ನನ್ನ ಜೊತೆನೇ ಕ್ಲೋಸ್ ಅಗಿ ಮಾತನಾಡುವುದು ತುಂಬಾ ಪ್ರೀತಿ ಕೊಟ್ಟಿದ್ದಾರೆ' ಅತ್ತಿಗೆ ಮಾತನಾಡಿದ್ದಾರೆ. 

ಡಬ್ಬದಲ್ಲಿ ಆ್ಯಪಲ್ ಹಣ್ಣು ಇಟ್ಟು ಪತಿಗೆ ಐಫೋನ್‌ 13 ಪ್ರೋ ಗಿಫ್ಟ್‌ ಕೊಟ್ಟ ಇಶಿತಾ ವರ್ಷ!

'ಇತ್ತೀಚಿಗೆ ನನ್ನ ಅಣ್ಣನನ್ನು ಕಳೆದುಕೊಂಡೆ. ಇಂದು ವೇದಿಕೆ ಮೇಲೆ ಇದ್ದೀನಿ ಅಂದ್ರೆ ಅದಿಕ್ಕೆ ಅಣ್ಣನೇ ಕಾರಣ. ನಾನು ಡ್ಯಾನ್ಸ್ ಮಾಡುವುದು ನನ್ನ ತಾಯಿಗೆ ಇಷ್ಟವಿರಲಿಲ್ಲ ಹೋಗಬೇಡ ಎಂದು ತಡೆಯುತ್ತಿದ್ದರು ಆದರೆ ನನ್ನ ಸಣ್ಣ ನನಗೆ ಸಪೋರ್ಟ್ ಮಾಡುತ್ತಿದ್ದರು. ನಾನು ಸಾಧನೆ ಮಾಡಬೇಕು ಎಂದು ಅವರಿಗೆ ಆಸೆ ತುಂಬಾ ಇತ್ತು..ಇಂದು ಸ್ಟೇಜ್‌ ಮೇಲೆ ಅವರೊಟ್ಟಿಗೆ ಡ್ಯಾನ್ಸ್ ಮಾಡಬೇಕು ಅಂತ ತುಂಬಾ ಆಸೆ ಇತ್ತು. ಚಿಕ್ಕ ವಯಸ್ಸಿನಿಂದ ಡ್ಯಾನ್ಸ್‌ ಅಂತ ತಲೆಗೆ ಬಂದಿದ್ದೆ ಅವರಿಂದ. ಚಿರಂಜೀವಿ ಅವರ ಸಿನಿಮಾ ತೋರಿಸಿ ಹೇಳಿಕೊಡುತ್ತಿದ್ದರು. ಕೆಲಸ ಮಾಡಲಿ ಎಂದು ಅಮ್ಮ ಹೇಳಿದರೆ ಅಣ್ಣ ಸಪೋರ್ಟ್ ಮಾಡುತ್ತಿದ್ದರು. ನನ್ನ ಮದುವೆಗೂ ಮುನ್ನ ಅತ್ತಿಗೆ ಮೇಲೆ ದಬ್ಬಾಳಿಕೆ ಮಾಡಿರುವೆ. ಟಿವಿ ಮುಂದೆ ಕುಳಿತುಕೊಂಡರೆ ಸಾಕು ಒಂದು ಅಲ್ಲಿಗೆ ಎಲ್ಲಾ ಬರುತ್ತಿತ್ತು. ಮದ್ವೆ ಆದ್ಮೇಲೆ ಸಂಪೂರ್ಣವಾಗಿ ಬದಲಾಗಿರುವೆ. ಮದುವೆ ಆದ್ಮೇಲೆ ಅತ್ತಿಗೆ ಮೇಲೆ ಗೌರವ ಹೆಚ್ಚಾಗಿತ್ತು ಎಂದು ಮುರುಗಾ ಹೇಳಿದ್ದಾರೆ. 

'ಅತ್ತಿಗೆ ಇಷ್ಟು ದಿನ ನಾನು ಏನು ಮಾಡಿದೆ ನನಗೆ ಗೊತ್ತಿಲ್ಲ. ಕ್ಷಮೆ ಕೇಳುತ್ತೀನಿ. ಗೊತ್ತಿಲ್ಲದೆ ತಪ್ಪು ಮಾಡಿದ್ದೀನಿ ಬೇಜಾರ್ ಮಾಡಿಕೊಳ್ಳಬೇಡಿ. ನಿಜ ಬ್ಯುಸಿ ಶೆಡ್ಯೂಲ್‌ನಲ್ಲಿ ಸರಿಯಾಗಿ ಮನೆಗೆ ಬರುವುದಿಲ್ಲ ಈ ವಿಚಾರದಲ್ಲಿ ನಿಮಗೆ ಬೇಜಾರ್ ಇದೆ ಅಂತ ನನಗೆ ಗೊತ್ತು. ಅಣ್ಣ ಇದ್ದಾಗ ನಾನು ಹೇಗಿದ್ದೆ ಮುಂದಕ್ಕೈ ಹಾಗೆ ಇರುತ್ತೀನಿ. ನಾನು ಬದಲಾಗುವುದಿಲ್ಲ. ದುಪ್ಪಟ್ಟು ಪ್ರೀತಿ ಮಾಡುತ್ತೀನಿ' ಎಂದಿದ್ದಾರೆ ಮುರುಗಾ. 

Latest Videos
Follow Us:
Download App:
  • android
  • ios